ಸರ್ಕಾರದಿಂದ ಹಿರಿಯ ನಾಗರಿಕರಿಗೆ ವೃದ್ದಾಪ್ಯ ವೇತನ (Old age pension), ವಿಧವೆ ಮತ್ತು ಅವಿವಾಹಿತ ಮಹಿಳೆಯರಿಗೆ ಮನಸ್ವಿನಿ ಯೋಜನೆಯಿಂದ ಪಿಂಚಣಿ (Manaswini Scheme pension) ಹಾಗೂ ಅಂಗವಿಕಲರಿಗೂ ಕೂಡ ಪಿಂಚಣಿ ಸಿಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಸಿಗುತ್ತಿರುವ ಈ ಮಾಸಿಕ ಪಿಂಚಣಿಯನ್ನು ಫಲಾನುಭವಿಗಳು ಪೋಸ್ಟ್ ಆಫೀಸ್ (post office) ಮೂಲಕ ನಗದು ಹಣ ಪಡೆಯುತ್ತಾರೆ.
ಅಂಚೆ ಇಲಾಖೆಯ ಸಿಬ್ಬಂದಿಗಳು ಸರ್ಕಾರದಿಂದ ಈ ಹಣವನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವರಿಗೆ ಮಾತ್ರ ಅವರ ಬ್ಯಾಂಕ್ ಖಾತೆಗೆ (Bank account) ಅವರ ಪಿಂಚಣಿ ಹಣವು ಜಮೆ ಆಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಸಹ ಅನೇಕ ಮಂದಿ ಈ ಹಣಕ್ಕಾಗಿ ಅಂಚೆ ಇಲಾಖೆಯವರನ್ನೇ ಕಾಯುವಂತಾಗಿದೆ, ಇದರಿಂದ ಸಾಕಷ್ಟು ಸಮಸ್ಯೆಗಳು ಕೂಡ ಆಗುತ್ತಿದೆ.
ಕಾರ್ ಹೊಂದಿದ್ದವರ BPL ರೇಷನ್ ಕಾರ್ಡ್ ರದ್ದು, ಅಕ್ಕಿ ಬದಲು ಹಣ ಬಂದ್ ಆಹಾರ ಸಚಿವರಿಂದ ಮಹತ್ವದ ಘೋಷಣೆ.!
ಅಂಚೆ ಇಲಾಖೆಗೆ ಕೆಲಸದ ಒತ್ತಡ ಹೆಚ್ಚಿರುವುದರಿಂದ ಸಮಯಕ್ಕೆ ಸರಿಯಾಗಿ ಫಲಾನುಭವಿಗಳಿಗೆ ಹಣ ತಲುಪಿಸಲು ಸಾಧ್ಯವಾಗುವುದಿಲ್ಲ. ಕೆಲವೊಂದು ಸಮಯದಲ್ಲಿ ಮೂರರಿಂದ ನಾಲ್ಕು ತಿಂಗಳವರೆಗೂ ಕೂಡ ತಡವಾಗಿರುವ ಉದಾಹರಣೆಗಳು ಕೂಡ ಇವೆ. ಆಗ ಫಲಾನುಭವಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಸರ್ಕಾರದ ಪಿಂಚಣಿಯನ್ನೇ ನಂಬಿ ಇರುವಂತಹ ಕಡುಬಡವರು ಕೂಡ ಗ್ರಾಮೀಣ ಪ್ರದೇಶದಲ್ಲಿ ಇದ್ದಾರೆ.
ಇಂತಹ ಸಮಯದಲ್ಲಿ ಅಥವಾ ಹಣ ನೀಡಲು ಬಂದ ಸಮಯದಲ್ಲಿ ಫಲಾನುಭವಿಗಳು ಸಿಗದೇ ಇದ್ದಲ್ಲಿ ಸಮಸ್ಯೆ ಕೂಡ ಆಗುತ್ತದೆ. ಇದನ್ನೆಲ್ಲ ತಪ್ಪಿಸುವ ಸಲುವಾಗಿ ಪೋಸ್ಟ್ ಮ್ಯಾನ್ ಇಂದ ಪಡೆಯುತ್ತಿದ್ದ ಹಣವನ್ನು ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಆಗುವಂತೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅದಕ್ಕಾಗಿ ಯಾವ ರೀತಿ ಅರ್ಜಿ ಸಲ್ಲಿಸಬೇಕು, ಏನೆಲ್ಲಾ ದಾಖಲೆಗಳನ್ನು ಕೊಡಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಡಿವೋರ್ಸ್ ಕೊಡ್ತಿಲ್ಲ, ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು ನೋಡಿ.!
ಎರಡು ವಿಧಾನವಾಗಿ ನಿಮ್ಮ ಉಳಿತಾಯ ಖಾತೆಗೆ ಪಿಂಚಣಿ ಹಣ ಬರುವಂತೆ ಮಾಡಬಹುದು
1. ನೀವು ಹೊಂದಿರುವಂತಹ ಬ್ಯಾಂಕ್ ಉಳಿತಾಯ ಖಾತೆಗೆ:-
ನಿಮ್ಮ ಆಧಾರ್ ಕಾರ್ಡ್, ನಿಮ್ಮ ಬ್ಯಾಂಕ್ ಖಾತೆ ವಿವರ, ಹಾಗೂ ಆರ್ಡರ್ ಕಾಪಿ ಪ್ರತಿಯನ್ನು ತೆಗೆದುಕೊಂಡು ಹೋಗಿ ನಿಮ್ಮ ತಾಲೂಕು ಕಚೇರಿಯಲ್ಲಿ ಇರುವ ಖಜಾಂಚಿ ಅಥವಾ ಉಪಪತ್ರಾಂಕಿತ ಎನ್ನುವ ವಿಭಾಗಕ್ಕೆ ಹೋಗಿ ನಿಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ ಅವರು ನೀಡುವ ಅರ್ಜಿಯನ್ನು ಭರ್ತಿ ಮಾಡಿ ಮನವಿ ಮಾಡಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗೆ ಇನ್ನು ಮುಂದೆ ಪಿಂಚಣಿ ಹಣ ಜಮೆ ಆಗುತ್ತದೆ.
ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನ.! ವೇತನ 29,380
ನಿಮಗೆ ಅವಶ್ಯಕತೆ ಬಂದಾಗ ನೀವು ಹಣವನ್ನು ಬ್ಯಾಂಕಿಂದ ವಿಥ್ ಡ್ರಾ ಮಾಡಿಕೊಳ್ಳಬಹುದು. ಬ್ಯಾಂಕ್ ಖಾತೆಗಳಿಗೆ ATM ಕಾರ್ಡ್ ಗಳನ್ನು ಕೂಡ ಹೊಂದಿರುವುದರಿಂದ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಇರುವುದರಿಂದ ಬ್ಯಾಂಕಿಗೆ ಹೋಗದೆ ನೀವು ನಿಮ್ಮ ಅವಶ್ಯಕತೆಗೆ ಆ ಹಣವನ್ನು ಬಳಸಿಕೊಳ್ಳಬಹುದು.
2. ಅಂಚೆ ಖಾತೆಗೆ ವರ್ಗಾವಣೆ ಮಾಡುವ ಮೂಲಕ:-
ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ಗಳು ಇಲ್ಲದೆ ಇದ್ದರೂ ಅಂಚೆ ಕಚೇರಿಗಳು ಇರುತ್ತವೆ. ಅಲ್ಲದೆ ಅವು ಗ್ರಾಮಗಳಲ್ಲಿ ಇರುವುದರಿಂದ ಅಂಚೆ ಠಾಣೆಯಲ್ಲಿ ಖಾತೆ ತೆರೆದು ಈ ಮೇಲೆ ತಿಳಿಸಿದ ರೀತಿಯಲ್ಲಿಯೇ ಅರ್ಜಿ ಸಲ್ಲಿಸಿ ದಾಖಲೆ ಕೊಟ್ಟು ಲಿಂಕ್ ಮಾಡಿಸಿದರೆ ನಿಮ್ಮ ಪಿಂಚಣಿ ಹಣವು ನಿಮ್ಮ ಅಂಚೆ ಕಚೇರಿಯ ಖಾತೆಯಲ್ಲಿ ಉಳಿತಾಯವಾಗುತ್ತಾ ಇರುತ್ತದೆ. ನೀವು ಅವಶ್ಯಕತೆ ಇದ್ದಾಗ ಹೋಗಿ ಹಣವನ್ನು ಪಡೆದುಕೊಳ್ಳಬಹುದು ಹಾಗಾಗಿ ತಪ್ಪದೆ ಈ ಕೆಲಸ ಮಾಡಿ ಹಾಗೂ ಇಂತಹ ಉಪಯುಕ್ತ ಮಾಹಿತಿಯನ್ನು ಇನ್ನಷ್ಟು ಜನರ ಜೊತೆ ಹಂಚಿಕೊಳ್ಳಿ.