ಮನೆಗೆ ಕಾಂಪೌಂಡ್ ಎಷ್ಟು ಮುಖ್ಯವೋ ಜಮೀನಿಗೆ ಸೈಟ್ ಎನ್ನುವುದು ಅದಕ್ಕಿಂತ ಮುಖ್ಯ. ಯಾಕಂದರೆ ಕಾಂಪೌಂಡ್ ಇಲ್ಲದೇ ಇದ್ದರೂ ಕೂಡ ಒಂದು ಪಕ್ಷ ಆ ಮನೆಯಲ್ಲಿ ಇರಬಹುದು ಆದರೆ ಬೇಲಿ ಇಲ್ಲದ ಹೊಲದ ಪರಿಸ್ಥಿತಿ ಏನು ಎಂದು ಗಾದೆ ಮಾತುಗಳೇ ಹೇಳುತ್ತವೆ. ನಮ್ಮ ಜಮೀನಿನ ಬೌಂಡರಿಯನ್ನು ಗುರುತಿಸಿ ಬೇಲಿ ಹಾಕಿಸುವುದರಿಂದ ಜಮೀನಿಗೆ ಭದ್ರತೆ ಇದ್ದ ಹಾಗೆ ಇರುತ್ತದೆ.
ಅಕ್ಕ ಪಕ್ಕದವರು ಸುಖಾಸುಮ್ಮನೆ ನಮ್ಮ ಜಮೀನನ್ನು ಒತ್ತುವರಿ ಮಾಡುವುದು ತಪ್ಪುತ್ತದೆ. ಹಾಗೆ ನಮ್ಮ ಜಮೀನಿನಲ್ಲಿ ನಾವು ಇಟ್ಟಿರುವ ವಸ್ತುಗಳಿಗೆ ಸೇಫ್ಟಿ ಇರುತ್ತದೆ ಹಾಗಾಗಿ ಬೇಲಿ ಹಾಕಿಸಲೇ ಬೇಕು ಹೀಗೆ ಇನ್ನೂ ಹಲವಾರು ರೀತಿಯ ವ್ಯವಸ್ಥೆ ಇದೆ. ನಾವು ಕಾಂಪೌಂಡ್ ಹಾಕಿಸಲು ಹೋದರೆ ಜಮೀನುಗಳಿಗೆ ಕಾಂಪೌಂಡ್ ಹಾಕಿಸುವುದಕ್ಕೆ ಬಹಳ ದೊಡ್ಡ ಮಟ್ಟದ ಬಜೆಟ್ ಬೇಕಾಗುತ್ತದೆ.
ಆದರೆ ಅಷ್ಟು ಖರ್ಚು ಮಾಡುವ ಅನುಕೂಲತೆ ಎಲ್ಲರಿಗೂ ಇರುವುದಿಲ್ಲ. ಇನ್ನು ಮುಳ್ಳು ಗಿಡಗಳನ್ನು ಬೆಳೆಸಿ ಮಧ್ಯದಲ್ಲಿ ಗಿಡಗಳನ್ನು ನೆಟ್ಟು ಕವರ್ ಮಾಡಿ ಮಾಡಿಕೊಳ್ಳಬಹುದಾದ ಆಪ್ಷನ್ ಕೂಡ ಇದೆ ಆದರೆ ಇದು ಹಂಡ್ರೆಡ್ ಪರ್ಸೆಂಟ್ ವರ್ಕ್ ಆಗುತ್ತದೆಯಾ ಎನ್ನುವುದು ಅನುಮಾನ, ಹಾಗಾಗಿ ತಂತಿ ಬೇಲಿ ಹಾಕಿಸುವುದೇ ಬೆಸ್ಟ್ ಎನ್ನುವುದು ಹೆಚ್ಚಿನವರ ಅಭಿಪ್ರಾಯ.
ಮತ್ತು ಈಗ ನಾವು ಯಾವುದೇ ಕಡೆ ಹೋದರು ಕೂಡ ಎಲ್ಲಾ ಭಾಗಗಳಲ್ಲಿ ಈ ರೀತಿ ತಂತಿ ಬೇಲಿ ಹಾಕಿಸಿರುವ ಜಮೀನುಗಳನ್ನೇ ನೋಡುತ್ತೇವೆ. ಹಾಗಾಗಿ ನಾವು ಕೂಡ ಇದನ್ನೇ ಅನುಸರಿಸುವುದು ಉತ್ತಮ ಎನ್ನುವುದೇ ನಮ್ಮ ಸಲಹೆ ಕೂಡ. ನೀವು ಈ ಬಗ್ಗೆ ಆಸಕ್ತರಾಗಿದ್ದರೆ ಒಂದು ಎಕರೆ ಜಮೀನಿಗೆ ತಂತಿ ಬೇಲಿ ಹಾಕಿಸಲು ಎಷ್ಟು ಹಣ ಖರ್ಚಾಗಬಹುದು ಮತ್ತು ಯಾವ ರೀತಿ ನಡೆಯುತ್ತದೆ ಎನ್ನುವ ಮಾಹಿತಿ ಹೀಗಿದೆ ನೋಡಿ.
ತಂತಿ ಬೇಲಿ ಹಾಕಿಸಲು ಕಲ್ಲು ಕಂಬಗಳು ತಂತಿ ಬೇಲಿ ಮತ್ತು ಕೂಲಿ ಆಳುಗಳ ಹಾಗೂ ಅವುಗಳನ್ನು ಸಾಗಣೆ ಮಾಡುವ ವೆಚ್ಚ ತಗುಲುತ್ತದೆ ಒಂದು ಎಕರೆ ಜಮೀನಿಗೆ ಎಷ್ಟು ಆಗುತ್ತದೆ ಎಂದು ಲೆಕ್ಕಾಚಾರ ಹಾಕುವುದಾದರೆ 150-160 ಕಲ್ಲಿನ ಕಂಬಗಳು ಬೇಕಾಗುತ್ತವೆ 25 ರಿಂದ 27 ಸಾವಿರ ಇದಕ್ಕೆ ಬಂಡವಾಳ ಬೇಕಾಗುತ್ತದೆ.
ಇನ್ನು ತಂತಿ ವಿಚಾರಕ್ಕೆ ಬಂದರೆ ಇದು ಬ್ರಾಂಡ್ ಮೇಲೆ ಡಿಪೆಂಡ್ ಆಗುತ್ತದೆ ಆ ವಿಚಾರದಲ್ಲಿ ನಾವು ಟಾಟಾ ಬ್ಯಾಂಡ್ ಉದಾಹರಣೆಯೊಂದಿಗೆ ಲೆಕ್ಕ ಹಾಕುತ್ತಿದ್ದೇವೆ ಒಂದು ಜಮೀನಿಗೆ ಎಂಟು ರೋಡ್ ತಂತಿ ಬೇಕಾಗುತ್ತದೆ. ಒಂದು ರೋಲ್ 30KG ತೂಗುತ್ತದೆ KGಗೆ ರೂ.130 ಲೆಕ್ಕ ಹಾಕಿದರು ರೂ.32,000 ಆಗುತ್ತದೆ.
ಇನ್ನು ಕೆಲಸ ಮಾಡುವ ಆಳು-ಕಾಳಿನ ವಿಚಾರ ಹೇಳುವುದಾದರೆ ದಿನಗೂಲಿಗೆ ಬರುವವರು ಇರುತ್ತಾರೆ ಅಥವಾ ಒಂದು ಕಲ್ಲಿಗೆ ಇಷ್ಟು ರೇಟ್ ಎಂದು ಫಿಕ್ಸ್ ಮಾಡಿಕೊಂಡು ಕೇಳುವವರೂ ಕೂಡ ಇರುತ್ತಾರೆ. ಅದರ ಲೆಕ್ಕಾಚಾರವಾಗಿ ಕಡಿಮೆ ಎಂದರು ಒಬ್ಬ ವ್ಯಕ್ತಿಗೆ ರೂ.1000 ಕೂಲಿ ಲೆಕ್ಕ ಹಾಕಿದರೂ 5 ಆಳುಗಳಿಗೆ ರೂ.5,000 ರೂಪಾಯಿ ಆಗಿ ಹೋಗುತ್ತದೆ.
ಹೀಗೆ ಒಟ್ಟಾರೆಯಾಗಿ ಎಲ್ಲಾ ಖರ್ಚನ್ನು ಲೆಕ್ಕ ಹಾಕಿ ನೋಡಿದರೆ ಒಂದು ಎಕರೆಗೆ ಒಂದು ಲಕ್ಷದವರೆಗೆ ಖರ್ಚು ಬೀಳುತ್ತದೆ. ಆದರೂ ಕೂಡ ಇದು ಅನಿವಾರ್ಯ ಇರುವುದರಿಂದ ತಪ್ಪದೆ ನಿಮ್ಮ ಆಸ್ತಿಗೆ ಸೂಕ್ತ ಭದ್ರತೆ ಮಾಡಿಕೊಳ್ಳಿ.