ಗಂಡ ಖರ್ಚಿಗೆ ಹಣ ನೀಡದಿದ್ದರೆ ಕೇಸ್ ಹಾಕಬಹುದ.? ಮಹಿಳೆಯರಿಗಾಗಿ ಬಂತು ಹೊಸ ರೂಲ್ಸ್.!

 

WhatsApp Group Join Now
Telegram Group Join Now

ಮದುವೆ ಎನ್ನುವುದು ಹೆಣ್ಣು ಮತ್ತು ಗಂಡಿನ ಜೀವನದ ಪ್ರಮುಖ ಘಟ್ಟ. ಯಾಕೆಂದರೆ, ಮದುವೆಯ ಹಂತ ತಲುಪುವ ದಿನದ ತನಕ ನಮ್ಮ ಸುತ್ತ ನೂರಾರು ಜನ ಬಂಧುಗಳು ಸ್ನೇಹಿತರು ನಿಂತು ನೆರವೇರಿಸುತ್ತಾರೆ. ಆದರೆ ನಂತರದ ದಿನಗಳಲ್ಲಿ ಬದುಕಬೇಕಾಗಿರುವುದು ಆ ಎರಡು ಜೀವಗಳು ಮಾತ್ರ.

ಅದರಲ್ಲೂ ಗಂಡ ಆದವನು ಮದುವೆ ಆಗುವ ಸಂದರ್ಭದಲ್ಲಿ ಹೆಂಡತಿಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ ಎನ್ನುವ ಅರ್ಥದಲ್ಲಿಯೇ ಮಾಂಗಲ್ಯ ಕಟ್ಟುವುದರಿಂದ ಆ ಹೆಣ್ಣು ನಂಬಿಕಯಿಂದ ತನ್ನ ತವರು ಮನೆ ಬಿಟ್ಟು ಹೊಸ ಮನೆ ಕಟ್ಟಲು ತಯಾರಾಗುತ್ತಾಳೆ. ಇಂತಹ ಸಂದರ್ಭದಲ್ಲಿ ಹೆಂಡತಿ ಆದವಳಿಗೆ ಗಂಡನು ಹಣಕಾಸಿನ ವಿಚಾರ ಸೇರಿದಂತೆ ಬದುಕಿನ ಎಲ್ಲಾ ವಿಚಾರದಲ್ಲಿಯೂ ಸಂಗಾತಿ ಆಗಿರಬೇಕು.

ಆದರೆ ಈ ರೀತಿ ಮದುವೆ ಆದ ಎಲ್ಲರೂ ಕೂಡ ಶಾಸ್ತ್ರಗಳ ಪ್ರಕಾರ ಮತ್ತು ಮಂತ್ರಗಳಲ್ಲಿರುವ ಅರ್ಥದ ಪ್ರಕಾರ ನಡೆದುಕೊಂಡು ಬದುಕಿದ್ದರೆ ಇಂದು ವಿವಾಹ ವಿ’ಚ್ಛೇ’ದ’ನದ ಕೇಸ್ ಗಳು ಆಗಲಿ ಅಥವಾ ವರದಕ್ಷಿಣೆ ಕಿ’ರು’ಕು’ಳ’ದ ಕೇಸ್ ಗಳು ಆಗಲಿ ಅಥವಾ ಕೌಟುಂಬಿಕ ದೌ’ರ್ಜ’ನ್ಯದ ಕೇಸ್ ಗಳು ಆಗಲಿ ನ್ಯಾಯಾಲಯದಲ್ಲಿ ಇರುತ್ತಿರಲಿಲ್ಲ.

ಕಾಲಕ್ರಮೇಣ ಮನುಷ್ಯರು ಮದುವೆ ಎನ್ನುವ ಬಂಧದ ಅರ್ಥವನ್ನೇ ಮರೆತ ಕಾರಣ ಈಗ ಕಾನೂನು ಕೂಡ ಆ ವಿಚಾರವಾಗಿ ಜವಾಬ್ದಾರಿ ತೆಗೆದುಕೊಂಡು ಮದುವೆ ಆದ ಮೇಲೆ ನನ್ನ ತಂದೆ ತಾಯಿ ಮನೆ ಬಿಟ್ಟು ಗಂಡನ ಮನೆಯನ್ನು ನಂಬಿಕೊಂಡು ಬಂದ ಹೆಣ್ಣು ಮಗಳಿಗೆ ನೆರವಾಗುವ ಸಲುವಾಗಿ ಅನೇಕ ನಿಯಮಗಳನ್ನು ತಂದಿದೆ.

ಹಿಂದೂ ವಿವಾಹ ಕಾಯ್ದೆ 125 ರ ಸಹಾಯದಿಂದ ಗಂಡ ಹಣಕಾಸಿನ ವಿಚಾರವಾಗಿ ಸಹಾಯ ಮಾಡದೆ ಇದ್ದ ಪಕ್ಷದಲ್ಲಿ ಕೇಸ್ ಹಾಕಿ ನ್ಯಾಯ ಪಡೆಯಬಹುದು. ಯಾವ ಯಾವ ಸಮಯದಲ್ಲಿ ಈ ರೀತಿ ಗಂಡನ ಮೇಲೆ ಕೇಸ್ ದಾಖಲಿಸಬಹುದು ಎನ್ನುವ ವಿಚಾರವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ವಿವಾಹವಾಗಿರುವ ಮಹಿಳೆಯು ಸಂಪರ್ಣವಾಗಿ ತನ್ನ ಎಲ್ಲ ಆಗುಹೋಗುಗಳಿಗೂ ಗಂಡನನ್ನೇ ಅವಲಂಬಿಸಿರುತ್ತಾರೆ. ಆಕೆಯ ಜೀವನ ನಿರ್ವಹಣೆಗೆ ಹಣದ ಅವಶ್ಯಕತೆ ಇರುತ್ತದೆ. ದುಡಿಯುವ ವ್ಯಕ್ತಿ ಗಂಡನೇ ಆಗಿದ್ದರೂ ಕೂಡ ಹೆಂಡತಿಯನ್ನು ಜವಾಬ್ದಾರಿ ಎಂದು ಹೇಳಿ ಒಪ್ಪಿ ಮದುವೆ ಆಗಿರುವ ಕಾರಣ ಆಕೆಯ ಖರ್ಚಿಗೂ ಕೂಡ ತಾನು ದುಡಿದ ಹಣವನ್ನು ಕೊಡಲೇಬೇಕು, ಇದು ಆತನ ಕರ್ತವ್ಯ.

ಒಂದು ವೇಳೆ ಈ ರೀತಿ ಹಣ ಕೊಡದೆ ಇದ್ದ ಪಕ್ಷದಲ್ಲಿ ಪತಿಯಿಂದ ಆರ್ಥಿಕ ನೆರವು ದೊರೆಯುತ್ತಿಲ್ಲ ಎಂದು ದೂರು ದಾಖಲಿಸಬಹುದು. ಒಂದು ವೇಳೆ ಆಕೆಯು ಪತಿಯಿಂದ ದೂರ ಉಳಿದಿದ್ದರೂ ಆ ಸಮಯದಲ್ಲೂ ಕೂಡ ಆಕೆಗೆ ಪತಿಯೇ ಜೀವನ ನಿರ್ವಹಣೆಗೆ ಹಣ ನೀಡಬೇಕು.

ಎಲ್ಲರಿಗೂ ತಿಳಿದಿರುವಂತೆ ವಿಚ್ಛೇದಂತ ಕೇಸ್ ಗಳಲ್ಲೂ ಕೂಡ ಈ ರೀತಿ ಪತ್ನಿ ಆದವಳಿಗೆ ಪತಿ ವಿಚ್ಛೇದನ ಕೊಟ್ಟ ಮೇಲೆ ಜೀವನಾಂಶ ಕೊಡಲೇಬೇಕು. ಮುಂದಿನ ಅವಳ ಬದುಕಿಗೆ ಜೀವನಾಂಶದ ರೂಪದಲ್ಲಿ ಹಣ ನೀಡುವ ಮೂಲಕ ನೆರವಾಗಲೇಬೇಕು. ಇಲ್ಲವಾದಲ್ಲಿ ಆಕೆ ಕೋರ್ಟ್ ಅಲ್ಲಿ ಧಾವೆ ಮೂಲಕ ನ್ಯಾಯ ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಲಿವಿಂಗ್ ಇನ್ ರಿಲೇಶನ್ಶಿಪ್ ಹೆಚ್ಚಾಗಿರುವುದರಿಂದ ಅಲ್ಲೂ ನಂಬಿಕೆಯಿಂದ ಇಬ್ಬರೂ ಕೂಡ ಒಟ್ಟಿಗೆ ಬದುಕುವುದರಿಂದ ರಿಲೇಶನ್ಶಿಪ್ ಅಲ್ಲಿ ಇದ್ದಾಗ ಆತ ಹಣದ ಹೊರೆ ಹಂಚಿಕೊಳ್ಳದೆ ಇದ್ದಲ್ಲಿ ಆಗಲೂ ಆಕೆ ಹಣಕಾಸಿನ ನೆರವಿಗಾಗಿ ದೂರು ದಾಖಲಿಸಬಹುದು. ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಹತ್ತಿರದ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now