ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆಲ್ಲರಿಗೂ ಕೂಡ ಭಾರತೀಯ ಗುಪ್ತಚರ ಇಲಾಖೆಯಿಂದ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಈ ಬಾರಿ 600ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (job Notification) ಬಿಡುಗಡೆಗೊಳಿಸಲಾಗಿದೆ. ಆಸಕ್ತ ಮತ್ತು ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದಾಗಿದ್ದು ಉತ್ತಮ ವೇತನ ಶ್ರೇಣಿಯೊಂದಿಗೆ ಇನ್ನಿತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ನೀವು ಕೂಡ ಆಸಕ್ತರಾಗಿದ್ದರೆ ನಿಮಗಾಗಿ ನೋಟಿಫಿಕೇಶನ್ ನಲ್ಲಿ ಯಾವೆಲ್ಲ ಪ್ರಮುಖ ಅಂಶಗಳಿದೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಅಂಕಣವನ್ನು ಕೊನೆಯವರೆಗೂ ಓದಿ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಗ್ರಾಮ ಪಂಚಾಯತಿಯಲ್ಲಿ ಸೂಪರ್ವೈಸರ್ ಹುದ್ದೆಗಳ ನೇಮಕಾತಿ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.! ವೇತನ 15,196/-
ನೇಮಕಾತಿ ಸಂಸ್ಥೆ:- ಭಾರತೀಯ ಗುಪ್ತಚರ ಇಲಾಖೆ (Intelligence Bureau of India)
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 660 ಹುದ್ದೆಗಳು
ಹುದ್ದೆಗಳ ವಿವರ:-
* ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ಗ್ರೇಡ್ 1) / ಕಾರ್ಯನಿರ್ವಾಹಕ 80 ಹುದ್ದೆಗಳು
* ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ಗ್ರೇಡ್ 2) / ಕಾರ್ಯನಿರ್ವಾಹಕ – 136 ಹುದ್ದೆಗಳು
* ಜೂನಿಯರ್ ಇಂಟಿಲಿಜೆನ್ಸ್ ಆಫೀಸರ್ (ಗ್ರೇಡ್ 1) / ಎಕ್ಸಿಕ್ಯೂಟಿವ್ – 120 ಹುದ್ದೆಗಳು
* ಜೂನಿಯರ್ ಇಂಟಿಲಿಜೆನ್ಸ್ ಆಫೀಸರ್ (ಗ್ರೇಡ್ 2) / ಎಕ್ಸಿಕ್ಯೂಟಿವ್ – 170 ಹುದ್ದೆಗಳು.
* ಭದ್ರತಾ ಸಹಾಯಕ / ಕಾರ್ಯನಿರ್ವಾಹಕ – 100 ಹುದ್ದೆಗಳು
* ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ / ಟೆಕ್ – 08 ಹುದ್ದೆಗಳು
* ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ಗ್ರೇಡ್ – 2) ಸಿವಿಲ್ ವರ್ಕ್ – 3 ಹುದ್ದೆಗಳು
* ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ (ಗ್ರೇಡ್ – 1)
* ಮೋಟಾರ್ ಟ್ರಾನ್ಸ್ಪೋರ್ಟ್ – 22 ಹುದ್ದೆಗಳು
* ಹಲ್ವಾಯಿ ಮತ್ತು ಅಡುಗೆ – 10 ಹುದ್ದೆಗಳು
* ಉಸ್ತುವಾರಿ – 05 ಹುದ್ದೆಗಳು
* ವೈಯಕ್ತಿಕ ಸಹಾಯಕ – 05 ಹುದ್ದೆಗಳು
* ಪ್ರಿಂಟಿಂಗ್ ಪ್ರೆಸ್ ಆಪರೇಟರ್ – 01 ಹುದ್ದೆಗಳು
ಉದ್ಯೋಗ ಸ್ಥಳ:- ಭಾರತದಾದ್ಯಂತ ಇರುವ ಯಾವುದೇ ಗುಪ್ತಚರ ಇಲಾಖೆ ಕಛೇರಿಗಳಲ್ಲಿ…
ವೇತನ ಶ್ರೇಣಿ:- ಮಾಸಿಕವಾಗಿ ರೂ.21,700 ರಿಂದ ರೂ.69,100
ಈ ಸುದ್ದಿ ಓದಿ:- ಮನೆ, ಜಮೀನು, ಸೈಟ್ ಇನ್ನಿತರ ಆಸ್ತಿ ಖರೀದಿ ಮಾಡುವವರಿಗೆ ಹೊಸ ರೂಲ್ಸ್ ಜಾರಿ.!
ಶೈಕ್ಷಣಿಕ ವಿದ್ಯಾರ್ಹತೆ:-
* ಆಯಾ ಹುದ್ದೆಗಳಿಗೆ ಅನುಸಾರವಾಗಿ SSLC / PUC / ಡಿಪ್ಲೋಮೋ / ಪದವಿ / ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 56 ವರ್ಷಗಳು
* ಗರಿಷ್ಠ ವಯೋಮಿತಿ ಹುದ್ದೆಗಳಿಗೆ ಅನುಸಾರವಾಗಿ ಬೇರೆ ಬೇರೆಯಾಗಿರುತ್ತದೆ.
* ಕೆಲವು ವರ್ಗಗಳಿಗೆ ಮೀಸಲಾತಿಯ ಅನುಸಾರ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
* ಆಫ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು
* ಗುಪ್ತಚರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನೋಟಿಫಿಕೇಶನ್ ಓದಿಕೊಂಡು ಅರ್ಜಿ ಸಲ್ಲಿಸುವ ಫಾರ್ಮೆಟ್ ಪ್ರಿಂಟೌಟ್ ಪಡೆಯಿರಿ
* ಕೇಳಲಾಗಿರುವ ಎಲ್ಲ ಸ್ವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಪೂರಕ ದಾಖಲೆಗಳ ಪ್ರತಿ ಲಗತಿಸಿ, ಈ ಕೆಳಗೆ ತಿಳಿಸಲಾಗುವ ವಿಳಾಸಕ್ಕೆ ನೀಡಲಾಗಿರುವ ಕಡೆ ದಿನಾಂಕದ ಒಳಗೆ ಅಂಚೆ ಮೂಲಕ ಕಳುಹಿಸಬೇಕು.
* ವಿಳಾಸ:
ಜಂಟಿ ಉಪ ನಿರ್ದೇಶಕ / ಜಿ-3,
ಗುಪ್ತಚರ ಬ್ಯೂರೋ,
ಗೃಹ ವ್ಯವಹಾರಗಳ ಸಚಿವಾಲಯ,
35 ಎಸ್ ಪಿ ಮಾರ್ಗ,
ಬಾಪುಧಾಮ್,
ನವದೆಹಲಿ – 110021
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ಸಂದರ್ಶನ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 13 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 12 ಮೇ, 2024.