ಮೊದಲೆಲ್ಲ ಬ್ಯಾಂಕ್ ಲೋನ್ (bank loan) ಪಡೆದುಕೊಳ್ಳಬೇಕು ಎಂದರೆ ಅದು ದೀರ್ಘಕಾಲದ ಪ್ರಕ್ರಿಯೆ ಆಗಿತ್ತು. ಮೊದಲಿಗೆ ಸಾಲ ಪಡೆಯಲು ಇಚ್ಚಿಸುವ ವ್ಯಕ್ತಿ ಅದಕ್ಕಾಗಿ ಕೇಳುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಿ ಅದು ಪರಿಶೀಲನೆ ಆಗಿ ಅನುಮೋದನೆ ಆಗುವವರೆಗೂ ಕೂಡ ಕಾಯಬೇಕಿತ್ತು.
ಸದ್ಯಕ್ಕೆ ಆನ್ಲೈನ್ ನಲ್ಲಿ (0nline) ಎಲ್ಲ ಪ್ರಕ್ರಿಯೆ ನಡೆಯುವುದರಿಂದ ಮೊದಲಿಗಿಂತ ವೇಗವಾಗಿ ಪ್ರಕ್ರಿಯೆ ನಡೆಯುತ್ತಿದೆ ಎನ್ನಬಹುದು. ಆದರೆ ದಿಢೀರ್ ಆಗಿ ಸುಲಭಕ್ಕೆ ಸಾಲ (instant loan) ಸಿಗುವುದು ಕಷ್ಟವೇ. ಈಗ ಅದಕ್ಕೂ ಕೂಡ ಅವಕಾಶ ಸಿಕ್ಕಿದೆ. ನೀವು ನಿಮ್ಮ ಸಿಬಿಲ್ ಸ್ಕೋರ್ (Cibil score) ಚೆನ್ನಾಗಿ ಇಟ್ಟುಕೊಂಡಿದ್ದು, ನಿಮಗೆ ಪ್ರತಿ ತಿಂಗಳು ಒಂದು ನಿಶ್ಚಿತವಾದ ಆದಾಯ ಖಂಡಿತ ಇದೆ ಎನ್ನುವುದಾದರೆ ನೀವು ಮೂರೇ ನಿಮಿಷಗಳಲ್ಲಿ 3 ಲಕ್ಷ ಸಾಲಗಳನ್ನು ಯಾವುದೇ ಹೆಚ್ಚಿನ ಕಂಡೀಶನ್ ಇಲ್ಲದೆ ಈ ಸಂಸ್ಥೆಯಿಂದ ಪಡೆಯಬಹುದು. ಇದರ ಕುರಿತು ವಿವರ ಹೀಗಿದೆ ನೋಡಿ.
ಸಾಲ ಪಡೆದುಕೊಳ್ಳುವ ವಿಧಾನ:-
* Prefr ಎನ್ನುವಂತಹ ವೆಬ್ಸೈಟ್ ಮೂಲಕ ನೀವು ಈ ಹಣವನ್ನು ಯಾವುದೇ ಬೆನಿಫಿಕೆಶನ್ ಇಲ್ಲದೆ ಮ್ಯಾಕ್ಸಿಮಮ್ 24 ಗಂಟೆ ಒಳಗೆ ನೀವು ಸಾಲ ಪಡೆದುಕೊಳ್ಳಬಹುದು.
* ನೀವು ಮೊದಲಿಗೆ ಈ ವೆಬ್ಸೈಟ್ಗೆ ತಲುಪಿ ನಿಮ್ಮ ಫೋನ್ ನಂಬರ್ ಅಪ್ಲೋಡ್ ಮಾಡಬೇಕು. ಬಳಿಕ ಕೇಳಲಾಗುವ ಕೆಲವು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. * ನಿಮ್ಮ ಸಾಲದ ಅರ್ಹತೆ ಎಷ್ಟು ಎನ್ನುವುದು ನಿರ್ಧಾರವಾಗಿರುತ್ತದೆ ಅದನ್ನು ತಿಳಿದುಕೊಳ್ಳಬೇಕು. ನಿಮಗೆ ಎಷ್ಟು ಸಾಲ ಬೇಕು ಎನ್ನುವುದನ್ನು ನಿರ್ಧರಿಸಿ ಮನವಿ ಸಲ್ಲಿಸಬೇಕು.
* ಆಗ ನಿಮಗೆ ಸಿಗುವ ಸಾಲದ ಮೊತ್ತ ಮತ್ತು ಅದನ್ನು ಹೇಗೆ ನೀವು ಪ್ರತಿ ತಿಂಗಳು ಹಿಂತಿರುಗಿಸಬೇಕು ಎನ್ನುವುದರ ಪೂರ್ತಿ ವಿವರ ಬರುತ್ತದೆ ಅದನ್ನು ಓದಿಕೊಂಡು ಎಲ್ಲಾ ನಿಯಮ ಹಾಗೂ ನಿಬಂಧನೆಗಳಿಗೆ ಒಪ್ಪಿಕೊಂಡರೆ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
* ಆದರೆ ಈಗಿನ ಕಾಲದಲ್ಲಿ ಕೆಲ ಸಂಸ್ಥೆಗಳು ಈ ರೀತಿ ವಂಚನೆ ಮಾಡುವ ಹುನ್ನಾರ ಕೂಡ ಹೂಡಿರುವುದರಿಂದ ಅವುಗಳ ಸತ್ಯಾನು ಸತ್ಯದ ಬಗ್ಗೆ ಮೊದಲಿಗೆ ಹೆಚ್ಚಿನ ವಿವರ ಪಡೆದು ಮುಂದಿನ ಹಂತಕ್ಕೆ ಹೋಗುವುದು ಉತ್ತಮ.
ಬೇಕಾಗುವ ದಾಖಲೆಗಳು:-
* ಪಾನ್ ಕಾರ್ಡ್
* ಆಧಾರ್ ಕಾರ್ಡ್
* ಸ್ಯಾಲರಿ ಪಡೆದುಕೊಳ್ಳುತ್ತಿರುವ ವ್ಯಕ್ತಿ ಈ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಾದರೆ ಅವರ Salary slip
* self employed ಈ ಯೋಜನೆಯಲ್ಲಿ ಲೋನ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಇತ್ತೀಚಿಗಷ್ಟೇ ಇರುವಂತಹ trade licence
* ಸೆಲ್ಫಿ ಫೋಟೋ
* ಕಳೆದ 3 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್
ಈ ವೆಬ್ಸೈಟ್ ಮೂಲಕ ಸಾಲ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು:-
* ಭಾರತೀಯ ನಾಗರಿಕನಾಗಿರಬೇಕು
* ಕನಿಷ್ಠ 22 ವರ್ಷ ವಯಸ್ಸಿನವರಾಗಿರಬೇಕು
* ಸೆಲ್ಫ್ ಎಂಪ್ಲಾಯ್ಡ್ ಆಗಿರುವಂತಹ ವ್ಯಕ್ತಿಗಳು ಮತ್ತು ಸ್ವಂತ ಉದ್ಯೋಗ ಮಾಡುತ್ತಿರುವ ವ್ಯಕ್ತಿಗಳು ಕೂಡ ಅರ್ಜಿ ಸಲ್ಲಿಸಬಹುದು
* ಸಿಬಿಲ್ ಸ್ಕೋರ್ ಚೆನ್ನಾಗಿದ್ದಷ್ಟು ಉತ್ತಮ. ಸಿಬಿಲ್ ಸ್ಕೋರ್ ಕನಿಷ್ಠ 720 ಅಂಕಗಳಿಗಿಂತ ಹೆಚ್ಚಿರಬೇಕು.
* 3 ತಿಂಗಳುಗಳ ಬ್ಯಾಂಕ್ ಸ್ಟೇಟ್ ಮೆಂಟ್ ದಾಖಲೆ ನೀಡಬೇಕು.
* ಖಾತೆಯಲ್ಲಿ ಕನಿಷ್ಠ 5,000ಗಳ ಮಿನಿಮಮ್ ಬ್ಯಾಲೆನ್ಸ್ ಅನ್ನು ಹೊಂದಿರಬೇಕು.
* ಸ್ಯಾಲರಿ ಪಡೆದುಕೊಳ್ಳುತ್ತಿರುವಂತಹ ವ್ಯಕ್ತಿಗಳಿಗೆ ಪ್ರತಿ ತಿಂಗಳು ಕನಿಷ್ಟ 18,000 ರೂ. ಸಂಬಳ ಇರಬೇಕು.