ಪ್ರೊಫೈಲ್ ಲೈಟ್ ಎನ್ನುವುದು ಕೆಲವರಿಗೆ ಹೊಸ ವಿಷಯ ಎನಿಸಬಹುದು ಆದರೆ ಮನೆ ಕಟ್ಟುವ ಪ್ರತಿಯೊಬ್ಬರೂ ಕೂಡ ಈ ಕಾನ್ಸೆಪ್ಟ್ ಬಗ್ಗೆ ತಿಳಿದುಕೊಳ್ಳಲೇಬೇಕು. ಯಾಕೆಂದರೆ ಇತ್ತೀಚೆಗೆ ಬಹಳ ಟ್ರೆಂಡಿಂಗ್ ನಲ್ಲಿರುವ ವಿಷಯ ಇದಾಗಿದೆ. LED ಲೈಟ್, ಸ್ಪಾಟ್ ಲೈಟ್ ನಂತರ ಪ್ರೊಫೈಲ್ ಎನ್ನುವುದು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ಮನೆಯ ಇಂಟೀರಿಯರ್ ಎಕ್ಸ್ಪೀರಿಯರ್ ಎಲ್ಲದರಲ್ಲೂ ಕೂಡ ಲೈಟ್ ಬಳಕೆ ಆಗುತ್ತಿದೆ. ನೀವು ಮನೆ ಕಟ್ಟುವವರಾಗಿದ್ದರೆ ಈ ವಿಷಯ ತಿಳಿದುಕೊಳ್ಳಲೇಬೇಕು ಇಲ್ಲವಾದಲ್ಲಿ ನಂತರ ನಾವು ಮಾಡಿಸಬೇಕಿತ್ತು ಎನ್ನುವ ಪಶ್ಚಾತಾಪ ಬರುತ್ತದೆ. ಹಾಗಾಗಿ ಎಲ್ಲರಿಗೂ ಅನುಕೂಲವಾಗಲಿ ಎಂದು ಈ ಅಂಕಣದಲ್ಲಿ ಪ್ರೊಫೈಲ್ ಲೈಟ್ ಇಂಪಾರ್ಟೆನ್ಸ್ ಬಗ್ಗೆ ಮತ್ತು ಅದರ ಇನ್ನಷ್ಟು ವೈಶಿಷ್ಟಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಪ್ರೊಫೈಲ್ ಲೈಟ್ ಗಳನ್ನು ಮನೆಯ ಎಲ್ಲ ಭಾಗದಲ್ಲೂ ಕೂಡ ನೋಡಬಹುದು. ಸೀಲಿಂಗ್ ನಲ್ಲಿ ಕಂಟಿನ್ಯೂಸ್ ಆಗಿ ಲೈಟಿಂಗ್ ವ್ಯವಸ್ಥೆ ಬೇಕು ಎಂದರೆ, ಯಾವುದೇ ಕ್ಯಾಬಿನೆಟ್ಗಳನ್ನು ಹೈಲೈಟ್ ಮಾಡಬೇಕು ಎಂದರೆ, TV ಯೂನಿಟ್ ಗಳಲ್ಲಿ, ಕಾರ್ನರ್ ವಾಲ್ ಡಿಸೈನ್ ಗಳಲ್ಲಿ, ಕಿಚನ್ ಸೆಟಪ್ ನಲ್ಲಿ ಮತ್ತು ಹೊರಗೆ ಅಲಂಕಾರಕ್ಕಾಗಿ ಎಲ್ಲಾ ಕಡೆ ಕೂಡ ಬಳಸಬಹುದು.
ಒಂದು ಮೀಟರ್ ಗೆ ಮಿನಿಮಮ್ 90 ಲೈಟ್ ಗಳಾದರು ಇರಲೇಬೇಕು ಮುಂದುವರೆದು 120ರವರೆಗೂ ಕೂಡ ಡಿಸೈನ್ ಆಧಾರಿತವಾಗಿ ಇದು ಬರುತ್ತದೆ ಎನ್ನುವುದು ಬಹಳ ಅನುಕೂಲಕರ ಸಂಗತಿಯಾಗಿದೆ. ಇನ್ನು ಲೆಂಥಿಯಾಗಿ ಬಳಸುವುದಾದರೆ ಯಾವುದೇ ಲಿಮಿಟ್ ಇಲ್ಲ ಒಂದಕ್ಕೊಂದು ಜೋಡಿಸಿಕೊಂಡು ಎಷ್ಟು ಉದ್ದದ ವಾಲ್ ಬೇಕಾದರು ಕವರ್ ಮಾಡಬಹುದು ವಿಚಾರಕ್ಕೆ ಬಂದರೆ 1.5 ಸೆಂಟಿಮೀಟರ್ ವರೆಗೂ ಡಿಸೈನ್ ಮಾಡಬಹುದು.
ನಿಮಗೆ ಯಾವ ಕಲರ್ ಬೇಕೋ ಆ ಕಲರ್ ನಲ್ಲಿ ಸಿಗುತ್ತದೆ ಮನೆ ಅಲಂಕಾರವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹೆವಿ ಡ್ಯೂಟಿ ಗಳನ್ನು ಬಳಸಿ ಬೆಳಕಿನ ಸೋರ್ಸ್ ಕೂಡ ಮಾಡಿಕೊಳ್ಳಬಹುದು. ಎಲ್ಇಡಿ ಬಲ್ಬ್ ಬಳಕೆಯಿಂದ ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. ರೆಗ್ಯುಲರ್ ಆಗಿ ಅಥವಾ ವೆಕೇಶನ್ ಆಗಿ ಯಾವ ರೀತಿ ಬಳಕೆ ಮಾಡುತ್ತೀರಾ ಎನ್ನುವುದರ ಆಧಾರದ ಮೇಲೆ ಇವುಗಳನ್ನು ಹಾಕಿಸಿಕೊಳ್ಳಬಹುದು.
ಒಂದು ಫೀಟ್ ಗೆ ರೂ.120 ರಿಂದ ಇದು ಆರಂಭ ಆಗುತ್ತದೆ. ಅಲ್ಯುಮಿನಿಯಂ ಕೇಸಿಂಗ್ ಇರುತ್ತದೆ ಇದೇ ಬೆಸ್ಟ್ ಯಾಕೆಂದರೆ ಅಲ್ಲುಮಿನಿಯಂ ಎಲೆಕ್ಟ್ರಿಸಿಟಿ ರೆಜಿಸ್ಟನ್ಸ್ ಗುಣ ಹೊಂದಿರುವುದರಿಂದ ಸೇಫ್ ಮತ್ತು ಕಡಿಮೆ ಖರ್ಚಾಗುತ್ತದೆ. LED ಬಲ್ಬ್ ಬದಲು ಟ್ಯುಬಿಲರ್ ಲೈಟ್ ಕೂಡ ಬಳಕೆ ಮಾಡಬಹುದು.
LED ಫ್ರಂಟ್ ನಲ್ಲಿ ಮಾತ್ರ ಬೆಳಕು ನೀಡಿದರೆ ಇದು 330° ಸರ್ಕಲ್ ಪೂರ್ತಿ ಇರುತ್ತದೆ, ಇನ್ನೂ ಹೆಚ್ಚು ಮನಮೋಹಕವಾಗಿ ಕಾಣುತ್ತದೆ ಮತ್ತು ಹೆಚ್ಚು ಬೆಳಕನ್ನು ಕೂಡ ನೀಡುತ್ತದೆ. ನಮಗೆ ಬೇಕಾದ ರೀತಿ ಇದನ್ನು ಡಿಸೈನ್ ಮಾಡಿಸಿಕೊಳ್ಳಬಹುದು. ಇದರಲ್ಲಿ ಎರಡು ವಿಧ ಇದೆ. ರೆಸಿಸ್ಟನ್ಸ್ ಪ್ರೊಫೈಲ್ ಲೈಟ್ ಮತ್ತು ಸಸ್ಪೆನ್ಟೆಡ್ ಪ್ರೊಫೈಲ್. ರೆಸಿಸ್ಟನ್ಸ್ ಪ್ರೊಫೈಲ್ ನಲ್ಲಿ ಸೀಲಿಂಗ್ ಒಳಗೇ POP, ವಯರ್ ಸೇರಿದಂತೆ ಎಲ್ಲಾ ಕವರ್ ಆಗಿರುತ್ತದೆ.
ಸಸ್ಪೆಂಡರ್ ಪ್ರೊಫೈಲ್ ನಲ್ಲಿ ಇದು ಎಕ್ಸ್ಪೋಸ್ ಆಗಿ ಹೊರಗಿಂದ ಕಾಣುತ್ತಿರುತ್ತದೆ ಆದರೂ ಡಿಸೈನ್ ಮಾಡಿ ನೀಟಾಗಿ ಕವರ್ ಮಾಡಿ ಒಳ್ಳೆಯ ಲುಕ್ ಕೊಡಲಾಗುತ್ತದೆ. ಈ ವಿಚಾರ ಕುರಿತು ಇನ್ನಷ್ಟು ಮಾಹಿತಿ ಬೇಕಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅಥವಾ ನಿಮ್ಮ ಕನ್ಸ್ಟ್ರಕ್ಟರ್ ವಿಚಾರಿಸಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.