ಕೇವಲ 10 ಸಾವಿರಕ್ಕೆ ಮಿನಿ ಟ್ರಾಕ್ಟರ್ ಖರೀದಿಸಿ, ಸಣ್ಣ ರೈತರಿಗಾಗಿ ಟ್ರೋಲಿ ಪವರ್ ರಿಡ್ಡೆರ್.!

 

WhatsApp Group Join Now
Telegram Group Join Now

ರೈತನಿಗೆ ತನ್ನ ಜಮೀನಿನ ಕೆಲಸ ಮಾಡಲು ಬೇಕಾಗಿರುವ ಉಪಕರಣಗಳಲ್ಲಿ ಟ್ರಾಕ್ಟರ್ ಕೂಡ ಒಂದು. ಆದರೆ ನಮ್ಮ ದೇಶದಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಬಹುತೇಕ ಈ ಕುಟುಂಬಗಳು ಆರ್ಥಿಕವಾಗಿ ಇನ್ನು ಸದೃಢರಾಗದ ಕಾರಣ ಎಲ್ಲರಿಗೂ ಟ್ರಾಕ್ಟರ್ ಖರೀದಿಸಲು ಶಕ್ತಿ ಇರುವುದಿಲ್ಲ.

ಆದರೆ ಮನೆಗೆ ಒಂದು ಟ್ರಾಕ್ಟರ್ ಇದ್ದರೆ ರೈತನ ಕೃಷಿ ಚಟುವಟಿಕೆಗಳು ಬಹಳ ಸರಳವಾಗಿ ಜರುಗುತ್ತವೆ. ಇಂತಹ ಸಮಯದಲ್ಲಿ ಲಕ್ಷಗಟ್ಟಲೆ ಹಣ ತೆತ್ತು ಟ್ಯಾಕ್ಟರ್ ಖರೀದಿಸಲು ಸಾಧ್ಯವಾಗದೆ ಇದ್ದವರು ಮಿನಿ ಟ್ರಾಕ್ಟರ್ ಖರೀದಿಸಬಹುದು. ಬೆಂಗಳೂರಿನ ಅಗ್ನಿಶೈನ್ ಬೆಂಗಳೂರು ಎನ್ನುವ ಕಂಪನಿಯವರು ನಿಮಗೆ ಟ್ಯಾಕ್ಟರ್ ಹೋಲುವ, ಟ್ಯಾಕ್ಟರ್ ಗಿರುವ ಎಲ್ಲಾ ಫೀಚರ್ಸ್ ಕೂಡ ಇರುವ ಅಷ್ಟೇ ಮಟ್ಟದ ಕಾರ್ಯ ಕೂಡ ನಿರ್ವಹಿಸುವ ಮಿನಿ ಟ್ರಾಕ್ಟರ್ ಲಕ್ಷಕ್ಕಿಂತ ಕಡಿಮೆ ಹಣಕ್ಕೆ ನೀಡುತ್ತಾರೆ.

600 ರಿಂದ 700Kg ಯಷ್ಟು ತೂಕವನ್ನು ಹೊರುವ ಸಾಮರ್ಥ್ಯವನ್ನು ಈ ಮಿನಿ ಟ್ರಾಕ್ಟರ್ ಹೊಂದಿದೆ. ಇದರ ಕ್ಯಾಪಾಸಿಟಿ 7HP, ಇದಕ್ಕೆ ಕೆಲಸ ನಿರ್ವಹಿಸುವಾಗ ಡೀಸೆಲ್ ಹಾಕಿದ್ರೆ ಸಾಕು ವರ್ಷಗಳ ಕಾಲ ಮೂಲೆಗೆ ಇಟ್ಟರು ಕೆಟ್ಟು ಹೋಗುವುದಿಲ್ಲ. ಉಳುಮೆಯಿಂದ ಹಿಡಿದು ಟ್ರಾಲಿ ಆಗುವ ತನಕ ಟ್ರ್ಯಾಕ್ಟರ್ ನ ಎಲ್ಲಾ ಕೆಲಸವನ್ನು ಕೂಡ ಇದು ಮಾಡುತ್ತದೆ.

ಉದಾಹರಣೆಗೆ ಟ್ರ್ಯಾಕ್ಟರ್ ಮೂರುವರೆ ಅಡಿ ಅಗಲ ಉಳುತ್ತದೆ ಎಂದರೆ ಮಿನಿ ಟ್ಯಾಕ್ಟರ್ ನಲ್ಲೂ ಕೂಡ ಇದು ಸಾಧ್ಯವಿದೆ ಜೊತೆಗೆ ಎರಡೂವರೆ ಅಡಿ ಅಥವಾ ತನಗೆ ಬೇಕಾದ ಅಳತೆಗೆ ಕಡಿಮೆ ಮಾಡಿಕೊಳ್ಳುವುದಕ್ಕೆ ರೋಟೆಟರ್ ನಲ್ಲಿ ಅವಕಾಶವಿದೆ. ಹೆಡ್ ಲೈಟ್ ಸೀಟ್ ಟಯರ್ ಯಾವುದರಲ್ಲೂ ಕ್ವಾಲಿಟಿಯಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ.

TVS ಟೈಯರ್ಸ್ ನ್ನು ಹೊಂದಿದೆ. ಟ್ರಾಲಿ ಮಾಡಿಕೊಳ್ಳುವ ಆಪ್ಶನ್ ಕೂಡ ಇರುವುದರಿಂದ ಮೇವುಗಳನ್ನು ತರಲು ಅಥವಾ ಕೂಲಿ ಆಳುಗಳನ್ನು ಜಮೀನಿಗೆ ಕರೆದುಕೊಂಡು ಹೋಗಲು ಈ ರೀತಿ ಎಲ್ಲ ರೀತಿಯ ಕೆಲಸಕ್ಕೂ ಅನುಕೂಲಕ್ಕೆ ಬರುತ್ತದೆ. ಜಮೀನಿನಲ್ಲಿ ಉಳುಮೆ ಮಾಡುವುದು ಮಾತ್ರವಲ್ಲದೆ ಹೊರಗಡೆ ವಾಹನವಾಗಿ ಕೂಡ ರೈತನು ತನ್ನ ಸಮಯಕ್ಕೆ ಇದನ್ನು ಉಪಯೋಗಿಸಿಕೊಳ್ಳಬಹುದು.

ಖರೀದಿಗೆ ಅನುಕೂಲವಾಗುವ ರೀತಿ ಕಂಪನಿಯವರು ಆಫರ್ ಕೂಡ ಕೊಡುತ್ತಿದ್ದಾರೆ. ರೈತನಿಗೆ ಅತಿ ಕಡಿಮೆ ಬೆಲೆಗೆ ಅಂದರೆ ರೂ.65,000 ಕ್ಕೆ ಈ ಮಿನಿ ಟ್ಯಾಕ್ಟರ್ ಸಿಗುತ್ತದೆ. ಮೊದಲಿಗೆ ರೂ.10,000 ಹಣ ಕಟ್ಟಿ ಆಧಾರ್ ಕಾರ್ಡ್ ಮತ್ತು ವಿಳಾಸ ಪುರಾವೆಯನ್ನು ನೀಡಿದರೆ VRL ಟ್ರಾವೆಲ್ಸ್ ಮೂಲಕ ಕರ್ನಾಟಕ ಮಾತ್ರಲ್ಲದೆ ದೇಶದ ಯಾವುದೇ ಮೂಲೆಯಲ್ಲಿ ಆರ್ಡರ್ ಮಾಡಿದರೂ ಕಳುಹಿಸಿಕೊಡುತ್ತಾರೆ.

ಆದರೆ ಡೆಲಿವರಿ ಸಮಯದಲ್ಲಿ ನಿಮ್ಮ ಪೂರ್ತಿ ಹಣವನ್ನು ನೀಡಬೇಕು ಆನ್ಲೈನ್ ಪೇಮೆಂಟ್ ಮಾಡಿ ಸ್ಕ್ರೀನ್ ಶಾಟ್ ಕಳಿಸಿದರು ನಿಮ್ಮ ಪ್ರಾಡಕ್ಟ್ ಸಿಗುತ್ತದೆ. ನೀವು ನಂತರ ಅದನ್ನು ಜೋಡಿಸಿಕೊಂಡು ಮರು ದಿನದಿಂದಲೇ ಕೆಲಸ ‌ಶುರು ಮಾಡಬಹುದು ನೀವೇನಾದರೂ ಔಷಧಿ ಸ್ಪ್ರೇ ಮಾಡಬೇಕು ಎಂದರೆ ಟ್ರಾಕ್ಟರ್ ಮೂಲಕ ಮಾಡಬಹುದು ಅದಕ್ಕೆ ಕೂಡ ಕನೆಕ್ಷನ್ ಮಾಡಿಕೊಳ್ಳಬಹುದು.

ಈ ರೀತಿ ಹೆಚ್ಚು ಕಡಿಮೆ ಟ್ಯಾಕ್ಟರ್ ಮಾಡುವ ಎಲ್ಲಾ ಕಾರ್ಯಗಳನ್ನು ಇದು ಮಾಡುತ್ತದೆ ಈ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಅಥವಾ ನಿಮಗೂ ಕೂಡ ಇದನ್ನು ಖರೀದಿಸುವ ಆಸಕ್ತಿ ಇದ್ದಲ್ಲಿ ಈ ಅಂಕಣದ ಕೊನೆಯಲ್ಲಿ ನಾವು ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಎಲ್ಲ ರೈತರಿಗೂ ತಲುಪುವಂತೆ ಶೇರ್ ಮಾಡಿ.
9902875485
7483783805
9353078587

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now