ಇಂಜಿನಿಯರಿಂಗ್ ಓದಿ ಕೊಬ್ಬರಿ ಬಿಜಿನೆಸ್ ಮಾಡಿ, ಕೋಟಿ ದುಡಿದ 28 ವರ್ಷದ ಯುವಕ.!

 

WhatsApp Group Join Now
Telegram Group Join Now

ವಿದ್ಯಾಭ್ಯಾಸ ಎನ್ನುವುದು ಒಂದು ಚೌಕಟ್ಟಲ್ಲ ಇಂಜಿನಿಯರಿಂಗ್ ಮಾಡಿದವರು ಇಂಜಿನಿಯರಿಂಗ್ ಕೆಲಸ ಮಾತ್ರ ಮಾಡಬೇಕು ಎನ್ನುವ ಯಾವುದೇ ರೂಲ್ಸ್ ಇಲ್ಲ ಎನ್ನುವುದನ್ನು ಬ್ರೇಕ್ ಮಾಡಿದ ಇಂಜಿನಿಯರಿಂಗ್ ಸ್ಟೂಡೆಂಟ್ ಇಂದು ಕೋಟಿಗಟ್ಟಲೆ ಬಿಸಿನೆಸ್ ಮಾಡುವ ಬಿಸಿನೆಸ್ ಮ್ಯಾನ್ ಆಗಿ ಯಶಸ್ಸು ಪಡೆದಿದ್ದಾರೆ.

ಆರಂಭದಲ್ಲಿ ಸಂಬಂಧಿಕರು ಇಂಜಿನಿಯರಿಂಗ್ ಮಾಡಿ ಅಪ್ಪನ ದುಡ್ಡು ಟೈಮ್ ವೇಸ್ಟ್ ಮಾಡಿ ಈಗ ಬಿಸಿನೆಸ್ ನಲ್ಲಿ ಹಣ ಹಾಕಿ ವೇಸ್ಟ್ ಮಾಡುತ್ತಿದ್ದಾನೆ ಇವನು ಉದ್ದಾರ ಆಗಲ್ಲ ಎಂದವರು ಈಗ ಈ ಹುಡುಗನ ಕಂಪನಿಯಲ್ಲಿ ತಮ್ಮ ಕಡೆಯವರಿಗೆ ಕೆಲಸ ಕೇಳುತ್ತಿದ್ದಾರಂತೆ. ಇಷ್ಟರಮಟ್ಟಿಗೆ ತಮ್ಮ ಶ್ರದ್ಧೆ ಹಾಗೂ ಆಸಕ್ತಿಯಿಂದ ಕೊಬ್ಬರಿ ಬಿಸಿನೆಸ್ ನಲ್ಲಿ ಯಶಸ್ವಿಯಾಗಿರುವ ಚಿರಂಜೀವಿ ಎನ್ನುವ ಯುವಕರ ಬಗ್ಗೆ ಈ ಅಂಕಣದಲ್ಲಿ ಪರಿಚಯಿಸುತ್ತಿದ್ದೇವೆ.

ತಾನಿದ್ದ ಊರಿನಲ್ಲಿಯೇ ತಂದೆಯಿಂದ ಪಡೆದ 5-6 ಲಕ್ಷದ ಬಂಡವಾಳದ ಅಂಗಡಿಯಲ್ಲಿ ಕೊಬ್ಬರಿ ಬಿಸಿನೆಸ್ ಶುರು ಮಾಡಿದ ಈತ SLN ಮತ್ತು ಚಿರಂಜೀವಿ ಎನ್ನುವ ಕೊಬ್ಬರಿ ಹಾಗೂ ಕೊಬ್ಬರಿ ಎಣ್ಣೆಯ ಬ್ರಾಂಡ್ ಮಾಡಿ ಭಾರತದಾದ್ಯಂತ ಮತ್ತು ವಿದೇಶಕ್ಕೂ ಕೂಡ ರಫ್ತು ಮಾಡುವಷ್ಟು ದೊಡ್ಡ ಕಂಪನಿ ಕಟ್ಟಿದ್ದಾರೆ.

ಈ ಸುದ್ದಿ ಓದಿ:- ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.!

2016ರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ ಇವರು ಅದ್ಯಾಕೋ ಕೆಲಸದ ಕಡೆ ಗಮನ ಮಾಡಲಿಲ್ಲ. ತಾನೊಬ್ಬ ಬಿಜಿನೆಸ್ ಮ್ಯಾನ್ ಆಗಬೇಕು ಎನ್ನುವ ಹಾಗೂ ಅದರ ಬಗ್ಗೆ ಐಡಿಯಾಗಳನ್ನು ಇಟ್ಟುಕೊಂಡಿದ್ದ ಇವರು ಕೊಬ್ಬರಿ ಮಾರುವ ಸಾಹಸಕ್ಕೆ ಕೈ ಹಾಕುತ್ತಾರೆ ಕುಟುಂಬದಲ್ಲಿ ಬಿಸಿನೆಸ್ ಹಿನ್ನೆಲೆ ಇಲ್ಲದೇ ಇದ್ದರು ಅದ್ಯಾವುದೋ ಗಟ್ಟಿ ಧೈರ್ಯದಿಂದ ಅಖಾಡಕ್ಕಿಳಿದ ಇವರು ಕೈ ಸುಟ್ಟಿಕೊಂಡಿದ್ದು ಇದೆ.

ಇದರ ಬಗ್ಗೆ ಮಾತನಾಡುವ ಇವರು ತಂದೆ-ತಾಯಿ ಬಿಟ್ಟು ಇನ್ಯಾರು ಕೂಡ ನಮಗೆ 100% ಅಷ್ಟೇ ಪ್ರೀತಿ ಹಾಗೂ ಕಾಳಜಿ ಮಾಡುತ್ತಾರೆ ಎಂದು ಹೇಳಲು ಆಗುವುದಿಲ್ಲ. ಜೀವನದಲ್ಲಿ ಎಲ್ಲವನ್ನು ಬದುಕುತ್ತಾ ಕಲಿಯಬೇಕು ಸೋಲುಗಳಲ್ಲೂ ಕೂಡ ಒಂದು ಪಾಠ ಇರುತ್ತದೆ. ನಾವು ಸೋತಾಗ ಮಾತ್ರ ಅದನ್ನು ಚೆನ್ನಾಗಿ ಕಲಿಯುತ್ತೇವೆ.

ಬಿಸಿನೆಸ್ ಕೂಡ ಹೀಗೆ ಒಂದು ಬಾರಿ ಬಿದ್ದಾಗ ಮತ್ತೆ ಅದೇ ತಪ್ಪು ಮಾಡದಂತೆ ಎಚ್ಚರಿಕೆಯಿಂದ ಕಲಿತು ಈ ಹಂತಕ್ಕೆ ಬಂದಿದ್ದೇವೆ. ಬಹಳ ಕಷ್ಟಪಟ್ಟು ಬ್ರ್ಯಾಂಡ್ ಕಟ್ಟಿದ್ದೇನೆ ಇದನ್ನು ಉಳಿಸಿಕೊಂಡು ಹೋಗಬೇಕು ಅಷ್ಟೇ ಜೊತೆಗೆ ನಮ್ಮದು ಕೂಡ ಎಥಿಕ್ಸ್ ಇದೆ ಎಲ್ಲರೂ ಶುದ್ಧವಾದ ಕೊಬ್ಬರಿ ಎಣ್ಣೆ ಹಾಗೂ ಕಡೆಲೆಕಾಯಿ ಎಣ್ಣೆ ತಿನ್ನುವಂತೆ ಆಗಬೇಕು ಬಳಸುವಂತೆ ಆಗಬೇಕು ಎನ್ನುವುದಷ್ಟೇ ನಮ್ಮ ಗುರಿ.

ಈ ಸುದ್ದಿ ಓದಿ:-ಇನ್ಮುಂದೆ ಮನೆಯಲ್ಲಿ ಬೈಕ್ ಕಾರ್ ತೊಳೆದರೆ 5000 ದಂಡ ಫಿಕ್ಸ್ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

ನಾನು ಓದು ಮುಗಿಸಿ ಕೆಲಸಕ್ಕೆ ಹೋದಾಗ ದೊಡ್ಡ ಕೊಬ್ಬರಿ ಯಾವುದು ಚಿಕ್ಕದು ಯಾವುದು ಎಂದೇ ಗೊತ್ತಾಗುತ್ತಿರಲಿಲ್ಲ ಎಲ್ಲವನ್ನು ಕೂಡ ಕೆಲಸ ಮಾಡುತ್ತದೆ ಕಲಿತ್ತಿದ್ದು. ಒಬ್ಬ ವ್ಯಕ್ತಿ ತನ್ನ ಜೀವನ ಪೂರ್ತಿ ದುಡಿದು ಎಷ್ಟು ಹಣ ಗಳಿಸುತ್ತಾನೋ ಅದನ್ನು ಬಿಸಿನೆಸ್ ನಲ್ಲಿ ಒಂದೆರಡು ವರ್ಷಗಳಲ್ಲಿ ಗಳಿಸಬಹುದು. ನಾನು ಕೂಡ ಈಗ ಝೀರೋ ಇಂದ ಶುರು ಮಾಡಿ 10 ಕೋಟಿ ವ್ಯವಹಾರ ಮಾಡಿದ್ದೇನೆ.

ಈಗ ಕಡಿಮೆ ಮಾರ್ಜಿನ್ ಗೆ ಕೊಟ್ಟು ಜನರಿಗೆ ಹೆಲ್ಪ್ ಕೊಡುವ ಗುರಿ ಇಟ್ಟುಕೊಂಡಿದ್ದೇನೆ. ಎಲ್ಲರೂ ಗೆಲ್ಲಬಹುದು ಬಹಳ ಬೇಗ ಪ್ಲಾನ್ ಮಾಡಿ ನಿಮ್ಮ ಪ್ಲಾನ್ ಗೆ ತಕ್ಕ ಹಾಗೆ ನೀವು ಕಷ್ಟಪಟ್ಟು ಕೆಲಸ ಮಾಡಿ ನಾನು ದುಡ್ಡು ಹಾಕಿದ್ದೇನೆ ಓನರ್ ಕೆಲಸ ಮಾಡುವುದಿಲ್ಲ ನೋಡಿಕೊಳ್ಳುತ್ತೇನೆ ಅಷ್ಟೇ ಎಂದರೆ ಆಗುವುದಿಲ್ಲ.

ಈ ಸುದ್ದಿ ಓದಿ:-ಕೇವಲ 20 ರೂಪಾಯಿ ಕಟ್ಟಿ ಸಾಕು, 2 ಲಕ್ಷದವರೆಗೆ ವಿಮೆ ಸಿಗುತ್ತದೆ, ಕೇಂದ್ರ ಸರ್ಕಾರದಿಂದ ಬಡವರಿಗಾಗಿ ಯೋಜನೆ, ನಿಮ್ಮ ಕುಟುಂಬದ ಸುರಕ್ಷತೆಗಾಗಿ ಈ ಯೋಜನೆ ಇಂದೇ ಮಾಡಿಸಿ.!

ನಾನು ಲೋಡಿಂಗ್ ಮಾಡುವ ಕೆಲಸದಿಂದ ಹಿಡಿದು ಎಲ್ಲಾ ಕೆಲಸವನ್ನು ಮಾಡುತ್ತೇನೆ ಮಾಡಿದ್ದೇನೆ ಹಾಗಾಗಿ ಸಕ್ಸಸ್ ಆಗಲು ಆಯಿತು ಎಂದು ತಮ್ಮ ಸಾಧನೆ ಬಗ್ಗೆ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಇಂದು ಇವರ ಬ್ರಾಂಡ್ ಆನ್ಲೈನ್ ನಲ್ಲಿಯೂ ಮಾರಾಟಕ್ಕಿದೆ. ಹೆಚ್ಚಿಗೆ ಆರ್ಡರ್ ಮಾಡಿದರೆ VRL ಮೂಲಕ ಕಳುಹಿಸಿಕೊಡುತ್ತಾರೆ. ಡಿಸ್ಟ್ರಿಬ್ಯೂಟ್ ಕೂಡ ಮಾಡುತ್ತಾರೆ. ಟ್ರಾನ್ಸ್ಪೋರ್ಟ್ ಚಾರ್ಜ್ ಖರೀದಿಸುವವರೇ ‌ಭರಿಸಿದರೆ 1Kg ಶುದ್ಧ ಕೊಬ್ಬರಿಯನ್ನು 110 ರೂಪಾಯಿಯಲ್ಲಿ ಕಳುಹಿಸಿಕೊಡುತ್ತಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now