ಬ್ಯಾಂಕಿಂಗ್ ವಿಚಾರದಲ್ಲಿ ಕೆಲವು ನಿಯಮಗಳನ್ನು ಪ್ರತಿಯೊಬ್ಬ ಗ್ರಾಹಕನು ಕೂಡ ತಿಳಿದುಕೊಂಡಿರಲೇಬೇಕು ಇಲ್ಲವಾದಲ್ಲಿ ಇದಕ್ಕೆ ಸಂಬಂಧಪಟ್ಟ ಹಾಗೆ ವಿಷಯಗಳು ಸಂಭವಿಸಿದಾಗ ಸಮಸ್ಯೆಗೆ ಸಿಲುಕುತ್ತೇವೆ. ಈಗಂತೂ ಬ್ಯಾಂಕ್ ಅಕೌಂಟ್ ಪ್ರತಿಯೊಬ್ಬರಿಗೂ ಇದೆ, ನಮ್ಮ ಮನೆಯಲ್ಲಿರುವ ವೃದ್ಧರು ಪಿಂಚಣಿ ಪಡೆಯುವುದರಿಂದ ಹಿಡಿದು, ಸ್ಕಾಲರ್ಶಿಪ್ ಪಡೆಯುವ ವೇತನ ಪಡೆಯುವ ಮಕ್ಕಳು, ಸರ್ಕಾರಿ ಯೋಜನೆಗಳ ಸಹಾಯಧನ ಪಡೆಯುವ ಗೃಹಿಣಿಯರು ಹೀಗೆ ಎಲ್ಲರೂ ಕೂಡ ಒಂದಾದರೂ ಬ್ಯಾಂಕ್ ಅಕೌಂಟ್ ಹೊಂದಿರುತ್ತಾರೆ.
ಒಂದು ವೇಳೆ ಅಕಸ್ಮಾತ್ ಯಾವುದಾದರೂ ವ್ಯಕ್ತಿ ಮ’ರ’ಣ ಹೊಂದಿದಾಗ ಆತನ ಖಾತೆಯಲ್ಲಿ ಹಣ ಇದ್ದರೆ ಅದನ್ನು ಹೇಗೆ ಅವರ ಕುಟುಂಬ ಪಡೆದುಕೊಳ್ಳಬೇಕು ಎನ್ನುವುದು ಎಲ್ಲರಿಗೂ ತಿಳಿದಿರಬೇಕು ಹಾಗಾಗಿ ಇಂದು ಈ ಅಂಕಣದಲ್ಲಿ ಇದರ ಬಗ್ಗೆ ವಿಷಯ ಪ್ರಸ್ತಾಪಿಸುತ್ತಿದ್ದೇವೆ.
ಇದಕ್ಕೆ ಎರಡು ವಿಧಾನಗಳಿವೆ ಬ್ಯಾಂಕ್ ಖಾತೆಗೆ ಕೆಲವರು ನಾಮಿನೇ ಮಾಡಿರುತ್ತಾರೆ. ನಾಮಿನಿ ಫೆಸಿಲಿಟಿ ಇದ್ದಾಗ ಇದು ಬಹಳ ಸರಳವಾಗಿ ಮುಗಿಯುತ್ತದೆ ಮತ್ತು ಇನ್ನು ಕೆಲವರು ಹೇಗಿದ್ದರೂ ATM ಕಾರ್ಡ್ ಇದೆ, ಇದರಿಂದ ಹಣ ಡ್ರಾ ಮಾಡಿಕೊಂಡು ಸುಮ್ಮನಾಗೋಣ ಎಂದುಕೊಳ್ಳುತ್ತಾರೆ. ಆದರೆ ಇದು ತಪ್ಪಾದ ವಿಧಾನ ನೀವು ಸ’ತ್ತ ವ್ಯಕ್ತಿಯ ಅಕೌಂಟ್ ಕ್ಲೋಸ್ ಕೂಡ ಮಾಡಬೇಕಾಗುತ್ತದೆ.
ಈ ಸುದ್ದಿ ಓದಿ:- SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಬೇಸರದ ಸುದ್ದಿ.!
ATM ನಿಂದ ನೀವು ಆತನ ಉಳಿತಾಯ ಖಾತೆಯಲ್ಲಿದ್ದ ಹಣ ಪಡೆಯಬಹುದು ಹೊರತು ಆತ ಇನ್ಯಾವುದಾದರೂ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದರೆ ಅದನ್ನು ATM ನಿಂದ ಪಡೆಯಲು ಸಾಧ್ಯವಿಲ್ಲ ಹಾಗಾಗಿ ನೀವು ಬ್ಯಾಂಕ್ ಗೆ ಹೋಗಿ ಖಾತೆಗೆ ಸಂಬಂಧಪಟ್ಟ ದಾಖಲೆಗಳನ್ನು ಸರಂಡರ್ ಮಾಡಿ, ಖಾತೆ ಕ್ಲೋಸ್ ಮಾಡಿಸುವುದರಿಂದ ಈ ಎಲ್ಲಾ ಯೋಜನೆಗಳ ಮಾಹಿತಿ ತಿಳಿಯುತ್ತದೆ ಮತ್ತು ಅವುಗಳನ್ನು ಕ್ಲೈಮ್ ಮಾಡಬಹುದು.
ಇನ್ನೊಂದು ವಿಧಾನ ಇದೆ ಒಂದು ವೇಳೆ ನಾಮಿನಿ ಮಾಡದೆ ಇದ್ದರೆ ಯಾವ ರೀತಿ ಪಡೆದುಕೊಳ್ಳಬೇಕು ಎಂದು ಇದು ಸ್ವಲ್ಪ ಹೆಚ್ಚಿನ ದಾಖಲೆಗಳನ್ನು ಕೇಳುತ್ತದೆ ಆದರೆ ರಿಸ್ಕ್ ಏನಿಲ್ಲ ಈ ಎರಡು ವಿಧಾನದ ಬಗ್ಗೆ ವಿವರಿಸುತ್ತಿದ್ದೇವೆ.
* ನಾಮಿನಿ ಫೆಸಿಲಿಟಿ ಇದ್ದಾಗ ಆತ ಮಾಡಿದ ಹೂಡಿಕೆ ಯೋಜನೆಗಳಿಗೆ ಆಗಲಿ ಅಥವಾ ಉಳಿತಾಯ ಖಾತೆಗೆ ಆಗಲಿ ನಾಮಿನಿ ಮಾಡಿದ ವ್ಯಕ್ತಿ ಜೊತೆ ಸಂಬಂಧ ಹಾಗೂ ಅವರ ಆಧಾರ್ ಕಾರ್ಡ್ ನೀಡಿರುತ್ತಾರೆ. ಹೀಗಾಗಿ ನಾಮಿನಿ ಆಗಿರುವ ವ್ಯಕ್ತಿ ತನ್ನ ಆಧಾರ್ ಕಾರ್ಡ್ ಮತ್ತು ಆ ಮೃ’ತ ವ್ಯಕ್ತಿಯ ಆಧಾರ್ ಕಾರ್ಡ್, ಆತನ ಬ್ಯಾಂಕ್ ಅಕೌಂಟ್ ಹಾಗೂ ಅಕೌಂಟ್ ಗೆ ಸಂಬಂಧಿಸಿದ ದಾಖಲೆಗಳು ಮತ್ತು ಮ.ರಣ ಪ್ರಮಾಣ ಪತ್ರ ನೀಡುವುದರ ಮೂಲಕ ಇದನ್ನು ಕ್ಲೈಮ್ ಮಾಡಬಹುದು ಒಂದು ವೇಳೆ ಜಂಟಿ ಖಾತೆ ಇದ್ದರೆ ಅದನ್ನು ಸಿಂಗಲ್ ಖಾತೆ ಮಾಡಿಸಿಕೊಳ್ಳಬಹುದು.
ಈ ಸುದ್ದಿ ಓದಿ:- ಗುಪ್ತಚರ ಇಲಾಖೆ ನೇಮಕಾತಿ.! ಆಸಕ್ತರು ಅರ್ಜಿ ಸಲ್ಲಿಸಿ ವೇತನ 69,100
* ಒಂದು ವೇಳೆ ನಾಮಿನಿ ಫೆಸಲಿಟಿ ಉಪಯೋಗಿಸಿಕೊಳ್ಳದೆ ಇದ್ದರೆ ನೀವು ಮ.ರಣ ಪ್ರಮಾಣ ಪತ್ರದ ಜೊತೆ ನಿಮ್ಮ ವಂಶವೃಕ್ಷವನ್ನು ಕೂಡ ನೀಡಬೇಕಾಗುತ್ತದೆ ಹೀಗೆ ಕಾನೂನು ಬದ್ಧವಾಗಿ ಹೋಗಿ ನಿಮ್ಮ ಕುಟುಂಬದ ಅಂದರೆ ಆ ವ್ಯಕ್ತಿಗೆ ಸಂಬಂಧಿಸಿದೆ ವಾರಸುದಾರರುಗಳು ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಿ.
ಬ್ಯಾಂಕ್ ನಲ್ಲಿ ಕೇಳುವ ದಾಖಲೆಗಳನ್ನು ನೀಡಿ ಬ್ಯಾಂಕ್ ನಿಯಮಗಳ ಪ್ರಕಾರವಾಗಿ ಕ್ಲೈಮ್ ಮಾಡಿಕೊಳ್ಳಬಹುದು ಸಾಮಾನ್ಯವಾಗಿ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಮತ್ತು ಮೃ’ತ ವ್ಯಕ್ತಿಯ ಆಧಾರ್ ಕಾರ್ಡ್, ಆತನ ಪಾಸ್ ಬುಕ್ ಪಾಸ್ ಬುಕ್, ಮರಣ ಪ್ರಮಾಣ ಪತ್ರ, ವಂಶವೃಕ್ಷ ಮತ್ತು ಇನ್ನಿತರ ದಾಖಲೆಗಳನ್ನು ಕೇಳಲಾಗುತ್ತದೆ.