ಒಂದು ತಿಂಗಳ ಬೆಲೆ ಬೆಳೆದು ತಿಂಗಳಿಗೆ ಎರಡು ಲಕ್ಷ ಗಳಿಸುತ್ತಿರುವ ರೈತ.!

 

WhatsApp Group Join Now
Telegram Group Join Now

ಹಿಂದಿನ ಕಾಲದಲ್ಲಿ ಕೃಷಿ ಎಂದರೆ ಅದು ಕುಟುಂಬದ ಹೊಟ್ಟೆಪಾಡಿಗಾಗಿ ನಡೆಯುತ್ತಿತ್ತು ಹೆಚ್ಚೆಂದರೆ ವಸ್ತು ವಿನಿಮಯ ಪದ್ಧತಿ ಅನುಸರಿಸಿ ತಾವು ಬೆಳೆದ ಬೆಳೆಗಳನ್ನು ಕೊಟ್ಟು ಬೇರೆ ಅವಶ್ಯಕತೆ ಇರುವ ಪದಾರ್ಥಗಳನ್ನು ಖರೀದಿಸುತ್ತಿದ್ದರು. ಆದರೆ ಈಗ ಸಮಯ ಬದಲಾಗಿದೆ. ಕಾಲ ಬದಲಾಗುತ್ತಾ ಎಲ್ಲವೂ ಬದಲಾಗಿದೆ.

ನಂತರದಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಅಲ್ಲಿನ ಜನರಿಗೆ ಅವಶ್ಯಕತೆ ಇರುವ ಅಥವಾ ಆ ಮಣ್ಣಿಗೆ ಒಗ್ಗಿಕೊಳ್ಳುವ ಅಥವಾ ಅಲ್ಲಿ ಇದುವರೆಗೂ ಸಾಂಪ್ರದಾಯಿಕವಾಗಿ ಬೆಳೆದುಕೊಂಡು ಬಂದ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಇಂದು ಈ ಸ್ಪರ್ಧಾತ್ಮಕ ಬದುಕಿನಲ್ಲಿ ಕೃಷಿ ಕೂಡ ಕಮರ್ಷಿಯಲ್ ಆಗಿದೆ ಮತ್ತು ಹೀಗಾಗುವುದು ಕೂಡ ತಪ್ಪಲ್ಲ.

ಯಾಕೆಂದರೆ ರೈತನು ಕೂಡ ತನಗೆ ಲಾಭ ಬರುವ ಬೆಳೆಗಳನ್ನು ಬೆಳೆದು ಲಾಭ ಮಾಡಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ ಅಲ್ಲವೇ? ಮಣ್ಣಿಗೆ ಮಾತ್ರ ಈ ಗುಣ ಇರುವುದು. ಒಂದು ಕಾಳು ಬಿತ್ತಿದರೆ ರಾಶಿ ಮಾಡುವ ಭೂಮಿ ತಾಯಿಯ ಋಣದಿಂದ ಆಕೆಯ ಪ್ರೀತಿಯ ಪುತ್ರ ರೈತ ಧನಿಕನಾಗಲೇಬೇಕು.

ಆದರೆ ನಮ್ಮಲ್ಲಿ ಟೆಕ್ನಾಲಜಿ ಎಷ್ಟು ಮುಂದುವರೆದಿದ್ದರು ಸರ್ಕಾರದಿಂದ ಅನುಕೂಲತೆ ಸಿಗುತ್ತಿದ್ದರು ಮತ್ತು ಅಂಗೈನಲ್ಲಿ ಜಗತ್ತನ್ನೇ ಕಾಣಬಹುದಂತಹ ಸಂಕೀರ್ಣತೆ ಇದ್ದರೂ ಹಣಕಾಸಿನ ವಿಷಯದಲ್ಲಿ ಬಹಳ ಹಿಂದುಳಿತಿದ್ದಾನೆ‌ ಇದಕ್ಕೆ ಸಾಕಷ್ಟು ಕಾರಣಗಳಿವೆ ಭೂಮಿ ಚಿಕ್ಕದು ಬಂಡವಾಳದ ಕೊರತೆ, ನೀರಾವರಿ ಸೌಲಭ್ಯ ಇಲ್ಲ ಎನ್ನುವುದನ್ನೆಲ್ಲಾ ಹೊರತುಪಡಿಸಿ ಯಾವ ಬೆಳೆ ಬೆಳೆಯಬೇಕು ಯಾವ ಸಮಯದಲ್ಲಿ ಯಾವ ಬೆಳೆಗೆ ರೇಟ್ ಸಿಗುತ್ತದೆ ಎನ್ನುವುದೇ ಬಹಳ ದೊಡ್ಡ ಕನ್ಫ್ಯೂಷನ್ ವಿಷಯ ಆಗಿದೆ.

ಯಾವುದೇ ರೈತ ಒಂದು ಬೆಳೆ ಬೆಳೆದು ಲಾಭದಲ್ಲಿದ್ದರೆ ಹಿಂದೂ ಮುಂದು ಯೋಚನೆ ಮಾಡದೆ ತಾನು ಕೂಡ ಅದಕ್ಕೆ ಬಂಡವಾಳ ಸುರಿದುಬಿಡುತ್ತಾನೆ ರೈತ ಆದರೆ ಅದು ಕೈಗೆ ಬರುವ ಹೊತ್ತಿಗೆ ಆ ರೇಟ್ ಧರೆಗಿಳಿದಿರುತ್ತದೆ. ಇತ್ಯಾದಿ ಕಾರಣಗಳಿಂದಲೇ ಇಂದು ರೈತನ ಮಕ್ಕಳು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವುದು ಆದರೆ ನೀವು ನಿಮಗಿರುವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡು.

ಸರಿಯಾದ ವಿಧಾನದಲ್ಲಿ ಕಮರ್ಷಿಯಲ್ ಆಗಿ ಥಿಂಕ್ ಮಾಡಿ ಬೆಳೆಯುವುದನ್ನು ಕಲಿತರೆ ಹಳಿಯಲ್ಲಿ ಇದ್ದುಕೊಂಡು ಯಾವುದೇ ವ್ಯಾಪಾರಸ್ಥನಿಗಿಂತ ಕಡಿಮೆ ಇಲ್ಲದಂತೆ ತಿಂಗಳಿಗೆ ಲಕ್ಷ ಲಕ್ಷ ದುಡಿಯಬಹುದು. ಇದನ್ನು ಮಾತನಾಡುವುದು ಮಾತ್ರವಲ್ಲದೆ ಸಾಬೀತುಪಡಿಸಿಕೊಂಡ ಅನೇಕ ರೈತರ ಉದಾಹರಣೆಗಳು ಕೂಡ ಕಣ್ಣ ಮುಂದೆ ಬರುತ್ತವೆ.

ಈ ಪಟ್ಟಿಯಲ್ಲಿ ಮೈಸೂರು ಮೂಲದ ಗ್ರಾಮದ ರೈತ ಯೋಗೇಶ್ ಹೆಸರು ಕೂಡ ಸೇರಲೇಬೇಕು ಯಾಕೆಂದರೆ ಇವರು ತಮಗಿರುವ ಆರು ಎಕರೆ ಜಮೀನಿನಲ್ಲಿ ವಿದೇಶಿ ಬೆಳೆ ಬೆಳೆದು ಲಕ್ಷ ಲಕ್ಷ ಆದಾಯ ಮಾಡುತ್ತಿದ್ದಾರೆ. ಲೆಮನ್ ಗ್ರಾಸ್, ಚೆರ್ರಿ ಟೊಮೆಟೊ, ಲೇಟಸ್ ಲೀಫ್ ಈ ರೀತಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇವು ಬಹಳ ಬೇಗ ಇಳುವರಿ ಕೊಡುತ್ತವೆ ವರ್ಷದಲ್ಲಿ ಬ್ಯಾಚ್ ವೈಸ್ ವರ್ಷಪೂರ್ತಿ ಬರೆಯಬಹುದು ತಿಂಗಳಿನ ಆದಾಯಕ್ಕೂ ಹಣವಾಗುತ್ತದೆ, ವರ್ಷದ ಆದಾಯಕ್ಕೂ ಬೆಳೆಯಬಹುದು.

ಇದನ್ನು ನೇರವಾಗಿ ರೈತ ಮಾರ್ಕೆಟಿಂಗ್ ಮಾಡಿಕೊಳ್ಳಲು ಕಷ್ಟವಾದರೆ ಹತ್ತಿರದ ಮಾರ್ಕೆಟಿಂಗ್ ಕಂಪನಿಗಳ ಜೊತೆ ಕಾಂಟ್ರಾಕ್ಟ್ ಮಾಡಿಕೊಂಡರೆ ಅವರೆ ಬಂದು ಖರೀದಿಸಿ ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಬೆಳೆಗಳಿಗೆ ಬೆಲೆ ಹೆಚ್ಚು ಇರುವುದರಿಂದ ಇವುಗಳ ಬಗ್ಗೆ ಮೊದಲು ರೈತ ಸರಿಯಾಗಿ ಮಾಹಿತಿ ಪಡೆದು.

ಅಥವಾ ಈಗಾಗಲೇ ಇದನ್ನು ಬೆಳೆದು ಲಾಭದಲ್ಲಿರುವ ರೈತನಿಗೆ ಭೇಟಿ ಕೊಟ್ಟು ಅದರ ಕಷ್ಟ ನಷ್ಟಗಳನ್ನು ವಿಚಾರಿಸಿ ನಂತರ ತಾನು ಅಳವಡಿಸಿಕೊಂಡರೆ ಖಂಡಿತವಾಗಿಯೂ ಯಾವ ರೈತನು ನಷ್ಟದಲ್ಲಿ ಇರುವುದಿಲ್ಲ ಎನ್ನುತ್ತಾರೆ. ಇವರು ಬೆಳೆದ ಬೆಳೆಯ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದರೆ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now