ಕರ್ನಾಟಕ ಸರ್ಕಾರದ ಹಾಸನ್ ಜಿಲ್ಲಾ ಪಂಚಾಯತ್ ನಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆ ವತಿಯಿಂದ ಜಾರಿಯಾಗಿರುವ ಪುರಸ್ಕೃತ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕೆಲ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಬಿತ್ತಿದೆ.
ಇದರ ಪ್ರಕಾರವಾಗಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕೂಡ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಆಗಲಿ ಎನ್ನುವ ಕಾರಣದಿಂದಾಗಿ ಈ ಅಂಕಣದಲ್ಲಿ ಹುದ್ದೆಗಳ ನೇಮಕಾತಿ ಕುರಿತಾಗಿ ಸೂಚಿಸಿರುವ ಕೆಲ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಸಂಸ್ಥೆ ಹೆಸರು:- ಹಾಸನ್ ಜಿಲ್ಲಾ ಪಂಚಾಯಿತಿ
ಹುದ್ದೆಗಳು:- ವಿವಿಧ ಹುದ್ದೆಗಳು
ಹುದ್ದೆಗಳ ವಿವರ:-
* ತಜ್ಞ ವೈದ್ಯರು (AYU)
* ತಜ್ಞ ವೈದ್ಯರು (BNYS)
* ಔಷದ ವಿತರಕರು
* ಮಸಾಜಿಸ್ಟ್
* ಮಲ್ಟಿಪರ್ಪಸ್ ವರ್ಕರ್
* ಸಮುದಾಯ ಆರೋಗ್ಯ ಅಧಿಕಾರಿ
ಒಟ್ಟು ಹುದ್ದೆಗಳ ಸಂಖ್ಯೆ:- 13
ವೇತನ ಶ್ರೇಣಿ:-
* ತಜ್ಞ ವೈದ್ಯರು (AYU) – ರೂ.52,500 ರಿಂದ ಆರಂಭ
* ತಜ್ಞ ವೈದ್ಯರು (BNYS) – ರೂ. 52,500 ರಿಂದ ಆರಂಭ
* ಔಷದ ವಿತರಕರು – ರೂ. 27,500
* ಮಸಾಜಿಸ್ಟ್ – ರೂ. 18,500
* ಮಲ್ಟಿಪರ್ಪಸ್ ವರ್ಕರ್ – ರೂ. 16,900
* ಸಮುದಾಯ ಆರೋಗ್ಯ ಅಧಿಕಾರಿ – ರೂ.40,000
ಉದ್ಯೋಗ ಸ್ಥಳ:- ಹಾಸನ
ಶೈಕ್ಷಣಿಕ ವಿದ್ಯಾರ್ಹತೆ:-
* ತಜ್ಞ ವೈದ್ಯರು (AYU) – BAMS MS MD
* ತಜ್ಞ ವೈದ್ಯರು (BNYS) – BNYS ಜೊತೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ
* ಔಷದ ವಿತರಕರು – 10 ನೇ ತರಗತಿ ಮತ್ತು ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೋಮೋ
* ಮಸಾಜಿಸ್ಟ್ – 7ನೇ ತರಗತಿ
* ಮಲ್ಟಿಪರ್ಪಸ್ ವರ್ಕರ್ – 10ನೇ ತರಗತಿ
* ಸಮುದಾಯ ಆರೋಗ್ಯ ಅಧಿಕಾರಿ – BAMS, BUMS
ವಯೋಮಿತಿ:-
*ಕನಿಷ್ಠ ವಯೋಮಿತಿ ಎಲ್ಲ ವರ್ಗದವರಿಗೂ 18 ವರ್ಷಗಳು
* ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 40 ವರ್ಷಗಳು
* 2A, 2B, 3A, 3B ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 38 ವರ್ಷಗಳು.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು.
ಅರ್ಜಿ ಸಲ್ಲಿಸುವವರಿಗೆ ವಿಶೇಷ ಸೂಚನೆಗಳು:-
* ಅರ್ಜಿ ಸಲ್ಲಿಸಲು ಅರ್ಹರಾಗಿರುವ ಆಸಕ್ತ ಅಭ್ಯರ್ಥಿಗಳು ಮೊದಲಿಗೆ https://hassan.nic.in ಈ ವೆಬ್ ಸೈಟಿಗೆ ಭೇಟಿ ಕೊಟ್ಟು ಪ್ರಕಟಣೆಯನ್ನು ಓದಿ ಅರ್ಥೈಸಿಕೊಳ್ಳಿ.
* ಇದೆ ವೆಬ್ ಸೈಟ್ ನಲ್ಲಿ ಅರ್ಜಿಯ ನಮೂನೆ ಇರುತ್ತದೆ ಅದನ್ನು ಡೌನ್ ಲೋಡ್ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ. ಇತ್ತೀಚಿನ ಭಾವಚಿತ್ರ ಕೂಡ ಲಗತ್ತಿಸಿ ಸಹಿ ಮಾಡಿ.
* ವಿವರಗಳನ್ನು ತುಂಬಿದ ಅರ್ಜಿ ಫಾರಂ ಪ್ರಿಂಟ್ ಔಟ್ ತೆಗೆದುಕೊಂಡು ಅದರೊಡನೆ ಪೂರಕ ದಾಖಲೆಗಳ ಪ್ರತಿಗಳನ್ನು ಲಗ್ಗತ್ತಿಸಿ ಈ ಕೆಳಗೆ ತಿಳಿಸಲಾಗುವ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮುಖಾಂತರ ಅರ್ಜಿ ಸಲ್ಲಿಸಲು ಸೂಚಿಸಿರುವ ಕಡೆಯ ದಿನಾಂಕದ ಒಳಗೆ ಕಳುಹಿಸಿಕೊಡಿ.
* ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ಲಕೋಟೆಯ ಮೇಲೆ ದಪ್ಪ ಅಕ್ಷರಗಳಲ್ಲಿ ನಮೂದಿಸಬೇಕು.
* ವಿಳಾಸ
ಸದಸ್ಯ ಕಾರ್ಯದರ್ಶಿ,
ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ,
ಹೊಸ ಲೈನ್ ರಸ್ತೆ,
ಹಾಸನ – 573201
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 29 ನವೆಂಬರ್, 2023.
* ಅರ್ಜಿಯನ್ನು ತಲುಪಿಸಲು ಕಡೆಯ ದಿನಾಂಕ – 28 ಡಿಸೆಂಬರ್, 2023.