ಉಳಿತಾಯ ಎನ್ನುವುದು ಪ್ರತಿಯೊಬ್ಬ ದುಡಿಯುವ ವ್ಯಕ್ತಿಯ ಆದ್ಯತೆ ಆಗಿರಬೇಕು. ಯಾಕೆಂದರೆ ನಾವು ಇರುವ ಜೀವನ ಮಟ್ಟಕ್ಕಿಂತ ಮುಂದಿನ ವರ್ಷಗಳಲ್ಲಿ ಉನ್ನತ ಜೀವನ ಮಟ್ಟವನ್ನು ಅನುಭವಿಸಲು, ತಮ್ಮ ಕ’ಷ್ಟಗಳಿಗೆ ಬೇರೊಬ್ಬರ ಬಳಿ ಸಹಾಯ ಬೇಡುವ ಪರಿಸ್ಥಿತಿ ಬರಬಾರದು, ನಮ್ಮ ದೂರದ ಕನಸುಗಳಿಗೆ ಮೆಟ್ಟಿಲಾಗಲು ಉಳಿತಾಯ ಮುಖ್ಯ. ಆದರೆ ಅನೇಕರಿಗೆ ಉಳಿತಾಯ ಎಂದರೇನು ಎನ್ನುವುದೇ ಸರಿಯಾಗಿ ತಿಳಿದಿಲ್ಲ.
ನಾವು ದುಡಿದ ಹಣದಲ್ಲಿ ನಮ್ಮ ಅವಶ್ಯಕತೆಗಳಿಗೆ ಖರ್ಚುಗಳಿಗೆ ಖಾಲಿ ಮಾಡಿ ಹಣ ಉಳಿದಿದ್ದರೆ ಮಾತ್ರ ಉಳಿತಾಯ ಮಾಡಬೇಕಾ? ಕಡಿಮೆ ಸಂಬಳ ತೆಗೆದುಕೊಳ್ಳುವವರು ಕೂಡ ಉಳಿತಾಯ ಮಾಡಬಹುದಾ? ಇನ್ನು ಸಾಕಷ್ಟು ಪ್ರಶ್ನೆಗಳು ಇರುತ್ತವೆ. ಈ ಅಂಕಣದಲ್ಲಿ ಉಳಿತಾಯದ ಮಹತ್ವದ ಜೊತೆ ಹೇಗೆ ಉಳಿತಾಯ ಮಾಡಬೇಕು ಎನ್ನುವುದರ ಬಗ್ಗೆಯೂ ತಿಳಿಸುತ್ತಿದ್ದೇವೆ.
ನೀವಿನ್ನು 25 ರಿಂದ 30 ವರ್ಷ ವಯಸ್ಸಿನ ಯುವಕರಾಗಿದ್ದು, ತಿಂಗಳಿಗೆ 25 ಸಾವಿರ ಸಂಬಳ ತೆಗೆದುಕೊಳ್ಳುತ್ತಿದ್ದೀರಾ ಎನ್ನುವ ಉದಾಹರಣೆಯ ಆಧಾರದ ಮೇಲೆ ನಿಮ್ಮ ಖರ್ಚು ಹೇಗಿರಬೇಕು ಉಳಿತಾಯ ಹೇಗಿರಬೇಕು ಎಂದರೆ ನೀವು ಸಂಬಳ ಬಂದ ತಕ್ಷಣ ಮೊದಲ ದಿನವೇ ಇದರ ಬಗ್ಗೆ ಒಂದು ಬಜೆಟ್ ಮಾಡಿ ತಿಂಗಳು ಪೂರ್ತಿ ಅದಕ್ಕೆ ಬದ್ಧವಾಗಿ ಬದುಕಬೇಕು.
ಇದಕ್ಕೆ 50:30:20 ಎನ್ನುವ ಫಾರ್ಮುಲವು ಹೆಚ್ಚು ಸಹಕಾರಿಯಾಗಿರುತ್ತದೆ. ನಿಮ್ಮ ಸಂಬಳದ 50% ಅಂದರೆ ರೂ.12,500 ಪರ್ಸೆಂಟ್ ನಿಮ್ಮ ಮನೆ ಬಾಡಿಗೆ, ನಿಮ್ಮ ತಿಂಗಳ ಆಹಾರದ ಖರ್ಚು, ನಿಮ್ಮ ಪ್ರಯಾಣದ ಖರ್ಚು, ನಿಮ್ಮ EMI ಗಳು, ಹೆಲ್ತ್ ಇನ್ಸೂರೆನ್ಸ್, ಟರ್ಮ್ ಇನ್ಶುರೆನ್ಸ್, ಲೈಫ್ ಇನ್ಸೂರೆನ್ಸ್ ಎಲ್ಲದಕ್ಕೂ ಕೂಡ ವಿನಿಯೋಗವಾಗಬೇಕು.
30% ನಿಮ್ಮ ಬೇಡಿಕೆಗೆ ಖರ್ಚಾಗಬೇಕು ಇದರಲ್ಲಿ ನೀವು ಟ್ರಾವೆಲ್ ಮಾಡುವುದು ನಿಮ್ಮಿಷ್ಟದ ಬಟ್ಟೆ ಕೊಂಡುಕೊಳ್ಳುವುದು ಅಥವಾ ಹೊರಗೆ ಹೋಗಿ ಊಟ ಮಾಡುವುದು ಇವುಗಳಿಂದ ನಿಮಗೆ ಸಂತೋಷ ಸಿಗುತ್ತದೆ. ಇಂತಹ ಆಸೆಗಳಿಗೆ 30% ಅಂದರೆ ರೂ.7,500 ಮಾತ್ರ ಎತ್ತಿಡಬೇಕು.
ಉಳಿದ 20 % ಅನ್ನು ಕಡಾ ಖಂಡಿತವಾಗಿ ನೀವು ನಿಮ್ಮ ಉಳಿತಾಯಕ್ಕಾಗಿಯೇ ವಿನಿಯೋಗ ಮಾಡಬೇಕು. ಈ ರೀತಿ ಪ್ಲಾನ್ ಮಾಡುವಾಗ ಮೊದಲಿಗೆ ಸಂಬಳ ಬಂದ ತಕ್ಷಣ 20% ಅಂದರೆ ರೂ.5000 ಹಣವನ್ನು ಮೊದಲಿಗೆ ನಿಮ್ಮ ಹೂಡಿಕೆ ಅಥವಾ ಉಳಿತಾಯಕ್ಕಾಗಿ ಇಡಿ. ಇದನ್ನು ಹಾಕಿ ಸೀನ್ ಅಕೌಂಟ್ ನಲ್ಲಿ ಇಡುವುದರ ಬದಲು ಈಕ್ವಿಟಿ, ಮ್ಯೂಚುವಲ್ ಫಂಡ್, ಚಿನ್ನ ಅಥವಾ FD ಗಳು ಈ ರೀತಿ ನಿಮ್ಮ ಹಣ ಹೆಚ್ಚಾಗುವ ಕಡೆ ಮತ್ತು ಅದಕ್ಕೆ ಭದ್ರತೆ ಇರುವ ಕಡೆ ನಿಮ್ಮ ಹಣಕಾಸಿನ ಪರಿಸ್ಥಿತಿ ಹಾಗೂ ನಿಮ್ಮ ವಯಸ್ಸಿನ ಆಧಾರದ ಮೇಲೆ ಒಳ್ಳೆಯ ಕಡೆ ಇನ್ವೆಸ್ಟ್ ಮಾಡಿ.
ಉಳಿದ 80% ನಲ್ಲಿ ಪ್ರತಿ ತಿಂಗಳು ಕೂಡ 30% ನಿಮ್ಮ ಆಸೆಗಳಿಗಾಗಿ ಖರ್ಚು ಮಾಡಬೇಕಿಲ್ಲ ಆದ್ರೆ ಸಂಪೂರ್ಣವಾಗಿ ಅವುಗಳನ್ನು ಬೇಡ ಎಂದು ಹೇಳಲು ಆಗುವುದಿಲ್ಲ ನಾಳೆ ಕನಸಿನ ಜೊತೆಗೆ ದಿನ ಖುಷಿ ಕೂಡ ಮುಖ್ಯವಾಗಿರುತ್ತದೆ. ಆದರೆ ಒಂದು ತಿಂಗಳು ಉಳಿದರೆ ಅದು ಕೂಡ ಉಳಿತಾಯಕ್ಕೆ ಹೋಗಬೇಕು. ಇನ್ನು 50% ಖರ್ಚಿಗೆ ಸಾಲುತ್ತಿಲ್ಲ ನೀವು ಹೆಚ್ಚು EMI, ಸಾಲದ ಕಮಿಟ್ ಮೆಂಟ್ ಮಾಡಿಕೊಂಡಿದ್ದರೆ ನಿಮ್ಮ ನಿರ್ಧಾರ ತಪ್ಪಾಗಿರುತ್ತದೆ.
ಒಂದು ವೇಳೆ ನೀವು ಅನಾರೋಗ್ಯದ ಕಾರಣಕ್ಕಾಗಿ ಸಾಲ ಮಾಡಿದ್ದರೆ ನೀವು ಹೆಲ್ತ್ ಇನ್ಸುರೆನ್ಸ್ ಮಾಡಿಸಸಿದ್ದರೆ ಆ ಸಮಸ್ಯೆಯಾಗುತ್ತಿರಲಿಲ್ಲ ಮತ್ತು ನೀವೇನಾದರೂ ದುಬಾರಿ ವಸ್ತುಗಳ ಖರೀದಿಗಾಗಿ ಸಾಲ ಮಾಡಿದ್ದರೆ ಅದು ಕೂಡ ತಪ್ಪು. ಸಾಲ ಮಾಡಿ ತೆಗೆದುಕೊಳ್ಳುವ ಬದಲು ಸ್ವಲ್ಪ ದಿನಗಳ ಕಾಲ ಅನುಕೂಲ ಆಗುವವರಿಗೆ ಅದನ್ನು ಮುಂದೂಡುವುದು ಒಳ್ಳೆಯದು ಮತ್ತು ನೀವು ನಿಮ್ಮ ಸಂಬಳ ಜಾಸ್ತಿಯಾದಂತೆ ಇದೇ ಮಟ್ಟದಲ್ಲಿ ಉಳಿತಾಯ ಖರ್ಚು ಮಾಡಬೇಕೆಂದಿಲ್ಲ ನಂತರದಲ್ಲಿ ಉಳಿತಾಯ ಹೆಚ್ಚು ಮಾಡಿಕೊಂಡರೆ ಮಾಡಿಕೊಳ್ಳಬಹುದು.
ಇನ್ನು ಹೆಚ್ಚು ಹೆಚ್ಚು ದುಡಿಯುತ್ತಿರುವವರು ಇಷ್ಟೇ ಖರ್ಚು ಮಾಡಬೇಕು ಎಂದು ಇಲ್ಲ ಖರ್ಚು ಕಡಿಮೆ ಮಾಡಿ ಉಳಿತಾಯ ಜಾಸ್ತಿ ಅಂದರೆ ಸಂಬಳದ 80% ಉಳಿತಾಯವನ್ನೇ ಮಾಡುವವರು ಇದ್ದಾರೆ ಅದು ಕೂಡ ತಪ್ಪಾಗುವುದಿಲ್ಲ. ಈ ರೀತಿ ಯಾವುದೇ ಪ್ಲಾನ್ ಮಾಡಿ ಆದರೆ ಉಳಿತಾಯದ ವಿಷಯದಲ್ಲಿ ಕಾಂಪ್ರಮೈಸ್ ಆಗಬೇಡಿ.