ಅನ್ನಭಾಗ್ಯ ಹಣ ಪಡೆಯದವರಿಗೆ ಹೊಸ ನಿಯಮ ಜಾರಿ, ಈ ರೀತಿ ಮಾಡಿ ಹಣ ನಿಮ್ಮ ಅಕೌಂಟ್ ಗೆ ಜಮೆ ಆಗುತ್ತೆ.!

ಕರ್ನಾಟಕ ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಗ್ಯಾರಂಟಿ ಯೋಜನೆಗಳು (Gyaranty Schemes) ಬಾರಿ ಸದ್ದು ಮಾಡುತ್ತಿವೆ. ಕರ್ನಾಟಕ ವಿಧಾನಸಭಾ ಚುನಾವಣೆ-2023 (Karnataka Assembly Election-2023) ರ ವೇಳೆ ಕಾಂಗ್ರೆಸ್ ಪಕ್ಷದ ಆಶ್ವಾಸನೆಯಾಗಿದ್ದ ಪಂಚ ಖಾತ್ರಿ ಯೋಜನೆಗಳು ಬಹುಮತ ಬೆಂಬಲ ನೆರವಿನಿಂದ ಸರ್ಕಾರ ಸ್ಥಾಪನೆಯಾದ ಮೇಲೆ ಹಂತ ಹಂತವಾಗಿ ಜಾರಿಗೆ ಬಂದಿದೆ.

WhatsApp Group Join Now
Telegram Group Join Now

ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮುಖ್ಯಸ್ಥೆ ಮಹಿಳೆಗೆ ರೂ.2000, ಯುವನಿಧಿ ಯೋಜನೆಯಡಿ ಪದವಿ (ರೂ.3,000) ಹಾಗೂ ಡಿಪ್ಲೋಮಾ ಪದವೀಧರರಿಗೆ(ರೂ.1500) ನಿರುದ್ಯೋಗ ಭತ್ಯೆ ಮತ್ತು ಅನ್ನ ಭಾಗ್ಯ ಯೋಜನೆಯಡಿ 10KG ಪಡಿತರ ಎನ್ನುವುದು ಕಾಂಗ್ರೆಸ್ ಪಕ್ಷದ ಭರವಸೆಯಾಗಿತ್ತು.

ಅಂತೆಯೇ ಹಂತಹಂತವಾಗಿ ಎಲ್ಲಾ ಯೋಜನೆಗಳು ಕೂಡ ಜಾರಿಗೆ ಬಂದಿವೆ ಆದರೆ ಅನ್ನಭಾಗ್ಯ ಯೋಜನೆಯಲ್ಲಿ (Annabhagya Scheme issue) ಕೆಲ ಮಾರ್ಪಾಡುಗಳಾಗಿದ್ದು ಯೋಜನೆ ಸರಿಯಾಗಿ ತಲುಪುತ್ತಿಲ್ಲ ಎನ್ನುವುದು ಅನೇಕರ ದೂರಾಗಿತ್ತು. ಈ ವಿಚಾರವಾಗಿ ಒಂದು ಲೇಟೆಸ್ಟ್ ಅಪ್ಡೇಟ್ ಇದೆ.

ಈ ಸುದ್ದಿ ಓದಿ:- ಹೈನುಗಾರಿಕೆಯಲ್ಲಿ ಯಶಸ್ಸು ಪಡೆದಿರುವ ಲೇಡಿಸ್ ಸೂಪರ್ ಸ್ಟಾರ್, ತಿಂಗಳಿಗೆ 7 ಲಕ್ಷದವರೆಗೆ ಆದಾಯ.!

ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿ ಸದಸ್ಯನಿಗೆ 10Kg ಪಡಿತರ ನೀಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಆದರೆ ಈಗ ದಾಸ್ತಾನು ಕೊರತೆ ಉಂಟಾಗಿರುವುದರಿಂದ ಕೇಂದ್ರ ಸರ್ಕಾರದ 5Kg ಉಚಿತ ಪಡಿತರದ ಜೊತೆಗೆ ರಾಜ್ಯ ಸರ್ಕಾರದ ಕಡೆಯಿಂದ 5Kg ಪಡಿತರದ ಬದಲಾಗಿ Kg ಗೆ 34 ರೂಪಾಯಿಯಂತೆ ಪ್ರತಿಯೊಬ್ಬ ಸದಸ್ಯನಿಗೆ 5 Kg ಅಕ್ಕಿ ಬದಲಿಗೆ 170 ರೂಪಾಯಿಯನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡುತ್ತಿದೆ.

2023ನೇ ಜುಲೈ ತಿಂಗಳಿನಿಂದ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯಲ್ಲಿದ್ದು ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಆರಂಭದಿಂದಲೂ BPL ರೇಷನ್ ಕಾರ್ಡ್ ಇದ್ದರೂ ಅನೇಕರು ಹಣ ತಲುಪಿಲ್ಲ ದೂರು ಹೇಳುತ್ತಿದ್ದಾರೆ. ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗದೆ ಇರುವುದು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಆಗದೆ ಇರುವುದು.

ರೇಷನ್ ಕಾರ್ಡ್ ಇ-ಕೆವೈಸಿ ಆಗದೆ ಇರುವುದು ಇತ್ಯಾದಿ ತಾಂತ್ರಿಕ ಹಾಗೂ ಇನ್ನಿತರ ತಾಂತ್ರಿಕೇತರ ಕಾರಣಗಳಿಂದ ಹಣ ವರ್ಗಾವಣೆ ಆಗದೆ ಇರುವುದಕ್ಕೆ ಕಾರಣಗಳನ್ನು ತಿಳಿಸಿ ಪಡಿತರ ಅಂಗಡಿಗಳಲ್ಲಿ ಕ್ಯಾಂಪ್ ಗಳನ್ನು ಏರ್ಪಡಿಸಿ ಸಮಸ್ಯೆ ಬಗೆಹರಿಸಿ ಕೊಡಲಾಗಿತ್ತು ಮತ್ತು ಆರು ತಿಂಗಳವರೆಗೆ ರೇಷನ್ ಕಾರ್ಡ್ ಪಡೆಯದಿದ್ದ ಸದಸ್ಯರಿಗೆ ಅನ್ನ ಭಾಗ್ಯ ಯೋಜನೆ ಹಣ ತಲುಪುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು.

ಈ ಸುದ್ದಿ ಓದಿ:- ವಾಹನ ಪ್ರಿಯರಿಗೆ ಸಿಹಿ ಸುದ್ದಿ 73km ಮೈಲೇಜ್ ನೀಡುವ ಹೊಸ ಹೀರೋ ಬೈಕ್ ಬಿಡುಗಡೆ.! ಬೆಲೆ ಎಷ್ಟು ನೋಡಿ.!

ಇದೆಲ್ಲವೂ ಸರಿಹೋದ ಬಳಿಕ ಇದ್ದಕ್ಕಿದ್ದಂತೆ ಕಳೆದೆರಡು ತಿಂಗಳುಗಳಿಂದ ಅನ್ನ ಭಾಗ್ಯ ಯೋಜನೆ ಹಣ ನಿಂತು ಹೋಗಿದೆ. ಇದುವರೆಗೂ ಪ್ರತಿ ತಿಂಗಳು ತಪ್ಪದೇ ಹಣ ಪಡೆಯುತ್ತಿದ್ದವರು ಕೂಡ ಮೇ ಹಾಗೂ ಜೂನ್ ತಿಂಗಳ ಹಣ ಪಡೆದಿಲ್ಲ. ಜೂನ್ ತಿಂಗಳ ಹಣ ವರ್ಗಾವಣೆಯಾಗಲು ಇನ್ನು ಸಮಯವಿದ್ದು ಮೇ ತಿಂಗಳ ಹಣ ಬರದೆ ಇರುವುದು ಯೋಜನೆ ಸ್ಥಗಿತವಾಗುತ್ತದೆಯೇ ಎನ್ನುವ ಅನುಮಾನ ಹುಟ್ಟು ಹಾಕಿದೆ.

ಆದರೆ ಮಾನ್ಯ ಮುಖ್ಯಮಂತ್ರಿಗಳೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಲೋಕಸಭಾ ಚುನಾವಣೆಗೂ ಮುಂಚೆ ಪ್ರತಿ ತಿಂಗಳು ಸರಿಯಾಗಿ ಹಣ ವರ್ಗಾವಣೆ ಆಗಿದ್ದು ಚುನಾವಣೆ ನಂತರ ಹಣ ವರ್ಗಾವಣೆ ಆಗಿಲ್ಲ ಎನ್ನುವ ಜನರ ಗೊಂದಲಕ್ಕೆ ತೆರೆ ಎಳೆದ ಮಾನ್ಯ ಮುಖ್ಯಮಂತ್ರಿಗಳು ಯಾವುದೇ ಗ್ಯಾರೆಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ, ಖಂಡಿತವಾಗಿಯೂ ಈ ತಿಂಗಳ 20ನೇ ತಾರೀಕಿನ ಒಳಗೆ ಅನ್ನ ಭಾಗ್ಯ ಯೋಜನೆ ಹಣ ತಲುಪಲಿದೆ. ಈಗಾಗಲೇ ಇಲಾಖೆಗೆ ಹಣ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಮಹಿಳೆಯರು ಹಣ ಬಂದಿಲ್ಲ ಎಂದು ಗೊಂದಲಗೊಳ್ಳುವುದು ಬೇಡ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now