9 ದಿನ ಹೀಗೆ ರಾಯರನ್ನು ಪ್ರಾರ್ಥಿಸಿದರೆ ನೀವು ಅಂದುಕೊಂಡ ಕೆಲಸ ಫಲಿಸುತ್ತದೆ 100% ಸತ್ಯ. ನಂಬಿ ಕೆಟ್ಟವರಿಲ್ಲವೋ ರಾಯರ.!

 

ನಂಬಿ ಕೆಟ್ಟವರಿಲ್ಲ ಗುರುರಾಯರನ್ನು ಎನ್ನುವ ಮಾತು ಜಗಜನಿತವಾಗಿದೆ. ಮಂತ್ರಾಲಯದಲ್ಲಿ ಬೃಂದಾವನಸ್ಥರಾಗಿ ಕುಳಿತು ತನ್ನನ್ನೇ ನಂಬಿ ಬರುವ ಭಕ್ತರಿಗೆ ಹಾಗೂ ಅವರಿಗೆ ನಿಷ್ಠೆಯಿಂದ ನಡೆದುಕೊಂಡ ಭಕ್ತರ ಕೂಗಿಗೆ ಓಗೊಟ್ಟು ಅವರನ್ನು ಕಾಯುತ್ತಿದ್ದಾರೆ ರಾಯರು. ರಾಯರ ಪವಾಡಗಳು ಒಂದೇ ಎರಡೇ ಇದುವರೆಗೆ ನಾವು ನಮ್ಮ ಸ್ನೇಹಿತರಿಂದ ಹಾಗೂ ಪರಿಚಯಿಸ್ಥರಿಂದ ರಾಯರ ಪವಾಡ ಅವರ ಜೀವನದಲ್ಲಿ ನಡೆದಿರುವ ಅನೇಕ ಉದಾಹರಣೆಗಳ ಬಗ್ಗೆ ಕೇಳಿದ್ದೇವೆ.

ಕಲಿಯುಗದ ಸಾಕ್ಷಾತ್ ದೈವ ಎನಿಸಿರುವ ಗುರುರಾಯರು ಭಕ್ತರ ಬೇಡಿಕೆಗೆ ಮೊದಲು ಒಲಿಯುವ ದೈವ. ಇವರ ಕೃಪಾ ಕಟಾಕ್ಷ ಸಿಗಬೇಕು ಎಂದರೆ ಇವರಿಗೆ ಮುಡುಪು ಕಟ್ಟಿ ಪ್ರಾರ್ಥಿಸಬೇಕು. ನೀವೇನಾದರೂ ಈಗ ನಾವು ಹೇಳುವ ಈ ವಿಧಾನದಲ್ಲಿ ಗುರು ರಾಘವೇಂದ್ರರನ್ನು ನೆನೆದು ಪೂಜೆ ಮಾಡಿದರೆ ರಾಯರ ಆಶೀರ್ವಾದದಿಂದ ನಿಮ್ಮ ಬದುಕು ಬದಲಾಗಿ ಹೋಗುತ್ತದೆ.

ಮನುಷ್ಯನಿಗೆ ಕಷ್ಟ ಇರಲಿ ಸುಖ ಇರಲಿ ಭಗವಂತನನ್ನು ಸ್ಮರಿಸುವುದನ್ನು ಮಾತ್ರ ಮರೆಯಬಾರದು. ಆದರೆ ಹೆಚ್ಚಿನ ಜನರಿಗೆ ಕಷ್ಟ ಬಂದಾಗ ಮಾತ್ರ ದೇವರ ನೆನಪಾಗುತ್ತದೆ ಕಷ್ಟಗಳು ಎಂದರೆ ಆರ್ಥಿಕ ಕಷ್ಟಗಳು ಮಾತ್ರವಲ್ಲ ಆರೋಗ್ಯದ ಸಮಸ್ಯೆಗಳು ಮಾನಸಿಕ ಒತ್ತಡಗಳು ಇನ್ನು ಮುಂತಾದ ಅನೇಕ ಬಗೆಯ ನೋವುಗಳು ಮನುಷ್ಯನನ್ನು ಬಾಧಿಸುತ್ತವೆ.

ಒಬ್ಬ ಮನುಷ್ಯ ಎಂದು ಹುಟ್ಟಿದ ಮೇಲೆ ಆತನಿಗೆ ಕುಟುಂಬಕ್ಕೆ ಸಂಬಂಧಪಟ್ಟ ಹಾಗೆ ಉದ್ಯೋಗಕ್ಕೆ ಸಂಬಂಧ ಪಟ್ಟ ಹಾಗೆ ವೃತ್ತಿ, ಸಂತಾನ, ಆರೋಗ್ಯ, ಹಣಕಾಸು, ವ್ಯವಹಾರ, ಸಾಧನೆ ಇನ್ನೂ ಮುಂತಾದ ಎಲ್ಲಾ ವಿಭಾಗದಲ್ಲೂ ಕೂಡ ಸಮಸ್ಯೆಗಳು ಇದ್ದೇ ಇರುತ್ತವೆ. ಇವುಗಳನ್ನು ಪರಿಹಾರ ಮಾಡಿಕೊಳ್ಳುವ ಶಕ್ತಿ ಗುರುರಾಯರು ನಮ್ಮ ಜೊತೆ ಇದ್ದಾಗ ಇಮ್ಮಡಿಕೊಳ್ಳುತ್ತದೆ.

ಹಾಗಾಗಿ ಇಂತಹ ಕಷ್ಟಗಳು ಬದುಕಿನಲ್ಲಿ ಬಂದಿದ್ದರೆ ಗುರುರಾಯಗಳನ್ನು ಪ್ರಾರ್ಥಿಸಿ ಅವರ ಕೃಪೆಗೆ ಪಾತ್ರರಾಗಿ ಅವರ ಆಶೀರ್ವಾದದಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಗುರುರಾಯರಿಗೆ ಮುಡುಪು ಕಟ್ಟಿ ಪೂಜೆ ಮಾಡುತ್ತಾರೆ. ಈ ರೀತಿ ಮುಡುಪು ಕಟ್ಟಿ ಪೂಜೆ ಮಾಡಬೇಕು ಎಂದರೆ ಅದರದ್ದೇ ಆದ ಆಚರಣೆ ಇದೆ, ಅದರ ಬಗ್ಗೆ ತಿಳಿಸಿಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ಒಂದು ಗುರುವಾರ ನೀವು ಮನೆಯನ್ನು ಶುದ್ಧವಾಗಿಟ್ಟುಕೊಂಡು ನೀವು ಸಹ ಸ್ನಾನ ಮಾಡಿ ಗುರುರಾಯರ ಫೋಟೋ ಮನೆಯಲ್ಲಿ ಇದ್ದರೆ ಹೂವು ಗಂಧ ಅಕ್ಷತೆ ಇಟ್ಟು ಪೂಜೆ ಮಾಡಿ ಹಾಗೂ ಮನೆಯಲ್ಲಿರುವ ಎಲ್ಲ ದೇವರಿಗೂ ಪೂಜೆ ಮಾಡಿ ಇದಾದ ಬಳಿಕ ಗುರುರಾಯರಿಗೆ ನೈವೇದ್ಯವನ್ನು ಕೂಡ ಅರ್ಪಿಸಿ ಮತ್ತು ಆ ಸಮಯದಲ್ಲಿ ಒಂದು ಅರಿಶಿಣದ ಬಟ್ಟೆಯಲ್ಲಿ ಅಥವಾ ಹತ್ತಿ ಬಟ್ಟೆಗೆ ಒದ್ದೆ ಮಾಡಿ ಅರಿಶಿಣ ಹಚ್ಚಿ ಅದನ್ನು ಒಂದು ತಟ್ಟೆಯ ಮೇಲೆ ಹರಡಿ.

ಈಗ ಅದರ ಮೇಲೆ 5, 2 ಮತ್ತು 1ರೂ. ನಾಣ್ಯವನ್ನು ಇಡಿ. ಆ ನಾಣ್ಯಗಳಿಗೂ ಕೂಡ ಅರಿಶಿಣ ಕುಂಕುಮ ಗಂಧ ಅಕ್ಷತೆ ಇಟ್ಟು ಹೂವು ಇಟ್ಟು ಪೂಜೆ ಮಾಡಿ ನಿಮ್ಮ ಸಂಕಲ್ಪವನ್ನು ಹೇಳಿಕೊಳ್ಳಿ. ಬಳಿಕ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಎನ್ನುವ ಅಷ್ಟಾಕ್ಷರ ಮಂತ್ರವನ್ನು 108 ಬಾರಿ ಪಠಿಸಿ. ಆ ದಿನ ಪೂರ್ತಿ ನಾಣ್ಯಗಳು ರಾಯರ ಬಳಿಯೇ ಇರಲಿ.

ರಾತ್ರಿ ಮಲಗುವ ಮುನ್ನ ಮತ್ತೊಮ್ಮೆ ಕೈ ಕಾಲು ಮುಖ ಕಳೆದುಕೊಂಡು ರಾಯರ ಬಳಿ ಕುಳಿತು ಮತ್ತೊಮ್ಮೆ ಪ್ರಾರ್ಥಿಸಿ ಆ ನಾಣ್ಯಗಳನ್ನು ತೆಗೆದುಕೊಂಡು ನಿಮ್ಮ ಹಣೆಗೆ ಒತ್ತಿಕೊಂಡು ಒಂದು ಕಡೆ ಇಡಿ. 9 ದಿನಗಳ ವರೆಗೂ ಕೂಡ ಇದನ್ನು ಮುಂದುವರಿಸಿ ಈ ವ್ರತ ಮುಗಿಯುವವರೆಗೂ ದೇವರ ಮುಂದೆ ದೀಪ ಉರಿಯುತ್ತಿರಬೇಕು.

9 ದಿನಗಳ ವ್ರತ ಮುಗಿದ ಬಳಿಕ 10ನೇ ದಿನ ಈ ಹಣವನ್ನು ಸಂಗ್ರಹಿಸಿ ಅದರಿಂದ ಅಸಹಾಯಕರಿಗೆ ಅಥವಾ ಮಕ್ಕಳಿಗೆ ಅಥವಾ ವೃದ್ಧರಿಗೆ ಸಹಾಯವಾಗುವಂತಹ ಏನಾದರೂ ಖರೀದಿಸಿ ಕೊಡಿ ಈ ರೀತಿ ಮಾಡುವುದರಿಂದ ಗುರುಗಳು ಪ್ರಸನ್ನರಾಗುತ್ತಾರೆ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ತೋರುತ್ತಾರೆ.

Leave a Comment

%d bloggers like this: