ಹೈನುಗಾರಿಕೆ ಎಷ್ಟು ಲಾಭದಾಯಕ ಎಂದರೆ ಸ್ವಂತವಾಗಿ ಸ್ವಲ್ಪ ಜಾಗವಿದ್ದರೆ ಸಾಕು. ಒಬ್ಬ ವ್ಯಕ್ತಿ ಯಾರ ಬಳಿಯೂ ಕೆಲಸಕ್ಕೆ ಹೋಗದೆ ಒಬ್ಬ ಸ್ವತಂತ್ರ್ಯ ಉದ್ಯಮಿ ಆಗಿ ಬಿಡಬಹುದು ಅಷ್ಟು ಆದಾಯ ತಂದು ಕೊಡುವ ಹಾಗೂ ನಿಶ್ಚಿಂತೆಯ ಕೆಲಸ ಆಗಿದೆ. ಕಾಮಧೇನು ನಂಬಿ ಯಾರೂ ಕೂಡ ಕೆಟ್ಟವರಿಲ್ಲ ಆದರೆ ಅಷ್ಟೇ ಸೋಂಬೇರಿ ತನವನ್ನು ಬಿಟ್ಟು ಶ್ರಮದಿಂದ ಕೆಲಸ ಮಾಡಬೇಕು.
ಆದರೆ ಹೈನುಗಾರಿಕೆ ಮಾಡುವಾಗ ದಿನ ಪೂರ್ತಿ ಇದೇ ರೀತಿ ದುಡಿಯಬೇಕೆಂಬ ಅವಶ್ಯಕತೆ ಇಲ್ಲ ದಿನದಲ್ಲಿ ಬೆಳಗ್ಗೆ ಹಾಗೂ ಸಂಜೆ ಸ್ವಲ್ಪ ಸಮಯ ಕೆಲಸ ಮಾಡಿ ದಿನಪೂರ್ತಿ ನಮ್ಮ ಹಸುಗಳ ಮೇಲೆ ನಿಗಾ ವಹಿಸಿದರೆ ಅವುಗಳ ಆರೋಗ್ಯ ರಕ್ಷಣೆ ಮಾಡಿದರೆ ಸಾಕು ನಮ್ಮ ಮನೆ ಸದಸ್ಯರಂತೆ ಹೊಂದುಕೊಳ್ಳುವ ಹಸುಗಳ ಜೊತೆ ಭಾವನಾತ್ಮಕವಾದ ಸಂಬಂಧ ಬೆಳೆಸಿಕೊಳ್ಳುತ್ತಾ ಬದುಕಿಬಿಡಬಹುದು.
ಇದೇ ರೀತಿ ಎರಡು ಹಸುಗಳಿಂದ ಆರಂಭಿಸಿ ಇಂದು ದಿನಕ್ಕೆ 300 ರಿಂದ 400 ಲೀಟರ್ ಹಾಲು ಇಳುವರಿ ಪಡೆಯುತ್ತಿರುವ ರೈತರೊಬ್ಬರ ಅನುಭವದ ಮಾತುಗಳ ಬಗ್ಗೆ ಈ ಲೇಖನದಲ್ಲಿ ವಿವರಣೆ ಕೊಡುತ್ತಿದ್ದೇವೆ. ಅಣ್ಣ-ತಮ್ಮಂದಿರು ಸೇರಿ ಹೈನುಗಾರಿಕೆ ಮಾಡೋಣ ಎಂದು ನಿರ್ಧರಿಸಿ ಎರಡು ಹಸುಗಳನ್ನು ಮನೆಗೆ ತಂದ ಇವರು ಬಳಿಕ ಇದರಿಂದ ಸಿಗುವ ಲಾಭವನ್ನು ನೋಡಿ ಇದನ್ನು ಪರ್ಮನೆಂಟ್ ಉದ್ಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿ ಎರಡೆರಡು ಹೆಚ್ಚಿಸಿ ಕೊಂಡು ಹೋದರಂತೆ.
ಈಗ ಇವರ ಬಳಿ ದಿನಕ್ಕೆ 45 ಲೀಟರ್ ಹಾಲು ಕೊಡುವ ಹಸುಗಳು ಕೂಡ ಇದೆ. ಒಂದು ಹೊತ್ತಿಗೆ 180 ಲೀಟರ್ ಹಾಲು ಇಳುವರಿ ತೆಗೆಯುವ ಇವರು ಬೆಳಗ್ಗೆ ಸಮಯದ 180 ಲೀಟರ್ ಹಾಲು ಹಸುಗಳಿಗೆ ಬೇಕಾದ ಫೀಡ್ ಖರೀದಿಸಲು ಆಳು-ಕಾಳಿಗೆ ಕೊಡಲು ಇನ್ನಿತರ ಖರ್ಚಿಗೆ ಆಗುತ್ತದೆ. ಸಂಜೆ ಸಮಯದ 180 ಲೀಟರ್ ಪೂರ್ತಿ ನಮಗೆ ಉಳಿತಾಯ ಆಗುತ್ತದೆ.
ಹೀಗೆ ತಿಂಗಳಿಗೆ 1.8 ಲಕ್ಷ ಆದಾಯ ಗಳಿಸುತ್ತಿದ್ದೇವೆ ಆದರೆ ನಾವ್ ಸ್ವಲ್ಪ ವಿಭಿನ್ನವಾದ ಟೆಕ್ನಿಕ್ ಗಳನ್ನು ಬಳಸುತ್ತಿದ್ದೇವೆ. ಹಾಗಾಗಿ ನಮಗೆ ತುಂಬಾ ಚೆನ್ನಾಗಿ ಇದು ಕೈ ಹಿಡಿದಿದೆ ಯಾವುದೇ ರೈತ ಬೇಕಾದರೂ ಹೈನುಗಾರಿಕೆ ಮಾಡಬಹುದು ನೀವು ಕೂಡ ಸಾಧ್ಯವಾದರೆ ನಮ್ಮ ಟೆಕ್ನಿಕ್ ಗಳನ್ನು ಬಳಸಿ ಎಂದು ಹೇಳುತ್ತಾರೆ.
ಇವರು ಹೇಳುವ ಮಾತೇನೆಂದರೆ ಹಸುಗಳನ್ನು ಒಂದು ಕಡೆ ಕಟ್ಟಬಾರದು ಆಗ ಅವು ಯಾರದ್ದೋ ನಿಯಂತ್ರಣದಲ್ಲಿ ಇರುವ ರೀತಿ ಭಯ ಪಡುತ್ತವೆ. ನಾವು ಮೂರು ಕಂಪಾರ್ಟ್ಮೆಂಟ್ ಮಾಡಿದ್ದೇವೆ ಒಂದು ಕರುಗಳಿಗೆ ಮತ್ತೊಂದು ಗಬ್ಬ ಆಗಿರುವ ಹಸುಗಳಿಗೆ ಇನ್ನೊಂದು ಉಳಿದ ಹಸುಗಳಿಗೆ.
ಇಲ್ಲಿ ಫ್ರೀಯಾಗಿ ಬಿಡುತ್ತೇವೆ ಒಂದನ್ನು ಕೂಡ ಕಟ್ಟುವುದಿಲ್ಲ ಹಾಲು ಕರೆದ ತಕ್ಷಣ ಬಿಡುತ್ತೇವೆ ಇಲ್ಲಿ ಓಡಾಡಿಕೊಂಡು ಆರಾಮಾಗಿ ಇರುತ್ತದೆ. ಹಲ್ಲು ಜೋಳದ ಕಡ್ಡಿಯನ್ನು ಹೆಚ್ಚಾಗಿ ಕೊಡುತ್ತೇವೆ ಒಂದು ಹಸುಗೆ 25KG ಆಹಾರ ಬೇಕು, ಇನ್ನು 3-4KG ಫೀಡ್ ಬೇಕು.
ಹೊಟ್ಟು, ಹಿಂಡಿ ಈ ರೀತಿ ಮಾಮೂಲಿ ಫುಡ್ ಗಳನ್ನು ಕೊಡುತ್ತೇವೆ ನೀರು ಕೊಡುವ ತೊಟ್ಟಿಯನ್ನು ಎರಡು ದಿನಕ್ಕೊಮ್ಮೆ ಕ್ಲೀನ್ ಮಾಡುತ್ತೇವೆ ಅದಕ್ಕೆ ಸುಣ್ಣ ಹಚ್ಚುತ್ತೇವೆ ಕ್ಯಾಲ್ಸಿಯಂ ಕೊರತೆ ಆಗುವುದಿಲ್ಲ. ಹಸುವಿಗೆ ವಾರಕ್ಕೊಮ್ಮೆ ಸ್ನಾನ ಮಾಡಿಸುತ್ತೇವೆ.
ದಿನದಲ್ಲಿ ಒಂದು ಗಂಟೆ ಸೆಗಣಿ ತೆಗೆದು ಕ್ಲೀನ್ ಮಾಡಲು ಮತ್ತೊಂದು ಗಂಟೆ ಹಾಲು ಕರೆಯಲು ಸಮಯ ಕೊಡಬೇಕು, ಸಂಜೆ ಕೂಡ ಅಷ್ಟೇ ಸಮಯ ಬೇಕಾಗುತ್ತದೆ. ಉಳಿದಂತೆ ಅವುಗಳ ಆರೋಗ್ಯದ ಬಗ್ಗೆ ನಿಗಾ ಇಟ್ಟರೆ ಸಾಕು ಹೈನುಗಾರಿಕೆ ಸುಲಭ ಎನ್ನುತ್ತಾರೆ. ಇವರ ಇನ್ನಷ್ಟು ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.