ಕೇಂದ್ರ ಸರ್ಕಾರವು (Central Government) ದೇಶದ ಎಲ್ಲ ರೈತರಿಗೂ (for farmers) ಅನ್ವಯವಾಗುವಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ (PM Narendra Modi) ಆದ ಮೇಲೆ ಜಾರಿಗೆ ತಂದ ಪ್ರಧಾನ್ ಮಂತ್ರಿ ಕಿಸಾನ್ ಸನ್ಮಾನಿಧಿ ಯೋಜನೆ (PMKSY) ಮತ್ತು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು (PMFBY) ಬಹಳ ವಿಶೇಷ.
ಯಾಕೆಂದರೆ ಈ ಯೋಜನೆಗಳ ಮೂಲಕ ಫಲಾನುಭವಿ ರೈತನ ತನ್ನ ಬ್ಯಾಂಕ್ ಖಾತೆಗೆ DBT ಮೂಲಕ ಸರ್ಕಾರದಿಂದ ಸಿಗುವ ಸಹಾಯಧನ ಅಥವಾ ಬೆಳೆ ವಿಮೆ ಈ ಹಣವನ್ನು ಪಡೆಯಬಹುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ವಾರ್ಷಿಕವಾಗಿ ರೂ.6,000 ಗಳನ್ನು ನಾಲ್ಕು ತಿಂಗಳ ಅಂತರದಲ್ಲಿ ಮೂರು ಕಂತುಗಳಾಗಿ ರೈತನಿಗೆ ಪ್ರೋತ್ಸಾಹ ಧನದಂತೆ ನೀಡಿದರೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು ಸ್ವಲ್ಪ ವಿಶೇಷವಾಗಿದೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತನ ತಾನು ಬೆಳೆಯುವ ಬೆಳೆಗೆ ಸರ್ಕಾರ ನಿಗದಿಪಡಿಸಿರುವ ಮೊತ್ತದ ವಿಮೆ ಕಟ್ಟಿ ಕಂಪನಿಗಳಲ್ಲಿ ವಿಮೆ (Crop Insurance) ಖರೀದಿಸಬೇಕು. ಮತ್ತು ಒಂದು ವೇಳೆ ರೈತನು ಬೆಳೆದ ಬೆಳೆಗೆ ಸಮಸ್ಯೆ ಉಂಟಾಗಿ ಬೆಳೆ ಹಾನಿಯಾದರೆ ಕಂಪನಿಗಳು ವಿಮೆ ಮೊತ್ತವನ್ನು ಭರಿಸುತ್ತವೆ.
ಕಂಪನಿಗಳು ಸರ್ಕಾರಗೆ ಹಣ ಸಂದಾಯ ಮಾಡುತ್ತವೆ ಮತ್ತು ಸರ್ಕಾರವು ಸಂತ್ರಸ್ತ ರೈತರಿಗೆ ಹಣ ಹಾಕುತ್ತದೆ ಅದೇ ರೀತಿಯಾಗಿ ಈ ವರ್ಷ ರಾಜ್ಯದಲ್ಲಿ ಶೇಕಡವಾರು 80% ಗಿಂತ ಹೆಚ್ಚು ರೈತರು ಮುಂಗಾರು ಮಳೆ ಕೊರತೆ ಕಾರಣದಿಂದಾಗಿ ನ’ಷ್ಟ ಹೊಂದಿದ್ದಾರೆ ಇದರಲ್ಲಿ ಫಸಲ್ ಭೀಮಾ ಯೋಜನೆಗೆ ವಿಮೆ ಕಟ್ಟಿದವರಿಗೆ ಒಂದು ಮಹತ್ವದ ಸುದ್ದಿ ಇದೆ.
ಮುಂಗಾರು ಮಳೆಯ ಕೊರತೆಯಿಂದ ಬೆಳೆ ಹಾನಿಗೆ ಒಳಗಾಗಿರುವ ರೈತರು ಈ ಬೆಳೆ ವಿಮೆಯನ್ನು ಕ್ಲೈಂ ಮಾಡಬಹುದು. ಹಾಗೆ ಈ ವರ್ಷ ರಾಜ್ಯದಲ್ಲಿ ಬರಗಾಲ ಸಂಭವಿಸುವುದರಿಂದ ಯಾರೆಲ್ಲ ಬಿತ್ತನೆ ಮಾಡುವ ಉದ್ದೇಶದಿಂದ ಈಗಾಗಲೇ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಖರೀದಿಸಿದ್ದರು ಮತ್ತು ವಿಮೆಗಳನ್ನು ಕಟ್ಟಿದರು ಅವರು ಕೂಡ ಈ ಹಣವನ್ನು ಪಡೆಯಲು ಅರ್ಹರು ಎಂದು ಸರ್ಕಾರ ಒಮ್ಮೆ ತಿಳಿಸಿದೆ.
ಆ ಪ್ರಕಾರವಾಗಿ ಈಗ ಸರ್ಕಾರದಿಂದ ಮಧ್ಯಂತರ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆಯಾಗಿದ್ದು ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳು ಹಾಗೂ ತಾಲೂಕುಗಳ ರೈತರ ಖಾತೆಗೂ ಕೂಡ DBT ಮೂಲಕ ನೇರವಾಗಿ ಈ ಬೆಳೆ ವಿಮೆ ಪರಿಹಾರದ ಹಣವು ಆಗುತ್ತದೆ.
ರಾಜ್ಯದಲ್ಲಿ ಮೊದಲಿಗೆ ಕಲ್ಬುರ್ಗಿ ಜಿಲ್ಲೆಗೆ 124 ಕೋಟಿ ಬೆಳೆ ವಿಮೆ ಹಣ ವರ್ಗಾವಣೆ ಆಗಿದೆ, ಶಿರಸಿ ತಾಲೂಕಿನ ರೈತರಿಗೆ 78.9 ಕೋಟಿ ಹಣ ಬೆಳೆ ಪರಿಹಾರ ಹಣ ಮಂಜೂರಾಗಿದೆ. ಧಾರವಾಡ ಜಿಲ್ಲೆಯ ನೊಂದಾಯಿತ 46,973 ರೈತರ ಖಾತೆಗೂ ಕೂಡ 31.77 ಕೋಟಿ ರೂಪಾಯಿ 22,564 ವಿಜಯಪುರದ ರೈತರ ಖಾತೆಗೂ ಕೂಡ 19.27. ಹಣ ವರ್ಗಾವಣೆ ಆಗಿದೆ.
ಕೊಪ್ಪಳ, ಗದಗ, ಬೆಂಗಳೂರು ಗ್ರಾಮಾಂತರ, ವಿಜಯನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಯ ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮತ್ತು FID ಮಾಡಿಸಿರುವ ರೈತ ಈ ಬೆಳೆ ವಿಮೆ ಹಣ ಪಡೆಯುತ್ತಿದ್ದಾನೆ ಇನ್ನು ಉಳಿದ ಜಿಲ್ಲೆಗಳಿಗೆ ಶೀಘ್ರವೇ ಸಾಕಾದ ವತಿಯಿಂದ ಹಣ ವರ್ಗಾವಣೆ ಆಗಲಿದೆ ಎನ್ನುವ ಮಾಹಿತಿ ಕೂಡ ಸಿಕ್ಕಿದೆ.