ಮನೆ ಇಲ್ಲದವರಿಗೆ, ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ.!

 

WhatsApp Group Join Now
Telegram Group Join Now

ಮನೆ (House) ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ. ಆದರೆ ಭಾರತದಲ್ಲಿ ಸಂಪೂರ್ಣವಾಗಿ ಎಲ್ಲರಿಗೂ ಕೂಡ ಸ್ವಂತ ಸೂರಿನಲ್ಲಿ ವಾಸಿಸುವ ಅನುಕೂಲತೆ ಇಲ್ಲ. ಕೇಂದ್ರ ಸರ್ಕಾರವು ಕೂಡ ಆದಷ್ಟು ಶೀಘ್ರವಾಗಿ ಈ ಗುರಿ ಮುಟ್ಟಲು ಪ್ರಯತ್ನಿಸುತ್ತಿದೆ ಇದಕ್ಕಾಗಿ ವಸತಿ ಯೋಜನೆಗಳನ್ನು (Housing Schemes) ರೂಪಿಸಿದೆ.

ರಾಜ್ಯ ಸರ್ಕಾರದ ವತಿಯಿಂದಲೂ ಕೂಡ ವಸತಿ ಯೋಜನೆಗಳು ಜಾರಿಯಾಗಿದ್ದು, ಅತಿ ಕಡಿಮೆ ಬೆಲೆಗೆ ಸ್ವಂತ ಮನೆ ಕಟ್ಟಿಕೊಳ್ಳಲು ನೆರವಾಗುವುದು ಅಥವಾ ವಸತಿ ಗೃಹಗಳನ್ನು ಕಟ್ಟಿ ಹಂಚಿಕೆ ಮಾಡುವುದು ಈ ಯೋಜನೆಗಳ ಉದ್ದೇಶವಾಗಿದೆ. ನಿಮಗೂ ಕೂಡ ಸ್ವಂತ ಮನೆಯ ಕನಸಿದ್ದರೆ ನೀವು ಮನೆ ನಿರ್ಮಿಸಲು ಸರ್ಕಾರದ ಸಹಾಯ ತೆಗೆದುಕೊಳ್ಳಬಹುದು.

ಸದ್ಯಕ್ಕೆ ಕೇಂದ್ರ ಸರ್ಕಾರದಿಂದ ಬಡ ಜನರಿಗಾಗಿ ರೂಪಿಸಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯ (PMAY) ಕುರಿತು ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. 2016ರಲ್ಲಿ ಈವರೆಗೂ ಇದ್ದ ಇಂದಿರಾಗಾಂಧಿ ವಸತಿ (Indira Gandi Housing Scheme renamed as Pzradana Mantri Avas Yojane) ಯೋಜನೆಯನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯ ಎನ್ನುವ ಹೆಸರಿಗೆ ಬದಲಾಯಿಸಲಾಗಿದೆ.

ಇಂದಿರಾ ಗಾಂಧಿ ವಸತಿ ಯೋಜನೆಯಡಿಯಲ್ಲಿ 2.6 ಕೋಟಿ ಮನೆಗಳನ್ನು ಜಾರಿಗೆಗೊಳಿಸಲಾಗಿದ್ದು, ಸದ್ಯಕ್ಕೆ ಈಗ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 2.5 ಕೋಟಿ ಮನೆಗಳು ಜಾರಿಯಾಗಿವೆ. ಈಗಾಗಲೇ ಕೆಲವು ಭಾಗಗಳಲ್ಲಿ ಬುಕಿಂಗ್ ಕೂಡ ಶುರುವಾಗಿದ್ದು ಇನ್ನು ಉಳಿದ ಮನೆಗಳು ಮಾರ್ಚ್ ಒಳಗಡೆ ಸ್ಯಾಂಕ್ಷನ್ (Sanction) ಆಗಿವೆ ಎನ್ನುವ ಮಾಹಿತಿಯು ಕೇಂದ್ರ ಸರ್ಕಾರದಿಂದ ತಿಳಿದುಬಂದಿದೆ. ಹಾಗಾಗಿ ನೀವು ಕೂಡ ಆಕಾಂಕ್ಷಿಗಳಾಗಿದ್ದರೆ.

ಈ ಯೋಜನೆಗೆ ಅರ್ಜಿ ಸಲ್ಲಿಸಿ ಮನೆಯನ್ನು ಪಡೆದುಕೊಳ್ಳಬಹುದು ಈ ಯೋಜನೆ ವತಿಯಿಂದ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಮಂಜೂರಾಗಿರುತ್ತದೆ. ಈ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು 1.2 ಲಕ್ಷ ಸಹಾಯಧನವನ್ನು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಡಲು 1.3 ಲಕ್ಷ ಹಣವನ್ನು ನೀಡಲಾಗುತ್ತದೆ.

ಈ ಮೊತ್ತವನ್ನು ಪಡೆದುಕೊಂಡು ಬಡವರು ತಮ್ಮ ಶಕ್ತಿಯನುಸಾರ ಮನೆಗಳನ್ನು ಕಟ್ಟಿಕೊಳ್ಳಬೇಕು. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗಾಗಿ ಅರ್ಜಿ ಸಲ್ಲಿಸುವುದರ ಕುರಿತು ಕೆಲ ಪ್ರಮುಖ ಮಾಹಿತಿ ಹೀಗಿದೆ ನೋಡಿ.

ಅರ್ಜಿ ಸಲ್ಲಿಸುವ ವಿಧಾನ:-

* ಪ್ರಧಾನ ಮಂತ್ರಿ ಆವಾಸ್ ಯೋಜನೆ ವೆಬ್ಸೈಟ್ ಆದ pmaymis.gov.in ಗೆ ಲಾಗಿನ್ ಮಾಡಿ.
* ನಾಗರಿಕರ ಮೌಲ್ಯಮಾಪನ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಅನ್ವಯಿಸುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ಅರ್ಜಿದಾರರ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ, ಇದು ನಿಮ್ಮನ್ನು ಅಪ್ಲಿಕೇಶನ್ ಪುಟಕ್ಕೆ ಮರು ನಿರ್ದೇಶಿಸುತ್ತದೆ, ಅಲ್ಲಿ ಕೇಳಲಾಗುವ ಎಲ್ಲಾ ವೈಯುಕ್ತಿಕ ವಿವರಗಳಾದ ಹೆಸರು, ಸಂಪರ್ಕ ಸಂಖ್ಯೆ, ವಿಳಾಸ ಇತ್ಯಾದಿ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕ್ ಖಾತೆ ಮತ್ತು ಹಾಗೂ ಆದಾಯದ ವಿವರಗಳನ್ನು ನಿಖರವಾಗಿ ನಮೂದಿಸಿ ಮತ್ತು ಇದಕ್ಕೆ ಕೆಲವು ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆ ಇದ್ದರೆ ಸಂಬಂಧ ಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

* ಇಷ್ಟನ್ನು ಮಾಡಿದ ನಂತರ, ಉಳಿಸು ಆಯ್ಕೆಯನ್ನು ಆರಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
* ಮತ್ತೊಮ್ಮೆ ಸೇವ್ ಬಟನ್ ಮೇಲೆ ಕ್ಲಿಕ್ ಮಾಡಿ. ಅಪ್ಲಿಕೇಶನ್ ಈಗ ಪೂರ್ಣಗೊಂಡಿದ್ದರೆ ತಪ್ಪದೇ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಸಹಾಯವಾಣಿ ಸಂಖ್ಯೆ ಮತ್ತು ವೆಬ್ಸೈಟ್ ವಿಳಾಸ:-
011 2306 3285, 011 2306 0484
grievance-pmay@gov.in

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now