ಈಗಿನ ಕಾಲದಲ್ಲಿ ಎಲ್ಲರೂ ಕಾನೂನು ಹೆಣ್ಣು ಮಕ್ಕಳ ಪರವಾಗಿದೆ ಎಂದು ಮಾತನಾಡುತ್ತಾರೆ. ಈ ಮಾತು ನಿಜ ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಾನೂನಿದೆ. ಆದರೆ ಇದನ್ನು ಕೆಲ ಹೆಣ್ಣು ಮಕ್ಕಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಎಲ್ಲರ ಬಾಯಿಯಲ್ಲಿ ಮೊದಲಿಗೆ ಬರುವುದು ವ’ರ’ದ’ಕ್ಷಿ’ಣೆ ಕೇ’ಸ್ ಎನ್ನುವುದು. ಇದು ಈಗ ಹೆಣ್ಣುಮಕ್ಕಳಿಗೆ ಕೊಟ್ಟಿರುವ ಅಸ್ತ್ರದಂತಾಗಿದೆ.
ಇದನ್ನು ಸಂತ್ರಸ್ಥೆಯರಿಗಿಂತ ಗಂಡ ಹಾಗೂ ಗಂಡನ ಮನೆಯವರನ್ನು ಹೆದರಿಸಲು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಸಂಸಾರದಲ್ಲಿ ಅಪಸ್ವರಗಳು ಎದ್ದ ಕೂಡಲೇ ತಮ್ಮದೇ ತಪ್ಪಿದ್ದರು ಸೀದ ಹೋಗಿ ವ’ರ’ದ’ಕ್ಷಿ’ಣೆ ಕೇಸ್ ಹಾಕುತ್ತಾರೆ, ಇದರಿಂದ ನಿಜವಾಗಿಯೂ ಗಂಡ ಹಾಗೂ ಆ ಗಂಡಿನ ಮನೆಯವರ ಪರಿಸ್ಥಿತಿ ಅಸಹಾಯಕವಾಗುತ್ತಿದೆ. ಹಾಗಾದರೆ ಇದಕ್ಕೆ ಪರಿಹಾರವಿಲ್ಲವೇ ಇಲ್ಲವೇ ಎನ್ನುವ ವಿಷಯದ ಕುರಿತು ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ರೀತಿ ಸಮಯದಲ್ಲಿ ಮಹಿಳೆಯ ಗಂಡನ ಹಾಗೂ ಗಂಡನ ಮನೆಯವರು ಆ ಮಹಿಳೆಯು ಉದ್ದೇಶಪೂರ್ವಕವಾಗಿಯೇ ಸು’ಳ್ಳು ಕೇಸ್ ಹಾಕಿದ್ದಾರೆ ಎನ್ನುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ ಹಾಗೆಯೇ ನಾವು ಒಳ್ಳೆಯವರು ಎನ್ನುವುದಕ್ಕೆ ಸಾಕ್ಷಿಗಳಿವೆ ಎಂದು ಹೇಳಿದರು ಕೂಡ ಆಕೆ ಹೋಗಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕೇಸ್ ಕೊಟ್ಟಾಗ ಯಾವುದೇ ಪೊಲೀಸ್ ಅಧಿಕಾರಿಯು ಆ ಕೇಸ್ ನ್ನು ತೆಗೆದುಕೊಳ್ಳದೆ ಇರಲು ಸಾಧ್ಯವಿಲ್ಲ.
ಹಾಗಾಗಿ FIR ದಾಖಲಾಗುತ್ತದೆ. ಆದರೆ FIR ದಾಖಲಾಗಿ ಚಾರ್ಜ್ ಶೀಟ್ ಆಗುವವರೆಗೂ ಸುಮಾರು ಸಮಯ ಹಿಡಿಯುತ್ತದೆ. ನಂತರ ಅವು ಕೊರ್ಟ್ ಗಳಿಗೆ ಹೋಗಿ ತೀರ್ಮಾನವಾಗುವಷ್ಟರಲ್ಲಿ 1-2 ವರ್ಷಗಳು ಕಳೆದಿರುತ್ತವೆ. ಅಲ್ಲಿಯವರೆಗೂ ಕೇಸ್ ಕೊಟ್ಟ ಮಹಿಳೆ ಹಾಗೂ ಆಕೆಯ ಪತಿ ಕುಟುಂಬದವರು ಕೋರ್ಟ್ ಕೇಸ್ ಎಂದು ಅಲೆಯುತ್ತಿರುತ್ತಾರೆ.
ಒಂದು ವೇಳೆ ಬರುವ ತೀರ್ಪುಗಳ ಮೇಲೆ ಅಪೀಲು ಹೋಗಿ ಕೊನೆಯಲ್ಲಿ ಸು’ಳ್ಳು ಕೇಸ್ ಹಾಕಿದ್ದಾರೆ ಎಂದು ತೀರ್ಮಾನ ಆದಾಗ ಆಕೆಗೆ ರೂ.25,000 ಗಳನ್ನು ದಂಡ ವಿಧಿಸಿರುವ ಉದಾಹರಣೆಗಳು ಕೂಡ ಇವೆ ಮತ್ತು ಆ ಸಮಯದಲ್ಲಿ ಆಗಿರುವ FIR ಫ್ಲಾಶ್ ಆಗುತ್ತದೆ.
ಪತಿ ಹಾಗೂ ಪತಿಯ ಮನೆಯವರು ನಿರ್ದೋಷಿಗಳು ಎಂದು ಸಾಬೀತಾಗುತ್ತದೆ ಆಗ ಸುಳ್ಳು ಕೇಸ್ ದಾಖಲಿಸಿ ಇಷ್ಟು ವರ್ಷಗಳ ಸಮಯ ಹಾಗೂ ಅವರ ನೆಮ್ಮದಿ ಹಾಳು ಮಾಡಿರುವುದಕ್ಕೆ ರೂ.25,000 ದಂಡ ಬಹಳ ಕಡಿಮೆ ಶಿಕ್ಷೆ ಎಂದು ಅನೇಕರ ಆಕ್ರೋಶ. ಆ ಸಮಯದಲ್ಲಿ ಮಾ’ನ’ನ’ಷ್ಟ ಮೊಕದ್ದಮೆಗಳನ್ನು ದಾಖಲು ಮಾಡಲು ಕೂಡ ಅವಕಾಶಗಳಿವೆ.
ಆದರೆ ಅಷ್ಟು ಹಂತ ತಲುಪುವ ಮುನ್ನವೇ ಪರಸ್ಪರ ಇಬ್ಬರು ಒಂದು ಹಂತಕ್ಕೆ ಬಂದು ವಿ’ಚ್ಛೇ’ದ’ನ ಪಡೆದುಕೊಳ್ಳಲು ನಿರ್ಧಾರವಾಗಿ ಬಿಟ್ಟಿರುತ್ತಾರೆ ಮತ್ತು ವಿ’ಚ್ಛೇ’ದ’ನ ಪಡೆದುಕೊಳ್ಳುವಾಗ ಎಲ್ಲಾ ಕೇಸ್ ಗಳನ್ನು ಕ್ಲೋಸ್ ಮಾಡಬೇಕು ಎಂದು ಡಿಗ್ರಿ ಹಾಕಿ ಎಲ್ಲ ಕ್ಲೋಸ್ ಮಾಡಿಬಿಡುತ್ತಾರೆ ಮತ್ತೆ ಅದನ್ನು ಮುಂದುವರಿಸಿಕೊಂಡು ಹೋಗುವ ಅದಕ್ಕೆ ಸಾಕ್ಷಿಗಳನ್ನು ಹುಡುಕಿ ಕೋರ್ಟು ಕೇಸು ಎಂದು ಮತ್ತೆ ಅಲೆಯುವ ತಾಳ್ಮೆ ಸಮಯ ಇರುವುದಿಲ್ಲ, ಆಸಕ್ತಿಯು ಕುಂದಿ ಹೋಗಿರುತ್ತದೆ.
ಹಾಗಾಗಿ 80% ಕೇಸ್ ಗಳಲ್ಲಿ ಇದನ್ನು ಇಷ್ಟಕ್ಕೆ ಬಿಟ್ಟುಬಿಡುತ್ತಾರೆ ಆದರೆ ತಮಗಾದ ಅವಮಾನ ಹಾಗೂ ನೋ’ವಿಗೆ ಪರಿಹಾರ ಪಡೆಯಲು ಬಯಸಿದವರಿಗೆ ಖಂಡಿತವಾಗಿಯೂ ಕಾನೂನಿನಲ್ಲಿ ಅವಕಾಶವಿದೆ ಇನ್ನು ಆ ಕೇಸ್ ದಾಖಲಿಸಿದ ಪೋಲಿಸ್ ಅಧಿಕಾರಿ ಕೂಡ ಮಹಿಳೆಯರು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯಗಳಲ್ಲಿ ಸೆಕ್ಷನ್ 182 ಅಡಿ ಪ್ರಿಟಿಷನಾ ಹಾಕಬಹುದು.
ಆದರೆ ಇದೆಲ್ಲ ಸುಳ್ಳು ಎಂದು ಸಾಬೀತು ಆಗುವಷ್ಟರಲ್ಲಿ ಆ ವ್ಯಕ್ತಿಯು ಬೇರೆ ಪೊಲೀಸ್ ಠಾಣೆಗಳಿಗೆ ಅಥವಾ ಬೇರೆ ಜಿಲ್ಲೆಗೆ ಟ್ರಾನ್ಸ್ಫರ್ ಆಗಿ ಹೋಗಿರುತ್ತಾರೆ. ಅವುಗಳಿಗೆ ಸಾಕ್ಷಿ ಹುಡುಕಿಕೊಂಡು ಕೋರ್ಟ್ ಗಳಿಗೆ ಓಡಾಡುವ ಆಸಕ್ತಿ ಇರುವುದಿಲ್ಲ ಮತ್ತು ಕೆಲವೊಮ್ಮೆ ಈ ರೀತಿಯ ಕೇಸ್ ಗಳ ಹೆಚ್ಚು ಬಂದಾಗ ಅವರಿಗೂ ಕೂಡ ಕೆಲಸ ಕಾರ್ಯಗಳ ಪ್ರೆಷರ್ ನಡುವೆ ಇದಕ್ಕೆಲ್ಲ ಸಮಯ ಇರುವುದಿಲ್ಲ.
ಒಂದು ವೇಳೆ ಅವರು ಸೆಕ್ಷನ್ 182 ಅಡಿ ಕೇಸ್ ಹಾಕಿದರೆ ಮಹಿಳೆಗೆ ಆರು ತಿಂಗಳ ಜೈಲು ಶಿ’ಕ್ಷೆ’ಯಾಗುತ್ತದೆ. ಆದರೆ ಯಾವ ಮಹಿಳೆಯರು ಕೂಡ ಇದನ್ನು ದುರುಪಯೋಗಪಡಿಸಿಕೊಳ್ಳದೇ ಇರಲಿ ಎನ್ನುವುದಷ್ಟೇ ಈ ಅಂಕಣದ ಆಶಯ.