ನಾವು ವಾಹನ ಖರೀದಿಸಿದರೂ ಸಾರ್ವಜನಿಕರ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಬೇಕು ಎಂದರೆ ಸರ್ಕಾರ ಹೇರಿರುವ ನಿಯಮಗಳನ್ನು ಪಾಲಿಸಲೇಬೇಕು. ಮೋಟಾರು ವಾಹನ ಕಾಯ್ದೆ ಅನುಸಾರ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದೆ ವಾಹನದ ಜೊತೆ ರೋಡಿಗೆ ಇಳಿದದ್ದೇ ಆದಲ್ಲಿ ಕಾನೂನು ಉಲ್ಲಂಘನೆ ಕಾರಣಕ್ಕಾಗಿ ಸಾವಿರಾರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ.
ಒಂದು ವೇಳೆ ನಾವು ಇಲಾಖೆ ಕಣ್ ತಪ್ಪಿಸಿಕೊಂಡು ಓಡಾಡಿದರು ಅನಾಹುತ ಆದರೆ ನಷ್ಟವಾಗುವುದು ನಮಗೆ. ಹಾಗಾಗಿ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡೆದೆ ವಾಹನ ಚಾಲನೆ ಮಾಡಬೇಕು ಮತ್ತು ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನಾವು ಈ ದೇಶದ ಕಾನೂನಿಗೆ ಗೌರವಿಸಲೇಬೇಕು ಆದರೆ ಆಗಾಗ ಈ ಕಾಯ್ದೆಗಳಲ್ಲಿ ಬದಲಾವಣೆ ತಂದು ಜನಸಾಮಾನ್ಯರಿಗೆ ಸಮಸ್ಯೆಗಳಿಗೂ ಕೂಡ ಸ್ಪಂದಿಸಲಾಗುತ್ತದೆ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಕೇವಲ 50 ಕಟ್ಟಿ 35 ಲಕ್ಷ ಪಡೆಯಿರಿ.! ಹೂಡಿಕೆ ಮಾಡಲು ಮುಗಿಬಿದ್ದ ಜನ.!
ಅದರ ಕುರಿತಾಗಿ ಈಗ ಹೊಚ್ಚ ಹೊಸದಾಗಿ ದೇಶದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಬದಲಾಯಿಸಿರುವ ಒಂದು ಹೊಸ ನಿಯಮದ ಅನುಕೂಲತೆ ಬಗ್ಗೆ ತಿಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಡ್ರೈವಿಂಗ್ ಲೈಸನ್ಸ್ ಇಲ್ಲದೆ ದ್ವಿ ಚಕ್ರ ವಾಹನಗಳನ್ನೇ ಆಗಲಿ ನಾಲ್ಕು ಚಕ್ರದ ವಾಹನಗಳನ್ನೇ ಆಗಲಿ ಅಥವಾ ಭಾರಿ ಗಾತ್ರದ ವಾಹನಗಳನ್ನಾಗಲಿ ಚಾಲನೆ ಮಾಡುವಂತಿಲ್ಲ.
ಪ್ರತಿಯೊಂದಕ್ಕೂ ಪ್ರತ್ಯೇಕವಾದ ಅನುಮತಿ ನೀಡುವ ಲೈಸೆನ್ಸ್ ಇಟ್ಟುಕೊಂಡೆ ವಾಹನ ಚಾಲನೆ ಮಾಡಬೇಕು. ವಾಹನಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳೊಂದಿಗೆ ನಮ್ಮ DL ಸಮೇತವಾಗಿ ಪುರಾವೆಗಳು ಯಾವಾಗಲೂ ನಮ್ಮೊಟ್ಟಿಗೆ ಇರಬೇಕು ಅಥವಾ ಡಿಜಿ ಲಾಕರ್ ಆಪ್ ನಲ್ಲಿ ಅವುಗಳನ್ನು ಸೇವ್ ಮಾಡಿ ಇಟ್ಟುಕೊಂಡಿದ್ದು ಸಂಚಾರಿ ಪೊಲೀಸರ ತಡೆ ಹಿಡಿದು ಕೇಳಿದಾಗ ಇದನ್ನು ತೋರಿಸಿ ಪಾರಾಗಬಹುದು.
ಈ ಸುದ್ದಿ ಓದಿ:- ಮನೆ ಕಟ್ಟಿಸುತ್ತಿದ್ದೀರಾ.? ಯಾವ ರೀತಿ ಮೆಟ್ಟಿಲು ಮಾಡಿಸಬೇಕು ಎನ್ನುವುದರ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿ.!
ಇಲ್ಲವಾದಲ್ಲಿ ಮೊದಲ ಬಾರಿಗೆ ಇಂತಿಷ್ಟು ಎರಡನೇ ಬಾರಿಗೆ ಇನ್ನಷ್ಟು ಮತ್ತು ಇದೆ ಮುಂದುವರಿದರೆ ಲೈಸೆನ್ಸ್ ಕೂಡ ಕ್ಯಾನ್ಸಲ್ ಆಗುವ ನಿರ್ಧಾರಗಳನ್ನು ಇಲಾಖೆ ಕೈಗೊಳ್ಳುತ್ತಿದೆ. ಆದರೆ ಈಗ ದ್ವಿಚಕ್ರ ವಾಹನ ಹೊಂದಿದವರಿಗೆ ಡೀಲ್ ಇಲ್ಲದಿದ್ದರೂ ವಾಹನ ಚಾಲನೆ ಮಾಡುವ ಪರ್ಮಿಷನ್ ನೀಡುವ ಕುರಿತು ಚಿಂತನೆ ನೀಡುತ್ತಿದೆ.
ಇದು ನಿಮಗೆ ಬಹಳ ಆಶ್ಚರ್ಯ ಅನ್ನಿಸಬಹುದು ನಿಜಕ್ಕೂ ಈ ರೀತಿ ಮಾಡಬಹುದೇ ಎನ್ನುವ ಅನುಮಾನ ಹುಟ್ಟಬಹುದು ಆದರೆ ಇದು ಖಂಡಿತ ಸತ್ಯ ಆದರೆ ಇದಕ್ಕೊಂದು ಕಂಡಿಶನ್ ಇದೆ. ನಾವು ಸೈಕಲ್ ಕೂಡ ದ್ವಿಚಕ್ರ ವಾಹನ ಎಂದು ಪರಿಗಣಿಸುತ್ತೇವೆ. ರಸ್ತೆಗಳಲ್ಲಿ ಸೈಕಲ್ ನಲ್ಲಿ ಕೂಡ ಪ್ರಯಾಣ ಮಾಡುತ್ತಾರೆ ಆದರೆ ಅವರಿಗೆ ಯಾವುದೇ DL ಬೇಕಿಲ್ಲ.
ಈ ಸುದ್ದಿ ಓದಿ:- BMTC ನೇಮಕಾತಿ 2024, 10th ಪಾಸ್ ಆಗಿದ್ರೆ ಸಾಕು ಆಸಕ್ತರು ಅರ್ಜಿ ಸಲ್ಲಿಸಿ ವೇತನ 25,300/-
ಯಾಕೆ ಎಂದು ನೋಡುವುದಾದರೆ ಇದರ ಹಿಂದೆ ಒಂದು ಕಾರಣವಂತೂ ಇದ್ದೇ ಇರುತ್ತದೆ. ಇನ್ನು ಮುಂದೆ ಎಲೆಕ್ಟ್ರಿಕಲ್ ಸ್ಕೂಟರ್ ಗಳಿಗೂ ಕೂಡ ಹೀಗೆ ಪರ್ಮಿಷನ್ ನೀಡಲು ಚಿಂತಿಸಲಾಗುತ್ತಿದೆ. ಆದರೆ ಯಾವ ಬಗೆಯ ಎಲೆಕ್ಟ್ರಿಕ ಸ್ಕೂಟರ್ ಗೆ ಈ ಪರ್ಮಿಷನ್ ಇದೆ ಎನ್ನುವುದು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.
ಹೊಸ ನಿಯಮದ ಪ್ರಕಾರವಾಗಿ ತಿಳಿಸಿರುವ ಸಂಗತಿ ಏನೆಂದರೆ ಯಾವ ವಾಹನವು ಒಂದು ಘಂಟೆಗೆ ಗರಿಷ್ಠವಾಗಿ 25km ವರೆಗೆ ಮಾತ್ರ ಕ್ರಮಿಸುವ ವೇಗವನ್ನು ಹೊಂದಿದೆ ಅಂತಹ ವಾಹನಗಳನ್ನು ಚಲಾಯಿಸಲು DL ಅವಶ್ಯಕತೆ ಇಲ್ಲ ಎನ್ನುವ ಪರ್ಮಿಷನ್ ನೀಡಲಾಗಿದೆ. ಹಾಗಾಗಿ ನೀವೇನಾದರೂ ಇನ್ನು ಮುಂದೆ ಇಂತಹ ವಾಹನಗಳನ್ನು ಖರೀದಿಸಿದರೆ DL ಇಟ್ಟುಕೊಂಡೇ ಓಡಾಡಬೇಕಾದ ಅವಶ್ಯಕತೆ ಇರುವುದಿಲ್ಲ.
ಈ ಸುದ್ದಿ ಓದಿ:- ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಬಸ್ ನಲ್ಲಿ ಓಡಾಡುತ್ತಿರುವ ಮಹಿಳೆಯರಿಗೆ ಹೊಸ ರೂಲ್ಸ್ ತಂದ ಸರ್ಕಾರ.!
ಸೈಕಲ್ ಗಿಂತ ದೈಹಿಕ ಶ್ರಮವನ್ನ ಸ್ವಲ್ಪ ಕಡಿಮೆ ಮಾಡುವ ಮತ್ತು ಅದಕ್ಕಿಂತ ಮುಂಚೆ ವೇಗವಾಗಿ ನಿಮ್ಮನ್ನು ನಿಮ್ಮ ಗಮ್ಯ ಸ್ಥಳಕ್ಕೆ ತಲುಪಿಸುವಂತಹ ಕಾರ್ಯವನ್ನು ಈ ಎಲೆಕ್ಟ್ರಿಕ ಸ್ಕೂಟರ್ ಮಾಡುತ್ತವೆ. ಆದರೆ ಎಲೆಕ್ಟ್ರಿಕ ಸ್ಕೂಟರ್ ಎನ್ನುವ ಕಾರಣಕ್ಕೆ ಕನ್ಫ್ಯೂಷನ್ ಇತ್ತು ಇನ್ನು ಮುಂದೆ ಇದು ಕೂಡ ಇಲ್ಲ ಎನ್ನುವುದು ಸ್ಪಷ್ಟ ಆಗಿರುವುದರಿಂದ ಅನೇಕರ ಪಾಲಿಗೆ ಅನುಕೂಲವಾಗಿದೆ ಆದರೆ ಜವಾಬ್ದಾರಿಯುತವಾಗಿ ಚಾಲನೆ ಮಾಡಿ ಎನ್ನುವುದಷ್ಟೇ ನಮ್ಮ ಅಂಕಣದ ಆಶಯ.