ಕರ್ನಾಟಕ ಸರ್ಕಾರ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಲೇಬರ್ ಕಾರ್ಡ್ ಗಳನ್ನು (Labour card) ನೀಡುತ್ತಿದೆ. ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿತರಾಗಿರುವ ಎಲೆಕ್ಟ್ರಿಷಿಯನ್‌ಗಳು, ಕಟ್ಟಡ ಕಾರ್ಮಿಕರು, ಪ್ಲಂಬರ್‌ಗಳು, ಪೇಂಟರ್‌ಗಳು ಮತ್ತು ಇತರ ಕಾರ್ಮಿಕರು ಈ ಕಾರ್ಮಿಕರ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿಯನ್ನು ಪಡೆದುಕೊಳ್ಳಬಹುದು.
ಈ ರೀತಿ ಕಟ್ಟಡ ನಿರ್ಮಾಣ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಲೇಬರ್ ಕಾರ್ಡ್ ಗಳನ್ನು ಪಡೆದಿದ್ದರೆ ಅವರಿಗೆ ಮಂಡಳಿ (board) ವತಿಯಿಂದ ಸುಮಾರು 15ಕ್ಕೂ ಹೆಚ್ಚು ಸೌಲಭ್ಯಗಳು ಸಿಗುತ್ತಿವೆ. ಅವುಗಳ ಬಗ್ಗೆ ಮಾಹಿತಿಯನ್ನು ಹಾಗೂ ಈ ಕಾರ್ಡ್ ಹೇಗೆ ಪಡೆದುಕೊಳ್ಳಬೇಕು? ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಬೇಕಾಗುವ ದಾಖಲೆಗಳೇನು:-
* ಆಧಾರ್ ಕಾರ್ಡ್
* ಬ್ಯಾಂಕ್ ಖಾತೆ ಸಂಖ್ಯೆ
* ಕುಟುಂಬದ ಇತರ ಸದಸ್ಯರ ಆಧಾರ್ ಕಾರ್ಡ್
* ಪಾಸ್ ಸ್ಪೋರ್ಟ್ ಅಳತೆಯ ಭಾವಚಿತ್ರ
* ಕುಟುಂಬದ ಪಡಿತರ ಚೀಟಿ (BPL)
ಯಾರು ಅರ್ಜಿ ಸಲ್ಲಿಸಬಹುದು:-
* ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
* 18 ವರ್ಷದಿಂದ 60 ವರ್ಷ ವಯಸ್ಸಿನ ಒಳಗಿನವರಾಗಿರಬೇಕು.
* ನಿಮ್ಮ ಪ್ರದೇಶದ ವ್ಯಾಪ್ತಿಗೆ ಬರುವ ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೀವು ಕಾರ್ಮಿಕರಾಗಿ ನೋಂದಾಯಿಸಿಕೊಂಡು ಒಂದು ವರ್ಷ ಆಗಿರಬೇಕು.
ಲೇಬರ್ ಕಾರ್ಡ್ ಹೊಂದಿರುವವರಿಗೆ ಸಿಗುವ ಪ್ರಮುಖ ಸೌಲಭ್ಯಗಳು:-
* ಲೇಬರ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಉಚಿತವಾಗಿ ಕಾರ್ಮಿಕ ಟೂಲ್ ಕಿಟ್ ಸಿಗುತ್ತದೆ
* ಲೇಬರ್ ಕಾರ್ಡ್ ಹೊಂದಿರುವ ಮಹಿಳೆಗೆ ಮಗುವಿನ ಜನನದ ಸಮಯದಲ್ಲಿ ಸರ್ಕಾರದಿಂದ ಹೆರಿಗೆ ಸೌಲಭ್ಯ ಹಾಗೂ ಸಹಾಯಧನ ಸಿಗುತ್ತದೆ.
* ಲೇಬರ್ ಕಾರ್ಡ್ ಹೊಂದಿರುವ ವ್ಯಕ್ತಿ ಅಥವಾ ಅವರ ಮೊದಲ ಎರಡು ಮಕ್ಕಳ ಮದುವೆ ಸಂದರ್ಭದಲ್ಲಿ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ.
* ಲೇಬರ್ ಕಾರ್ಡ್ ಹೊಂದಿರುವವರ ಮೊದಲ ಎರಡು ಮಕ್ಕಳಿಗೆ ನರ್ಸರಿಯಿಂದ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸದವರೆಗೂ ಕೂಡ ವಿದ್ಯಾರ್ಥಿ ವೇತನ ಸಿಗುತ್ತದೆ. ಇದರೊಂದಿಗೆ ಮಕ್ಕಳಿಗೆ ಉಚಿತವಾಗಿ ವಿದ್ಯಾರ್ಥಿ ಕಿಟ್, ಲ್ಯಾಪ್ಟಾಪ್ ಮತ್ತು ಟ್ಯಾಬ್ ವಿತರಣೆ ಕೂಡ ಮಾಡಲಾಗುತ್ತದೆ.
* ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಉಚಿತ ಆರೋಗ್ಯ ವಿಮೆ ಪ್ರಯೋಜನ ಸಿಗುತ್ತದೆ.
* ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮತ್ತು ಸೈಕಲ್ ಖರೀದಿಗೆ ನೆರವು
* ಕಟ್ಟಡ ಕಾರ್ಮಿಕರು ಸ್ವಂತವಾಗಿ ಮನೆ ಕಟ್ಟಿಕೊಳ್ಳುವುದಾದರೆ ಸರ್ಕಾರ ಅವರಿಗೆ ಸಹಾಯ ಮಾಡುತ್ತದೆ. ಶ್ರಮಿಕ ಘರ್ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಸಾಲಗಳು ಮತ್ತು ಮುಂಗಡಗಳು ಸಿಗುತ್ತದೆ.
* ಲೇಬರ್ ಕಾರ್ಡ್ ಹೊಂದಿರುವವರಿಗೆ 60 ವರ್ಷದ ಬಳಿಕ ಪಿಂಚಣಿ ಸಹ ನೀಡಲಾಗುತ್ತದೆ, ಕುಟುಂಬ ಪಿಂಚಣಿಯ ಅನುಕೂಲತೆಯು ಇದೆ
* ಲೇಬರ್ ಕಾರ್ಡ್ ಹೊಂದಿರುವವರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಉಚಿತ ಪ್ರಯಾಣದ ಅನುಕೂಲತೆ ಕೂಡ ಮಾಡಿಕೊಡಲಾಗಿದೆ.
* ಅಪಘಾತ ವಿಮೆ
* ಶ್ರಮಿಕ ಸಂಜೀವಿನಿ
* ಇನ್ನು ಮುಂತಾದ ಅನೇಕ ಸೌಲಭ್ಯಗಳು ಸಿಗುತ್ತವೆ
ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?
1. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
* ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ labour.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ವಿವರಗಳನ್ನು ತುಂಬಿಸಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ
* ಹತ್ತಿರದ ಯಾವುದೇ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಅಥವಾ ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
2. ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:-
* ಕರ್ನಾಟಕ ಕಾರ್ಮಿಕ ಇಲಾಖೆಯಿಂದ ಫಾರ್ಮ್ ಅನ್ನು ಸಹ ಪಡೆದು, ನೋಂದಣಿ ಫಾರ್ಮ್‌ನಲ್ಲಿ ವಿವರಗಳನ್ನು ಭರ್ತಿ ಮಾಡಿ, ಪೂರಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು
* ಅರ್ಜಿ ಶುಲ್ಕವನ್ನು ಪಾವತಿಸಿ ಒಮ್ಮೆ ಯಶಸ್ವಿಯಾಗಿ ಪರಿಶೀಲಿಸಿದ ನಂತರ, ನಿಮ್ಮ ಅರ್ಜಿಯನ್ನು ಅನುಮೋದಿಸಲಾಗುತ್ತದೆ ಮತ್ತು ನಿಮಗೆ ಲೇಬರ್ ಕಾರ್ಡ್ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ:-
* ನಿಮ್ಮ ಜಿಲ್ಲೆ ಅಥವಾ ತಾಲೂಕಿನ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿಯ ಕಚೇರಿಗಳನ್ನು ಭೇಟಿ ಮಾಡಿ.