ಮಧುಮೇಹ ಎನ್ನುವುದು ಇತ್ತೀಚೆಗೆ ಸರ್ವೇ ಸಾಮಾನ್ಯ ಖಾಯಿಲೆ ಎನ್ನುವ ಹಂತಕ್ಕೆ ಹೋಗಿದೆ. ಯಾಕೆಂದರೆ ಭಾರತದ ಪ್ರತಿ ಮನೆಮನೆಗಳನ್ನು ಕೂಡ ಶುಗರ್ ಪೇಷಂಟ್ ಗಳನ್ನು ಕಾಣಬಹುದು. ಈ ಶುಗರ್ ಪೇಷಂಟ್ಶಗಳನ್ನು ಕೆಲವು ವೈದ್ಯರು ಸುಲಭವಾಗಿ ದಾರಿ ತಪ್ಪಿಸುತ್ತಿದ್ದಾರೆ. ಶುಗರ್ ಕಡಿಮೆಯಾಗಲು ಚಪಾತಿ ತಿನ್ನಿ ಅಕ್ಕಿ ಅಂಶ ಕಡಿಮೆ ಮಾಡಿ ಗೋಧಿ ಪದಾರ್ಥ ತಿನ್ನಿ ಎಂದು ಹೇಳುತ್ತಿದ್ದಾರೆ.
ಆದರೆ ತಜ್ಞರ ಬಳಿ ಇದರ ಬಗ್ಗೆ ಕೇಳಿದರೆ ಸಂಶೋಧನೆಯ ಪ್ರಕಾರ ಚಪಾತಿ ತಿನ್ನುವುದೇ ತಪ್ಪು ಎಂದು ಹೇಳುತ್ತಾರೆ. ಹಾಗಾದರೆ ಶುಗರ್ ಪೇಷಂಟ್ ಗಳು ಯಾವುದನ್ನು ಫಾಲೋ ಮಾಡಬೇಕು ಎನ್ನುವ ಅನುಮಾನ ಹುಟ್ಟದೇ ಇರುವುದು. ಅದಕ್ಕಾಗಿ ಈ ಅಂಕಣದಲ್ಲಿ ಕೆಲ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೇನೆ ಪೂರ್ತಿಯಾಗಿ ಓದಿದರೆ ನಿಮಗೊಂದು ಕ್ಲಾರಿಟಿ ಸಿಗುತ್ತದೆ.
ಸಂಶೋಧನೆಯೊಂದು ಹೇಳುವ ಪ್ರಕಾರ ಗೋಧಿ ಹಾಗೂ ಅಕ್ಕಿಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಪೋಷಕಾಂಶಗಳು ಒಂದೇ ರೀತಿಯಾಗಿ ಇದೆ. ಹಾಗಾಗಿ ಗೋಧಿ ತಿನ್ನುವ ಬದಲು ಆಯಾ ಪ್ರಾಂತ್ಯಕ್ಕೆ ಅನುಗುಣಬಾಗಿ ಆ ಪ್ರದೇಶದಲ್ಲಿ ಹೆಚ್ಚಾಗಿ ಬಳಸುವ ಅಥವಾ ತಮ್ಮ ಹಿರಿಯರು ಮಾಡುತ್ತಿದ್ದ ಆಹಾರ ಪದಾರ್ಥಗಳನ್ನು ಪಾಲಿಸುವುದೇ ಆರೋಗ್ಯಕ್ಕೆ ಹೆಚ್ಚು ಸೂಕ್ತ ಎಂದು ಹೇಳಲಾಗುತ್ತದೆ.
ಗೋಧಿಯನ್ನು ಇಷ್ಟು ವಿರೋಧಿಸುವುದು ಕಾರಣ ಏನೆಂದರೆ, ಗೋಧಿಯು ಜೆನೆಟಿಕಲೀ ಮೋಡಿಫೈ ಆದ ಆಹಾರ ಪದಾರ್ಥವಾಗಿದೆ. ಭಾರತದ ಯಾವುದೇ ಭಾಗದ ಮೂಲ ಆಹಾರ ಪದಾರ್ಥವಂತು ಇದು ಅಲ್ಲವೇ ಅಲ್ಲ. ವಿದೇಶಿಗರ ಪ್ರಭಾವದಿಂದ ಈಗ ಉತ್ತರ ಭಾರತದ ಕಡೆ ಇದನ್ನು ಬೆಳೆಸಲಾಗುತ್ತಿದೆ ಅಷ್ಟೇ. ಬ್ರೆಡ್ ಹಾಗೂ ಬಿಯರ್ ತಯಾರಿಸುವುದಕ್ಕೆ ಮಾತ್ರ ಇದರಲ್ಲಿರುವ ಅಂಶಗಳು ಸೂಕ್ತ ಎಂದು ಕೂಡ ಹೇಳಲಾಗುತ್ತದೆ.
ಯಾಕೆಂದರೆ ಇದನ್ನು ಪರೀಕ್ಷೆ ಮಾಡಿ ನೋಡಲು ಈ ಒಂದು ಪ್ರಯೋಗ ಮಾಡಿ. ಚಪಾತಿ ಹಿಟ್ಟನ್ನು ಕಲಸಿ ಒಂದು ದಿನ ಇಟ್ಟರೆ ಅದು ಹುಳಿಯಾಗುತ್ತದೆ. ಈ ರೀತಿ ಹುಳಿಯಾಗುವ ಪದಾರ್ಥವು ದೇಹದ ಒಳಗೆ ಸೇರಿದ ಮೇಲೆ ಕೂಡ ಅದೇ ರೀತಿಯ ಪ್ರಭಾವವನ್ನು ಉಂಟುಮಾಡುತ್ತದೆ.
ಪ್ಲಾಸ್ಟಿಕ್ ಸಮಸ್ಯೆಯಿಂದ ಇರುವವರು ಚಪಾತಿ ಹಾಗೂ ಗೋಧಿ ಪದಾರ್ಥದ ಸೇವನೆ ಕಡಿಮೆ ಮಾಡಿದ ಮೇಲೆ ಗುಣವಾಗಿರುವ ಉದಾಹರಣೆಯನ್ನು ನಾವು ಕೇಳಿರಬಹುದು, ನೋಡಿರಬಹುದು. ಮತ್ತೊಂದು ಮೂಲದ ಮಾಹಿತಿ ಪ್ರಕಾರ ಒಂದು ದಿನ ನಾವು ಚಪಾತಿ ತಿಂದರೆ ಅದು ಪೂರ್ತಿಯಾಗಿ ದೇಹದಿಂದ ಹೊರ ಹೋಗಲು ಅಂದರೆ ಪೂರ್ತಿಯಾಗಿ ಅದರಿಂದ ಬಿಡುಗಡೆಯಾದ ಬ್ಯೂಟೇನ್ ಗ್ಲೂಟೇನ್ ಎಲ್ಲಾ ಹೊರಗೆ ಹೋಗಲು 42 ದಿನ ಬೇಕಾಗುತ್ತದೆ.
ಚಪಾತಿಯನ್ನು ನಾವು ಎಣ್ಣೆ ಬಳಸದೆ ಮಾಡಲು ಸಾಧ್ಯವಿಲ್ಲ. ಎಣ್ಣೆ ಇಲ್ಲದೆ ಇದನ್ನು ಮಿಕ್ಸ್ ಮಾಡಲು ಸಾಧ್ಯವಿಲ್ಲ, ಚಪಾತಿ ಹಿಟ್ಟು ಮಾಡುವಾಗಲು ಚಪಾತಿಯನ್ನು ಬೇಯಿಸುವಾಗಲು ಮತ್ತು ಅದರ ಜೊತೆ ಸೇವಿಸುವ ಸೈಡ್ ಡಿಶ್ ತಯಾರಿಸಲು ಎಣ್ಣೆ ಬೇಕೇ ಬೇಕು. ಆದರೆ ಈಗಿರುವ ಎಣ್ಣೆಗಳು ಎಷ್ಟು ಆರೋಗ್ಯಕ್ಕೆ ಪೂರಕವಾಗಿದೆ ಎನ್ನುವುದನ್ನು ಪ್ರಶ್ನೆ ಮಾಡಿಕೊಂಡು ನೋಡಿ.
ಈ ರೀತಿಯ ಇನ್ನು ಇತ್ಯಾದಿ ಉದಾಹರಣೆಗಳಿಂದ ಹೇಳುವುದೇನೆಂದರೆ, ಚಪಾತಿ ಅಥವಾ ಗೋಧಿ ಆಹಾರ ಪದಾರ್ಥಗಳನ್ನು ತ್ಯಜಿಸುವುದೇ ಉತ್ತಮ ಅದರ ಬದಲು ಕೆಂಪಕ್ಕಿ ರಾಗಿ ಜೋಳ ಹೀಗೆ ತಮಗೆ ಅಭ್ಯಾಸವಾಗಿರುವ ತಮ್ಮ ದೇಹಕ್ಕೆ ಹೊಂದಿಕೊಳ್ಳುವ ಆಹಾರ ಪದಾರ್ಥಗಳನ್ನು ಸೇವಿಸಿ. ಇದೊಂದು ಬಹಳ ಉಪಯುಕ್ತ ಮಾಹಿತಿಯಾಗಿದ್ದು ತಪ್ಪದೆ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ ಮತ್ತು ಈ ವಿಷಯದ ಕುರಿತಾದ ಪೂರ್ತಿ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.