ಆಧಾರ್ ಕಾರ್ಡ್ ಸದ್ಯಕ್ಕೆ ಭಾರತದ ದೇಶದ ನಾಗರಿಕರಿಗೆ ಒಂದು ಪ್ರಮುಖ ದಾಖಲೆಯಾಗಿದೆ. ಎಲ್ಲಾ ಗುರುತಿನ ಚೀಟಿ ಹಾಗೂ ದಾಖಲೆಗಳ ನಡುವೆ ಆಧಾರ್ ಕಾರ್ಡ್ ಅಗ್ರಸ್ಥಾನ ಗಿಟ್ಟಿಸಿಕೊಳ್ಳುತ್ತಿದೆ. ಇತ್ತೀಚೆಗೆ ಆಧಾರ್ ಕಾರ್ಡ್ ಅಲ್ಲಿ ಲೋಪವಿದ್ದರೆ ಅಥವಾ ಆಧಾರ್ ಕಾರ್ಡ್ ಇಲ್ಲ ಎಂದರೆ ಖಾಸಗಿ ಹಾಗೂ ಸರ್ಕಾರಿ ವಲಯದ ಅನೇಕ ಕೆಲಸಗಳು ಆಗುವುದೇ ಇಲ್ಲ. ಇಷ್ಟರಮಟ್ಟಿಗೆ ಆಧಾರ್ ಕಾರ್ಡ್ ನಮ್ಮ ಬದುಕಿನ ಭಾಗವಾಗಿ ಬಿಟ್ಟಿದೆ.
UIDAI ನೀಡುವ ಈ ಪ್ರಮುಖ ಪುರಾವೆಯ ಪ್ರಾಮುಖ್ಯತೆ ಬಗ್ಗೆ ಎಲ್ಲರಿಗೂ ಅರಿವಿದೆ. ಈಗ ಭಾರತದ ಪ್ರತಿಯೊಬ್ಬ ನಾಗರಿಕನು ಕೂಡ ಆಧಾರ್ ಕಾರ್ಡನ್ನು ಹೊಂದಿರಲೇಬೇಕು ಎನ್ನುವ ಕಡ್ಡಾಯ ನಿಯಮ ಕೂಡ ಇದೆ. ಇಂತಹ ಮುಖ್ಯ ದಾಖಲೆಯಾದ ಆಧಾರ್ ಕಾರ್ಡ್ ನ ಮಾಹಿತಿಯನ್ನು ನಾನಾ ಕಾರಣಕ್ಕಾಗಿ ಬದಲಾಯಿಸುವ ಅನಿವಾರ್ಯತೆ ಕೂಡ ಬರುತ್ತದೆ.
ಇದರಲ್ಲಿ ಮುಖ್ಯವಾಗಿ ಹೆಸರು ಮತ್ತು ವಿಳಾಸದ ಬಗ್ಗೆ ಮೊದಲು ಹೇಳಲೇಬೇಕು ಯಾಕೆಂದರೆ ಆಧಾರ್ ಕಾರ್ಡ್ ನೀಡುವ ಸಂಸ್ಥೆಯಾದ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ UIDAI ಹೆಸರು ಮತ್ತು ವಿಳಾಸ ಬದಲಿಸುವುದಕ್ಕೆ ಮಿತಿಯನ್ನು ಹೇರಿದೆ. ಆಧಾರ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ ಲಿಪ್ಯಂತಕರಣ ದೋಷ ಅಥವಾ ಮದುವೆ ಆದ ನಂತರ ಮದುವೆ ಆದ ಮಹಿಳೆಯ ಹೆಸರಿನಲ್ಲಿ ಸೇರ್ಪಡೆಯಾಗುವ ಉಪನಾಮ ಇನ್ನಿತ್ಯಾದಿ ಕಾರಣಗಳಿಂದಾಗಿ ಆಧಾರ್ ಕಾರ್ಡ್ ಅಲ್ಲಿ ಹೆಸರನ್ನು ಬದಲಾಯಿಸುವ ಅನಿವಾರ್ಯತೆ ಎದುರಾಗುತ್ತದೆ.
ಆಗ ನೀವು UIDAI ಪ್ರಾದೇಶಿಕ ಕೇಂದ್ರಕ್ಕೆ ಹೋಗಿ ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಒದಗಿಸಿ ಬಯೋಮೆಟ್ರಿಕ್ ನೀಡುವ ಮೂಲಕ ಆನ್ಲೈನ್ ಅಲ್ಲಿಯೇ ಹೆಸರನ್ನು ಬದಲಾವಣೆ ಮಾಡಿಸಿಕೊಳ್ಳಬಹುದು. ಆದರೆ ಒಬ್ಬ ವ್ಯಕ್ತಿಗೆ ಎರಡು ಬಾರಿ ಮಾತ್ರ ತನ್ನ ಹೆಸರನ್ನು ಸರಿ ಮಾಡಿಸಿಕೊಳ್ಳುವುದಕ್ಕೆ ಅಥವಾ ಬದಲಾಯಿಸಿಕೊಳ್ಳುವುದಕ್ಕೆ ಅನುಮತಿ ಇರುತ್ತದೆ.
ವಿಳಾಸದ ವಿಚಾರದಲ್ಲೂ ಕೂಡ ಈ ರೀತಿ ಬದಲಾವಣೆ ಅನಿವಾರ್ಯವಾಗಿರುತ್ತದೆ. ಯಾಕೆಂದರೆ ಕೆಲಸ ಬದಲಾಯಿಸಿ ಬೇರೆಡೆ ಹೋಗುವಾಗ ಅಥವಾ ಬೇರೆಲ್ಲೋ ಹೋಗಿ ಬದುಕುವ ನಿರ್ಧಾರ ಮಾಡಿದಾಗ ಅಥವಾ ಕೊಟ್ಟಿದ್ದ ಮಾಹಿತಿಯ ಪ್ರಕಾರ ಆಧಾರ್ ಕಾರ್ಡಲ್ಲಿ ವಿಳಾಸ ಇರದೆ ತೊಂದರೆಯಾಗಿದ್ದಾಗ ವಿಳಾಸ ಬದಲಾಯಿಸುವ ಅನಿವಾರ್ಯತೆ ಎದುರಾಗುತ್ತದೆ ಮತ್ತು ಈ ರೀತಿ ತಾವಿರುವ ವಿಳಾಸಕ್ಕೆ ತಮ್ಮ ಆಧಾರ್ ಕಾರ್ಡ್ ವಿಳಾಸ ಹೊಂದಾಣಿಕೆ ಆಗುವುದು ಮುಖ್ಯವಾದ ವಿಷಯವೂ ಹೌದು.
ಈ ಕಾರಣಕ್ಕಾಗಿ UIDAI ಈ ರೀತಿ ಆಧಾರ್ ಕಾರ್ಡ್ ನಲ್ಲಿನ ವಿಳಾಸ ಬದಲಾವಣೆಗೆ ಕೂಡ ಅವಕಾಶ ನೀಡಿದೆ. ಆದರೆ ಒಬ್ಬ ವ್ಯಕ್ತಿ ಒಂದು ಬಾರಿ ಮಾತ್ರ ತನ್ನ ವಿಳಾಸದ ಬದಲಾವಣೆಯನ್ನು ಮಾಡಿಕೊಳ್ಳಬಹುದು. ಈ ರೀತಿ ವಿಳಾಸ ಬದಲಾವಣೆ ಮಾಡಬೇಕು ಎಂದಾಗಲು ಸಹ UIDAIನ ಪ್ರಾದೇಶಿಕ ಕಚೇರಿಗೆ ಹೋಗಿ ಪೂರಕ ದಾಖಲೆಗಳನ್ನು ಒದಗಿಸಿ ಬಯೋಮೆಟ್ರಿಕ್ ಮಾಹಿತಿ ನೀಡುವ ಮೂಲಕ ಆನ್ಲೈನ್ ಅಲ್ಲಿಯೇ ಅಪ್ಲಿಕೇಶನ್ ಹಾಕಿ ಅಪ್ಡೇಟ್ ಮಾಡಿಸಬಹುದು.
ಇನ್ನುಳಿದಂತೆ ಮೊಬೈಲ್ ನಂಬರ್ ಬದಲಾವಣೆ ಕೂಡ ಒಂದು ಪ್ರಮುಖ ವಿಚಾರವೇ. ಯಾಕೆಂದರೆ ಈಗ ಆನ್ಲೈನ್ ಬ್ಯಾಂಕಿಂಗ್ , DBT ಅಥವಾ ಇನ್ಯಾವುದೇ ಯೋಜನೆಗಳ ಭಾಗವಾಗಬೇಕು ಎಂದಾಗ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆಗೂ ಬ್ಯಾಂಕ್ ಖಾತೆಗೆ ನೀಡಿದ ಮೊಬೈಲ್ ಸಂಖ್ಯೆಗೂ, ನಾವು ಬಳಕೆ ಮಾಡುತ್ತಿರುವ ಮೊಬೈಲ್ ಸಂಖ್ಯೆಗೂ ಹೊಂದಾಣಿಕೆ ಇರಬೇಕಾದದ್ದು ಕಡ್ಡಾಯ. ಹಾಗಾಗಿ UIDAI ಮೊಬೈಲ್ ಸಂಖ್ಯೆ ಬದಲಾವಣೆ ಕೂಡ ಅನುಮತಿ ನೀಡಿದೆ. ಆದರೆ ಸದ್ಯಕ್ಕಿನ್ನು ಅದಕ್ಕೆ ಯಾವುದೇ ರೀತಿಯ ಮಿತಿ ಇಲ್ಲ.