ಕಂದಾಯ ಇಲಾಖೆಯಲ್ಲಿ (Revenue Department) ಕಳೆದ ಒಂದು ವರ್ಷಗಳಿಂದ ಸಾಕಷ್ಟು ನಿಯಮಗಳು ಬದಲಾಗಿವೆ ಹಾಗೂ ತಿದ್ದುಪಡಿಗಯೂ ಆಗಿವೆ. ನೂತನ ಕಂದಾಯ ಸಚಿವರಾಗಿ ಇಲಾಖೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕೃಷ್ಣಭೈರೇಗೌಡ ಗೌಡರವರು (Minister Krishna bairegowda) ಅನೇಕ ಜನಪರ ಯೋಜನೆಗಳನ್ನು ಕೈಕೊಂಡು.
ಕಂದಾಯ ಇಲಾಖೆ ಸೇವೆಗಳು ಸಾರ್ವಜನಿಕರಿಗೆ ಆದಷ್ಟು ಸರಳವಾಗಿ ಶೀಘ್ರವಾಗಿ ಸಿಗಲು ಬೇಕಾದರೆ ಎಲ್ಲಾ ಪ್ರಯತ್ನಗಳನ್ನು ಮಾಡಿ ಕೊಟ್ಟು ಇರುವ ಸಮಸ್ಯೆಗಳ ನಿವಾರಣೆಗೂ ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಈಗ ಸಚಿವರ ಕಡೆಯಿಂದ ರಾಜ್ಯದ ಜನತೆಗೆ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಬೆಂಗಳೂರಿನಲ್ಲಿ ಜಾರಿಯಲ್ಲಿದ್ದ ಎನಿವೇರ್ ರಿಜಿಸ್ಟ್ರೇಷನ್ (Anywhere Registration) ಅವಕಾಶವನ್ನು ರಾಜ್ಯದ ಇನ್ನಿತರ ಜಿಲ್ಲೆಗಳಿಗೆ ವಿಸ್ತರಿಸಿದ್ದಾರೆ.
ಈ ಕುರಿತು ಸಚಿವರ ಸ್ವತಃ ಮಾಹಿತಿ ನೀಡಿದ್ದು ಎನಿವೇರ್ ರಿಜಿಸ್ಟ್ರೇಷನ್ ಅಂದರಗ ಏನು? ಸದ್ಯಕ್ಕೆ ಯಾವ ಜಿಲ್ಲೆಯಲ್ಲಿ ಜಾರಿಯಲ್ಲಿದೆ ಮತ್ತು ಉಳಿದ ಯಾವ ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ ಎನ್ನುವ ಪ್ರಮುಖ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ.
ಈ ಸುದ್ದಿ ಓದಿ:- ಕೇವಲ 2 ಘಂಟೆ ಕೆಲಸ ಮಾಡಿದರೆ ಸಾಕು, 80 ಸಾವಿರ ಸುಲಭವಾಗಿ ಸಂಪಾದನೆ ಮಾಡಬಹುದು.!
ಎನಿವೇರ್ ರಿಜಿಸ್ಟ್ರೇಷನ್ ಎಂದರೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ತನ್ನ ಆಸ್ತಿಗೆ ಸಂಬಂಧಿಸಿದ ರಿಜಿಸ್ಟ್ರೇಷನ್ ಮಾಡಿಸಲು ತನ್ನ ತಾಲೂಕಿನ ಉಪನೋಂದಣಿ ಕಚೇರಿಗೆ ಹೋಗುತ್ತಾರೆ, ಎನಿವೇರ್ ನೋಂದಣಿ ವ್ಯವಸ್ಥೆಯಡಿ ಯಾವುದೇ ವ್ಯಕ್ತಿ ನೋಂದಣಿ ದಸ್ತಾವೇಜನ್ನು ಆಯಾ ಜಿಲ್ಲಾ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ (Sub Registrar Office) ನೋಂದಣಿ ಮಾಡಿಕೊಳ್ಳಲು ಅನುಮತಿ ನೀಡುವುದಾಗಿದೆ.
2011ರ ಸಮಯದಿಂದಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಎನಿವೇರ್ ರಿಜಿಸ್ಟ್ರೇಷನ್ (Anywhere Registration) ಸೌಲಭ್ಯ ಜಾರಿಯಲ್ಲಿದೆ. ನೋಂದಣಿ ಕಾಯ್ದೆ 1908ರ ಕಲಂ (5) ಹಾಗೂ ಕಲಂ (6)ಅಡಿ ಇದಕ್ಕೆ ಅನುವು ಮಾಡಿಕೊಡಲಾಗಿದೆ. ಜನಸಾಮಾನ್ಯರಿಗೆ ಆಸ್ತಿ ನೋಂದಣಿ ವಿಚಾರದಲ್ಲಿ ತ್ವರಿತ ಸೇವೆ ಕಲ್ಪಿಸಲು ಗುರಿ ಇಂದ ಹೀಗೆ ಎಲ್ಲಾದರೂ ನೋಂದಣಿ (ಎನಿವೇರ್ ರಿಜಿಸ್ಟ್ರೇಷನ್) ಸೌಲಭ್ಯವನ್ನು ತರಲಾಗಿತ್ತು.
ಪ್ರಾಯೋಗಿಕ ಹಂತದಲ್ಲಿ ಬೆಂಗಳೂರಿನಲ್ಲಿ ಜಾರಿಯಲ್ಲಿದ್ದ ಈ ವ್ಯವಸ್ಥೆಯು ಯಶಸ್ವಿಯಾಗಿರುವ ಕಾರಣ ಶೀಘ್ರವೇ ರಾಜ್ಯಾದ್ಯಂತ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿ:-LIC ಹೊಸ ಸ್ಕೀಮ್ ಕೇವಲ 121 ರೂಪಾಯಿ ಹೂಡಿಕೆ ಮಾಡಿ ಸಾಕು 27 ಲಕ್ಷ ಸಿಗಲಿದೆ.!
ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ, ಬಸವನಗುಡಿ, ಜಯನಗರ, ಶಿವಾಜಿನಗರ ಹಾಗೂ ರಾಜಾಜಿನಗರ ಉಪನೋಂದಣಿ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು, ಯೋಜನೆ ಈಗಷಯಶಸ್ವಿಯಾಗಿದೆ. ಬೆಂಗಳೂರು ನಗರದ ಜಿಲ್ಲಾ ಉಪನೋಂದಣಿ ಕಚೇರಿ ವ್ಯಾಪ್ತಿಯ ಯಾವುದಾದರೂ ಉಪನೋಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಮುಂದಿನ ಹಂತದಲ್ಲಿ ತುಮಕೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾರ್ಚ್ 14ರಿಂದ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ. ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ 72 ಸಬ್ ರಿಜಿಸ್ಟ್ರಾರ್ ಕಚೇರಿಗಳು ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ. ನಿಧಾನವಾಗಿ ರಾಜ್ಯದಾದ್ಯಂತ ವಿಸ್ತರಿಸುವ ಯೋಜನೆಯು ಇದೆ.
ದಸ್ತಾವೇಜುಗಳ ನೋಂದಣಿಯಲ್ಲಿ ಅನಗತ್ಯ ವಿಳಂಬವನ್ನ ತಡೆಯುವುದು, ನೋಂದಣಿ ಪ್ರಕ್ರಿಯೆ ಇನ್ನಷ್ಟು ಸರಳಗೊಳಿಸುವುದು ಹಾಗೂ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಿಬ್ಬಂದಿ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡುವುದು, ದಸ್ತಾವೇಜು ನೋಂದಣಿಯಲ್ಲಿ ಪಾರದರ್ಶಕತೆ ತರಲುಮತ್ತು ತ್ವರಿತ ಸೇವೆ ಒದಗಿಸಿ ಜಲಸಾಮಾನ್ಯರಿಗೆ ಆಗುತ್ತಿರುವ ಅನಗತ್ಯ ವಿಳಂಬ ಹಾಗೂ ಕಚೇರಿಗಳಲ್ಲಿ ಉಂಟಾಗುತ್ತಿರುವ ಜನದಟ್ಟಣೆ ನಿಯಂತ್ರಣ ಮಾಡಲು ಈ ಯೋಜನೆ ಪರಿಣಾಮಕಾರಿಯಾಗಿದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.