ಕ್ಯಾಲೆಂಡರ್ ವರ್ಷಾಂತ್ಯವಾಗಲಿ ಅಥವಾ ಆರ್ಥಿಕ ವರ್ಷಾಂತ್ಯವಾಗಲಿ ಅಥವಾ ಮಾಸಾಂತ್ಯವಾಗಲಿ ಕೆಲವೊಂದು ವಿಚಾರಗಳಿಗೆ ಕೊನೆ ಅವಕಾಶವಾಗಿರುತ್ತದೆ. ಹಲವು ಬಾರಿ ನಾವು ಇನ್ನು ಸಮಯವಿದೆ ಕೊನೆ ದಿನಗಳಲ್ಲಿ ಮಾಡೋಣ ಎಂದುಕೊಂಡು ಮರೆತುಬಿಡುತ್ತೇವೆ. ಇದರಿಂದ ನಂತರದ ದಿನಗಳಲ್ಲಿ ಸಾಕಷ್ಟು ನಷ್ಟದ ಜೊತೆ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.
ಇದೀಗ ನೂತನ ವರ್ಷ 2024 ಆರಂಭವಾಗುತ್ತಿದೆ ಈ ಹೊಸ ವರ್ಷದಲ್ಲಿ ಕೆಲವು ಬದಲಾವಣೆಗಳು ಖಂಡಿತ ಇದೆ, ಅಂತೆಯೇ ಡಿಸೆಂಬರ್ 31 ಎನ್ನುವುದು ಆದಾಯ ತೆರಿಗೆ ರಿಟರ್ನ್ಸ್, ಸಿಮ್ ಕಾರ್ಡ್ಗಳು, ಡಿಮ್ಯಾಟ್ ಖಾತೆಗಳು ಮತ್ತು ಬ್ಯಾಂಕ್ ಲಾಕರ್ಗಳಿಗೆ ಸಂಬಂಧಿಸಿದ ನಿಯಮಗಳ ಬದಲಾವಣೆಗೆ ಕಡೆ ದಿನಾಂಕವಾಗಿದೆ. ಇದರ ಕುರಿತು ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ತಪ್ಪದೇ ಡಿಸೆಂಬರ್ 31ರ ಒಳಗೆ ತಪ್ಪದೆ ಇವುಗಳನ್ನು ಪೂರ್ತಿಗೊಳಿಸಿ.
1. ಆದಾಯ ತೆರಿಗೆ ರಿಟರ್ನ್ಸ್ (ITR):-
2022-23ರ ಹಣಕಾಸು ವರ್ಷಕ್ಕೆ ದಂಡ ಸಮೇತ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಡಿಸೆಂಬರ್ 31, 2023 ಕಡೇ ದಿನಾಂಕವಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234F ಅಡಿಯಲ್ಲಿ ನಿಗದಿತ ದಿನಾಂಕದ ಮೊದಲು ರಿಟರ್ನ್ ಸಲ್ಲಿಸದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ತಡವಾಗಿ ITR ಸಲ್ಲಿಸುವವರಿಗೆ 5,000 ರೂ.ಗಳ ದಂಡ ಕೂಡ ಬೀಳುತ್ತದೆ.
* ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕುವುದು (Bank locker Agriment):-
RBI ಬ್ಯಾಂಕ್ ಲಾಕರ್ ಗಳು ನಿಯಮವನ್ನು ಪರಿಷ್ಕರಿಸಿದೆ, ಈ ಪರಿಷ್ಕೃತಗೊಂಡಿರುವ ನಿಯಮಗಳನ್ನು ಒಪ್ಪಿ ಬ್ಯಾಂಕ್ ಲಾಕರ್ ಗ್ರಾಹಕರು ಸಹಿ ಹಾಕಬೇಕು. ಈಗಾಗಲೇ ಬ್ಯಾಂಕ್ ಕಡೆಯಿಂದ ಈ ಬಗ್ಗೆ ಕರೆ ಅಥವಾ SMS ಮೂಲಕ ಮಾಹಿತಿಯು ಬಂದಿರುತ್ತದೆ. ಮೊದಲು ಬ್ಯಾಂಕ್ ಲಾಕರ್ ಒಪ್ಪಂದವನ್ನು ಸಲ್ಲಿಸಿದ ಖಾತೆದಾರರು ಪರಿಷ್ಕೃತ ಒಪ್ಪಂದಕ್ಕೆ ಸಹಿ ಹಾಕಿ ಅದನ್ನು ಆಯಾ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕಾಗುತ್ತದೆ. ಇದಕ್ಕೂ ಕೂಡ ಡಿಸೆಂಬರ್ 31 ಕೊನೆ ದಿನಾಂಕ ಆಗಿರುತ್ತದೆ.
* ಹೊಸ ಸಿಮ್ ಖರೀದಿಸಲು ಕೆವೈಸಿ (KYC) ಅಗತ್ಯ:-
ಇನ್ನು ಮುಂದೆ ಗ್ರಾಹಕರು ಹೊಸ ಸಿಮ್ ಕಾರ್ಡ್ ಖರೀದಿಸುವಾಗ ಅದಕ್ಕೆ KYC ಸಲ್ಲಿಸಬೇಕಾಗುತ್ತದೆ. ಅಂದರೆ, ಪೇಪರ್ ಆಧಾರಿತ ನೋ-ಯುವರ್-ಕಸ್ಟಮರ್ (Know your Customer) ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಅದೇ ಸಮಯದಲ್ಲಿ, ಟೆಲಿಕಾಂ ಕಂಪನಿಗಳು ಇ-ಕೆವೈಸಿಯನ್ನು ಮಾತ್ರ ಮಾಡುತ್ತವೆ. ಇದನ್ನು ಹೊರತುಪಡಿಸಿ ಮೊಬೈಲ್ ಸಂಪರ್ಕವನ್ನು ಪಡೆಯಲು ಉಳಿದ ನಿಯಮಗಳು ಒಂದೇ ಆಗಿರುತ್ತವೆ. ಆದರೆ ಇದು ಜನವರಿ 1, 2024ರ ನಂತರ ಡಿಸೆಂಬರ್ 31 , 2023 ರವರೆಗೆ ಹಳೆ ನಿಯಮಗಳಂತೆ ದಾಖಲ ಪತ್ರಗಳ ಮೂಲಕವೇ ಸಿಮ್ ಕಾರ್ಡ್ ಖರೀದಿಸಬಹುದು.
* ನಾಮಿನಿ ಸೇರ್ಪಡೆ ಕಡ್ಡಾಯ (Nominee):-
ಎಲ್ಲಾ ಡಿಮ್ಯಾಟ್ ( Demat ) ಖಾತೆದಾರರಿಗೆ ನಾಮಿನಿಗಳನ್ನು ಕಡ್ಡಾಯಗೊಳಿಸಲಾಗಿದೆ. ಖಾತೆದಾರರು ಏನಾದರೂ ಈಗಲೂ ನಾಮಿನಿಯನ್ನು ಅವರ ಖಾತೆಗಳಿಗೆ ಸೂಚಿಸದಿದ್ದರೆ ಷೇರುಗಳಲ್ಲಿ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.
ಈ ಪ್ರಕ್ರಿಯೆಯನ್ನು ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ ಆದರೆ ಪ್ಯಾನ್, ನಾಮನಿರ್ದೇಶನ, ಸಂಪರ್ಕ ವಿವರಗಳು, ಬ್ಯಾಂಕ್ ಖಾತೆ ( Bank Account ) ವಿವರಗಳು ಮತ್ತು ಆಯಾ ಫೋಲಿಯೊ ಸಂಖ್ಯೆಗಳಿಗೆ ವೈಯಕ್ತಿಕವಾಗಿ ಹಾಜರಾಗುವ ಮೂಲಕ ಮಾದರಿ ಸಹಿಗಳನ್ನು ಸಲ್ಲಿಸಲು ಕೂಡ ಡಿಸೆಂಬರ್ 31 ಕಡೇ ಗಡುವು.
* ನಿಷ್ಕ್ರಿಯ UPI ಐಡಿಗಳನ್ನು ಮುಚ್ಚಲಾಗುವುದು:-
ಕಾರ್ಪೊರೇಷನ್ ಆಫ್ ಇಂಡಿಯಾ ಪಾವತಿ ಅಪ್ಲಿಕೇಶನ್ ಗಳಾದ ಗೂಗಲ್-ಪೇ, ಪೇಟಿಎಂ, ಫೋನ್ ಪೇ UPI ಐಡಿಗಳು ಮತ್ತು ಸಂಖ್ಯೆಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಬಳಕೆಯಾಗದೇ ಇದ್ದವನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಿದೆ. ಡಿಸೆಂಬರ್ 31 ರೊಳಗೆ ಆಕ್ಟಿವೇಟ್ ಮಾಡಿದವರು ಉಳಿಸಿಕೊಳ್ಳಬಹುದು.
* ಸರ್ಕಾರದ ಉಚಿತ ಪ್ರಧಾನಮಂತ್ರಿ ಉಜ್ವಲ ಯೋಜನೆ ಗ್ಯಾಸ್ ಕನೆಕ್ಷನ್ (PMUY):-
ಕೇಂದ್ರ ಸರ್ಕಾರ ಬಡತನ ರೇಖೆಗಿಂತ ಕೆಳಗಿನ (below poverty line) ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ (free gas connection) ನೀಡುತ್ತಿದೆ. ಕೊನೆ ದಿನಾಂಕ ಹೇಳದೆ ಇದ್ದರೂ ಅನುದಾನ ಲಭ್ಯವಿರುವವರಿಗೆ ಮಾತ್ರ ಯೋಜನೆ ಸಿಗುವುದರಿಂದ ಶೀಘ್ರವೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಿ.