ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ (Pradana Mantri Ujwal Yojane) ಗ್ಯಾಸ್ ಸಂಪರ್ಕ ಪಡೆದಿದ್ದ ಕುಟುಂಬಗಳಿಗೆ ಸರ್ಕಾರದಿಂದ ಪ್ರತಿ ಸಿಲಿಂಡರ್ ಬುಕಿಂಗ್ ಮೇಲೆ ಸಬ್ಸಿಡಿ (Subsidy) ಸಿಗುತ್ತಿದೆ. ಈ ಹಣವು dbt ಮೂಲಕ ಫಲಾನುಭವಿ ಖಾತೆಗೆ ವರ್ಗಾವಣೆ ಆಗಬೇಕು ಎಂದರೆ ಅವರು ತಮ್ಮ ಗ್ಯಾಸ್ e-KYC ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆದರೆ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರು ಮಾತ್ರವಲ್ಲದೆ ಖಾಸಗಿಯಾಗಿ ಕನೆಕ್ಷನ್ ಪಡೆದವರೂ ಕೂಡ ಈಗ ಏಜೆನ್ಸಿಗಳ ಮುಂದೆ ತಮ್ಮ Gas e-KYC ಮಾಡಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ನೀವೇನಾದರೂ ಈ ಯೋಜನೆ ವ್ಯಾಪ್ತಿಗೆ ಒಳಪಡದೆ e-KYC ಮಾಡಿಸಿದರೆ ನಿಮಗೆ ಸಬ್ಸಿಡಿ ಹಣ ಸಿಗುವುದಿಲ್ಲ. ಆದ್ದರಿಂದ ಸಮಯ ಹಾಳು ಮಾಡಿಕೊಂಡು ಇದಕ್ಕಾಗಿ ಕಾಯುವುದು ಬೇಡ ಮುಂದೆ ಒಂದು ದಿನ ನೀವು ಬಿಡುವಿದ್ದಾಗ ಮಾಡಿಸಿದರೆ ನಡೆಯುತ್ತದೆ.
ಆದರೆ ಈಗ ಸದ್ಯಕ್ಕೆ ಕಡ್ಡಾಯವಾಗಿ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರು ಯಾವುದೇ ಕಂಪನಿಯಿಂದ ಗ್ಯಾಸ್ ಕನೆಕ್ಷನ್ ಪಡೆದಿದ್ದರು ತಪ್ಪದೆ ಈ e-KYC ಪ್ರಕ್ರಿಯ ಪೂರ್ತಿ ಗೊಳಿಸಬೇಕು. ನೀವು ನಿಮ್ಮ ಏಜೆನ್ಸಿಗಳಿಗೆ ಭೇಟಿ ಕೊಟ್ಟು ಮಾಡಿಸಬಹುದು.
ಅಥವಾ ಮನೆಗೆ ಸಿಲಿಂಡರ್ ಡೆಲಿವರಿ ಕೊಡುವ ಸಮಯದಲ್ಲಿ ಕೂಡ ಗ್ಯಾಸ್ ಏಜೆನ್ಸಿ ಸಿಬ್ಬಂದಿಗಳ ಸಹಾಯ ಪಡೆದು ಮಾಡಿಸಬಹುದು ಇಲ್ಲ ನೀವೇ ನಿಮ್ಮ ಮನೆಯಲ್ಲಿರುವ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಅಧಾರ್ ಅಥೆಂಟಿಕೇಷನ್ (through Aadhar authentication) ಮೂಲಕ e-KYC ಮಾಡಿಕೊಳ್ಳಬಹುದು. ಇನ್ನೂ ಒಂದು ವಿಷಯ ಏನೆಂದರೆ ಈಗಾಗಲೇ ಕೆಲವರ e-KYC ಪೂರ್ತಿಗೊಂಡಿವೆ.
ಆದರೂ ಕೂಡ ಅವರಿಗೆ ಅದರ ಬಗ್ಗೆ ಅನುಮಾನ ಇದೆ ನಿಮಗೂ ಗೊಂದಲಗಳಿದ್ದರೆ ನಿಮ್ಮದು ಭಾರತ್, ಇಂಡಿಯನ್ ಅಥವಾ HP ಯಾವುದೇ ಕಂಪನಿ ಆಗಿದ್ದರು ಕೂಡ e-KYC ಆಗಿದೆಯೇ ಎನ್ನುವುದನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಿ ತಿಳಿದುಕೊಳ್ಳಲು ಈಗ ನಾವು ಹೇಳುವ ಈ ವಿಧಾನವನ್ನು ಪೂರೈಸಿ.
* ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಗೆ ಹೋಗಿ HP ಕಂಪನಿಯಿಂದ ಕನೆಕ್ಷನ್ ಪಡೆದವರು my HP ಎಂದು, Bharath ಕಂಪನಿಯಿಂದ ಕನೆಕ್ಷನ್ ಪಡೆದವರು My Bharath ಎಂದು Indane ಕಂಪನಿಯಿಂದ ಕಲೆಕ್ಷನ್ ಪಡೆದವರು My Indane ಎಂದು ಸರ್ಚ್ ಮಾಡಿ.
* ನಿಮ್ಮ ಕಂಪನಿಯ ಲಿಂಕ್ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಮುಖ ಪುಟಕ್ಕೆ ಭೇಟಿ ಕೊಡಿ.
* ಉದಾಹರಣೆಗೆ HP Gas ಆಗಿದ್ದರೆ My HPgas.in ಎಂದು ಬರುತ್ತದೆ ಉಳಿದ ಕಂಪನಿಗಳ ಮುಖಪುಟದಲ್ಲಿ ಕೂಡ ಇದೇ ಮಾದರಿಯಾಗಿ ಅವರ ಕಂಪನಿಯ ಹೆಸರು ಬಂದಿರುತ್ತದೆ.
* ಅದರಲ್ಲಿ ಈಗಾಗಲೇ ನೀವು ಈ ವೆಬ್ ಸೈಟ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ್ರೆ Sign in ಕೊಟ್ಟು ಮುಂದುವರೆಯಿರಿ, ಇದೇ ಮೊದಲ ಬಾರಿಗೆ ನಿಮ್ಮ ಅಕೌಂಟ್ ನೋಡುತ್ತಿದ್ದರೆ New User ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ಸ್ಕ್ರೀನ್ ಮೇಲೆ Noramal Search ಎನ್ನುವ ಫಾರ್ಮೆಟ್ ಬರುತ್ತದೆ. ಅದರಲ್ಲಿ ನಿಮ್ಮState, District, Distributor (Agency Name) ಸೆಲೆಕ್ಟ್ ಮಾಡಿ ನಂತರ ನಿಮ್ಮ Consumer Number ಎಂಟ್ರಿ ಮಾಡಿ.
* ಎಡ ಭಾಗದಲ್ಲಿ ಮೊಬೈಲ್ ನಂಬರ್ ಕೇಳಿರುತ್ತದೆ. ನೀವು ಯಾರ ಹೆಸರಿನಲ್ಲಿ ಗ್ಯಾಸ್ ಕನೆಕ್ಷನ್ ಪಡೆದಿದ್ದೀರ ಅವರ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ ಕೆಳಗೆ ನೀಡುವ ಕ್ಯಾಪ್ಚಾ ಕೋಡ್ ಕೂಡ ನಮೂದಿಸಿ proceed ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್ ನಂಬರ್ ಅಥವಾ ಇ-ಮೇಲ್ ಆಕೌಂಟ್ ಮೂಲಕ Password set ಮಾಡಿಕೊಳ್ಳಿ. 8 ಅಂಕೆಗಳ ಈ Password ನಲ್ಲಿ 1 Capital letter, 1 Numeric, 1 special Character ಇರಬೇಕು. ಆಗ ಮುಖಪುಟದಲ್ಲಿ ನೇರವಾಗಿ sign in ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ Mobile No. ಹಾಗೂ Password ಹಾಕಿ ನೇರವಾಗಿ Login ಆಗಬಹುದು.
* Login ಆದ ಮೇಲೆ Check if you need KYC ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ Do i need KYC ಕೇಳುತ್ತದೆ ಮತ್ತು ವಿವರ ಬರುತ್ತದೆ. ಅದನ್ನು ಓದಿಕೊಂಡು click here ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ e-KYC ಅರ್ಜಿ ಫಾರಂ ಓಪನ್ ಆಗುತ್ತದೆ. ಈ ರೀತಿ ಫಾರಂ ಓಪನ್ ಆದರೆ ನೀವು ಅದನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿ ಯಾಕೆಂದರೆ ನಿಮ್ಮ ಗ್ಯಾಸ್ ಕನೆಕ್ಷನ್ e-KYC ಆಗಿಲ್ಲ ಎಂದು ಅರ್ಥ.
ಒಂದು ವೇಳೆ ಫಾರ್ಮ್ ಓಪನ್ ಆಗದೆ ನಿಮ್ಮ e-KYC ಆಗಿದ್ದರೆ e-KYC done ಎನ್ನುವರ್ಥದಲ್ಲಿ ಪಾಪ್ ಆಫ್ ಮೆಸೇಜ್ ಬರಬಹುದು.
* HP ಮಾತ್ರವಲ್ಲದೆ Bharath ಮತ್ತು Indane ನಲ್ಲಿ ಕೂಡ ಇದೇ ರೀತಿ ಆಪ್ಷನ್ ಇದೆ ಸರ್ಚ್ ಮಾಡಿ ಪರೀಶೀಲಿಸಿ ದೃಢಪಡಿಸಿಕೊಳ್ಳಿ.