ಗೋಮಾಳದ ಜಮೀನನ್ನು ನಮ್ಮ ಹೆಸರಿಗೆ ಸಕ್ರಮ ಮಾಡಿಸಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

 

ದನಕರುಗಳ ಮೇವಿಗಾಗಿ ಮೀಸಲಾಗಿ ಇಟ್ಟಿರುವ ಸರ್ಕಾರದ ಭೂಮಿಯನ್ನು ಮತ್ತು ಆ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅನುಪಯೋಗಿ ಜಮೀನನ್ನು ಗೋಮಾಳ (Gomala) ಜಮೀನು ಎನ್ನುವರು. ಕರ್ನಾಟಕದ ಭೂ ಕಂದಾಯ ನಿಯಮಾವಳಿ 1966ರ ನಿಯಮ 97(1) ರ ಪ್ರಕಾರ ಒಂದು ಗ್ರಾಮದಲ್ಲಿ ಪ್ರತಿ 100 ಜಾನುವಾರುಗಳಿಗೆ ಕನಿಷ್ಠ 12 ಹೆಕ್ಟೇರ್ ಗೋಮಾಳ ಜಮೀನು ಮೀಸಲಿಟ್ಟಿರಬೇಕು ಎಂದು ಕಾನೂನಿದೆ.

ಆದರೆ ಈ ರೀತಿ ದನಕಥು ಜಾನುವಾರುಗಳಿಗಾಗಿ ಮೀಸಲಿಟ್ಟ ಗೋಮಾಳದಲ್ಲಿ ಅನೇಕರು ಅಕ್ರಮವಾಗಿ ಕೃಷಿ ಚಟುವಟಿಕೆ ಮಾಡುತ್ತಾರೆ ಅಥವಾ ಇನ್ನಿತರ ಉಪಯೋಗಕ್ಕಾಗಿ ಅದನ್ನು ಬಳಸಿಕೊಳ್ಳುತ್ತಾರೆ. ಸರ್ಕಾರದ ಅನುಮತಿ ಇಲ್ಲದೆ ಕಬಳಿಸಿಕೊಳ್ಳುತ್ತಾರೆ. ಇವರಿಗೆ ಅದನ್ನು ಸಕ್ರಮ (legal) ಮಾಡಿಕೊಳ್ಳಲು ಅವಕಾಶ ಇದೆಯೇ ಯಾರು ಗೋಮಾಳ ಭೂಮಿಯನ್ನು ಸಕ್ರಮ ಮಾಡಿಕೊಳ್ಳಬಹುದು ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ವೃದ್ಧಾಪ್ಯ ವೇತನ, ವಿಧವಾ ವೇತನ ಅಥವಾ ಯಾವುದೇ ಪಿಂಚಣಿ ಹಣ ಪೋಸ್ಟ್ ಆಫೀಸ್ ಗೆ ಬರುವ ಬದಲು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುವಂತೆ ಮಾಡುವ ವಿಧಾನ.!

2006ರ ನವೆಂಬರ್ 18ರಂದು ಕರ್ನಾಟಕ ಹೈಕೋರ್ಟ್ (High court) ಕರ್ನಾಟಕ ಭೂ ಕಂದಾಯ ಕಾಯ್ದೆ 94 ಎ, ಬಿ, ಸಿ ಪ್ರಕಾರ ಅನಧಿಕೃತವಾಗಿ ಸಾಗುವಳಿ ಮಾಡಿಕೊಳ್ಳುವವರಿಗೂ ಸಕ್ರಮ ಮಾಡಿಕೊಳ್ಳಲು ಅವಕಾಶ ಇದೆ ಎಂದು ಆದೇಶ ನೀಡಿದೆ. ಆದರೆ ಅದಕ್ಕೆ ಕೆಲವು ನಿಯಮಗಳು ಇವೆ. ಆ ಪ್ರಕಾರವಾಗಿ ನೋಡುವುದಾದರೆ ಗೋಮಾಳ ಎನ್ನುವುದು ಸಾರ್ವಜನಿಕ ಆಸ್ತಿ.

ಆದರೆ ಇದನ್ನು ಹಲವು ವರ್ಷಗಳಿಂದ ತನ್ನ ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡು ಬಂದ ರೈತ ಸಕ್ರಮ ಮಾಡಿಕೊಳ್ಳಲು ಅವಕಾಶ ಇದೆ. ರೈತ ಹಾಗೂ ಆತನ ಕುಟುಂಬವು ಸರ್ಕಾರ ನಿಗದಿಪಡಿಸಿರುವ ಅರ್ಹತೆ ಒಳಗಿದ್ದಾಗ ಆ ದಾಖಲೆಗಳ ಪೂರ್ವಾಪರಗಳನ್ನು ಪರಿಶೀಲಿಸಿ ಸಾಗುವಳಿಗೆ ಅನುಮತಿ ನೀಡಲು ಪ್ರತ್ಯೇಕ ಕಾನೂನು ಹಾಗೂ ಭೂ ಮಂಜೂರಾತಿ ಸಮಿತಿ ಇದೆ. ಅವುಗಳ ಪ್ರಮುಖ ಅಂಶವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಕಾರ್ ಹೊಂದಿದ್ದವರ BPL ರೇಷನ್ ಕಾರ್ಡ್ ರದ್ದು, ಅಕ್ಕಿ ಬದಲು ಹಣ ಬಂದ್ ಆಹಾರ ಸಚಿವರಿಂದ ಮಹತ್ವದ ಘೋಷಣೆ.!

● ಈ ಮೊದಲೇ ತಿಳಿಸಿದಂತೆ ಕರ್ನಾಟಕ ಭೂ ಕಂದಾಯ ನಿಯಮಾವಳಿ ಮಿತಿಗಿಂತ ಹೆಚ್ಚಿನ ಗೋಮಾಳ ಲಭ್ಯವಿದ್ದರೆ ಮಾತ್ರ ಅಂತಹ ಗ್ರಾಮಪ್ರದೇಶಗಳಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಬಹುದು ಇದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ನಿಯಮ ಇದೆ.
● ಈ ರೀತಿ ಅರ್ಜಿ ಸಲ್ಲಿಸುವ ರೈತನಿಗೆ 2008ರ ತಿದ್ದುಪಡಿ ನಿಯಮ ಕಾಲಂ 11 ರ ಪ್ರಕಾರ ಸ್ವಂತ ಭೂಮಿ ಇರಬಾರದು. ಆ ಜಮೀನನ್ನೇ ಅವರು ಜೀವನಕ್ಕಾಗಿ ಅವಲಂಬಿಸಿರಬೇಕು.

● ಈ ರೀತಿ ಗೋಮಾಳದಲ್ಲಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತ ಮಾತ್ರ ಅರ್ಜಿ ಸಲ್ಲಿಸಬಹುದು
● ಹೀಗೆ ಅರ್ಜಿ ಸಲ್ಲಿಸಿ ಸಕ್ರಮ ಮಾಡಿಕೊಂಡ ರೈತನು ಅದನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ಬಳಸುವಂತಿಲ್ಲ ಹಾಗೂ ಅದನ್ನು ಪರಭಾರೆ ಮಾಡುವಂತಿಲ್ಲ.
● ಆ ಗೋಮಾಳ ಭೂಮಿಯು ಒಣಭೂಮಿ ಅಥವಾ ಸಾಧಾರಣ ಭೂಮಿಯಾಗಿದ್ದರೆ 2 ಹೆಕ್ಟೇರ್ ವರೆಗೂ ಕೂಡ ಸಕ್ರಮಕ್ಕೆ ಅವಕಾಶ ಇರುತ್ತದೆ.

ಡಿವೋರ್ಸ್ ಕೊಡ್ತಿಲ್ಲ, ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು ನೋಡಿ.!

● ಭೂಮಿಯ ಲಭ್ಯತೆ SC/ST ಮತ್ತು ಸ್ತರದ ಆಧಾರದ ಮೇಲೆ ಗೋಮಾಳದ ಭೂಮಿಯನ್ನು ಮಂಜೂರು ಮಾಡಲಾಗುತ್ತದೆ.
● ಗೋಮಾಳದ ಜಮೀನನ್ನು ಖಾಸಗಿ ಸಂಸ್ಥೆಗೆ ಅಥವಾ ಗಣಿಗಾರಿಕೆಗೆ ಮಂಜೂರು ಮಾಡಬಾರದು ಎಂದು ಕಂದಾಯ ಇಲಾಖೆಯ ಆದೇಶ ಇದೆ. ಗೋಮಾಳದ ಜಮೀನು, ಸರ್ಕಾರದ ಅದೀನದಲ್ಲಿ ಇರುವುದರಿಂದ ಸಾರ್ವಜನಿಕ ಉದ್ದೇಶಗಳಾದ ಸಾರ್ವಜನಿಕ ಶಾಲೆ ಅಥವಾ ಆಸ್ಪತ್ರೆ ನಿರ್ಮಾಣಗಳಿಗೆ ಅದನ್ನು ಬಳಸಬಹುದು. ಗೋಮಾಳ ಜಮೀನಿನ ಸಕ್ರಮದ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ತಾಲ್ಲೂಕಿನ ತಹಶಿಸಿಲ್ದಾರ್ ಕಛೇರಿಯ ಭೂ ನ್ಯಾಯ ಮಂಡಳಿಯಲ್ಲಿ ವಿಚಾರಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

Leave a Comment

%d bloggers like this: