ನಮ್ಮ ಕಾನೂನಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಮೊದಲನೇ ಹೆಂಡತಿ ಜೀವಂತವಾಗಿರುವಾಗ ಎರಡನೇ ಮದುವೆ ಆಗುವಂತಿಲ್ಲ. ಹಾಗೆ ಮಹಿಳೆಯ ಕೂಡ ತನ್ನ ಮೊದಲನೇ ಪತಿ ಜೀವಂತ ಇರುವಾಗ ಎರಡನೇ ಮದುವೆ ಆಗುವಂತಿಲ್ಲ. ಇದು ಕಾನೂನಿನ ಪ್ರಕಾರ ಅ’ಪ’ರಾ’ಧ. ಆದರೂ ಕೂಡ ನಮ್ಮ ಕಣ್ಣೆದುರಿಗೆ ಎಷ್ಟೋ ಕೇಸ್ ಗಳಲ್ಲಿ ಮೊದಲನೇ ಸಂಗಾತಿ ಇರುವಾಗಲೇ ಎರಡನೇ ಮದುವೆ ಆಗುತ್ತಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಗಂಡಸರು ಹೆಂಡತಿಗೆ ಗೊತ್ತಾಗದೆ ಬೇರೆ ಕಡೆ ಸಂಬಂಧ ಬೆಳೆಸಿ ಬೇರೆ ಮನೆ ಮಾಡಿ ಅಲ್ಲಿ ಎರಡನೇ ಹೆಂಡತಿ ಹಾಗೂ ಎರಡನೇ ಹೆಂಡತಿ ಮಕ್ಕಳನ್ನು ಸಾಕುತ್ತಿರುತ್ತಾರೆ ಅಥವಾ ಮೊದಲನೇ ಪತ್ನಿಯ ಜೊತೆಗೆ ವಿ’ಚ್ಛೇ’ದ’ನದ ಕೇಸ್ ಗಳು ಕೋರ್ಟ್ಗಳಲ್ಲಿ ನಡೆಯುತ್ತಿರುವಾಗ ಸಂಬಂಧ ಮುರಿದು ಬಿದ್ದ ತಕ್ಷಣವೇ ಅದು ಡಿಕ್ಲೇರ್ ಆಗುವ ಮುನ್ನವೇ ಎರಡನೇ ಮದುವೆ ಆಗಿ ಜೀವನ ನಡೆಸುತ್ತಿರುತ್ತಾರೆ.
ಇಂತಹ ಕೇಸ್ ಗಳಲ್ಲಿ ಸಾಮಾನ್ಯವಾಗಿ ಪತಿ ಎರಡನೇ ವಿವಾಹವಾದಾಗ ಮೊದಲನೇ ಪತ್ನಿಯು ವಿಷಯ ಗೊತ್ತಾದ ತಕ್ಷಣವೇ FIR ದಾಖಲಿಸುತ್ತಾರೆ. ಗಂಡನ ಮೇಲೆ ಸೆಕ್ಷನ್ 499ನಡಿ ಕೇಸ್ ಹಾಕುತ್ತಾರೆ. ಈ ರೀತಿ ಆದಾಗ ಗಂಡನಿಗೆ ಕನಿಷ್ಠ 7 ವರ್ಷಗಳವರೆಗೆ ಆರೋಪ ಸಾಬೀತಾದರೆ ಶಿಕ್ಷೆ ಆಗುತ್ತದೆ ಹೊರತು ಎಲ್ಲೂ ವಿವಾಹ ಅನೂರ್ಜಿತ ಎಂದು ಸ್ಟೇಟ್ಮೆಂಟ್ ಸಿಗುವುದಿಲ್ಲ.
ಅದರ ಬದಲು ನೀವು ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 11ರ ಅಡಿ ಎರಡನೇ ವಿವಾಹವನ್ನು ಅನೂರ್ಜಿತ ಎಂದು ಘೋಷಿಸಬಹುದು. ಮೊದಲನೇ ಪತ್ನಿ ಬದುಕಿರುವಾಗ ಎರಡನೇ ಮದುವೆ ಆದರೆ ಆ ಮದುವೆ ಅಸಿಂಧು ಅಥವಾ ಶೂನ್ಯ ಮದುವೆ ಎನ್ನುವುದು ಸತ್ಯ ಆದರೆ ಇದನ್ನು ಈ ರೀತಿ ಘೋಷಿಸಿಕೊಳ್ಳುವ ಅಗತ್ಯ ಏನಿದೆ ಎನ್ನುವುದನ್ನು ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಒಂದು ವೇಳೆ ಈ ರೀತಿ ಪತ್ನಿಗೆ ಪತಿಯ ಎರಡನೇ ವಿವಾಹದ ಬಗ್ಗೆ ಗೊತ್ತಾಗಿಯೂ ಅಥವಾ ಪತಿಗೆ ನನ್ನ ಹೆಂಡತಿ ಎರಡನೇ ಮದುವೆ ಬಗ್ಗೆ ಗೊತ್ತಾಗಿಯೂ ಅದನ್ನು ಘೋಷಿಸದೇ ಇದ್ದಾಗ ಅಥವಾ ಅದನ್ನು ತಡೆಯದೆ ಇದ್ದಾಗ ಕಾನೂನಿನ ಪ್ರಕಾರ ಅದನ್ನು ಶೂನ್ಯ ಮದುವೆ ಎಂದು ರದ್ದು ಮಾಡಿಸದೆ ಇರುವಾಗ.
ಆ ಎರಡನೇ ಸಂಬಂಧದಲ್ಲಿ ಅವರು ತಮ್ಮ ದಾಖಲೆಗಳೆಲ್ಲ W/o ಎನ್ನುವುದರಲ್ಲಿ ಮತ್ತು ಎರಡನೇ ಸಂಬಂಧದಿಂದ ಆದ ಮಕ್ಕಳ ಜನನ ಪ್ರಮಾಣ ಪತ್ರದಲ್ಲಿ ಅಥವಾ ಶಾಲೆಗೆ ಸೇರಿಸುವಾಗ ತಂದೆ ಅಥವಾ ತಾಯಿ ಹೆಸರನ್ನು ಸೇರಿಸುತ್ತಾರೆ. ಇದರಿಂದ ಮುಂದೆ ಅನೇಕ ರೀತಿಯ ಕಾನೂನು ತೊಡಕುಗಳು ಎದುರಾಗುತ್ತವೆ. ಇವುಗಳೆಲ್ಲವನ್ನು ಮುಂಚಿತವಾಗಿಯೇ ತಡೆಯುವ ಉದ್ದೇಶದಿಂದ ವಿಷಯ ಗೊತ್ತಾದ ತಕ್ಷಣವೇ ಕೋರ್ಟ್ ಸಹಾಯ ಪಡೆದು ಆ ಮದುವೆ ಎಂದು ಅಸಿಂಧು ಎಂದು ಘೋಷಿಸಿ ರ’ದ್ದುಪಡಿಸಿ.
ಈ ಸಮಯದಲ್ಲಿ ಕೋರ್ಟ್ ಗೆ ನೀವು ಅವರ ಮೊದಲನೇ ಪತ್ನಿ ಅಥವಾ ನೀವು ಅವರ ಮೊದಲ ಪತಿ ಎನ್ನುವ ಸಂಬಂಧ ಪಟ್ಟ ಕೆಲ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರಿಂದ ಮುಂದೆ ಬಹಳಷ್ಟು ಅನುಕೂಲತೆ ಆಗುತ್ತದೆ ತಪ್ಪದೇ ಈ ರೀತಿ ಸಮಸ್ಯೆಗೊಳಗಾದವರು ಇದರ ಪ್ರಯೋಜನ ಪಡೆದುಕೊಳ್ಳಲಿ ಎನ್ನುವುದಷ್ಟೇ ಈ ಅಂಕಣದ ಆಶಯ. ಈ ಮಾಹಿತಿಯನ್ನು ತಪ್ಪದೆ ಹೆಚ್ಚಿನ ಜನರ ಜೊತೆ ಶೇರ್ ಮಾಡಿ ಮತ್ತು ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದ ಕಾನೂನು ಸಲಹಾ ಕೇಂದ್ರಕ್ಕೆ ಹೋಗಿ ಮಾಹಿತಿ ಪಡೆಯಿರಿ.