ಮನೆ ಕಟ್ಟುವುದು ಜೀವನದ ಬಹಳ ದೊಡ್ಡ ಕನಸು ಮತ್ತು ಒಂದು ಬಾರಿ ಮನೆ ಕಟ್ಟಿಕೊಂಡ ಮೇಲೆ ಪದೇ ಪದೇ ಇಷ್ಟಕ್ಕೆ ಅನುಕೂಲಕ್ಕೆ ತಕ್ಕ ಹಾಗೆ ಬದಲಾಯಿಸುವುದು ಕಷ್ಟ. ಹಾಗಾಗಿ ಮನೆ ಕಟ್ಟುವ ಮುನ್ನವೇ ಸರಿಯಾದ ಪ್ಲಾನಿಂಗ್ ಇರಬೇಕು ಪ್ರತಿ ಹಂತದಲ್ಲೂ ಕೂಡ ಅಳೆದು ತೂಗಿ ನಿರ್ಧಾರಗಳನ್ನು ಕೈಗೊಂಡು ನಮ್ಮ ಅಭಿರುಚಿಯಂತೆ ಮತ್ತು ಸರಿಯಾದ ವಿಧಾನದಲ್ಲಿ ಮನೆ ಕಟ್ಟಿಸಿಕೊಳ್ಳಬೇಕು.
ಮನೆ ವಿಚಾರವಾಗಿ ಹೇಳುವುದಾದರೆ ಮನೆ ಮುಂದೆ ಹಾಕುವ ಮುಖ್ಯ ದ್ವಾರದಿಂದ ಹಿಡಿದು ಮನೆ ಕಟ್ಟಲು ಬಳಸುವ ಸಿಮೆಂಟ್ ಬ್ರಾಂಡ್ ವರೆಗೆ ಪ್ರತಿಯೊಂದು ವಿಚಾರದಲ್ಲೂ ಸರಿಯಾಗಿ ಮಾಹಿತಿ ತಿಳಿದುಕೊಂಡು ನಿರ್ಧಾರ ಕೈಗೊಳ್ಳಬೇಕು ಇಲ್ಲವಾದರೆ ನಂತರದ ದಿನಗಳಲ್ಲಿ ಆಗುವ ಅನಾನುಕೂಲತೆಗಳಿಂದ ಪಶ್ಚಾತಾಪ ಪಡಬೇಕಾಗುತ್ತದೆ. ಹಾಗಾಗಿ ಇಂತಹದ್ದೇ ಒಂದು ಇಂಪಾರ್ಟೆಂಟ್ ವಿಷಯವಾದ ಮನೆಯ ಮೆಟ್ಟಿಲುಗಳ ಕುರಿತಾಗಿ ಈ ಲೇಖನದಲ್ಲಿ ಒಂದಿಷ್ಟು ಸಲಹೆ ನೀಡುವ ಪ್ರಯತ್ನ ಮಾಡುತ್ತಿದ್ದೇವೆ.
ಈ ಸುದ್ದಿ ಓದಿ:- BMTC ನೇಮಕಾತಿ 2024, 10th ಪಾಸ್ ಆಗಿದ್ರೆ ಸಾಕು ಆಸಕ್ತರು ಅರ್ಜಿ ಸಲ್ಲಿಸಿ ವೇತನ 25,300/-
* ಮೆಟ್ಟಿಲುಗಳ ವಿಚಾರವಾಗಿ ಯಾವುದೆಲ್ಲ ಮುಖ್ಯವಾಗುತ್ತದೆ ಎಂದರೆ ಮೆಟ್ಟಿಲಿನ ಸೈಜ್, ಮೆಟ್ಟಿಲು ಹಾಕಿಸುವ ಲೋಕೇಶನ್ ಹಾಗೂ ವಾಸ್ತು ವಿಚಾರಗಳು ಬಹಳ ಪ್ರಾಮುಖ್ಯತೆಯ ಸಂಗತಿಗಳಾಗಿವೆ. ಸರಿಯಾದ ಲೊಕೇಶನ್ ಹಾಗೂ ವಾಸ್ತು ಪ್ರಕಾರವಾಗಿಯೇ (ವಾಸ್ತು ನಂಬುವವರಿಗೆ) ಮೆಟ್ಟಿಲುಗಳನ್ನು ಮಾಡಿಸಬೇಕು ಎನ್ನುವುದು ನೆನಪಿರಲಿ.
* ಮೆಟ್ಟಿಲುಗಳನ್ನು ಕಟ್ಟುವಾಗ ನಾವು ಪಾದ ಊರುವ ಜಾಗವನ್ನು ಹಂತ (tread) ಎನ್ನುತ್ತೇವೆ. ಇತರ ಲೆಂತ್ ಕಡ್ಡಾಯವಾಗಿ 10 ಇಂಚು (length 10″) ಇರಬೇಕು, ಇಲ್ಲವಾದರೆ ಜೋರಾಗಿ ಓಡಾಡುವಾಗ ಸ್ಲಿಪ್ ಆಗುವ ಸಾಧ್ಯತೆಗಳು ಹೆಚ್ಚು.
ಈ ಸುದ್ದಿ ಓದಿ:- ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಬಸ್ ನಲ್ಲಿ ಓಡಾಡುತ್ತಿರುವ ಮಹಿಳೆಯರಿಗೆ ಹೊಸ ರೂಲ್ಸ್ ತಂದ ಸರ್ಕಾರ.!
* ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಇರುವ ಮಧ್ಯದ ಹೈಟ್ ನ್ನು ರೈಸರ್ (Riser) ಎನ್ನುತ್ತಾರೆ. ಇದರ ಹೈಟ್ ಕೂಡ ಮಿನಿಮಮ್ ಆರು ಇಂಚು (6″), ಮಾಕ್ಸಿಮಮ್ 8 ಇಂಚು (8″) ಇರಬೇಕು. ಇದು ಕಡಿಮೆ ಆದರೂ ಸಮಸ್ಯೆ, ಹೆಚ್ಚಾದರೂ ಕೂಡ ಸಮಸ್ಯೆಯೇ. ಸ್ಟ್ಯಾಂಡರ್ಡ್ ಎಂದರೆ 6 ಇಂಚು (height 6″) ಇದ್ದರೆ ಸಾಕು.
* ಇನ್ನು ಸ್ಟೇರ್ ಕೇಸ್ ಅಗಲದ ವಿಚಾರಕ್ಕೆ ಬಂದರೆ ತ್ರೀ ಫೀಟ್ (Width 3 feet) ಆದರೂ ಇರಬೇಕು. ಆದರೆ ಕೆಲವರು ಅಷ್ಟು ಅನುಕೂಲ ಇಲ್ಲ ಎಂದು 2.5 ಫೀಟ್ (2.5 feet) ಮಾಡಿಸುತ್ತಾರೆ. ಇದಕ್ಕಿಂತಲೂ ಕಡಿಮೆ ಆದರೆ ನಂತರ ದಿನಗಳಲ್ಲಿ ಸಮಸ್ಯೆಗಳಾಗುತ್ತದೆ ಹಾಗಾಗಿ ಇದರ ಬಗ್ಗೆ ನಿರ್ಲಕ್ಷ ಬೇಡ.
ಈ ಸುದ್ದಿ ಓದಿ:- ಮಳೆ ನೀರನ್ನು ಸಂಗ್ರಹಿಸಿ ತೋಟ ಮಾಡಿರುವ ಸಾಧಕ, ಕೇವಲ 20 ರೂಪಾಯಿ ಬಾಟಲಿನಿಂದಲೇ ಗಿಡಗಳಿಗೆ ನೀರು ಸಪ್ಲೈ.!
* ಮೆಟ್ಟಿಲನ್ನು ಹಿಡಿದುಕೊಂಡು ಹತ್ತುವ ಕಂಬಿಗಳ ಹೈಟ್ (Hand rails height ) ಕೂಡ ಮುಖ್ಯವಾದ ವಿಚಾರ. ಇದು ಮನೆಯಲ್ಲಿರುವ ಚಿಕ್ಕವರು ವಯಸ್ಸಾದವರು ಎಲ್ಲರಿಗೂ ಅನುಕೂಲಕರವಾದ ರೀತಿ ಇರಬೇಕು ಎಂದರೆ Min 2.5 feet, Max 3 feet ಇರಬೇಕು.
* ಸ್ಟೆಪ್ಸ್ ಗಳು ಕೊನೆಯಲ್ಲಿ ಸೇರುವ ಜಾಗವನ್ನು ಲ್ಯಾಂಡಿಂಗ್ ಸ್ಪೇಸ್ ಎಂದು ಕರೆಯುತ್ತಾರೆ. ಇದು ಸ್ಕ್ವೇರ್ ರೀತಿ ಕ್ರಿಯೆಟ್ ಆಗಬೇಕು ಹೀಗಾಗಿ 2.5 ft * 2.5ft, 3 ft * 3ft ಇರಲಿ. ಮೆಟೀರಿಯಲ್ ಉಳಿಸಲು ಅಥವಾ ಇನ್ನಿತರ ಯಾವುದೇ ಕಾರಣಕ್ಕೂ ಇದರಲ್ಲಿ ಕಾಂಪ್ರಮೈಸ್ ಆಗಬೇಡಿ.
ಈ ಸುದ್ದಿ ಓದಿ:- ಡಯಾಬಿಟಿಸ್ ವಾಸಿಯಾಗುವುದು 100% ಗ್ಯಾರೆಂಟಿ, ಯೂಟ್ಯೂಬ್ ಇತಿಹಾಸದಲ್ಲಿ ಫಸ್ಟ್ ಟೈಮ್ ಡಾಕ್ಟರ್ ರಿಂದ ರಿವೀಲ್ ಆದ ಸತ್ಯ.!
* ಹ್ಯಾಂಡ್ ರೇಲ್ ಹಿಡಿದುಕೊಳ್ಳುವ ಜಾಗವಾದ Newel point 70mm to 90mm ಒಳಗೆ ಇರಬೇಕು
* ಮೆಟ್ಟಿಲು ಇರುವ ಕೆಳಗಿನ ಜಾಗ ಅದನ್ನು ಸೋಫಿಟ್ (Soffit) ಎನ್ನುತ್ತಾರೆ. ಈ ಸೋಫಿಟ್ ಮಿನಿಮಮ್ 6″ ಆದರೂ ಆದರೂ ಇರಬೇಕು ಆಗ ಮಾತ್ರ ಸ್ಟೇರ್ ಕೇಸ್ ಭದ್ರವಾಗಿರುತ್ತದೆ.
* ಇನ್ನು ವಾಸ್ತು ವಿಚಾರವಾಗಿ ಹೇಳುವುದಾದರೆ ಮೆಟ್ಟಿಲ ಕೆಳಗಡೆ ಯಾವುದೇ ರೀತಿ ಸ್ಟೋರ್ ರೂಮ್ ಅಥವಾ ಟಾಯ್ಲೆಟ್ ಯಾವುದನ್ನು ಮಾಡಬೇಡಿ. ಅದರಲ್ಲೂ ದೇವರ ಮನೆಯಲ್ಲಂತೂ ಮಾಡಲೇಬೇಡಿ. ಇನ್ನು ಈ ಹಂತಗಳು ಯಾವಾಗಲೂ ಬೆಸ ಸಂಖ್ಯೆಯಲ್ಲಿ ಇರಬೇಕು ಎಂದು ವಾಸ್ತು ಹೇಳುತ್ತದೆ.