ಆಧಾರ್ ಆಪ್ಡೇಟ್ ಮಾಡಿಸಿ ಇಲ್ಲ ದಂಡ ಗ್ಯಾರೆಂಟಿ, ಕೆಲವೇ ದಿನಗಳ ಅವಕಾಶ, ಮೊಬೈಲ್ ನಲ್ಲಿಯೇ ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಭಾರತ ಸರ್ಕಾರದ ಅಂಗ ಸಂಸ್ಥೆಯಲ್ಲಿ ಒಂದಾದ ಭಾರತದ ವಿಶಿಷ್ಟ ಗುರುತುಗಳ ಪ್ರಾಧಿಕಾರ (UIDAI) ಈ ವರ್ಷದ ಆರಂಭದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಕುರಿತು ಒಂದು ಮಹತ್ವದ ಆದೇಶವನ್ನು ಹೊರಡಿಸಿತ್ತು. ಅದೇನೆಂದರೆ ಯಾರು ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ನವೀಕರಣ ಮಾಡಿಸಿಲ್ಲ ಅಂತವರು ಜೂನ್ 14ರ ಒಳಗೆ ಉಚಿತವಾಗಿ ತಮ್ಮ ಗುರುವಿನ ಪುರಾವೆ (POI) ಅಥವಾ ವಿಳಾಸದ ಪುರಾವೆಗಳನ್ನು (POA) ನೀಡುವ ಮೂಲಕ ಅಪ್ಡೇಟ್ ಮಾಡಬೇಕು ಎಂದು ಘೋಷಿಸಿತ್ತು.

ಯಾಕೆಂದರೆ 10 ವರ್ಷಗಳಿಂದ ಕಳೆದ ಹತ್ತು ವರ್ಷಗಳಲ್ಲಿ ಅನೇಕರ ಮುಖ ಚಹರೆ ಬದಲಾಗಿರುತ್ತದೆ, ವಿಳಾಸಗಳು ಬದಲಾಗಿರುತ್ತದೆ ಅಥವಾ ಮೊಬೈಲ್ ಸಂಖ್ಯೆ ಬದಲಾಗಿರುತ್ತದೆ. ಇವುಗಳನ್ನು ಅಪ್ಡೇಟ್ ಮಾಡಿಸದೆ ಹೋದಾಗ ಸರ್ಕಾರದ ಡಾಟಾ ಸಂಗ್ರಹಣೆಯಲ್ಲಿ ವ್ಯತ್ಯಾಸ ಆಗಬಹುದು ಎಂದು ಈ ಉದ್ದೇಶದಿಂದಲೇ ಆಧಾರ್ ಕಾರ್ಡ್ ಜಾರಿಯಾಗಿತ್ತು.

ಈಗ ಅದೇ ರೀತಿ ಹತ್ತು ವರ್ಷಕ್ಕೊಮ್ಮೆ ಆಧಾರ್ ಅಪ್ಡೇಟ್ ಮಾಡಿಸಬೇಕು ಎಂದು ನಿಯಮ ಕೂಡ ತರಲಾಗಿದೆ. UIDAI ನಾ ಈ ಘೋಷಣೆ ಅನೇಕರಿಗೆ ತಲುಪದ ಕಾರಣ ಮತ್ತೊಮ್ಮೆ 6 ತಿಂಗಳವರೆಗೆ ಈ ಕಾಲಾವಕಾಶವನ್ನು ವಿಸ್ತರಿಸಿ ಡಿಸೆಂಬರ್ 14ರ ವರೆಗೆ ಉಚಿತವಾಗಿ ಈ ಪ್ರಕ್ರಿಯೆ ಪೂರ್ತಿಗೊಳಿಸಲು ಅವಕಾಶ ಮಾಡಿಕೊಡಲಾಗಿದೆ.

ಒಂದು ವೇಳೆ ಈ ಕಾಲಾವಕಾಶ ಕೂಡ ಮೀರಿದರೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವೇಳೆ ಆತ ರೀತಿ ಅತಿ ದೊಡ್ಡ ಮೊತ್ತದ ದಂಡ ಕಟ್ಟಿ ಪ್ರಕ್ರಿಯೆ ಪೂರ್ತಿಗೊಳಿಸಬೇಕಾದ ಸಂದರ್ಭ ಬರಬಹುದು. ಹಾಗಾಗಿ ತಪ್ಪದೆ ಯಾವುದೇ ಆಧಾರ್ ಕೇಂದ್ರಗಳಿಗೆ ತೆರಳಿ ಈ ಪ್ರಕ್ರಿಯೆ ಪೂರ್ತಿಗೊಳಿಸಿ ಅಥವಾ UIDAI ನ ವೆಬ್ ಸೈಟ್ ಗೆ ಹೋಗಿ ನೀವೇ ನಿಮ್ಮ ಮೊಬೈಲ್ ನಲ್ಲಿ ಅಪ್ಡೇಟ್ ಮಾಡಿಕೊಳ್ಳಬಹುದು.

ಮೊಬೈಲ್ ನಲ್ಲಿ ಅಪ್ಡೇಟ್ ಮಾಡುವ ವಿಧಾನ:-

* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ Chrome ಬ್ರೌಸರ್ ಗೆ ಹೋಗಿ ಸರ್ಚ್ ಬಾರ್ ನಲ್ಲಿ My Aadhar ಎಂದು ಟೈಪ್ ಮಾಡಿ ಸರ್ಚ್ ಮಾಡಿ
* My Aadhar ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ, Welcome to my Aadhar ಎನ್ನುವ ಹೊಸ ಪೇಜ್ ಕಾಣುತ್ತದೆ, log in ಆಗಬೇಕು.

* Log in ಆಗಲು ನೀವು ಯಾರ ಆಧಾರ್ ಕಾರ್ಡ್ ನವೀಕರಣ ಮಾಡಬೇಕು ಅವರ ಆಧಾರ್ ಸಂಖ್ಯೆಯನ್ನೇ ಬಳಸಬೇಕು. ಅವರ Aadhar no. ಕೇಳಲಾಗಿರುತ್ತದೆ ಅದನ್ನು ನಮೂದಿಸಿ ನಂತರ ನೀಡಿರುವ Captcha code ಹಾಕಿ, Send OTP ಕ್ಲಿಕ್ ಮಾಡಿ.
* ಆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸುವ ಮೂಲಕ login ಆಗಿ.

* ಅಲ್ಲಿ ಎಲ್ಲಾ ಸೇವೆಗಳ ಲಿಸ್ಟ್ ಇರುತ್ತದೆ ನೀವು ಮೊದಲಿಗೆ ಇರುವ documents update ಆಪ್ಷನ್ ಕ್ಲಿಕ್ ಮಾಡಿ, ನೀಡಿರುವ ಸೂಚನೆಗಳನ್ನು ಪೂರ್ತಿಯಾಗಿ ಓದಿ. ಮತ್ತು ಆ ಮಾರ್ಗ ಸೂಚಿ ಪ್ರಕಾರವೇ ನೀವು ಅಪ್ಡೇಟ್ ಮಾಡಬೇಕಾಗುತ್ತದೆ. * ಮುಖ್ಯವಾಗಿ ಡಾಕ್ಯುಮೆಂಟ್ ಗಾತ್ರವು 2mb ಗಿಂತ ಕಡಿಮೆ ಇರಬೇಕು, ಬೆಂಬಲಿತ ಫೈಲ್ ಫಾರ್ಮೆಟ್ ಗಳು jpj, pnj ಅಥವಾ pdf ರೂಪದಲ್ಲಿರಬೇಕು ಈ ರೀತಿ ನಿಮ್ಮ ಡಾಕ್ಯುಮೆಂಟ್ ರೆಡಿ ಮಾಡಿಕೊಂಡು ಗ್ಯಾಲರಿಯಲ್ಲಿ ಸೇವ್ ಮಾಡಿಕೊಳ್ಳಿ ಅಥವಾ ಅಪ್ಲೋಡ್ ಆಗುವ ಮೇಲೆ ಸೆಟ್ ಮಾಡಿಕೊಳ್ಳಿ.

* ಮುಂದಿನ ಹಂತದಲ್ಲಿ ನಿಮ್ಮ ವಿಳಾಸದ ಪುರಾವೆ (POA) ಅಪ್ಲೋಡ್ ಮಾಡಿ ಎನ್ನುವ ಆಪ್ಷನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ POA ಆಗಿ ಮಾನ್ಯವಾಗುವ ಎಲ್ಲ ಡಾಕ್ಯುಮೆಂಟ್ ಗಳ ಲಿಸ್ಟ್ ಬರುತ್ತದೆ. ಅದರಲ್ಲಿ ನಿಮ್ಮ ಬಳಿ ಇರುವ ಯಾವುದಾದರೂ ಒಂದು ಡಾಕ್ಯುಮೆಂಟ್ ಕ್ಲಿಕ್ ಮಾಡಿ ಮತ್ತು ನಿಮ್ಮ ಗ್ಯಾಲರಿ ಇಂದ ಅದಕ್ಕೆ ಪೂರಕ ಡಾಕ್ಯುಮೆಂಟ್ ಸೆಲೆಕ್ಟ್ ಮಾಡಿ ಈ ಮೇಲೆ ತಿಳಿಸಿದ ಸೂಚನೆಯ ಮಾದರಿಯಂತೆ ಅಪ್ಲೋಡ್ ಮಾಡಿ

* ಗುರುತಿನ ಪುರಾವೆ (POI) ಅಪ್ಡೇಟ್ ಮಾಡಲು ಕೂಡ ಇದೇ ಕ್ರಮ ಅನುಕರಿಸಿ
* ನೀವು ಕೊಟ್ಟಿರುವ ವಿವರಗಳು ಸರಿಯಾಗಿದೆ ಎನ್ನುವುದನ್ನು ದೃಢೀಕರಿಸಿ ಒಪ್ಪಿ ಬೇಕಿದ್ದಲ್ಲಿ ಮತ್ತೊಮ್ಮೆ ಚೆಕ್ ಮಾಡಿ ಕೊನೆಯಲ್ಲಿ ನೀಡಿರುವ ಚೆಕ್ ಬಾಕ್ಸ್ ನಲ್ಲಿ ರೈಟ್ ಕ್ಲಿಕ್ ಮಾಡಿ.
* ಆಧಾರ್ ನಲ್ಲಿರುವ ನಿಮ್ಮ ಜನಸಂಖ್ಯಾ ವಿವರಗಳೊಂದಿಗೆ ನಿಖರವಾಗಿ ಹೊಂದಿಕೆಯಾಗುವ ನಿಮ್ಮ ಜನಸಂಖ್ಯೆ ವಿವರಗಳನ್ನು ಡಾಕುಮೆಂಟ್ ನಲ್ಲಿ ಖಚಿತಪಡಿಸಿ ಎನ್ನುವ authentication ಕಾಣಿಸುತ್ತದೆ

* ಧೃಡೀಕರಿಸಲು ಸರಿ ಕ್ಲಿಕ್ ಮಾಡಿ ಎನ್ನುವ ಸೂಚನೆ ಇರುತ್ತದೆ, ಸರಿ ಎನ್ನುವುದನ್ನು ಕ್ಲಿಕ್ ಮಾಡಿ ನಂತರ Submit ಕ್ಲಿಕ್ ಮಾಡಿ. * ಪ್ರಕ್ರಿಯೆ ಯಶಸ್ವಿಯಾಗಿದೆ ಎನ್ನುವುದು ತಿಳಿದು ಬಂದ ಮೇಲೆ ಅರ್ಜಿ ಸ್ವೀಕೃತಿ ಪ್ರತಿಯನ್ನು (Acknowlegdment copy) ಪಡೆದುಕೊಳ್ಳಿ. ಇದರಲ್ಲಿ ನೀಡಲಾಗಿರುವ reference no. ಮೂಲಕ 14 ದಿನಗಳಾದ ಬಳಿಕ ಹೊಸ ಆಧಾರ್ ಕಾರ್ಡ್ ಪ್ರಿಂಟ್ ಪಡೆಯಬಹುದು.

https://youtu.be/dxR9lyzgaFY?si=ccG83cMmVA2tJVO5

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now