ಸರ್ಕಾರವು 5 ಗ್ಯಾರೆಂಟಿ ಯೋಜನೆಗಳನ್ನು ನೀಡಿದೆ ಮತ್ತು ಗ್ಯಾರಂಟಿಯೇತರವಾಗಿ ಕೂಡ ಈ ವರ್ಷ ಬಜೆಟ್ ಮಂಡನೆ ಆದಾಗ ರಾಜ್ಯದ ಎಲ್ಲಾ ವರ್ಗದ ಜನರ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಘೋಷಿಸಿದೆ ಮತ್ತು ಅವುಗಳನ್ನು ಜಾರಿಗೂ ತರುತ್ತಿದೆ. ಈಗಾಗಲೇ ಮಹಿಳೆಯರಿಗೆ ಗ್ಯಾರಂಟಿ ಯೋಜನೆಯಡಿ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಿರುವ ಸರ್ಕಾರವು ಈಗ 4000 ಉಚಿತ ಬೈಕ್ ವಿತರಣೆ ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಿದೆ.
ಯಾರಿಗೆಲ್ಲಾ ಈ ಯೋಜನೆಯ ಪ್ರಯೋಜನ ಸಿಗಲಿದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಮತ್ತು ಏನು ದಾಖಲೆಗಳು ಇರಬೇಕು? ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಅಂಗವಿಕಲರು ಕೂಡ ನಮ್ಮ ನಿಮ್ಮ ನಡುವೆ ಜೀವಿಸುತ್ತಿದ್ದಾರೆ ಅವರಿಗೆ ಅಂಗವಿಕಲತೆ ಉಂಟಾಗಿದ್ದರು ಸ್ವಾಬಲಂಬಿಯಾಗಿ ಜೀವನ ನಡೆಸುವ ಉತ್ಸಾಹ ಹೊಂದಿದ್ದಾರೆ.
ಯಾರ ಮೇಲೂ ಡಿಪೆಂಡ್ ಆಗದೆ ಬದುಕಬೇಕು ಎನ್ನುವ ಹಠದಿಂದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೆಲವರು ವಿದ್ಯಾಭ್ಯಾಸ ಮುಗಿದ ಬಳಿಕ ಕಚೇರಿಗಳಲ್ಲಿ ಕೆಲಸಕ್ಕೆ ಸೇರಿದರೆ ಇನ್ನು ಕೆಲವರು ಸ್ವಂತ ವ್ಯಾಪಾರ ಮಾಡುತ್ತಾ ಯಾರಿಗೂ ಕಡಿಮೆ ಇಲ್ಲದಂತೆ ಧೈರ್ಯವಾಗಿ ಬದುಕುತ್ತಿದ್ದಾರೆ. ತರಕಾರಿ ಅಂಗಡಿ, ಮೊಬೈಲ್ ಶಾಪ್, ಹಣ್ಣಿನ ಅಂಗಡಿ ಈ ರೀತಿ ಮಳಿಗೆಗಳನ್ನು ಇಟ್ಟುಕೊಂಡು ಬದುಕು ನಡೆಸುತ್ತಿದ್ದಾರೆ.
ಇವರನ್ನು ನೋಡಿದಾಗ ಖಂಡಿತವಾಗಿಯೂ ಹೆಮ್ಮೆ ಮೂಡುತ್ತದೆ ಈ ರೀತಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿರುವ ಅಂಗವಿಕಲರಿಗೆ ಮನೆಯಿಂದ ತಮ್ಮ ಅಂಗಡಿಗಳಿಗೆ ತೆರಳಲು ಅನುಕೂಲ ಮಾಡಿಕೊಡಲು ಸರ್ಕಾರವು ಮೂರು ಚಕ್ರದ ಬೈಕ್ ಗಳನ್ನು ವಿತರಣೆ ಮಾಡುತ್ತಿದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ವಿತರಣೆ ಹೇಗೆ:-
* ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ (dwdsc) ಇಲಾಖೆ ವತಿಯಿಂದ ಮೂರು ಚಕ್ರಗಳ ಬಹಳ ವಿತರಣೆ ಮಾಡಲಾಗುತ್ತಿದೆ. ಫಲಾನುಭವಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
* ಸೊಂಟದಿಂದ ಕೆಳಭಾಗಗಳಲ್ಲಿನ ಅಂಗವಿಕಲತೆಯನ್ನು ಹೊಂದಿರುವಂತಹ ವಿಶೇಷ ಚೇತನರು ಇಲಾಖೆ ವತಿಯಿಂದ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
* ಜಿಲ್ಲೆಗಳ ಅನುಸಾರ ವಾಹನಗಳನ್ನು ಅನುದಾನವನ್ನು ನಿರ್ಧರಿಸಲು ಚಿಂತಿಸಲಾಗಿದೆ. ಯಾಕೆಂದರೆ ಒಂದು ಜಿಲ್ಲೆಯಲ್ಲಿ ಎಷ್ಟು ವಿಕಲಚೇತನರು ಇದ್ದಾರೆ ಎನ್ನುವ ಆಧಾರದ ಮೇಲೆ ಯಾವ ಜಿಲ್ಲೆಗೆ ಎಷ್ಟು ಬೈಕ್ ಕೊಡಬೇಕು ಎನ್ನುವುದು ನಿರ್ಧಾರ ಆಗಲಿದೆ.
* 2011ರಲ್ಲಿ ನಮ್ಮ ರಾಜ್ಯದಲ್ಲಿ ಮಾಡಿರುವ ಜನಗಣತಿಯ ಅನುಸಾರ ಒಟ್ಟು 13,24,205 ವಿಕಲಚೇತನರಿದ್ದಾರೆ, ಇವರ ಪೈಕಿ ಅನೇಕರಿಗೆ ಈ ಹಿಂದಿನ ವರ್ಷಗಳಲ್ಲೂ ಕೂಡ ಇದೇ ರೀತಿ ಸರ್ಕಾರದ ವತಿಯಿಂದ ಮೂರು ಚಕ್ರದ ಬೈಕ್ ಗಳನ್ನು ವಿತರಣೆ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ 4000 ವಿಕಲಚೇತನರಿಗೆ ಯಂತ್ರಚಾಲಿತ ಮೂರು ಚಕ್ರದ ವಾಹನವನ್ನು ಕೊಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ.
* ಫಲಾನುಭವಿಗಳು ವಿಕಲಚೇತನ ಮತ್ತು ಹಿರಿಯ ನಾಗರೀಕ ಕಲ್ಯಾಣ ಇಲಾಖೆಗೆ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು.
* ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮುಂದಾಳತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಇವರಿಗೆ ನೀಡುವ ತ್ರಿಚಕ್ರ ವಾಹನಗಳ ತಯಾರಿಕೆ ಮತ್ತು ವಿತರಣೆಗೆ ಟೆಂಡರ್ ಕರೆಯಲಾಗುತ್ತದೆ.
* ಅರ್ಜಿ ಸಲ್ಲಿಸಿರುವ ವಿಶೇಷ ಚೇತನರ ಅರ್ಜಿಗಳನ್ನು ಸಮಿತಿಯು ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿ ಘೋಷಿಸುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಅರ್ಜಿದಾರರ ಬಳಿ LLR ಇರಬೇಕು.
* ಇವರು ವಿಶೇಷಚೇತನರು ಎನ್ನುವುದಕ್ಕೆ ಸಕ್ಷಮ ಪ್ರಾಧಿಕಾರದಿಂದ ಪಡೆದ ದೃಢೀಕರಣ ಪತ್ರ
* ಆಧಾರ್ ಕಾರ್ಡ್
* ಆದಾಯ ಪ್ರಮಾಣ ಪತ್ರ
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
ಹೆಚ್ಚಿನ ಮಾಹಿತಿಗಾಗಿ:-
https://dwdsc.karnataka.gov.in/ ವೆಬ್ ಸೈಟ್ ಗೆ ಭೇಟಿ ಕೊಡಿ.