ನಮ್ಮ ಹಿಂದೂಗಳು ಜ್ಯೋತಿಷ್ಯ ಶಾಸ್ತ್ರವನ್ನು ಬಹಳಷ್ಟು ನಂಬುತ್ತಾರೆ. ಇದು ಅವರ ಬದುಕಿನ ಭಾಗವೇ ಆಗಿ ಹೋಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಭವಿಷ್ಯವನ್ನು ಕೂಡ ಲೆಕ್ಕಾಚಾರ ಹಾಕಲಾಗುತ್ತದೆ. ಅನೇಕ ವಿಧಾನಗಳಲ್ಲಿ ಈ ರೀತಿ ಭವಿಷ್ಯವನ್ನು ಹೇಳುತ್ತಾರೆ. ಹಸ್ತದ ರೇಖೆಗಳು ಮಾತ್ರವಲ್ಲದೆ ಸಾಮುದ್ರಿಕ ಶಾಸ್ತ್ರದ ಮೂಲಕವೂ ಕೂಡ ಭವಿಷ್ಯವನ್ನು ಅಂದಾಜಿಸಲಾಗುತ್ತದೆ.
ಕಣ್ಣುಗಳನ್ನು ನೋಡಿ, ಮುಖ ಲಕ್ಷಣ ನೋಡಿ ಮಾತನಾಡುವ ಧ್ವನಿಯ ಸಮೇತವಾಗಿ ಅವರ ಗುಣ ಸ್ವಭಾವ ಹಾಗೂ ಭವಿಷ್ಯವನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಅದೇ ರೀತಿಯಾಗಿ ಮುಂದುವರೆದು ಸಾಮುದ್ರಿಕ ಶಾಸ್ತ್ರದಲ್ಲಿ ವಿಶೇಷವಾಗಿ ಮಹಿಳೆಯರ ನಾಭಿ ಬಗ್ಗೆ ಕೂಡ ತಿಳಿಸಲಾಗಿದೆ. ನಾಭಿಯ ಆಕಾರ ಗಾತ್ರ ಇವುಗಳ ಆಧಾರದ ಮೇಲೆ ಕೆಲ ಅಂಶಗಳನ್ನು ತಿಳಿಸಲಾಗಿದೆ ಅದರ ವಿವರ ಹೀಗಿದೆ ನೋಡಿ.
● ಉದ್ದ ಹೊಕ್ಕುಳು – ಸಾಮುದ್ರಿಕ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಉದ್ದವಾದ ಹೊಕ್ಕುಳು ಹೊಂದಿರುವ ಮಹಿಳೆ ಬಹಳ ಆತ್ಮವಿಶ್ವಾಸದಿಂದ ಇರುತ್ತಾರೆ. ಅಂತಹ ಮಹಿಳೆಯರು ತಮ್ಮ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಸ್ವಾವಲಂಬಿಯಾಗಿ ಬದುಕಲು ಇಚ್ಚಿಸುವ ಇವರಿಗೆ ಸ್ಪಷ್ಟ ಗುರಿ ಇರುತ್ತದೆ ಮತ್ತು ಗುರಿ ಸಾಧನೆಗಾಗಿ ಅವಿರತ ಶ್ರಮ ಪಡುತ್ತಾರೆ. ಕೊನೆಗೆ ಅಂದುಕೊಂಡಿದನ್ನು ಸಾಧಿಸಿಯೇ ತೀರುತ್ತಾರೆ.
● ಆಳವಾದ ಹೊಕ್ಕುಳು -ಸಾಮುದ್ರಿಕ ಶಾಸ್ತ್ರದ ಹೇಳುವ ಪ್ರಕಾರ ಆಳವಾದ ನಾಭಿ ಹೊಂದಿರುವ ಮಹಿಳೆ ಸುಂದರವಾಗಿರುತ್ತದೆ. ಈ ಮಹಿಳೆಯರು ಸ್ನೇಹ ಜೀವಿಗಳು, ಹಾಗೆಯೇ ತುಂಬಾ ರೋಮ್ಯಾಂಟಿಕ್ ಆಗಿ ಕೂಡ ಇರುತ್ತಾರೆ. ಇಂತಹ ಮಹಿಳೆಯರಿಗೆ ತಮ್ ಇಚ್ಛೆಯ ಜೀವನ ಸಂಗಾತಿ ಸಿಗುತ್ತಾರೆ ಮತ್ತು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇರುತ್ತದೆ.
● ಚಪ್ಪಟೆ ಹೊಕ್ಕುಳು – ಸಾಮೂಹಿಕ ಶಾಸ್ತ್ರ ತಿಳಿಸಿರುವ ಪ್ರಕಾರ ಚಪ್ಪಟೆ ನಾಭಿ ಹೊಂದಿರುವ ಮಹಿಳೆಯರು ಸಿಡುಕು ಸ್ವಭಾವದವರಾಗಿರುತ್ತಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಬಹಳ ಬೇಗ ಇವರಿಗೆ ಕೋಪ ಬರುತ್ತದೆ.
● ಸುತ್ತಿನ ಹೊಕ್ಕುಳು – ಸಾಮುದ್ರಿಕ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಹೊಕ್ಕುಳವು ದುಂಡಾಗಿರುವ ಮಹಿಳೆಯರು ತುಂಬಾ ಬುದ್ಧಿವಂತರಾಗಿರುತ್ತಾರೆ. ಬದುಕಿನಲ್ಲಿ ಆಶಾವಾದಿಗಳಾಗಿದ್ದು, ಇತರರ ಮೇಲೂ ಬಹಳ ಕರುಣೆ ಹೊಂದಿರುತ್ತಾರೆ. ಇಂತಹ ಮಹಿಳೆಯರ ವೈವಾಹಿಕ ಜೀವನವು ತುಂಬಾ ಸಂತೋಷದಿಂದ ಕೂಡಿರುತ್ತದೆ.
● ವಿಶಾಲ ಹೊಕ್ಕುಳ – ಅನೇಕ ಮಹಿಳೆಯರು ಅಗಲವಾದ ಹೊಕ್ಕುಳನ್ನು ಹೊಂದಿರುತ್ತಾರೆ. ಸಾಮುದ್ರಿಕ ಶಾಸ್ತ್ರ ಹೇಳುವ ಪ್ರಕಾರ ಇಂತಹ ಮಹಿಳೆಯರು ತುಂಬಾ ಅನುಮಾನ ಸ್ಶಭಾವದವರಾಗಿರುತ್ತಾರೆ. ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ, ಇವರು ಅಂತರ್ಮುಖಿಗಳಾಗಿರುತ್ತಾರೆ.
● ಮೇಲಿನ ಹೊಕ್ಕುಳು – ಕೆಲವು ಮಹಿಳೆಯರ ನಾಭಿ ಮೇಲ್ಭಾಗದ ಕಡೆಗೆ ದೊಡ್ಡದಾಗಿರುತ್ತದೆ. ಹಾಗೆಯೇ ಇದು ಆಳವಾಗಿರುತ್ತದೆ. ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಇಂತಹ ಮಹಿಳೆಯರು ಸದಾ ಲವಲವಿಕೆಯಿಂದ ಇರುತ್ತಾರೆ ಎಲ್ಲರ ಜೊತೆ ಬೆರೆಯುವ ಸ್ನೇಹ ಸ್ವಭಾವ ಇರುತ್ತದೆ. ಜೀವನದಲ್ಲಿ ಇವರು ಬಹಳ ಸಂತೋಷದಿಂದ ಇರುತ್ತಾರೆ.
● ಉಬ್ಬುವ ಮತ್ತು ದೊಡ್ಡ ಹೊಕ್ಕುಳು – ಸಾಮುದ್ರಿಕ ಶಾಸ್ತ್ರ ಹೇಳಿರುವ ಪ್ರಕಾರ ಬೆಳೆದ ಮತ್ತು ದೊಡ್ಡದಾದ ನಾಭಿ ಇರುವ ಮಹಿಳೆಯರು ತುಂಬಾ ಮೊಂಡುತನದ ಸ್ವಭಾವವನ್ನು ಹೊಂದಿರುತ್ತಾರೆ. ಬಹಳ ಹಠಮಾರಿಗಳಾಗಿದ್ದು ಇವರಿಷ್ಟಕ್ಕೆ ಎಲ್ಲವೂ ನಡೆಯಬೇಕು ಎಂದು ಬಯಸುತ್ತಾರೆ. ಇದೇ ಕಾರಣಕ್ಕಾಗಿ ಅನೇಕನ ಜೊತೆ ಮನಸ್ತಾಪವನ್ನು ಮಾಡಿಕೊಳ್ಳುತ್ತಾರೆ. ಸದಾ ಮಾನಸಿಕ ಗೊಂದಲದಲ್ಲಿರುವ ಕಿರಿಕಿರಿ ಉಂಟು ಮಾಡುವ ಗುಣದವರಾಗಿರುತ್ತಾರೆ.
● ಆಳವಿಲ್ಲದ ಹೊಕ್ಕುಳು – ಸಾಮುದ್ರಿಕ ಶಾಸ್ತ್ರದಲ್ಲಿರುವ ಪ್ರಕಾರ, ಆಳವಿಲ್ಲದ ಹೊಕ್ಕಳಿರುವ ಮಹಿಳೆಯರು ಕೂಡ ತುಂಬಾ ಕಿರಿಕಿರಿ ಸ್ವಭಾವದವರಾಗಿರುತ್ತಾರೆ. ಈ ಸ್ವಭಾವದಿಂದ ಇತರರಿಗೂ ಕೂಡ ಬೇಸರ ಮಾಡಿಸುತ್ತಾರೆ.