ಸಾಮಾನ್ಯವಾಗಿ ಮೇ ತಿಂಗಳಲ್ಲಿ ಬರುವ ಅಕ್ಷಯ ತೃತೀಯ ಭಾರತೀಯ ಪಾಲಿಗೆ ಬಹಳ ವಿಶೇಷ. ಯಾಕೆಂದರೆ, ಈ ದಿನ ಏನೇ ಖರೀದಿಸಿದರು ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆಯಿಂದ ಮನೆಗೆ ದವಸ ಧಾನ್ಯ ಉಪ್ಪು ಬೆಲ್ಲ ಇವುಗಳನ್ನು ತರುವುದು ಇಲ್ಲಿನ ಸಂಪ್ರದಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅನುಕೂಲ ಇದ್ದವರು ಹೊಸ ಬಟ್ಟೆಗಳನ್ನು ಚಿನ್ನ ಬೆಳ್ಳಿ ಹೀಗೆ ಬೆಲೆ ಬಾಳುವ ವಸ್ತುಗಳನ್ನು ಈ ವಿಶೇಷ ದಿನದಂದು ಖರೀದಿಸುವ ಟ್ರೆಂಡಿಂಗ್ ಶುರುವಾಗಿದೆ.
ಹಾಗೆಯೇ ಹತ್ತಾರು ವರ್ಷಗಳಿಂದ ಬಡ ಹಾಗೂ ಮಧ್ಯಮ ವರ್ಗದವರು ಕೂಡ ತಮ್ಮ ಶಕ್ತಿ ಅನುಸಾರ ಏನನ್ನಾದರೂ ಈ ದಿನ ಖರೀದಿಸಬೇಕು ಎಂದು ಪ್ಲಾನಿಂಗ್ ಇಟ್ಟುಕೊಂಡು ಖರೀದಿಸುವ ಉದಾಹರಣೆಯು ಇದೆ. ಈ ರೀತಿಯಾಗಿ ಈ ವರ್ಷ ಅಕ್ಷಯ ತೃತೀಯದಲ್ಲಿ ನೀವು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸಿದ್ದರೆ ನಿಮಗೆ ಫೋನ್ ಪೇ ಕಂಪನಿಯಿಂದ ಸಿಹಿ ಸುದ್ದಿ ನೀಡುತ್ತಿದೆ.
ಅದೇನೆಂದರೆ, ಫೋನ್ ಪೇ ಮೂಲಕ ನೀವೇನಾದರೂ ಚಿನ್ನವನ್ನು ಖರೀದಿಸಿದರೆ ನಿಮಗೆ ಖರೀದಿ ಮೇಲೆ ರೂ.2000 ರುಪಾಯಿಗಳ ಕ್ಯಾಶ್ ಬ್ಯಾಕ್ ಆಫರ್ ಸಿಗುತ್ತದೆ. ಮೊದಲೇ ಚಿನ್ನದ ಬೆಲೆ ಗಗನಕ್ಕೇರಿದೆ, ಪ್ರತಿ ಗ್ರಾಂ ಗೆ ರೂ.7000 ಗಡಿ ತಲುಪಿರುವ ಈಗ ಇಂತಹ ಆಫರ್ ಸಿಕ್ಕರೆ ಎಷ್ಟು ಅನುಕೂಲ ಅಲ್ಲವೇ. ಆದರೆ ಇದು ಅಷ್ಟು ಈಜಿ ಅಲ್ಲ ಕೆಲವು ಕಂಡಿಷನ್ ಗಳೊಂದಿಗೆ ಫೋನ್ ಪೇ ತನ್ನ ಗ್ರಾಹಕರಿಗೆ ಇಂತಹದೊಂದು ಅವಕಾಶ ಮಾಡಿಕೊಟ್ಟಿದೆ.
ತರಕಾರಿ ಖರೀದಿಯಿಂದ ಚಿನ್ನ ಖರೀದಿಯವರೆಗೆ ಪ್ರತಿಯೊಂದು UPI ಆಧಾರಿತ ಆಪ್ ಗಳ ಮೂಲಕವೇ ನಡೆಯುತ್ತಿದೆ ಮತ್ತು ಈ ಕ್ಷೇತ್ರದಲ್ಲಿ ಕೂಡ ಬಹಳ ಕಾಂಪಿಟೇಶನ್ ಇದ್ದು, ಕಂಪನಿಗಳು ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ಮತ್ತು ಹೊಸ ಗ್ರಾಹಕರನ್ನು ತಡೆಯುವ ಸಲುವಾಗಿ ಈ ರೀತಿ ವಿಶೇಷ ದಿನಗಳಿಗೆ ವಿಶೇಷ ಆಫರ್ ಕೊಡುತ್ತಿವೆ.
ಅಂತೆಯೇ ಅಕ್ಷಯ ತೃತೀಯದಂದು 24 ಕ್ಯಾರೆಟ್ ಚಿನ್ನ ಖರೀದಿಸುವವರಿಗೆ ಕ್ಯಾಶ್ ಬ್ಯಾಕ್ ಆಫರ್ ಸಿಗುತ್ತಿದೆ. ಆದರೆ ನೀವು ಈ ಕ್ಯಾಶ್ ಬ್ಯಾಕ್ ಆಫರ್ ಪಡೆದುಕೊಳ್ಳಲು ಚಿನ್ನವನ್ನು ಅಂಗಡಿಗೆ ಹೋಗಿ ಖರೀದಿಸಬೇಕಿಲ್ಲ, ಬದಲಾಗಿ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಖರೀದಿಸಬಹುದು. ಹೇಗೆಂದರೆ ಫೋನ್ ಪೇ ನಲ್ಲಿ ಡಿಜಿಟಲ್ ಚಿನ್ನ ಖರೀದಿಗೆ ಹಣ ಠೇವಣಿ ಇಡಬೇಕು ಇದು ಹೇಗೆ ವರ್ಕ್ ಆಗುತ್ತದೆ.
ಅಂದರೆ ಈಗ ಇರುವ ಚಿನ್ನದ ಬೆಲೆಯ ಆಧಾರದ ಮೇಲೆ ನೀವು ಎಷ್ಟು ಗ್ರಾಂ 24 ಕ್ಯಾರೆಟ್ ಚಿನ್ನ ಖರೀದಿಸಲು ಬಯಸುತ್ತೀರಾ ಅಷ್ಟು ಠೇವಣಿ ಇಟ್ಟು ಭವಿಷ್ಯದಲ್ಲಿ ನೀವು ಯಾವಾಗ ಬೇಕಾದರೂ ಕ್ಲೈಂ ಮಾಡಿ ಅಷ್ಟು ಗ್ರಾಂ ಚಿನ್ನ ಖರೀದಿಸಲು ಫೋನ್ ಪೇ ಅವಕಾಶ ನೀಡುತ್ತಿದೆ. ಈ ರೀತಿ ಹೂಡಿಕೆ ಮಾಡಿದ ಒಂದು ಬಾರಿ ಹೂಡಿಕೆ ಹಣಕ್ಕೆ ರೂ.2,000 ಕ್ಯಾಶ್ ಬ್ಯಾಕ್ ಸಿಗುತ್ತಿದೆ.
ಅಕ್ಷಯ ತೃತೀಯದ ದಿನದಿಂದ ಹಿಡಿದು ಮೇ 14ರ ತಡ ರಾತ್ರಿವರೆಗೂ ಕೂಡ ಅವಕಾಶ ನೀಡಲಾಗುತ್ತಿದೆ. ಫೋನ್ ಪೇ ಗ್ರಾಹಕರಿಗೆ ಮಾತ್ರ ಈ ಅನುಕೂಲತೆ ಸಿಗುತ್ತಿದ್ದು ತಪ್ಪದೇ ಇದರ ಸದಾವಕಾಶ ಪಡೆದುಕೊಳ್ಳಿ. ಇನ್ನು ಭದ್ರತೆಯ ವಿಚಾರಕ್ಕೆ ಬರುವುದಾದರೆ.
ಈ UPI ಪಾವತಿ ಅಪ್ಲಿಕೇಶನ್ ಸರ್ಕಾರ ಹಾಗೂ RBI ನ ಹಲವು ನಿಬಂಧನೆಗೆ ಒಳ ಪಟ್ಟಿರುವುದರಿಂದ ಜನಸಾಮಾನ್ಯ ನಿಶ್ಚಿಂತೆ ಯಾಗಿ ಈ ಚಿನ್ನದ ಬಾಂಡ್ ಹೂಡಿಕೆ ಯೋಜನೆಯಲ್ಲಿ ಠೇವಣಿ ಇಡಬಹುದಾಗಿದೆ. ಅಂಚೆ ಕಚೇರಿಯಲ್ಲಿ ಕೂಡ ಹಿಂದೊಮ್ಮೆ ಇಂತಹದೇ ಒಂದು ವಿಶೇಷವಾದ ಚಿನ್ನದ ಬಾಂಡ್ ಯೋಜನೆ ರಿಲೀಸ್ ಮಾಡಲಾಗಿತ್ತು ಈ ಯೋಜನೆ ಕೂಡ ಅದನ್ನೇ ಹೋಲುತ್ತಿದೆ ಎಂದು ನೆನೆಯಬಹುದಾಗಿದೆ.