ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೂ ಸರ್ಕಾರದ ಕಡೆಯಿಂದ ಒಂದು ಸಂತೋಷದ ಸುದ್ದಿ ಇದೆ. ಅದೇನೆಂದರೆ, ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದರೂ ತಮ್ಮ ಹೆಸರಿನಲ್ಲಿ ಭೂಮಿ ಹೊಂದಿರುವುದಿಲ್ಲ.
ಮೃ’ತ ಪಟ್ಟಿರುವ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಜಮೀನು ಇದ್ದರು ಅದನ್ನು ತಮ್ಮ ಹೆಸರಿಗೆ ಬದಲಾವಣೆ ಮಾಡಿಸಿಕೊಳ್ಳದೆ ಕೃಷಿ ಮಾಡುತ್ತಾ ಬದುಕುತ್ತಿರುತ್ತಾರೆ, ಹೀಗೆ ಮಾಡುವುದರಿಂದ ರೈತನಿಗೆ ಅಪಾರ ನಷ್ಟವಾಗುತ್ತಿರುತ್ತದೆ. ಯಾಕೆಂದರೆ ಸರ್ಕಾರ ರೈತರಿಗಾಗಿ ರೂಪಿಸಿರುವ ಯಾವುದೇ ಯೋಜನೆಯ ಅನುದಾನ ಪಡೆಯಬೇಕು ಎಂದರೂ ಕೂಡ ರೈತನ ಹೆಸರಿನಲ್ಲಿ ಭೂಮಿಯ ದಾಖಲೆ ಇರಬೇಕು.
ಇಲ್ಲವಾದಲ್ಲಿ ಕಿಸಾನ್ ಸಮ್ಮಾನ್ ನಿಧಿ, ಬೆಳೆ ಪರಿಹಾರ, ಬೆಳೆ ವಿಮೆ, ಕೃಷಿ ಸಾಲ ಇನ್ನು ಮುಂತಾದ ಕೃಷಿಗೆ ಸಂಬಂಧಿಸಿದ ಯಾವುದೇ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಆಗುವುದಿಲ್ಲ. ಈ ಕಾರಣದಿಂದಲೇ ಯೋಜನೆಗೆ ಅರ್ಹರಾಗಿದ್ದರು ಅರ್ಜಿ ಸಲ್ಲಿಸಬೇಕಾದ ಸಮಯದಲ್ಲಿ ಒದಗಿಸಬೇಕಾದ ದಾಖಲೆಯಲ್ಲಿ ಭೂಮಿ ತನ್ನ ಹೆಸರಿನಲ್ಲಿ ಇದೆ ಎನ್ನುವುದಕ್ಕೆ ಪುರಾವೆ ಸಿಗದ ಕಾರಣ ಲಕ್ಷಾಂತರ ರೈತರು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ.
ಇದನ್ನು ಪರಿಗಣನೆಗೆ ತೆಗೆದುಕೊಂಡ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರೈತರಿಗಾಗಿ ಒಂದು ಬೃಹತ್ ಅಭಿಯಾನವನ್ನು ನಡೆಸುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರೇ ಸಂದರ್ಶನ ಒಂದರಲ್ಲಿ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಅವರು ಹೇಳಿರುವ ಪ್ರಕಾರವಾಗಿ ಜಮೀನಿನಲ್ಲಿ ಹಲವು ವರ್ಷಗಳಿಂದ ರೈತ ಉಳುಮೆ ಮಾಡಿಕೊಂಡು ಕೃಷಿಯಲ್ಲಿ ತೊಡಗಿದ್ದರೂ ಜಮೀನು ಮಾತ್ರ ಮೃ’ತಪಟ್ಟಿರುವ ತಂದೆ ಅಥವಾ ತಾತ ಅಥವಾ ಮುತ್ತಾತನ ಹೆಸರಿನಲ್ಲಿಯೇ ಇನ್ನು ಇದೆ ಎನ್ನುವುದಾದರೆ ಈ ಅಭಿಯಾನದಲ್ಲಿ ಭಾಗಿಯಾಗಿ ಕಡಿಮೆ ದಾಖಲೆಗಳೊಂದಿಗೆ ಸರಳ ವಿಧಾನದಲ್ಲಿ ಸಮಸ್ಯೆ ಪರಿಹರಿಸಿ ಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದಿಷ್ಟು ಮಾತ್ರವಲ್ಲದೆ ದಾನ ಪತ್ರ, ಕ್ರಯ ಪತ್ರ, ವಿಭಾಗ ಪತ್ರ ಅಥವಾ ಪೌತಿ ಖಾತೆ ಅಥವಾ ಇನ್ಯಾವುದೇ ವಿಧಾನದಿಂದ ಜಮೀನು ವರ್ಗಾವಣೆಯಾಗಿ ಇನ್ನು ದಾಖಲೆಗಳು ಬದಲಾಯಿಸದೆ ಪೂರ್ವಿಕರ ಹೆಸರಿನಲ್ಲಿಯೇ ಇದ್ದರೆ ಅವರಿಗೂ ಕೂಡ ಕಡಿಮೆ ದಾಖಲೆಗಳೊಂದಿಗೆ ಸರಳ ವಿಧಾನದಲ್ಲಿ ಈ ಪ್ರಕ್ರಿಯೆ ಪೂರ್ತಿಗೊಳಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಶೀಘ್ರವಾಗಿಯೇ ಸರ್ಕಾರದ ಕಡೆಯಿಂದ ಈ ಕಾರ್ಯಕ್ರಮ ಆರಂಭವಾಗಲಿದೆ, ಅಷ್ಟರೊಳಗೆ ರೈತರು ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲಿ ಎನ್ನುವುದು ನಮ್ಮ ಕಾಳಜಿ. ಇದರೊಂದಿಗೆ ಮತ್ತೊಂದು ಸಿಹಿ ವಿಚಾರ ಕೂಡ ಇದೆ ಅದೇನೆಂದರೆ ರೈತನ ಭೂಮಿಯ ಅಕ್ಕಪಕ್ಕದಲ್ಲಿ ಇರುವ ಹಳ್ಳಕೊಳ್ಳ, ಕಾಲುದಾರಿ, ಬಂಡಿದಾರಿ, ಮರಗಳು ಇದಕ್ಕೆ ಸಂಬಂಧಪಟ್ಟ ಹಾಗೆ ನೆರೆಹೊರೆ ರೈತರೊಂದಿಗೆ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ ಅದು ಕೆಲವೊಂದು ಪ್ರಕರಣದಲ್ಲಿ ವಿಪರೀತಕ್ಕೆ ತಲುಪಿರುವ ಉದಾಹರಣೆಯು ಇದೆ.
ಇದಕ್ಕೂ ಕೂಡ ಪರಿಹಾರ ಮಾರ್ಗವನ್ನು ಸಚಿವರು ಘೋಷಿಸಿದ್ದಾರೆ. ಅದೇನೆಂದರೆ ಸರ್ಕಾರದ ಕಡೆಯಿಂದ ಪರಿಶೀಲನೆ ನಡೆಸಿ ಸ್ಕೆಚ್ ಗಳನ್ನು ತಯಾರಿಸಿ ಇದನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ. ಹೀಗೆ ಮಾಡುವುದರಿಂದ ಯಾರೂ ಕೂಡ ಈ ಮಾಹಿತಿಗಳನ್ನು ತಿರುಚುವುದಕ್ಕಾಗಲಿ ಅಥವಾ ಮತ್ಯಾವುದೇ ಸಮಸ್ಯೆ ಮಾಡುವುದಕ್ಕಾಗಲಿ ಸಾಧ್ಯವಾಗುವುದಿಲ್ಲ.
ಅಲ್ಲದೆ ಇಂತಹ ಸಮಸ್ಯೆಗಳು ಉಂಟಾದಾಗ ರೈತರು ತಮ್ಮ ಮೊಬೈಲ್ ನಲ್ಲಿಯೇ ತಮ್ಮ ಜಮೀನಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ನೋಡಿಕೊಳ್ಳಬಹುದು ಹಾಗಾಗಿ ಜಮೀನಿನ ಸಂಬಂಧಪಟ್ಟ ದಾಖಲೆಗಳನ್ನು ಡಿಜಿಟಲೈಸ್ ಮಾಡಲು ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.