ಎಲ್ಲ ರೈತರು ಕೂಡ ತಮ್ಮ ಜಮೀನಿನ ಹದ್ದುಬಸ್ತು ಮಾಡಲು ಭೂ ಸರ್ವೇ ಇಲಾಖೆಗೆ ಗಡಿ ಗುರುತಿಸಿ ಕೊಡುವಂತೆ ಅರ್ಜಿ ಹಾಕುತ್ತಾರೆ. ಅದರಂತೆ ಸರ್ವೆ ಮಾಡುವವರು ಅಳತೆ ಮಾಡಲು ಬಂದಾಗ ಅಕ್ಕಪಕ್ಕ ಜಮೀನಿನ ರೈತರು ಅದಕ್ಕೆ ಕಿರಿಕ್ ಮಾಡುವುದನ್ನು ನೋಡಿರುತ್ತೇವೆ.
ಒಂದು ವೇಳೆ ಸರ್ವೆ ಆದಮೇಲೆ ನಿಮ್ಮ ಜಮೀನನ್ನು ಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾದಾಗ ಅವರನ್ನು ಅದನ್ನು ಬಿಡುವಂತೆ ಕೇಳಿದರೆ ಅವರು ಜಗಳಕ್ಕೆ ಬರುತ್ತಾರೆ. ಭೂಮಾಪನ ಇಲಾಖೆಯಿಂದ ನೀಡಿರುವ ದಾಖಲೆ ಪ್ರಕಾರ ಜಮೀನು ಬಿಟ್ಟುಕೊಡಲು ಒಪ್ಪುವುದಿಲ್ಲ.
ಅಂತಹ ಸಂದರ್ಭಗಳಲ್ಲಿ ನೀವು ಯಾವ ರೀತಿ ಅವರಿಂದ ನಿಮ್ಮ ಪಾಲಿನ ಜಮೀನನ್ನು ಬಿಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಪ್ರತಿಯೊಬ್ಬ ರೈತನಿಗೂ ಕೂಡ ಈ ಮಾಹಿತಿ ತಿಳಿದಿರಲೇಬೇಕು ಆದ್ದರಿಂದ ಹೆಚ್ಚಿನ ರೈತರಿಗೆ ಶೇರ್ ಮಾಡಿ.
ಸರ್ಕಾರದ ಭೂ ಸರ್ವೇ ಇಲಾಖೆಯಿಂದ ನಿಮ್ಮ ಜಮೀನಿನ ಅಳತೆ ಮಾಡಿ ಗಡಿ ಗುರುತಿಸುವುದನ್ನು ಹದ್ದುಬಸ್ತು ಎನ್ನುತ್ತಾರೆ. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದರೆ ರೈತನು ತನ್ನ ಆಧಾರ್ ಕಾರ್ಡ್ ಹಾಗೂ ಜಮೀನಿಗೆ ಸಂಬಂಧಪಟ್ಟ ದಾಖಲೆ ತೆಗೆದುಕೊಂಡು ಜಮೀನಿನ ಅಳತೆ ಮಾಡಿಸಲು ಹದ್ದು ಬಸ್ತಿಗೆ ಅರ್ಜಿ ಹಾಕಬೇಕು, ಭೂ ಸರ್ವೇ ಇಲಾಖೆ ವತಿಯಿಂದ ಸಿಬ್ಬಂದಿಗಳು ನಿಮ್ಮನ್ನು ಸಂಪರ್ಕಿಸಿ ಕೆಲವು ಮಾಹಿತಿಯನ್ನು ಕೇಳುತ್ತಾರೆ.
ಅಂತಹ ಸಮಯದಲ್ಲಿ ನೀವು ತಪ್ಪದೆ ಸರಿ ಮಾಹಿತಿ ಕೊಟ್ಟು ಅಕ್ಕಪಕ್ಕದ ರೈತರ ವಿಳಾಸ ಹಾಗೂ ಫೋನ್ ನಂಬರ್ ಕೂಡ ಕೊಡಬೇಕು. ಯಾಕೆಂದರೆ ಸರ್ವೇ ಮಾಡುವ ವಿಚಾರ ಅವರಿಗೂ ತಿಳಿದಿರಬೇಕು ಮತ್ತು ಆ ದಿನ ಅವರು ಹಾಜರಿರಬೇಕು. ನೀವೇ ಅವರಿಗೆ ಮಾಹಿತಿ ತಿಳಿಸಿದರು ಒಳ್ಳೆಯದು ಜೊತೆಗೆ ಊರಿನ ಪ್ರಮುಖ 3-4 ಜನಕ್ಕೂ ಕೂಡ ತಿಳಿಸಿ ಆ ದಿನ ಕರೆದುಕೊಂಡು ಬರಬೇಕು.
ಅಕ್ಕದ ಪಕ್ಕದ ರೈತರಿಗೆ ನೋಟಿಸ್ ಮೂಲಕ ಮಾಹಿತಿ ತಿಳಿಸಿದರೆ ಅದು ಇನ್ನು ಒಳ್ಳೆಯ ವಿಧಾನ. ಮುಂದೆ ಕಾನೂನ ತೊಡಕುಗಳು ಉಂಟಾದಾಗ ಇದು ಅನುಕೂಲಕ್ಕೆ ಬರುತ್ತದೆ. ಗೊತ್ತುಪಡಿಸಿದ ದಿನದಂದು ಭೂ ಸರ್ವೇ ಇಲಾಖೆಯಿಂದ ಈ ಕಾರ್ಯ ನಡೆದು ಒಂದು ವೇಳೆ ಒತ್ತುವರಿಯಾಗಿದ್ದಾರೆ ಅದರ ಚಿತ್ರ ಸಮೇತ ವಿವರವನ್ನು ನಿಮಗೆ ಕೊಡುತ್ತಾರೆ.
7 ದಿನಗಳು ಆದ ಬಳಿಕ ನಾಡಕಚೇರಿಯಿಂದ ನಕ್ಷೆ ಕೂಡ ಪಡೆದುಕೊಳ್ಳಬಹುದು ಇದಾದ ಬಳಿಕ ನೀವು ಒತ್ತುವರಿ ಆಗಿರುವ ಜಮೀನನ್ನು ಬಿಡುವಂತೆ ಆ ರೈತನಿಗೆ ಕೇಳಬೇಕು. ಒಂದು ವೇಳೆ ಅವರು ಬಿಡದೆ ಇದ್ದರೆ ಊರಿನಲ್ಲಿ ಪ್ರಮುಖರನ್ನು ಸೇರಿಸಿ ಪಂಚಾಯಿತಿ ಮಾಡಿ ಪಂಚಾಯಿತಿಯಲ್ಲಿ ಅಕ್ಕ ಪಕ್ಕದ ಒತ್ತುವರಿ ಮಾಡಿಕೊಂಡಿರುವ ರೈತರಿಗೆ ಹಾಗೂ ಪಂಚಾಯಿತಿಯವರಿಗೂ ಮನವರಿಕೆ ಆಗಿರುವಂತೆ ದಾಖಲೆಯಲ್ಲಿರುವ ವಿಚಾರ ಹಾಗೂ ಸರ್ವೆಯಲ್ಲಿರುವ ವಿವರಗಳನ್ನು ಅರ್ಥ ಮಾಡಿಸಿ.
ಒಂದು ವೇಳೆ ಆಗಲೂ ಬಿಡದೆ ಇದ್ದರೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ, ದೂರಿನಲ್ಲಿ ತಪ್ಪದೆ ಸಾಕ್ಷಿಗಳ ಹೇಳಿಕೆ ಸರ್ವೆ ರಿಪೋರ್ಟ್ ಮತ್ತು ಜಮೀನಿನ ದಾಖಲೆ ಬಗ್ಗೆ ವಿವರ ಇರಲಿ ಮತ್ತು ನೀವು ಕಂಪ್ಲೀಟ್ ಕೊಟ್ಟಿರುವ ರಿಪೋರ್ಟ್ ಕೂಡ ನೀವು ಪಡೆದುಕೊಳ್ಳಿ.
ಇಷ್ಟಾದ ಮೇಲೆ ಆ ರೈತನು ಒತ್ತುವರಿ ಆಗಿರುವ ಜಮೀನನ್ನು ಬಿಟ್ಟುಕೊಟ್ಟರು ಕೊಡಬಹುದು. ಒಂದು ವೇಳೆ ಆತ ಮತ್ತೊಮ್ಮೆ ಸರ್ವೆ ಮಾಡಿಸುವಂತೆ ಸೂಚಿಸಿದರೆ ನೀವು ಒಪ್ಪಬೇಕಾಗುತ್ತದೆ. ಇಷ್ಟೆಲ್ಲಾ ಆದಮೇಲೆ ಕೂಡ ಆ ರೈತ ಜಗ್ಗದೇ ಇದ್ದಾಗ ವಕೀಲರ ಸಲಹೆ ಮೇರೆಗೆ ನೀವು ಕೋರ್ಟಿನಲ್ಲಿ ದಾವೆ ಹೂಡಿ ನ್ಯಾಯ ಪಡೆಯಬಹುದು.
ಆದರೆ ಭೂ ವ್ಯಾಜ್ಯಗಳು ಇತ್ಯರ್ಥವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಹತ್ತು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡ ಉದಾಹರಣೆಗಳು ಇದೆ. ಕೋರ್ಟ್ ಕಛೇರಿ ಅಲೆದು ಸಮಯ ಹಣ ವ್ಯರ್ಥ ಮಾಡಿಕೊಳ್ಳುವುದರ ಬದಲು ರಾಜಿ ಪಂಚಾಯಿತಿ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ.