ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಗಳು ದೇಶದ ನಾಗರಿಕರಾಗಿ ನೀಡುವ ನಾಗರಿಕ ಸೇವಾ ಯೋಜನೆಗಳನ್ನು ಗ್ರಾಮೀಣ ಭಾಗದಲ್ಲಿರುವ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಗ್ರಾಮ ಒನ್ ಕೇಂದ್ರಗಳಲ್ಲಿ ಪಡೆಯಬಹುದು. ನಗರ ಪ್ರದೇಶದಲ್ಲಿರುವ ಜನರು ಬೆಂಗಳೂರು ಒನ್ ಕೇಂದ್ರಗಳ ಮೂಲಕ ಈ ಸೌಲಭ್ಯಗಳನ್ನು ಪಡೆಯುತ್ತಾರೆ.
ಪಟ್ಟಣ ಹಾಗೂ ತಾಲೂಕು ಪ್ರದೇಶಗಳಲ್ಲಿ ಕರ್ನಾಟಕ ಒನ್ ಕೇಂದ್ರಗಳು ಈ ಕಾರ್ಯನಿರ್ವಹಿಸುತ್ತವೆ. ಕರ್ನಾಟಕ ಬಹುತೇಕ ಎಲ್ಲಾ ಜಿಲ್ಲೆಗಳನ್ನು ಕೂಡ ಕರ್ನಾಟಕವನ್ನು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈಗ ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಫ್ರಾಂಚೈಸಿಗಳನ್ನು ತೆರೆಯಲು ಈ ಮೂಲಕ ಪ್ರತಿಭಾವಂತ ನಿರುದ್ಯೋಗಿ ಯುವ ಜನತೆಗೆ ಸ್ವಯಂ ಉದ್ಯೋಗ ಸ್ಥಾಪಿಸಲು ಅವಕಾಶ ಕಲ್ಪಿಸಿಕೊಡಲು ಅರ್ಜಿ ಆಹ್ವಾನ ಮಾಡಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು? ಅರ್ಹತೆಗಳೇನು? ಬೇಕಾಗುವ ದಾಖಲೆಗಳೇನು? ಮತ್ತು ಈ ವಿಧಾನ ಹೇಗೆ? ಎಂಬುದರ ಪೂರ್ತಿ ವಿವರ ತಿಳಿದುಕೊಳ್ಳಲು ಅಂಕಣವನ್ನು ಕೊನೆಯವರೆಗೂ ಓದಿ.
ಅರ್ಜಿ ಸಲ್ಲಿಸಲು ನಿಬಂಧನೆಗಳು:-
* ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
* 18 ವರ್ಷ ಮೇಲ್ಪಟ್ಟಿರಬೇಕು
* ಕನಿಷ್ಠ 10ನೇ ತರಗತಿ ವಿದ್ಯಾಭ್ಯಾಸ ಹೊಂದಿರಬೇಕು ಹೆಚ್ಚಿನ ವಿದ್ಯಾಭ್ಯಾಸ ಪಡೆದವರಿಗೆ ಮೊದಲು ಆದ್ಯತೆ ನೀಡಲಾಗುವುದು
* ಕಂಪ್ಯೂಟರ್ ಜ್ಞಾನ ಹೊಂದಿರಬೇಕು
* ಕನ್ನಡ ಭಾಷೆಯನ್ನು ಓದಲು ಬರೆಯಲು ಬರಬೇಕು, ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಟೈಪಿಂಗ್ ಬಲ್ಲವರಾಗಿರಬೇಕು.
* ಅರ್ಜಿದಾರನ ಮೇಲೆ ಯಾವುದೇ ಸಾಮಾಜಿಕ ಅಥವಾ ಕ್ರಿಮಿನಲ್ ಅಪರಾಧವಿರಬಾರದು ಇದಕ್ಕೆ ಸಾಕ್ಷಿಯಾಗಿ ಪೊಲೀಸ್ ಧೃಡೀಕರಣ ಪತ್ರ ಕೂಡ ಸಲ್ಲಿಸಬೇಕು
* ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ರಸ್ತೆ ಸಂಪರ್ಕ ವಿದ್ಯುತ್ ಮುಂತಾದ ಸೌಕರ್ಯಗಳನ್ನು ಹೊಂದಿರುವ ಅಗತ್ಯ ಜಾಗ ಹೊಂದಿರಬೇಕು.
* ಐಟಿ ಹಾಗೂ ಐಟಿಯೇತರ ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡಲು ಸಿದ್ಧರಿರಬೇಕು
ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಬೇಕಾಗುವ ಸಾಮಗ್ರಿಗಳು :-
* ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ (Computer / laptop)
* ಪ್ರಿಂಟರ್ (Multi function Printer)
* ಫಿಂಗರ್ ಪ್ರಿಂಟ್ ಸ್ಕ್ಯಾನರ್ (Biometric Scanner)
* ವೆಬ್ ಕ್ಯಾಮೆರಾ (web camera)
* ಇನ್ನಿತರ ಅಗತ್ಯ ಪರಿಕರಗಳು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ನಿವಾಸ ದೃಢೀಕರಣ ಪತ್ರ
* ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
* ಬ್ಯಾಂಕ್ ಪಾಸ್ ಬುಕ್ ವಿವರ
* ಶೈಕ್ಷಣಿಕ ವಿದ್ಯಾರ್ಥಿಗೆ ಸಂಬಂಧಪಟ್ಟ ದಾಖಲೆಗಳು
* ಇನ್ನಿತರ ಕೇಳಲಾಗುವ ಯಾವುದೇ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* https://www.karnatakaone.gov.in/ ವೆಬ್ಸೈಟ್ ಗೆ ಭೇಟಿ ಕೊಟ್ಟು ಕೇಳಲಾಗುವ ವೈಯಕ್ತಿಕ ಮಾಹಿತಿಗಳನ್ನು ಸಲ್ಲಿಸಿ. ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ನೋಟಿಫಿಕೇಶನ್ ನಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಫ್ರಾಂಚೈಸಿ ತೆಗೆಯಲು ಅವಕಾಶವಿದೆ ಎನ್ನುವ ವಿವರ ಇದೆ, ಓದಿಕೊಂಡು ಸೆಲೆಕ್ಟ್ ಮಾಡಿ.
* ಅರ್ಜಿ ಶುಲ್ಕ ರೂ.100 ಇರುತ್ತದೆ ಇದನ್ನು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಪೇಮೆಂಟ್ ಮಾಡಿ
* ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪತ್ರ ಮತ್ತು ಅರ್ಜಿ ಶುಲ್ಕ ಪಾವತಿ ಮಾಡಿರುವ ಇ-ರಶೀದಿ ಪಡೆದುಕೊಳ್ಳಿ