ನವಗ್ರಹ ಸಿನಿಮಾ (Navagraha movie) ಕನ್ನಡಿಗರಿಗೆ ಆ ಸಮಯದಲ್ಲಿ ಹಾಲಿವುಡ್ ರೇಂಜ್ ನ ಸಿನಿಮಾವನ್ನು ಕನ್ನಡದಲ್ಲಿ ಪರಿಚಯಿಸಿದ ಸಿನಿಮಾ ಎಂದು ಹೇಳಬಹುದು. ಇಂದಿಗೂ ಕೂಡ ನವಗ್ರಹ ಸಿನಿಮಾ ಹಾಗೂ ಹಾಡುಗಳನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ.
ಆ ಚಿತ್ರದಲ್ಲಿ ಬುದ್ದಿವಂತಿಕೆ, ಕುತಂತ್ರ, ಪ್ರೀತಿ, ಪ್ರೇಮ, ದ್ರೋಹ, ಹಣದ ಬಗ್ಗೆ ವ್ಯಾಮೋಹ, ಸ್ನೇಹ, ದೇಶದ ಬಗ್ಗೆ ಗೌರವ ಹಾಗೂ ನಾಡಿನ ಅಧಿದೇವತೆ ಬಗ್ಗೆ ಭಯಭಕ್ತಿ ಎಲ್ಲವನ್ನು ಕಟ್ಟಿ ತೋರಿಸಲಾಗಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಹೆಸರಾಂತ ಖಳನಾಯಕರುಗಳ ಮಕ್ಕಳು ಅಂದರೆ ಎರಡನೇ ಜನರೇಷನ್ ಕಲಾವಿದರಿದ್ದ ಮಲ್ಟಿ ಸ್ಟಾರ್ ಸಿನಿಮಾ (multistars movie) ನವಗ್ರಹ.
ಈ ಸಿನಿಮಾ ತೆರೆಕಂಡು 15 ವರ್ಷಗಳಾಗಿದ್ದು, ಕನ್ನಡ ಸಿನಿಮಾ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿದೆ. ಕನ್ನಡದಲ್ಲಿ ಒಂದು ಹೊಸ ಪ್ರಯತ್ನ ಎಂದು ಹೇಳಬಹುದು. ಅದಾಗಲೇ ಸ್ಟಾರ್ ಆಗಿ ಮಿಂಚಿದ್ದ ಡಿ ಬಾಸ್ (Darshan) ಮೊಟ್ಟಮೊದಲ ಬಾರಿಗೆ ಸಂಪೂರ್ಣ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡು ಪ್ರಯೋಗಕ್ಕೆ ಒಳಗಾಗಿದ್ದ ಸಿನಿಮಾ ಅದು. ಜನರು ಕೂಡ ಅಷ್ಟರಮಟ್ಟಿಗೆ ಸಿನಿಮಾವನ್ನು ಅಪ್ಪಿ ಒಪ್ಪಿಕೊಂಡರು
ಇಂದಿಗೂ ಕೂಡ ಕನ್ನಡದ ಜನತೆ ಈ ಸಿನಿಮಾದ ಭಾಗ 2 ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಇದೀಗ ಇಷ್ಟು ವರ್ಷಗಳ ಬಳಿಕ ಈ ಸಿನಿಮಾದ ನಿರ್ದೇಶಕರು ಮತ್ತು ದರ್ಶನ್ ಅವರ ಸಹೋದರನಾದ ದಿನಕರ್ ತೂಗುದೀಪ್ (Darshan Brother Dinakar Thugudeep) ಅವರು ನವಗ್ರಹ ಸಿನಿಮಾದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.
ಈ ಸಿನಿಮಾದ ಬಜೆಟ್ ಎಷ್ಟಾಗಿತ್ತು ಬಂದ ಲಾಭ ಎಷ್ಟು, ಸಿನಿಮಾಗೆ ದರ್ಶನ್ ರವರು ತೆಗೆದುಕೊಂಡ ಸಂಭಾವನೆ ಏನು ಎನ್ನುವುದರ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನ ಒಂದರಲ್ಲಿ ಮಾಹಿತಿ ಬಿಟ್ಟು ಕೊಟ್ಟಿದ್ದಾರೆ. ತೂಗುದೀಪ್ ಪ್ರೊಡಕ್ಷನ್ ನಲ್ಲಿ ತೆರೆಕಂಡ ಎರಡನೇ ಚಿತ್ರ ನವಗ್ರಹವಾಗಿತ್ತು. ಜೊತೆ ಜೊತೆಯಲಿ ತೂಗುದೀಪ್ ಪ್ರೊಡಕ್ಷನ್ಸ್ ನ ಮೊದಲ ಚಿತ್ರ ಮತ್ತು ದಿನಕರ್ ತೂಗುದೀಪ ಅವರ ನಿರ್ದೇಶನದ ಮೊದಲ ಚಿತ್ರ ಆಗಿತ್ತು.
ಆದರೆ ದಿನಕರ್ ತೂಗುದೀಪ ಅವರು ಪಿಯುಸಿ ಇರುವಾಗಲೇ ನವಗ್ರಹ ಸಿನಿಮಾ ಲೈನ್ ತಲೆಯಲ್ಲಿ ಇಟ್ಟುಕೊಂಡಿದ್ದರಂತೆ. ಯಾಕೆಂದರೆ ಮೈಸೂರಿನಲ್ಲಿ ಬಾಲ್ಯ ಕಳೆದ ಮತ್ತು ಅರಮನೆ ಹಾಗೂ ಅಲ್ಲಿನ ಸಿಬ್ಬಂದಿ ಜೊತೆ ಅತ್ಯಂತ ಒಡನಾಟ ಹೊಂದಿದ್ದ ಇವರು ಮುಂದೆ ಸಿನಿಮಾ ಮಾಡಿದರೆ ಈ ರೀತಿ ಮಾಡಬೇಕು ಎನ್ನುವುದನ್ನು ತಡೆಯಲಿಟ್ಟುಕೊಂಡಿದ್ದರಂತೆ.
ಅದಕ್ಕೆ ಪುಷ್ಠಿ ಸಿಕ್ಕಿದ್ದು ಇಂಡಸ್ಟ್ರಿ ಗೆ ಬಂದು ಪಳಗಿದ ಮೇಲೆ ಚಿತ್ರ ಮಾಡಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಾಗ ಭಾರತದ ವಿವಿಧ ರಾಜ್ಯಗಳಿಂದ ಬಂದು 9 ಜನರು ಅಂಬಾರಿ ಕದಿಯುವುದಕ್ಕೆ ಪ್ಲಾನ್ ಮಾಡುವ ರೀತಿ ಊಹಿಸಿಕೊಂಡಿದ್ದರಂತೆ ಆದರೆ ಕಥೆ ಹೇಳುವ ಸಮಯದಲ್ಲಿ ಕನ್ನಡದ ಕಲಾವಿದರನ್ನು ಹಾಕಿಕೊಳ್ಳೋಣ ಮತ್ತು ಅಂತಿಮವಾಗಿ ವಿಲನ್ ಮಕ್ಕಳನ್ನು ಹಾಕಿಕೊಳ್ಳೋಣ ಎನ್ನುವ ನಿರ್ಧಾರಕ್ಕೆ ಬರಲಾಯಿತಂತೆ.
ಆ ಸಮಯಕ್ಕಾಗಲೇ ಸೃಜನ್, ವಿನೋದ್ ಪ್ರಭಾಕರ್, ನಾಗೇಂದ್ರ ಅರಸ್, ಸೌರವ್, ತರುಣ್ ಸುದೀಪ್ ಎಲ್ಲರೊಂದಿಗೆ ಆತ್ಮೀಯ ಒಡನಾಟ ಇದ್ದ ಕಾರಣಕ್ಕಾಗಿ ಇವರನ್ನು ಒಪ್ಪಿಸಲಾಯಿತಂತೆ. ನವಗ್ರಹ ಸಿನಿಮಾ ಕಿರುತೆರೆಯಲ್ಲಿ ಅದೆಷ್ಟು ಬಾರಿ ಪ್ರಸಾರವಾಗಿದೆಯೋ, ಆದರೂ ಕೂಡ ಪ್ರತಿಬಾರಿಯೂ ನಮ್ಮನ್ನು ಟಿವಿ ಮುಂದೆ ಹಿಡಿದಿಟ್ಟುಕೊಳ್ಳುತ್ತದೆ ಹಾಗೆ ಸಿನಿಮಾ ಬಗೆಗಿನ ಮಾತು ಕೂಡ.
ಅಂತಿಮವಾಗಿ ಸಿನಿಮಾ ಬಜೆಟ್ ಬಗ್ಗೆ ಹೇಳುವುದಾದರೆ ಈ ಸಿನಿಮಾಗೆ ಆಗಿನ ಸಮಯದಲ್ಲಿಯೇ ಐದರಿಂದ ಐದೂವರೆ ಕೋಟಿ ಖರ್ಚಾಗಿತ್ತಂತೆ ಮತ್ತು ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ಒಂದು ಶೇರ್, ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದ ಹೊಂಬಾಳೆ ಫಿಲಂಸ್ ಖ್ಯಾತಿಯ ವಿಜಯ್ ಕಿರಗಂದೂರ್ ಅವರಿಗೆ ಒಂದು ಶೇರ್ ಮತ್ತು ದಿನಕರ್ ಹಾಗೂ ಅವರಿಗೆ ತಾಯಿಗೆ ಒಂದು ಶೇರ್ ಎಂದು ಡೀಲ್ ಆಗಿತ್ತಂತೆ.
ಸಿನಿಮಾ ಗಳಿಕೆ ಬಜೆಟ್ ಮೀರಿ ಬಾಕ್ಸ್ ಆಫೀಸ್ ಉಡೀಸ್ ಮಾಡಿ ಲಾಭ ತಂದು ಕೊಟ್ಟಿತ್ತು. ಆ ಬಗ್ಗೆ ನಾನು ಇಂದಿಗೂ ಲೆಕ್ಕಚಾರ ಇಟ್ಟುಕೊಂಡಿಲ್ಲ. ಎಲ್ಲಾ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು ನಮ್ಮ ಮ್ಯಾನೇಜರ್ ಸೀನ ಅವರು ನೋಡಿಕೊಳ್ಳುತ್ತಿದ್ದರು. ಸಿನಿಮಾವನ್ನು ಅಂದುಕೊಂಡಂತೆ ತೆರೆ ಮೇಲೆ ತರುವುದಷ್ಟೇ ನನ್ನ ಜವಾಬ್ದಾರಿ ಆಗಿತ್ತು.
ಅನೇಕ ಬಾರಿ ಸಿನಿಮಾ ಬಜೆಟ್ ಹೆಚ್ಚಾಯ್ತು ಅನಿಸುತ್ತಿತ್ತು ಆದರೆ ಕಥೆಗೆ ಅದು ಬೇಕು ನಾನು ಕಾಂಪ್ರಮೈಸ್ ಆದರೆ ಜನರು ಕೂಡ ಕಾಂಪ್ರಮೈಸ್ ಆಗಿ ಬಿಡುತ್ತಾರೆ ಎಂದು ಅಂದುಕೊಂಡೆ. ಸಿಂಹ ಘರ್ಜನೆ, ಅರಮನೆ ದರ್ಬಾರ್ ಹಾಲ್, ಹಾಗೂ ಸುರಂಗ ಮಾರ್ಗಕ್ಕೆ ಆಗಿನ ಕಾಲದಲ್ಲಿ ಸೆಟ್ ಹಾಕಲು 45 ಲಕ್ಷ ಖರ್ಚಾಯ್ತು ಈಗಿನ ಅಂದಾಜಿನಲ್ಲಿ 1.5ಕೋಟಿ ಆಗುತ್ತದೆ.
ಆದರೆ 24 ಗಂಟೆಯಲ್ಲಿ ಶೂಟಿಂಗ್ ಮುಗಿದು ಹೋಯಿತು ನಮ್ಮದೇ ಹೋಂ ಬ್ಯಾನರ್ ಮತ್ತು ವಿಜಯ್ ಸರ್ ಇದ್ದಿದ್ದರಿಂದ ಇದು ಸಾಧ್ಯವಾಯಿತು ಬೇರೆ ಅವರಾಗಿದ್ದರೆ ಯಾರು ಒಪ್ಪುತ್ತಿರಲಿಲ್ಲ. ಆಗ ತೆಗೆದುಕೊಂಡ ಡಿಸಿಷನ್ ಗೆ ಎಲ್ಲರೂ ಶಾ-ಕ್ ಆಗಿದ್ದರು ನಮ್ಮ ಅಮ್ಮನೂ ಕೂಡ ಎಂದು ಹಳೆ ನೆನಪುಗಳನ್ನು ನೆನೆದು ಮಾತನಾಡಿದ್ದಾರೆ.