ಬೇಸಿಗೆ ಕಾಲದಲ್ಲಿ ನಾವು ಎಷ್ಟೇ ಫ್ಯಾನ್ ಗಾಳಿ ಹಾಕಿದರು ಕೂಡ ಅದು ತಂಪಾದ ಗಾಳಿಯನ್ನು ಬೀಸುವುದಿಲ್ಲ ಬದಲಿಗೆ ಬಿಸಿಯಾದ ಗಾಳಿಯೇ ಬರುತ್ತಿರುತ್ತದೆ. ಹಾಗಾದರೆ ಇಂತಹ ಸಂದರ್ಭದಲ್ಲಿ ಅದನ್ನು ಹೇಗೆ ಸರಿಪಡಿಸುವುದು. ಬಿಸಿ ಗಾಳಿ ಬೀಸುವುದನ್ನು ಹೇಗೆ ಎಸಿ ಗಾಳಿ ತರ ಬರುವ ಹಾಗೆ ಮಾಡುವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ಅದಕ್ಕೂ ಮೊದಲು ಬೇಸಿಗೆಕಾಲ ಪ್ರಾರಂಭವಾದ ತಕ್ಷಣ ಪ್ರತಿಯೊಬ್ಬ ರೂ ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಆ ಒಂದು ವಿಧಾನ ನಮಗೆ ಹೇಗೆ ಉಪಯೋಗವನ್ನು ಮಾಡಿಕೊಡುತ್ತದೆ ಎಂದು ತಿಳಿಯೋಣ.
ಮೊದಲನೆಯದಾಗಿ ಬೇಸಿಗೆಕಾಲ ಪ್ರಾರಂಭವಾದ ತಕ್ಷಣ ಪ್ರತಿಯೊಬ್ಬ ರೂ ಕೂಡ ತಾವು ಧರಿಸುವಂತಹ ಬಟ್ಟೆಯನ್ನು ತೆಳುವಾಗಿರುವಂತಹ ಅದರಲ್ಲೂ ಕಾಟನ್ ಬಟ್ಟೆಗಳನ್ನು ಹೆಚ್ಚಾಗಿ ಧರಿಸುವುದು ಒಳ್ಳೆಯದು. ಇದರಿಂದ ಶೆಕೆ ಆಗುವುದಿಲ್ಲ ಹಾಗೂ ನಾವು ಮಲಗುವಂತಹ ಹಾಸಿಗೆಯ ಮೇಲು ಕೂಡ ತೆಳುವಾಗಿರುವಂತಹ ಬಿಳಿ ಬಣ್ಣದ ಬಟ್ಟೆಗಳನ್ನು ಹಾಸಿಗೆ ಮೇಲೆ ಹಾಕುವುದರಿಂದಲೂ ಕೂಡ ನಮಗೆ ಹೆಚ್ಚು ಶೆಕೆ ಆಗುವುದನ್ನು ತಪ್ಪಿಸಬಹುದು.
ಈ ಸುದ್ದಿ ಓದಿ:- ಟೆಂಟ್ ಹೌಸ್ ಮತ್ತು ಸಪ್ಲೈಯರ್ಸ್ ಬಿಸಿನೆಸ್ ಮಾಡಿ, ಯಾವುದೇ ಟೆನ್ಷನ್ ಇಲ್ಲದೆ ದಿನಕ್ಕೆ ರೂ.30,000 ಆದಾಯ ಪಡೆಯಿರಿ.!
ಈ ಬಟ್ಟೆಗಳು ಹೆಚ್ಚಾಗಿ ಬಿಸಿಲನ್ನು ಅಬ್ಸರ್ವ್ ಮಾಡುವುದಿಲ್ಲ ಆದ್ದರಿಂದ ಇಂತಹ ಬಟ್ಟೆಗಳನ್ನು ಉಪಯೋ ಗಿಸುವುದು ಒಳ್ಳೆಯದು. ಪ್ರತಿನಿತ್ಯ ನಾವು ಮಲಗುವಂತಹ ಕೋಣೆಯಲ್ಲಿರುವ ಕಿಟಕಿಯನ್ನು ಬೆಳಿಗ್ಗೆ ಮತ್ತು ಸಂಜೆ ತೆಗೆಯುವುದು ಉತ್ತಮ ಆದರೆ ಯಾವುದೇ ಕಾರಣಕ್ಕೂ ಬಿಸಿಲಿನ ಸಮಯದಲ್ಲಿ ಮಧ್ಯಾಹ್ನದ ಹೊತ್ತು ಕಿಟಕಿಗಳನ್ನು ತೆರೆಯಬೇಡಿ ಮಧ್ಯಾಹ್ನದ ಸಮಯದಲ್ಲಿ ಕಿಟಕಿಯನ್ನು ತೆರೆಯುವುದರಿಂದ ಬಿಸಿಲಿನ ಅಂಶವೆಲ್ಲವೂ ನಾವು ಮಲಗುವ ಕೋಣೆಗೆ ಬೀಳುತ್ತದೆ ಇದರಿಂದ ಮತ್ತಷ್ಟು ಶೆಕೆ ಹೆಚ್ಚಾಗುತ್ತದೆ.
* ಬೇಸಿಗೆ ಸಮಯದಲ್ಲಿ ಆದಷ್ಟು ಕಿಟಕಿಗೆ ಹಾಕುವಂತಹ ಕರ್ಟನ್ ಗಳನ್ನು ತೆಳುವಾಗಿರುವಂತಹ ತಿಳಿ ಬಣ್ಣ ಇರುವಂತಹ ಕರ್ಟನ್ ಗಳನ್ನು ಹಾಕುವುದು ಒಳ್ಳೆಯದು. ಹೆಚ್ಚಾಗಿ ಗಾಢವಾದoತಹ ಕಪ್ಪು ಬಣ್ಣ ಇರುವಂತಹ ಕರ್ಟನ್ ಗಳನ್ನು ಹಾಕಬೇಡಿ. ಇದು ಬಿಸಿಲಿನ ಅಂಶವನ್ನು ಎಳೆದುಕೊಳ್ಳುತ್ತದೆ ಆದ್ದರಿಂದ ಇದು ಅಷ್ಟೊಂದು ಸೂಕ್ತವಲ್ಲ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈಗ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ಅನುಸರಿಸುವುದರಿಂದ ಬಿಸಿಲಿನ ಅಂಶವನ್ನು ತಡೆಗಟ್ಟಬಹುದು ಹಾಗೂ ಕೆಲವೊಂದು ಸರಿಯಾದ ವಿಧಾನಗಳನ್ನು ಅನುಸರಿಸುವುದರಿಂದ ಹೆಚ್ಚಿಗೆ ಬಿಸಿಲಿನ ಇದ್ದರೆ ಅದನ್ನು ತಡೆಯಬಹುದಾಗಿದೆ ಇದರ ಜೊತೆ ಬಹಳ ಮುಖ್ಯವಾಗಿ ಇನ್ನೂ ಕೆಲವೊಂದಷ್ಟು ಜನರಿಗೆ ಎಷ್ಟೇ ಬಿಸಿಲಿದ್ದರೂ ಮಧ್ಯಾಹ್ನದ ಸಮಯವೂ ಕೂಡ ಕಿಟಕಿಯನ್ನು ತೆರೆಯುತ್ತಾರೆ.
ಈ ಸುದ್ದಿ ಓದಿ:- ಈ ಚಿಕ್ಕ ಮಿಷಿನ್ ಇದ್ದರೆ ಸಾಕು, ಪ್ರತಿದಿನ ದುಡ್ಡೆದುಡ್ಡು. ತಿಂಗಳಿಗೆ ರೂ.60,000 ಸಂಪಾದನೆ ಮಷೀನ್ ನ ಬೆಲೆ ರೂ.20,000 ಮಾತ್ರ ಸಿಂಪಲ್ ಬಿಜಿನೆಸ್ ಐಡಿಯಾ..!
ಅಂಥವರು ಕಿಟಕಿಯನ್ನು ತೆರೆದಂತಹ ಸಂದರ್ಭದಲ್ಲಿ ಒಂದು ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಅದನ್ನು ತಣ್ಣೀರಿನಿಂದ ತೇವ ಮಾಡಿ ಆ ಒಂದು ಕಿಟಕಿಯ ಕಬ್ಬಿಣದ ಮೇಲೆ ಹಾಕಬೇಕು ಈ ರೀತಿ ಹಾಕುವುದ ರಿಂದ ಬಿಸಿಲಿನಲ್ಲಿ ಬೀಸುವಂತಹ ಗಾಳಿಯು ಬಿಸಿಯ ಅಂಶ ಇರುವುದಿಲ್ಲ ಬದಲಿಗೆ ಆ ಒಂದು ಬಟ್ಟೆಯಲ್ಲಿರುವಂತಹ ತಣ್ಣೀರಿನ ಅಂಶದಿಂದ ಬಿಸಿ ಗಾಳಿ ತಂಪಾಗಿ ಬರುತ್ತದೆ. ಈ ಒಂದು ವಿಧಾನ ತುಂಬಾ ಉತ್ತಮವಾಗಿದ್ದು ಪ್ರತಿಯೊಬ್ಬರೂ ಇದನ್ನು ಅನುಸರಿಸುವುದು ಉತ್ತಮ.
* ಇನ್ನು ಬಹಳ ಮುಖ್ಯವಾದದ್ದು ರಾತ್ರಿ ಸಮಯ ನಾವು ಎಷ್ಟೇ ಫ್ಯಾನ್ ಹಾಕಿದರೂ ಕೂಡ ಅದರಿಂದ ಬಿಸಿ ಗಾಳಿಯೇ ಬರುತ್ತಿರುತ್ತದೆ ಇಂತಹ ಸಂದರ್ಭದಲ್ಲಿ ನಾವು ಅದನ್ನು ಎಸಿ ಗಾಳಿ ಬರುವ ರೀತಿ ಹೇಗೆ ಮಾಡುವುದು ಎಂದು ಈಗ ತಿಳಿಯೋಣ ಮೊದಲು ನಿಮ್ಮ ರೂಮ್ ಕಿಟಕಿ ಎಲ್ಲವನ್ನು ಸಹ ಮುಚ್ಚಬೇಕು ಆನಂತರ ಫ್ಯಾನ್ ಕೆಳಗೆ ಒಂದು ಪಾತ್ರೆಯನ್ನು ಇಟ್ಟುಕೊಂಡು ಅದರ ಒಳಗಡೆ ಐಸ್ ಕ್ಯೂಬ್ ಅನ್ನು ಹಾಕಬೇಕು ಆನಂತರ ಅದಕ್ಕೆ ಮುಳುಗುವಷ್ಟು ಅರ್ಧದಷ್ಟು ತಣ್ಣೀರನ್ನು ಹಾಕಿ ಫ್ಯಾನ್ ಆನ್ ಮಾಡಬೇಕು ಈ ರೀತಿ ಹಾಕಿ ನಾವು ಮಲಗುವುದ ರಿಂದ ಬೀಸುವಂತಹ ಗಾಳಿ ತಂಗಾಳಿಯಾಗಿ ಬರುತ್ತದೆ ಯಾವುದೇ ರೀತಿಯ ಬಿಸಿ ಗಾಳಿ ಬರುವುದಿಲ್ಲ.