ಕೃಷಿ ಹೊಂಡದಲ್ಲಿ ಮುತ್ತು ಬೆಳೆದು 20 ಲಕ್ಷ ಆದಾಯ ಮಾಡಿದ ರೈತ.!

 

WhatsApp Group Join Now
Telegram Group Join Now

ರಾಜ್ಯದಲ್ಲಿ ಅತ್ಯಂತ ಕಡಿಮೆ ಬೀಳುವ ರಾಜ್ಯವಾದ ರಾಜಸ್ಥಾನದ  ಕೈತುಂಬ ಆದಾಯ ಪಡೆಯುವ ಕೃಷಿ ಎಂದರೆ ಅದು ಆಶ್ಚರ್ಯವೇ ಸರಿ. ಇಂದು ನಾವು ನೀವು ಈ ರೀತಿ ಆಶ್ಚರ್ಯ ಪಡುವಂತಹ ಸುದ್ದಿಯನ್ನೇ ತಿಳಿಸುತ್ತಿದ್ದೇವೆ. ಒಣ ಹವೆ ಮತ್ತು ನೀರಿನ ಸಮಸ್ಯೆಗಳಿಗೆ ಪರಿಹಾರ ಮಾರ್ಗವೊಂದನ್ನು ಕಂಡುಕೊಂಡಿರುವ ವಿನೋದ್ ಭಾರತಿ ಎನ್ನುವ ರೈತನ ಯಶಸ್ಸಿನ ಖಾತೆ ಇದು.

ತನ್ನ ಕುಟುಂಬವು ವರ್ಷದ 12 ತಿಂಗಳಿನಲ್ಲಿ ನಾಲ್ಕು ತಿಂಗಳು ಮಾತ್ರ ಕೃಷಿಯನ್ನು ಅವಲಂಬಿಸಿ ಉಳಿದ ಸಮಯದಲ್ಲಿ ಜೀವನೋಪಾಯಕ್ಕಾಗಿ ವಲಸೆ ಹೋಗಬೇಕಿದ್ದ ಅಥವಾ ಕೂಲಿ ಕಾರ್ಮಿಕರಾಗಬೇಕಿದ್ದ ಕಷ್ಟವನ್ನು ತಿಳಿದಿದ್ದ ವಿನೋದ್ ಭಾರತಿಯವರು ಸಿಂಪಿ ಮುತ್ತು ಕೃಷಿಗೆ (Pearl Farming harvesting) ತಿರುಗಿದರು. ಇಂದು ಇದು ದೇಶದಲ್ಲೇ ಅತ್ಯಂತ ಲಾಭದಾಯಕ ಕೃಷಿಯಾಗಿ ಇವರ ಕೈ ಹಿಡಿದಿದೆ.

ಪದವೀದರರಾಗಿದ್ದ ವಿನೋದ್ ಭಾರತಿಯವರು 1999 ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾವನ್ನು ಪಡೆದು ಇನ್ಸ್ಟಿಟ್ಯೂಟ್‌ನಲ್ಲಿ ಕಂಪ್ಯೂಟರ್ ಟ್ಯೂಟರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಕೆಲವೇ ದಿನಗಳಲ್ಲಿ ತಮ್ಮದೇ ಆದ ಅಕಾಡೆಮಿಯನ್ನು ತೆರೆದರಂತೆ ಆದ ತಮ್ಮ ನಿರೀಕ್ಷೆ ಹುಸಿಯಾಗಿ ಬಹಳ ನಷ್ಟವಾದ ಕಾರಣ ಐದನೇ ವರ್ಷದಲ್ಲಿಯೇ ಇನ್ಸ್ಟಿಟ್ಯೂಟ್ ಮುಚ್ಚ ಬೇಕಾಯಿತಂತೆ.

ಈ ಸುದ್ದಿ ಓದಿ:-ಹೈ ಟೆಕ್ ರೆಡಿಮೇಡ್ ಮನೆಗಳು ಕಡಿಮೆ ಬೆಲೆಗೆ ಲಭ್ಯ ಸ್ವಂತ ಮನೆ ನಿರ್ಮಿಸುವ ಆಸೆ ಇದ್ದವರು ನೋಡಿ

ಸರಿಯಾದ ಕೆಲಸವಿಲ್ಲದೆ, ಜೀವನೋಪಾಯಕ್ಕಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಿದ ಇವರು 2017 ರಲ್ಲಿ ಹೊಸ ಕನಸು ಕಂಡು ಗುರಿ ನಿರ್ಧರಿಸಿಕೊಂಡರು. ಕಡಿಮೆ ಬಂಡವಾಳ ಮತ್ತು ಸ್ಥಳದೊಂದಿಗೆ ವ್ಯಾಪಾರವನ್ನು ಪ್ರಾರಂಭಿಸುವ ಮಾರ್ಗಗಳನ್ನು ಹುಡುಕುತ್ತಿದ್ದ ಇವರಿಗೆ ಆ ದಿನಗಳಲ್ಲಿ ಒಂದು ದಿನ ಸ್ನೇಹಿತರೊಬ್ಬರು ಸಿಂಪಿ ಮುತ್ತು ಕೃಷಿಯಲ್ಲಿ ಪ್ರಯತ್ನ ಪಡುವಂತೆ ಸಲಹೆ ನೀಡಿದರಂತೆ.

ಯಾವಾಗಲು ಹೆಚ್ಚು ಹಣ ಗಳಿಸುವ ಕಡೆ ತುಡಿಯುತ್ತಿದ್ದ ಇವರ ಮನಸ್ಸು ಸಿಂಪಿ ಮುತ್ತು ಕೃಷಿಯತ್ತ ವಾಲಿತಂತೆ ರೂ. 45,000 ಆರಂಭಿಕ ಹೂಡಿಕೆಯೊಂದಿಗೆ ಇದನ್ನು ಪ್ರಾರಂಭಿಸಿದ ಇವರಿಗೆ ಇಂದು ಮುತ್ತು ಕೃಷಿಯಿಂದ ಪ್ರತಿ ಬ್ಯಾಚ್‌ಗೆ ರೂ. 20 ಲಕ್ಷ ಆದಾಯ ಸಿಗುತ್ತಿದೆ. ಇಂದು ಅವರು ಭಾರತದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ UAE ಮತ್ತು ಥೈಲ್ಯಾಂಡ್‌ನಲ್ಲಿ ಕೂಡ ಮಾರ್ಕೆಟ್ ಹೊಂದಿದ್ದಾರೆ.

ಇಂದು ಈ ಉದ್ಯಮದಲ್ಲಿ ಯಶಸ್ವಿಯಾಗಿ ಜಗದ್ವಿಖ್ಯಾತಿಯಾಗಿದ್ದರು ಆರಂಭದಲ್ಲಿ ಇದರಿಂದಲೂ ಕೂಡ ಬಹಳ ಕೈ ಸುಟ್ಟುಕೊಂಡಿದ್ದಾರೆ. ವಿನೋದ್ ಪ್ರಾರಂಭದಲ್ಲಿ ತನ್ನ ಮನೆಯೊಳಗೆ 10×5 ಅಡಿಯ ಕೊಳವನ್ನು ತೋಡಿ ಅದರಲ್ಲಿ ಎಲ್ಲಾ ಸಿಂಪಿಗಳನ್ನು ಬಿಡುಗಡೆ ಮಾಡಿದ್ದರಂತೆ ಆದರೆ ಅದರ ಬಗ್ಗೆ ಸರಿಯಾಗಿ ನಿರ್ವಹಣೆ ಮಾಡುವುದನ್ನು ಕಲಿಯದ ಕಾರಣ ಒಂದು ತಿಂಗಳೊಳಗೆ 453 ಸಿಂಪಿಗಳನ್ನು ಕಳೆದುಕೊಂಡರಂತೆ ಈ ಬಗ್ಗೆ ಹೇಳುವ ಇವರು ನಾನು ದಯನೀಯವಾಗಿ ವಿಫಲನಾದೆ.

ಈ ಸುದ್ದಿ ಓದಿ:-ಕೃಷಿ ಉಪಕರಣ ಖರೀದಿಸಲು ಸರ್ಕಾರದಿಂದ ಶೇಕಡಾ 90% ಸಬ್ಸಿಡಿ.!

ರಾಜಸ್ಥಾನದಲ್ಲಿ ನಾವು ತುಂಬಾ ವಿಭಿನ್ನವಾದ ಮತ್ತು ಬಿಸಿ ವಾತಾವರಣವನ್ನು ಹೊಂದಿದ್ದೇವೆ ಎಂಬ ಅಂಶವನ್ನು ನಾನು ಕಡೆಗಣಿಸಿದೆ ಅದೇ ನನಗೆ ಹೊಡೆತ ಕೊಟ್ಟಿದ್ದು. ನಮ್ಮ ನೀರಿನ ಗುಣಮಟ್ಟ ಕೂಡ ಕರಾವಳಿ ರಾಜ್ಯವಾದ ಒಡಿಶಾಕ್ಕಿಂತ ಭಿನ್ನವಾಗಿದೆ.

ನಾನು ಕೊಳವನ್ನು ಸಿದ್ಧಪಡಿಸುವಲ್ಲಿ ಕೆಲವು ತಪ್ಪುಗಳನ್ನು ಮಾಡಿದ್ದೇನೆ ಮತ್ತು ಪೂರಕ ಸಪ್ಲಿಮೆಂಟ್ ಗಳನ್ನು ನೀಡುವಾಗ, PH ಮತ್ತು ಅಮೋನಿಯಾ ಮಟ್ಟವನ್ನು ಪರಿಶೀಲಿಸುವಾಗ ಮತ್ತು ಸಿಂಪಿಗಳಿಂದ ಮುತ್ತುಗಳನ್ನು ಹೊರತೆಗೆಯುವಾಗ ಎಡವಿದೆ.

ಬಳಿಕ ಒಡಿಶಾದ ಸಿಕರ್ ಜಿಲ್ಲೆ ಅಂದರೆ ಅವರಿದ್ದ ಹಳ್ಳಿಯಿಂದ ಸುಮಾರು 1,700 ಕಿ.ಮೀ.  ದೂರದ ಪ್ರದೇಶದಲ್ಲಿದ್ದ ICAR-ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫ್ರೆಶ್‌ವಾಟರ್ ಅಕ್ವಾಕಲ್ಚರ್ (CIFA) ನಿಂದ ತರಬೇತಿ ಪಡೆದು 500 ಸಿಂಪಿಯನ್ನು ತಂದು ನಾಲ್ಕು ಕೊಳ ಮಾಡಿ ಗೆದ್ದಿದ್ದಾರೆ. ಮುತ್ತುಗಳನ್ನು ಹೊರ ತೆಗೆಯಲು ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತೇನೆ ಎಂದು ವಿವರಿಸುತ್ತಾರೆ. ಇಂದು ಇವರು ಬೆಳೆಯುವ ಒಂದು ಮುತ್ತು ಐವತ್ತು ರೂಪಾಯಿಗಿಂತ ಹೆಚ್ಚು ಬೆಲೆಬಾಳುತ್ತದೆ.

https://youtu.be/5Hp7SXK7mZI?si=3Kcbyf4Wb8mayk58

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now