ಮಾಂಸಾಹಾರಿಗಳು ಯಾರೆಲ್ಲ ಇರುತ್ತಾರೆಯೋ ಅಂತಹವರು ಮೀನಿನ ಖಾದ್ಯಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಈ ಮೀನಿನಲ್ಲಿ ವಿಶೇಷವಾಗಿ ಮೀನೆಣ್ಣೆ ಅಥವಾ ಒಮೆಗಾ 3, ಕೊಬ್ಬಿನ ಆಮ್ಲಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಹಾಗೆಯೆ ಒಟ್ಟಾರೆಯಾಗಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಕರಾವಳಿಯ ಜನರು ಮೀನು ಇಲ್ಲದೆ ಊಟವೇ ಮಾಡುವುದಿಲ್ಲ ಎಂದು ಹೇಳಬಹುದು. ನೀವು ಮೀನನ್ನು ತಿನ್ನುವಾಗ ಅದರ ಮುಳ್ಳುಗಳನ್ನು ಜಾಗರೂಕತೆಯಿಂದ ನೋಡಿಕೊಂಡು ಮಾಂಸವನ್ನು ಮಾತ್ರವೇ ತಿನ್ನಬೇಕು ಆದರೆ ಕೆಲವೊಮ್ಮೆ ಆಕಸ್ಮಾತಾಗಿ ಹೊಟ್ಟೆಗೆ ಹೋಗಿಬಿಡಬಹುದು ಆದರೆ ಈ ಮುಳ್ಳು ಹೊಟ್ಟೆಗೆ ಹೋದರೆ ತೊಂದರೆ ಇಲ್ಲ. ಈ ಮೀನಿನ ಮುಳ್ಳು ಜಠರ ಮತ್ತು ಕರುಳುಗಳ ಭಾಗಕ್ಕೆ ಚುಚ್ಚಿಕೊಳ್ಳುವುದಿಲ್ಲ. ಮೀನಿನ ಮುಳ್ಳು ಜಠರದಲ್ಲಿ ಜೀರ್ಣವಾಗುತ್ತದೆ ಹಾಗೂ ಕರುಳುಗಳಿಗೆ ಇದರಿಂದ ಯಾವುದೇ ರೀತಿಯಾದಂತಹ ಅಪಾಯವಿಲ್ಲ, ಆದರೆ ನಿಜವಾದ ತೊಂದರೆ ಇರುವುದು ಹೊಟ್ಟೆಗೆ ಹೋಗುವ ಹಂತದಲ್ಲಿ ಇದು ಗಂಟಲು ಅಥವಾ ಅನ್ನನಾಳದಲ್ಲಿ ಚುಚ್ಚಿಕೊಂಡಾಗ ಮಾತ್ರ.
ಇದರಿಂದ ತೊಂದರೆ ಉಂಟಾಗುತ್ತದೆ ಇದೇನಾದರೂ ಗಂಟಲಿಗೆ ಚುಚ್ಚಿಕೊಂಡರೆ ನಾವು ತಿನ್ನುವಂತಹ ಆಹಾರ ಅದಕ್ಕೆ ಚುಚ್ಚಿ ಮತ್ತೆ ಇನ್ನು ಅದು ಚರ್ಮದ ಆಳಕ್ಕೆ ಇಳಿಯಲು ಕಾರಣವಾಗಿ ಇನ್ನಷ್ಟು ನೋವನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಎಲ್ಲಾ ಮೀನಿನ ಮುಳ್ಳುಗಳು ನಮ್ಮ ಜಠರದಲ್ಲಿ ಜೀರ್ಣಗೊಳ್ಳುತ್ತವೆ. ಎಲ್ಲೋ ಕೆಲವು ದಪ್ಪವಾಗಿರುವಂತಹ ಮುಳ್ಳುಗಳು ಮಾತ್ರ ಜಠರದಿಂದ ಸಣ್ಣ ಕರುಳಿಗೆ ಹೋಗಿ ಅಲ್ಲಿ ಜೀರ್ಣಗೊಳ್ಳುತ್ತದೆ ಇನ್ನು ಕೆಲವೊಂದು ಮುಳ್ಳು ಕರುಳಿನಲ್ಲಿಯೇ ಉಳಿದರು ಇದು ಸ್ವಾಭಾವಿಕವಾಗಿ ವಿಸರ್ಜನೆ ಆಗುತ್ತದೆ. ಕೆಲವು ಸಂದರ್ಭದಲ್ಲಿ ದೊಡ್ಡ ಕರುಳಿನ ವರೆಗೂ ಹೋಗಬಹುದು ಹಾಗೆ ಏನಾದರೂ ಆದರೆ ಅಂತಹ ಸಮಯದಲ್ಲಿ ನಿಮಗೆ ಸ್ವಲ್ಪ ನೋವು ಕಾಣಿಸಿಕೊಳ್ಳಬಹುದು ಆಗ ನೀವು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕು. ನಿಮ್ಮ ಕರುಳಿನಲ್ಲಿ ಮುಳ್ಳು ಸಿಕ್ಕಿಕೊಂಡರೆ ನೀವು ಆ ದಿನವಿಡೀ ಉಪವಾಸವಿದ್ದರೆ ತುಂಬಾ ಒಳ್ಳೆಯದು ಆದಷ್ಟು ನೀವು ನೀರನ್ನು ಚೆನ್ನಾಗಿ ಕುಡಿಯಬೇಕು ಈ ಮೂಲಕ ಮುಳ್ಳು ಸ್ವಾಭಾವಿಕವಾಗಿ ಹೊರಬರಲು ಸಾಧ್ಯವಾಗುತ್ತದೆ.
ನಿಮ್ಮ ಗಂಟಲಿನಲ್ಲಿ ಮುಳ್ಳು ಸಿಕ್ಕಿಕೊಂಡರೆ ಆಗ ನೀವು ಒಂದು ಇಂಚಿನಷ್ಟು ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ನಿಮಿಷಗಳ ಕಾಲ ಬಾಯಿಯಲ್ಲಿ ಇಟ್ಟುಕೊಂಡು ಅದರಿಂದ ನಮ್ಮ ಬಾಯಲ್ಲಿ ಲಾಲಾ ರಸ ಸಂಗ್ರಹ ಮಾಡಿಕೊಂಡು ನಂತರ ಅದನ್ನು ನುಂಗಿದರೆ ನಮ್ಮ ಗಂಟಲಿನಲ್ಲಿ ಇರುವಂತಹ ಚಿಕ್ಕ ಮತ್ತು ಮಧ್ಯಮ ಗಾತ್ರದಲ್ಲಿ ಇರುವ ಮುಳ್ಳು ತಾನಾಗಿಯೇ ಬಾಳೆಹಣ್ಣಿನ ಜೊತೆಗೆ ಹೊಟ್ಟೆಗೆ ಹೋಗುತ್ತದೆ. ಮತ್ತೊಂದು ವಿಧಾನ ನೀವು ಸ್ವಲ್ಪ ಕಡಲೆ ಬೀಜವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಅಗಿದು ನುಂಗಬೇಕು ಹೀಗೆ ಮಾಡುವುದರಿಂದಲೂ ಸಹ ಗಂಟಲಿನಲ್ಲಿರುವ ಮುಳ್ಳು ತಾನಾಗೆ ನಿವಾರಣೆಯಾಗುತ್ತದೆ.
ಹಾಗೆಯೇ ಬಿಳಿ ಅನ್ನವನ್ನು ತೆಗೆದುಕೊಂಡು ಅದಕ್ಕೆ ಸಾಂಬರ್ ಹಾಕದೆ ಹಾಗೆಯೇ ನುಂಗಿ ನೀರು ಕುಡಿಯುವುದರ ಸಹ ಮುಳ್ಳು ನಿವಾರಣೆ ಆಗುತ್ತದೆ. ಮುಳ್ಳು ನಿಮ್ಮ ಗಂಟಲಲ್ಲಿ ಸಿಕ್ಕಿಹಾಕಿಕೊಂಡರೆ ನೀವು ಸ್ವಲ್ಪ ಬಗ್ಗಬೇಕು ಮೂಗಿನಿಂದ ಪೂರ್ತಿಯಾಗಿ ಉಸಿರನ್ನು ತೆಗೆದು ಹಿಡಿದಿಟ್ಟುಕೊಳ್ಳಬೇಕು ನಂತರ ಒಬ್ಬರ ಸಹಾಯ ಪಡೆದು ಅವರ ಬೊಗಸೆ ಕೈಯಿಂದ ನಿಮ್ಮ ಬೆನ್ನಿನ ಮೇಲೆ ನೋವಾಗದಂತೆ ಹೊಡೆಯಬೇಕು ಅವರು ಒಡೆದ ರಭಸಕ್ಕೆ ನೀವು ಹಿಡಿಯುಟ್ಟು ಕೊಂಡಿರುವಂತಹ ಉಸಿರನ್ನು ಬಿಡುವುದರಿಂದ ಮುಳ್ಳು ತಾನಾಗಿಯೇ ಕಿತ್ತು ಹೊರಗೆ ಬರುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ