ಹಣ ಗಳಿಸುವುದು ಮಾತ್ರವಲ್ಲ, ದುಡಿದ ಹಣದಲ್ಲಿ ಸ್ವಲ್ಪ ಮೊತ್ತದ ಹಣವನ್ನಾದರೂ ಭವಿಷ್ಯಕ್ಕಾಗಿ ಉಳಿಸುವುದು ಕೂಡ ಮುಖ್ಯ. ಈ ರೀತಿ ಹಣ ಉಳಿತಾಯ ಮಾಡುವುದಕ್ಕೆ ಹಾಗೂ ದುಡಿದ ಹಣವನ್ನು ಶೀಘ್ರವಾಗಿ ಬೆಳೆಸುವುದಕ್ಕೆ ಮಾರ್ಕೆಟ್ ನಲ್ಲಿ ಹತ್ತು ಹಲವಾರು ಮಾರ್ಗಗಳಿವೆ. ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಗಳು, ಸ್ಟಾಕ್ ಮಾರ್ಕೆಟ್, LIC ಸೇರಿದಂತೆ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಆಫರ್ ಮಾಡುವ ವಿಶೇಷ ಯೋಜನೆಗಳು ಕಡಿಮೆ ಸಮಯಕ್ಕೆ ಬಹಳ ದೊಡ್ಡ ಲಾಭವನ್ನು ತಂದು ಕೊಡುತ್ತವೆ.
ಇವುಗಳಿಗೆ ಸೆಡ್ಡು ಹೊಡೆದು ಅಂಚೆ ಕಚೇರಿ ಕೂಡ ಈಗ ಯಾವುದೇ ಹಣಕಾಸು ಸಂಸ್ಥೆಗಳು ಕಡಿಮೆ ಇಲ್ಲದಂತಹ ವಿಭಿನ್ನವಾದ ಯೋಜನೆಗಳನ್ನು ರೂಪಿಸಿ ದೇಶದ ನಾಗರಿಕರಿಗಾಗಿ ಜಾರಿಗೆ ತಂದಿದೆ ಇದರಲ್ಲಿ ಶೀಘ್ರವಾಗಿ ಹಣ ಹೆಚ್ಚಿಗೆ ಆಗದೆ ಹೋದರು ದೀರ್ಘ ಕಾಲದ ಹೂಡಿಕೆ ಮಾಡುವವರಿಗೆ ಅವರ ಹಣಕ್ಕೆ ಖಾತರಿ ಭದ್ರತೆ ಇರುತ್ತದೆ ಎನ್ನುವುದೇ ಸಮಾಧಾನ.
ಈ ಸುದ್ದಿ ಓದಿ:- BMTC ನೇಮಕಾತಿ 2024, 10th ಪಾಸ್ ಆಗಿದ್ರೆ ಸಾಕು ಆಸಕ್ತರು ಅರ್ಜಿ ಸಲ್ಲಿಸಿ ವೇತನ 25,300/-
ಹೆಣ್ಣು ಮಕ್ಕಳಿಗಾಗಿ, ಹಿರಿಯ ನಾಗರಿಕರಿಗಾಗಿ, ದುಡಿಯುವ ವರ್ಗಕ್ಕೆ ಮಹಿಳೆಯರಿಗಾಗಿ ಈ ರೀತಿಯಾಗಿ ಹತ್ತು ಹಲವು ಮಾದರಿಯ ವಿಶೇಷ ಯೋಜನೆಗಳನ್ನು ಅಂಚೆ ಕಚೇರಿಯಲ್ಲಿ ಜಾರಿಗೆ ತರಲಾಗಿದೆ. ಇದರಲ್ಲಿ ಗ್ರಾಮೀಣ ಭಾಗದ ಜನರು ಕೂಡ ನಿಶ್ಚಿಂತೆಯಾಗಿ ಅಧಿಕ ಒತ್ತಡವಿಲ್ಲದೆ ಹೂಡಿಕೆ ಮಾಡಿ ಕೈ ತುಂಬಾ ರಿಟರ್ನ್ಸ್ ಪಡೆಯಬಹುದಾದ ಒಂದು ವಿಶೇಷ ಯೋಜನೆ ಬಗ್ಗೆ ಈ ಲೇಖನದಲ್ಲಿ ವಿವರಣೆ ನೀಡುತ್ತಿದ್ದೇವೆ.
ಅಂಚೆ ಕಛೇರಿ ಗ್ರಾಮೀಣ ಸುರಕ್ಷ ಯೋಜನೆ ಎಂದು ಕರೆಯಲಾಗುವ ಈ ಯೋಜನೆಯಲ್ಲಿ ದಿನಕ್ಕೆ ರೂ.50 ಹೂಡಿಕೆ ಮಾಡಿ ರೂ.35 ಲಕ್ಷ ರಿಟರ್ನ್ಸ್ ಪಡೆಯಬಹುದಾಗಿದೆ. ಈ ಯೋಜನೆಯ ವಿಶೇಷತೆಗಳು ಹೀಗಿವೆ ನೋಡಿ.
ಯೋಜನೆ ಹೆಸರು:- ಅಂಚೆ ಕಚೇರಿ ಗ್ರಾಮೀಣ ಸುರಕ್ಷಾ ಯೋಜನೆ
ವೈಶಿಷ್ಟತೆಗಳು:-
* 19 ವರ್ಷ ಮೇಲ್ಪಟ್ಟ 55 ವರ್ಷದ ಒಳಗಿನ ಭಾರತೀಯ ನಾಗರಿಕನು ಅಂಚೆ ಕಚೇರಿಯಲ್ಲಿ ಈ ಯೋಜನೆಯ ಖಾತೆ ತೆರೆಯಬಹುದು
* ಒಬ್ಬ ವ್ಯಕ್ತಿ ಹೆಸರಿನಲ್ಲಿ ಒಂದೇ ಖಾತೆ ತೆರೆಯಲು ಅವಕಾಶ ಹಾಗೂ ಜಂಟಿಯಾಗಿ ಈ ಯೋಜನೆಗೆ ಹೂಡಿಕೆ ಮಾಡಲು ಅವಕಾಶ ಇರುವುದಿಲ್ಲ
* ನೀವು ಆರಿಸುವ ವಿಮಾ ಮೊತ್ತದ ಆಧಾರದ ಮೇಲೆ ಪ್ರೀಮಿಯಂ ಗಳನ್ನು ಪಾವತಿಸಬೇಕಾಗುತ್ತದೆ.
ಈ ಸುದ್ದಿ ಓದಿ:- ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಬಸ್ ನಲ್ಲಿ ಓಡಾಡುತ್ತಿರುವ ಮಹಿಳೆಯರಿಗೆ ಹೊಸ ರೂಲ್ಸ್ ತಂದ ಸರ್ಕಾರ.!
* ಕನಿಷ್ಠ ವಿಮಾ ಮೊತ್ತ ರೂ.10,000 ದಿಂದ ಆರಂಭವಾಗಿ ಗರಿಷ್ಠ 10 ಲಕ್ಷದವರೆಗೆ ಇರುತ್ತದೆ
* 36 ತಿಂಗಳ ಕಾಲ ಪ್ರೀಮಿಯಂ ಪಾವತಿಸಿದ ನಂತರ ಪಾಲಿಸಿಯನ್ನು ಸರೆಂಡರ್ ಮಾಡಬಹುದು.
* ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು.
* ಯಾವುದಾದರೂ ಕಾರಣದಿಂದ ಪ್ರೀಮಿಯಂ ಗಳನ್ನು ಸರಿಯಾದ ಸಮಯಕ್ಕೆ ಪಾವತಿಸಲು ಸಾಧ್ಯವಾಗದೇ ಇದ್ದರೆ ದಂಡವನ್ನು ಕಟ್ಟಿ ಯೋಜನೆಯನ್ನು ಮುಂದುವರಿಸಬಹುದಾಗಿದೆ. ಆದರೆ ಬಾಕಿ ಇರುವ ಪ್ರೀಮಿಯಂಗಳನ್ನು ಪಾವತಿಸಲು ಕೇವಲ 30 ದಿನಗಳ ಗ್ರೇಸ್ ಅವಧಿಯನ್ನು ನೀಡಲಾಗುತ್ತದೆ.
* 48 ತಿಂಗಳ ಕಾಲ ಪ್ರೀಮಿಯಂಗಳನ್ನು ಪಾವತಿಸಿದ ನಂತರ ಸಾಲಕ್ಕೆ ಅರ್ಹರಾಗಿರುತ್ತಾರೆ. ಸಾಲದ ಮೇಲಿನ ಬಡ್ಡಿ ದರ 10%.
* ಸೆಕ್ಷನ್ 80 ಸಿ ಮತ್ತು ಸೆಕ್ಷನ್ 88 ರ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ಪಡೆಯಬಹುದು
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ.
ಈ ಸುದ್ದಿ ಓದಿ:- ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಇದ್ದರೆ ತಿಂಗಳಿಗೆ 5000 ಹಣ ಸಿಗಲಿದೆ.!
* ಉದಾಹರಣೆಯೊಂದಿಗೆ ಈ ಯೋಜನೆಯನ್ನು ವಿವರಿಸುವುದಾದರೆ ಪ್ರತಿದಿನ ರೂ.50 ರಂತೆ ಈ ಯೋಜನೆಯಡಿ ಹೂಡಿಕೆ ಮಾಡಿದರೆ 19ನೇ ವಯಸ್ಸಿಗೆ ಆರಂಭ ಮಾಡಿ 55 ವರ್ಷದವರೆಗೆ ನೀವು ಪ್ರೀಮಿಯಂ ಗಳನ್ನು ಸರಿಯಾಗಿ ಪಾವತಿಸಿದ್ದರೆ ಮೆಚುರಿಟಿ ಸಮಯದಲ್ಲಿ ನಿಮಗೆ ಒಟ್ಟಿಗೆ ರೂ.31,60,000 ಸಿಗಲಿದೆ
* ಯೋಜನೆ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಹತ್ತಿರದಲ್ಲಿರುವ ಅಂಚೆ ಶಾಖೆಗೆ ಭೇಟಿ ನೀಡಿ.