ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹೊಂದಬೇಕು ಎನ್ನುವುದು ಅನೇಕರ ಕನಸು. ಪದವಿ ಪಡೆದವರು ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸಿ ತಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು. ಈಗ ಅಂತಹ ಆಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ಬ್ಯಾಂಕ್ ಆಫ್ ಬರೋಡದಿಂದ (Bank of Baroda recruitment) ಸಿಗುತ್ತಿದೆ. ಬ್ಯಾಂಕ್ ಆಫ್ ಬರೋಡ ತನ್ನಲ್ಲಿ ಖಾಲಿ ಇರುವ 250 ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ ಮಾಡಿದೆ, ಇದರ ಕುರಿತ ವಿವರ ಹೀಗಿದೆ ನೋಡಿ.
ಉದ್ಯೋಗ ಸಂಸ್ಥೆ:- ಬ್ಯಾಂಕ್ ಆಫ್ ಬರೋಡ (Bank of Baroda)
ಹುದ್ದೆಯ ಹೆಸರು:- ಹಿರಿಯ ವ್ಯವಸ್ಥಾಪಕರು (Senior Manager)
ಒಟ್ಟು ಹುದ್ದೆಗಳ ಸಂಖ್ಯೆ:- 250
ಉದ್ಯೋಗ ಸ್ಥಳ:- ಬ್ಯಾಂಕ್ ಆಫ್ ಬರೋಡಾದ ಶಾಖೆಗಳು (ಭಾರತದಾದ್ಯಂತ)
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.63,840- 73,790 ವೇತನ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
* ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು
* ಸ್ನಾತಕೋತ್ತರ ಪದವಿ ಪಡೆದವರು / MBA ವಿದ್ಯಾಭ್ಯಾಸ ಮಾಡಿ ಮತ್ತು ಈಗಾಗಲೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಿ ಕೆಲಸದ ಅನುಭವ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 28 ವರ್ಷಗಳು
* ಅರ್ಜಿ ಸಲೊಲಿಸಲು ಗರಿಷ್ಠ ವಯೋಮಿತಿ 37 ವರ್ಷಗಳು.
ವಯೋಮಿತಿ ಸಡಿಲಿಕೆ:-
* OBC ಅಭ್ಯರ್ಥಿಗಳಿಗೆ 3 ವರ್ಷಗಳು
* SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
ಅರ್ಜಿ ಶುಲ್ಕ:-
* ಸಾಮಾನ್ಯ , OBC, EWS ಅಭ್ಯರ್ಥಿಗಳಿಗೆ ರೂ.600
* Sc/ST, PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ.100.
* ಅರ್ಜಿಶುಲ್ಕ ವನ್ನು ಆನ್ಲೈನಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಿ ಇ-ರಶೀದಿ ಪಡೆದುಕೊಳ್ಳಬೇಕು.
ಅರ್ಜಿ ಸಲ್ಲಿಸುವ ವಿಧಾನ:-
* ಬ್ಯಾಂಕ್ ಆಫ್ ಬರೋಡಾ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಾಗಿ ಇರುವ IBPS Website https://ibpsonline.ibps.in/bobsmnov23 ಕ್ಕೆ ಭೇಟಿ ನೀಡಿ.
* Click Here For New Registration ಎಂದಿರುವಲ್ಲಿ ಕ್ಲಿಕ್ ಮಾಡಿ ರಿಜಿಸ್ಟ್ರೇಷನ್ ಪಡೆಯಿರಿ. ನಂತರ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಿ.
* ಅರ್ಜಿ ಫಾರಂನಲ್ಲಿ ಕೇಳಿರುವ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ, ಕೇಳಲಾಗಿರುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಅರ್ಜಿ ಸಲ್ಲಿಕೆ ಪೂರ್ತಿಯಾದ ಮೇಲೆ ಅರ್ಜಿ ಸ್ವೀಕೃತಿ ಪತ್ರ ತಪ್ಪದೇ ಪಡೆಯಿರಿ, ಭವಿಷ್ಯದಲ್ಲಿ ಇದರ ಉಪಯೋಗ ಇದೆ.
ಆಯ್ಕೆ ವಿಧಾನ:-
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಲಿಖಿತ ರೂಪದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಆದವರನ್ನು ಸಂದರ್ಶನ ಮಾಡುವ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 06-12-2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-12-2023
* ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 26-12-2023
* ಅಪ್ಲಿಕೇಶನ್ ಮಾಹಿತಿ ತಿದ್ದುಪಡಿ ಮಾಡಲು ಕೊನೆಯ ದಿನಾಂಕ : 26-12-2023
* ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ: 10-01-2024
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಇತ್ತೀಚಿನ ಭಾವಚಿತ್ರ ಮತ್ತು ಸಹಿ
* ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ
* ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
* ಕೆಲಸದ ಅನುಭವ ಹೊಂದಿರುವುದರ ಬಗ್ಗೆ ದಾಖಲೆಗಳು
* ಜಾತಿ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಇನ್ನಿತರ ಪ್ರಮುಖ ದಾಖಲೆಗಳು.