ರಾಜ್ಯದ ರೈತರಿಗೆ (for Farmers) ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಬರ ಪರಿಹಾರದ ಹಣ (drought releif fund) ವರ್ಗಾವಣೆ ಕುರಿತು ಒಂದು ಬಿಗ್ ಅಪ್ ಡೇಟ್ ಇದೆ. ಕಳೆದ ವರ್ಷ ಮುಂಗಾರು ಮಳೆ ವೈಫಲ್ಯದಿಂದ ರಾಜ್ಯದಲ್ಲಿ ಉಂಟಾದ ಬರಗಾಲದ ಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಇದರಿಂದ ರೈತನ ಪರಿಸ್ಥಿತಿ ಉಳಿದ ಎಲ್ಲರಿಗಿಂತ ತೀರಾ ಹದಗಿಟ್ಟಿದೆ.
ಹಾಗಾಗಿ ಬೆಳೆ ನಷ್ಟದಲ್ಲಿರುವ ರೈತನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಡೆಯಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. NDRF ಕೈಪಿಡಿ ಅನ್ವಯ ರಾಜ್ಯದ 220 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿತ್ತು ಆದರೆ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ ಮಾಡಲು ವಿಳಂಬವಾಗುತ್ತಿತ್ತು.
ಈ ಸುದ್ದಿ ಓದಿ:- ಜಮೀನಿನ ಪಹಣಿ ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ವರ್ಗಾವಣೆ.!
ಬರ ಪರಿಹಾರ ಹಣ ವಿತರಣೆ ನಮ್ಮ ಆದ್ಯತೆ ಎಂದು ಘೋಷಿಸಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜನವರಿ ತಿಂಗಳಲ್ಲಿಯೇ ಕೇಂದ್ರ ಸರ್ಕಾರವು ಬರ ಪರಿಹಾರದ ಹಣ ಬಿಡುಗಡೆ ಮಾಡುವ ಮುನ್ನವೇ ರೈತನ ಮೇಲಿನ ಕಾಳಜಿಯಿಂದ ರೂ.2000 ಹಣವನ್ನು ಮೊದಲನೇ ಕಂತಿನ ಹಣವಾಗಿ (1st Installment) ಅರ್ಹ ರೈತರ ಖಾತೆಗಳಿಗೆ DBT ಮೂಲಕ ವರ್ಗಾವಣೆ ಮಾಡಿದೆ.
ಲೋಕಸಭಾ ಚುನಾವಣೆ ಬಿಸಿಯ ನಡುವೆ ಕೇಂದ್ರ ಸರ್ಕಾರವು ರಾಜ್ಯದ ಪಾಲಿನ ಬರ ಪರಿಹಾರದ ಹಣ ವರ್ಗಾವಣೆ ಮಾಡಿದೆ. ಆ ಪ್ರಕಾರವಾಗಿ ಪರಿಹಾರದ ನಿಧಿ ನಿಗದಿಯಾಗಿರುವ ಹಣದಲ್ಲಿ ಮೊದಲನೇ ಕಂತಿನ ಹಣ ರೂ.2000 ಕಡಿತಗೊಳಿಸಿ ಉಳಿದ ಹಣವನ್ನು ತಾಲೂಕುವಾರು ಫಲಾನುಭವಿಗಳ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ ಇದನ್ನು ಎರಡನೇ ಕಂತಿನ ಬರ ಪರಿಹಾರದ ಹಣ (2nd Installment) ಎಂದು ಪರಿಗಣಿಸಲಾಗಿದೆ.
ಈ ಸುದ್ದಿ ಓದಿ:- 1 ಎಕರೆ ಜಮೀನಿಗೆ ಸುತ್ತ ತಂತಿ ಬೇಲಿ ಹಾಕುವುದಕ್ಕೆ ಎಷ್ಟು ಖರ್ಚಾಗುತ್ತೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!
ಈಗ ಮೂರನೇ ಕಂತಿನಲ್ಲಿ (3rd Installment) ರೂ.3000 ಹಣ ಬಿಡುಗಡೆಯಾಗುವ ವಿಚಾರ ಮತ್ತೆ ರಾಜ್ಯದ ರೈತರಿಗೆ ಸಮಾಧಾನ ತಂದಿದೆ. ಆದರೆ ಈ ಹಣವನ್ನು ಪಡೆಯಲು ಕೆಲವು ಕಂಡೀಫನ್ ಗಳು ಇವೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರೇ (CM Siddaramaih) ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಅವರು ತಿಳಿಸಿರುವ ವಿಚಾರ ಏನೆಂದರೆ ಬರಘೋಷಿತ ತಾಲೂಕುಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಮಳೆ ಆಶ್ರಿತ ಜಮೀನಿನ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅಂದರೆ ಐದು ಹೆಕ್ಟರ್ ಒಳಗಡೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಈ ರೂ.3000 ಪರಿಹಾರದ ಹಣ ಸಿಗಲಿದೆ ಎಂದಿದ್ದಾರೆ ಆದರೆ ಇದನ್ನು ಪಡೆಯಲು ಕೆಲವು ಕಂಡೀಷನ್ ಗಳಿವೆ ಇದನ್ನು ಪೂರೈಸುವ ರೈತರಿಗೆ ಮಾತ್ರ ಮೂರನೇ ಕಂತಿನ ಹಣ ಸಿಗಲಿದೆ.
ಈ ಸುದ್ದಿ ಓದಿ:- ಕೇವಲ ರೂ.120 ಕ್ಕೂ ಹಾಕಿಸಬಹುದು ಪ್ರೊಫೈಲ್ ಲೈಟ್, ಮನೆ ಕಟ್ಟುವವರಿಗಾಗಿ ಪ್ರೊಫೈಲ್ ಲೈಟ್ ಬಗ್ಗೆ ಒಂದಿಷ್ಟು ಮಾಹಿತಿ.!
* DBT ಮೂಲಕ ಅವರು ಮೂರನೇ ಕಂತಿನ ಹಣ ಪಡೆಯಬೇಕಾದ ಕಾರಣ ರೈತರು ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು FID ಪಡೆದಿರಬೇಕು
* ಬ್ಯಾಂಕ್ ಖಾತೆ ಆಕ್ಟಿವ್ ಆಗಿರುವಂತೆ ನೋಡಿಕೊಂಡು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಮಾಡಿಸಿರಬೇಕು.
* ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ಆಧಾರ್ ಅಪ್ಡೇಟ್ ಮಾಡಿಸದೇ ಇದ್ದರೆ ಆಧಾರ್ ಸಂಬಂಧಿತವಾದ ಯಾವುದೇ ಯೋಜನೆಯ ಅನುದಾನ ಪಡೆಯಲು ಸಾಧ್ಯವಿಲ್ಲ.