ಭಾರತದಲ್ಲಿನ ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಈಗ, ಅಂತೆಯೇ ಕುಶಲಕರ್ಮಿಗಳು, ಉದ್ಯಮಿಗಳು ಮತ್ತು ನುರಿತ ವ್ಯಕ್ತಿಗಳಿಗೆ ಮತ್ತೊಂದು ವರವನ್ನು ಪ್ರಾರಂಭಿಸಿದ್ದಾರೆ.
ಅದರ ಪ್ರಕಾರ ವಿಶ್ವಕರ್ಮ ವರ್ಗಕ್ಕೆ ಸೇರುವ 18 ಬಗೆಯ ಕರಕುಶಲ ವೃತ್ತಿಗಳನ್ನು ತೊಡಗಿಕೊಂಡಿರುವ ಕಾರ್ಮಿಕರಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ 2023ರ ಮೂಲಕ ಪ್ರಧಾನ ಮಂತ್ರಿಗಳು ಸಾಲ ಸೌಲಭ್ಯ ಹಾಗೂ ರೂ.15,000 ಮೌಲ್ಯದ ಉಚಿತ ಕಿಟ್ ಗಳನ್ನು ನೀಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ಅರ್ಜಿ ಕೂಡ ಆಹ್ವಾನ ಮಾಡಲಾಗುತ್ತಿದ್ದು ಇದರ ಕುರಿತ ಪ್ರಮುಖ ವಿವರ ಹೀಗಿದೆ ನೋಡಿ…
ಯೋಜನೆ ಹೆಸರು:- ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ 2023.
ಯಾರೆಲ್ಲಾ ಯೋಜನೆ ವ್ಯಾಪ್ತಿಗೆ ಬರುತ್ತಾರೆ:-
* ಬಡಗಿ
* ದೋಣಿ ತಯಾರಕ
* ಆರ್ಮರ್
* ಕಮ್ಮಾರ
* ಬೀಗ ಹಾಕುವವನು
* ಹ್ಯಾಮರ್ ಮತ್ತು ಟೂಲ್ಕಿಟ್ ಮೇಕರ್
* ಶಿಲ್ಪಿ
* ಸ್ಟೋನ್ ಬ್ರೇಕರ್
* ಗೋಲ್ಡ್ ಸ್ಮಿತ್
* ಪಾಟರ್
* ಚಮ್ಮಾರ
* ಮೇಸನ್ಸ್
* ಬಾಸ್ಕೆಟ್ ಮತ್ತು ಬ್ರೂಮ್ ಮೇಕರ್
* ಗೊಂಬೆ ಮತ್ತು ಆಟಿಕೆ ತಯಾರಕ
* ಕ್ಷೌರಿಕ
* ಗಾರ್ಲ್ಯಾಂಡ್ ಮೇಕರ್
* ವಾಷರ್ ಮ್ಯಾನ್
* ಟೈಲರ್
* ಮೀನುಗಾರಿಕೆ
* ನೆಟ್ ಮೇಕರ್
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ 2023 ಪ್ರಯೋಜನಗಳು:-
* ಯೋಜನೆಗೆ ನೋಂದಾಯಿಸಿಕೊಳ್ಳುವವರಿಗೆ ಸಚಿವಾಲಯದಿಂದ 15 ದಿನಗಳ ಕೌಶಲ್ಯ ಉನ್ನತೀಕರಣ ತರಬೇತಿ ಕೂಡ ನೀಡಲಾಗುತ್ತದೆ, ನುರಿತ ತಜ್ಞರಿಂದ ಕೊಡಿಸುವ ತರಬೇತಿಯು ಸಾಕಷ್ಟು ಸಹಾಯ ಮಾಡುತ್ತದೆ.
* ಕೌಶಲ್ಯ ತರಬೇತಿಯ ಸಮಯದಲ್ಲಿ ಸರ್ಕಾರವು ಮಾಸಿಕವಾಗಿ ರೂ.500 ಗಳ ಸ್ಟೈಫಂಡ್ ಸಹ ಒದಗಿಸುತ್ತದೆ.
* ತರಬೇತಿ ನಂತರ ನೀವು ರೂ 15,000 ಮೌಲ್ಯದ ಟೂಲ್ಕಿಟ್ ಪ್ರೋತ್ಸಾಹವನ್ನು ಪಡೆಯುತ್ತೀರಿ ಅದನ್ನು ಬಳಸಿಕೊಂಡು ನಿಮ್ಮ ಉಪಕರಣಗಳು ಮತ್ತು ಪರಿಕರಗಳನ್ನು ನೀವು ಅಪ್ಗ್ರೇಡ್ ಮಾಡಬಹುದು.
* ಜೊತೆಗೆ ಸಾಲ ಸೌಲಭ್ಯವು ಸಿಗುತ್ತದೆ. ಮೊದಲ ಬಾರಿಗೆ 1 ಲಕ್ಷದವರೆಗೆ 5% ದರದಲ್ಲಿ ಯಾವುದೇ ಆಧಾರವಿಲ್ಲದಿದ್ದರೂ ಸಾಲ ಸಿಗುತ್ತದೆ.
* ಇದನ್ನು 10 ತಿಂಗಳ ಅವಕಾಶದಲ್ಲಿ ತೀರಿಸಿದರೆ ನಂತರ 3 ಲಕ್ಷದ ವರೆಗೂ 5% ಬಡ್ಡಿದರದಲ್ಲಿ ಸಾಲ ಸಿಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ನಿವಾಸ ದೃಢೀಕರಣ ಪತ್ರ
* ಕೌಶಲ್ಯ ಪ್ರಮಾಣಪತ್ರ
* ಮೊಬೈಲ್ ನಂಬರ್
* ಪಡಿತರ ಚೀಟಿ
* ಆಧಾರ್ ಕಾರ್ಡ್
* ಬ್ಯಾಂಕ್ ಖಾತೆಯ ಪಾಸ್ಬುಕ್ ವಿವರ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಇತ್ತೀಚಿನ ಭಾವಚಿತ್ರ.
ಅರ್ಜಿ ಸಲ್ಲಿಸಲು ಕೇಳಲಾಗುವ ಅರ್ಹತೆಗಳು:-
* 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು
* ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಸೇವೆಯಲ್ಲಿ ಇರಬಾರದು
* ಕುಟುಂಬದ ಒಬ್ಬ ಸದಸ್ಯರು ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ:-
* ಈ ಮೇಲೆ ತಿಳಿಸಿದ ದಾಖಲೆಗಳನ್ನು ತೆಗೆದುಕೊಂಡು CSC ಕೇಂದ್ರಗಳಲ್ಲಿ ಅಥವಾ ಗ್ರಾಮ ಓನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು
* PM ವಿಶ್ವಕರ್ಮ ಯೋಜನೆ 2023 @ pmvishwakarma.gov.in ಅನ್ನು ಆನ್ಲೈನ್ನಲ್ಲಿ ಕೂಡ ನೇರವಾಗಿ ಅರ್ಜಿ ಸಲ್ಲಿಸಬಹುದು.
* ಮೊದಲನೆಯದಾಗಿ, ಮೇಲೆ ತಿಳಿಸಿದ ವೆಬ್ಸೈಟ್ ಅನ್ನು ಬ್ರೌಸರ್ನಿಂದ ತೆರೆಯಿರಿ.
* ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಮುಂದುವರಿಯಿರಿ.
* ನೋಂದಾಯಿಸಲು ನಾಮಮಾತ್ರದ ವಿವರಗಳನ್ನು ಬಳಸಿ ಮತ್ತು ನಂತರ ಅರ್ಜಿ ನಮೂನೆಗೆ ವಿವರಗಳನ್ನು ತುಂಬಿಸುತ್ತಾ ಮುಂದುವರೆಯಿರಿ.
* ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಒಮ್ಮೆ ಅರ್ಜಿ ಸಲ್ಲಿಕೆ ಪೂರ್ತಿಯಾದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.