ರೈತನಿಗೆ ಆತನು ಕೃಷಿ ಮಾಡುವ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಅನೇಕ ಕಾರಣಕ್ಕಾಗಿ ಅವಶ್ಯಕತೆ ಇರುತ್ತದೆ. ಕೆಲವು ಸಮಯದಲ್ಲಿ ಆತ ಅದನ್ನು ಕಳೆದುಕೊಂಡಿರುತ್ತಾನೆ ಮತ್ತು ಕೆಲವು ಸಮಯಗಳಲ್ಲಿ ಆತನ ನೂರು ವರ್ಷದ ಹಳೆಯದಾದ ದಾಖಲೆಗಳನ್ನು ತೆಗೆದು ನೋಡಬೇಕಾದ ಸಂದರ್ಭ ಇರುತ್ತದೆ.
ಇಂತಹ ಸಮಯದಲ್ಲಿ ಮನೆಯಲ್ಲಿ ಹಳೆಯ ದಾಖಲೆಗಳು ಇಲ್ಲವಾದಲ್ಲಿ ಅದಕ್ಕಾಗಿ ನಾಡಕಚೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು ಇದಕ್ಕಾಗಿ ರೈತನ ತಾಲೂಕು ಕೇಂದ್ರಗಳಿಗೆ ಹೋಗಲು ಒಂದು ದಿನವನ್ನೇ ಮೀಸಲಿಡಬೇಕು ಮತ್ತು ಒಂದೇ ದಿನಕ್ಕೆ ಕೂಡ ಆ ಕಾರ್ಯಗಳು ಆಗುವುದಿಲ್ಲ ರೈತನು ಕಚೇರಿಗಳಿಗೆ ಅಲೆಯಬೇಕು ಇದರಿಂದ ರೈತನ ಸಮಯದ ಜೊತೆ ಹಣವು ಕೂಡಾ ವ್ಯರ್ಥವಾಗುತ್ತದೆ.
ಈಗ ಎಲ್ಲಾ ಕ್ಷೇತ್ರದಲ್ಲೂ ಕೂಡ ತಂತ್ರಜ್ಞಾನದ ಬಳಕೆ ಆಗುತ್ತಿರುವುದರಿಂದ ಟೆಕ್ನಾಲಜಿ ಸಹಾಯದಿಂದ ಈ ಸಮಸ್ಯೆಯನ್ನು ಪರಿಹಾರ ಮಾಡಲು ಹೊಸ ಮಾರ್ಗ ಕಂಡು ಹಿಡಿಯಲಾಗಿದೆ. ಕರ್ನಾಟಕ ಸರ್ಕಾರವು ಕೂಡ ಕಂದಾಯ ಇಲಾಖೆ ಸಂಬಂಧಿಸಿದ ಹಾಗೆ ಒಂದು ತಂತ್ರಾಂಶವನ್ನು ಒಳಗೊಂಡಿತ್ತು.
ಈ ವೆಬ್ಸೈಟ್ಗೆ ಭೇಟಿ ಕೊಡುವ ಮೂಲಕ ನೀವು ನಿಮ್ಮ ಜಮೀನಿನ ದಾಖಲೆಗಳನ್ನು ಪರಿಶೀಲನೆ ಮಾಡಬಹುದು ಮತ್ತು ಅಗತ್ಯ ಇದ್ದರೆ ಅದರ ಪ್ರಿಂಟ್ ಔಟ್ ಕೂಡ ಪಡೆದುಕೊಳ್ಳಬಹುದು. ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲವಾಗುವ ಮಾಹಿತಿ ಇದಾಗಿತ್ತು ತಪ್ಪದೆ ಇದನ್ನು ಹೆಚ್ಚಿನ ರೈತರ ಜೊತೆ ಶೇರ್ ಮಾಡಿ.
* landrecords.karnataka.gov.in ಲಿಂಕ್ ಕ್ಲಿಕ್ ಮಾಡಿದರೆ ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಅಧಿಕೃತ ಮುಖಪುಟ ಓಪನ್ ಆಗುತ್ತದೆ.
* View RTC and MR ಮೇಲೆ ಕ್ಲಿಕ್ ಮಾಡಿದರೆ view current year RTC, old year RTC and MR, Mutation Status ಎಂದು ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
* ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿRTC, Mutation Status, Khata Extract ಮತ್ತು Survey documents ಎನ್ನುವ ಆಪ್ಷನ್ಗಳು ಕಾಣುತ್ತವೆ ಅದರಲ್ಲಿ Survey documents ಆಪ್ಷನ್ ಸೆಲೆಕ್ಟ್ ಮಾಡಿ.
* Karnataka land records Image retrieval system ಎನ್ನುವ ಪೇಜ್ ಕಾಣುತ್ತದೆ ಆದರೆ ನಿಮ್ಮ ಮೊಬೈಲ್ ಸಂಖ್ಯೆ ಕೇಳಲಾಗಿರುತ್ತದ, ನಮೂದಿಸಿ ಮತ್ತು ಅಲ್ಲಿರುವ Captcha code ನಮೂದಿಸಿ, generate OTP ಮೇಲೆ ಕ್ಲಿಕ್ ಮಾಡಿ, ಆ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಆ OTP ಯನ್ನು ಎಂಟ್ರಿ ಮಾಡಿ login ಆಗಿ.
* Select Survey number ಎನ್ನುವ ಪೇಜ್ ಕಾಣುತ್ತದೆ ಅದರಲ್ಲಿ ಮೊದಲಿಗೆ ನಿಮ್ಮ District, Thaluk, Hobli, Village ಸೆಲೆಕ್ಟ್ ಮಾಡಿ Survey Number ಟೈಪ್ ಮಾಡಿಕೊಂಡು Search ಕೊಡಿ.
* ಆಗ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಹಿಸ್ಸಾ ಸರ್ವೆ ಟಿಪ್ಪಣಿ ಪುಸ್ತಕ, ಮೂಲಸರ್ವೇ ಪ್ರತಿ ಪುಸ್ತಕ, ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಎರಡನೇ ರಿಕ್ಲಾಸಿಫಿಕೇಶನ್ ಪ್ರತಿ ಪುಸ್ತಕ, ರೀ ಸರ್ವೆ ಟಿಪ್ಪಣಿ ಪುಸ್ತಕ ಹಿಸ್ಸ ಸರ್ವೆ ಪಕ್ಕ ಪುಸ್ತಕ, ಎರಡನೇ ರಿಕ್ಲಾಸಿಫಿಕೇಶನ್ ಟಿಪ್ಪಣಿ ಪುಸ್ತಕ, ಖಾಯಂ ದರ ತಃಖ್ತೆ ಸೇರಿದಂತೆ ಹತ್ತಾರು ಆಪ್ಷನ್ಗಳಿರುತ್ತವೆ, ಇದರಲ್ಲಿ ನಿಮಗೆ ಯಾವ ದಾಖಲೆ ಬೇಕು ಅದರ ನೇರದಲ್ಲಿ ಇರುವ view document ಮೇಲೆ ಕ್ಲಿಕ್ ಮಾಡಿ.
* ಸ್ಕ್ರೀನ್ ಮೇಲೆ ನಿಮ್ಮ ಜಮೀನಿನ ದಾಖಲೆಯ ಸ್ಕ್ಯಾನ್ಡ್ ಕಾಪಿ ಬರುತ್ತದೆ. ಅದರಲ್ಲಿ ನಿಮ್ಮ ಯಾವ ದಾಖಲೆ ಬೇಕು ಎಲ್ಲವನ್ನು ವೀಕ್ಷಿಸಬಹುದು ಮತ್ತು ಅವಶ್ಯಕತೆ ಇದ್ದರೆ ಪ್ರಿಂಟ್ ಔಟ್ ಕೂಡ ಪಡೆದುಕೊಳ್ಳಬಹುದು.