ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಯಾವುದಾದರೂ ಒಂದು ದೊಡ್ಡ ವ್ಯವಹಾರಕ್ಕೆ ಕೈ ಹಾಕಿದಾಗ ಅಥವಾ ಯಾವುದಾದರೂ ಆಸ್ತಿ ಕೊಳ್ಳುವ ಸಲುವಾಗಿ ಅಥವಾ ಶಿಕ್ಷಣ ಅಥವಾ ವೈದ್ಯಕೀಯ ಖರ್ಚುಗಳು ನಮ್ಮ ಆದಾಯದ ಮೇಲೆ ಅಥವಾ ಉಳಿತಾಯದ ಮೀರಿ ಹಣದ ಅವಶ್ಯಕತೆ ಬಿದ್ದಾಗ ನಾವು ಖಂಡಿತವಾಗಿಯೂ ನಾವು ಸಾಲಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತೇವೆ ಆದರೆ ಎಲ್ಲಾ ಹಣಕಾಸು ಸಂಸ್ಥೆಗಳಲ್ಲೂ ನೇರವಾಗಿ ಸಾಲಸಿಗುವುದಿಲ್ಲ.
ಬಹುತೇಕ ಸಮಯದಲ್ಲಿ ನಾವು ನಮ್ಮ ಚರಾಸ್ಥಿ ಅಥವಾ ಸ್ಥಿರಾಸ್ತಿಗಳ ದಾಖಲೆಗಳನ್ನು ಕೊಟ್ಟು ಅದರ ಆಧಾರದ ಮೇಲೆ ಸಾಲ ಪಡೆದುಕೊಳ್ಳಬೇಕು. ಹೆಚ್ಚಿನ ಬ್ಯಾಂಕುಗಳು ಇದೇ ರೀತಿಯಲ್ಲಿ ಸಾಲ ನೀಡುತ್ತಿರುವುದು ಈ ರೀತಿಯಾಗಿ ನೀವು ದೊಡ್ಡ ಮಟ್ಟದಲ್ಲಿ ಸಾಲ ಮಾಡಿದ್ದರೂ ಅಥವಾ ಸಣ್ಣ ಸಾಲವಾಗಿದ್ದರು ಅದು ವಾಣಿಜ್ಯ ಸಾಲವಾಗಿದ್ದರೂ ಅಥವಾ ಕೃಷಿ ಸಾಲ ಅಥವಾ ಇನ್ಯಾವುದೇ ಸಾಲವಾಗಿದ್ದರೂ ತಪ್ಪದೆ ಈ ಮಾಹಿತಿಯನ್ನು ಓದಿ.
ಯಾಕೆಂದರೆ ಈ ರೀತಿ ಆಸ್ತಿ ಅಡವಿಟ್ಟು ಸಾಲ ಪಡೆದುಕೊಳ್ಳುವವರಿಗೆ RBI ಹೊಸ ನಿಯಮ ಜಾರಿಗೆ ತಂದಿದೆ. ಈ ಬಾರಿ ಮತ್ತೊಮ್ಮೆ ಗ್ರಾಹಕ ಸ್ನೇಹಿಯಾದ ನಿರ್ಧಾರವನ್ನು ತೆಗೆದುಕೊಂಡಿರುವ RBI ಈವರೆಗೂ ಗ್ರಾಹಕರು ಪಡುತ್ತಿದ್ದ ಬಹು ಮುಖ್ಯ ಸಮಸ್ಯೆಯೊಂದನ್ನು ಪರಿಹರಿಸಿದೆ.
ಗ್ರಾಹಕರು ಈ ರೀತಿ ತಮ್ಮ ಆಸ್ತಿ ಅಡವಿಟ್ಟು ಸಾಲ ಪಡೆದುಕೊಂಡು ಪ್ರತಿ ತಿಂಗಳು ಕೂಡ ಅದಕ್ಕೆ ಕಟ್ಟಬೇಕಾದ ವಂತಿಕೆ ಅಥವಾ ಬಡ್ಡಿದರವನ್ನು ಕಟ್ಟಿ ಅಚ್ಚುಕಟ್ಟಾಗಿ ನಿಂಬಾಯಿಸಿಕೊಂಡು ಹೋಗುತ್ತಿದ್ದರೂ ಕೆಲವೊಮ್ಮೆ ಇವುಗಳಲ್ಲಿ ವ್ಯತ್ಯಾಸವಾದಾಗ ಬ್ಯಾಂಕ್ ಗಳಿಂದ ದಂಡ ಬೀಳುತಿತ್ತು. ಆಗಲು ಸಹ ಗ್ರಾಹಕನು ಅದನ್ನು ಕಟ್ಟಿ ಅಂತಿಮವಾಗಿ ತನ್ನ ಸಾಲದ ಮೊತ್ತವನ್ನು ಪೂರೈಸಿದಾಗ ಹಣಕಾಸು ಸಂಸ್ಥೆಗಳು ಸಾಲ ಪಡೆದುಕೊಳ್ಳಲು ಗ್ರಾಹಕ ಇಟ್ಟಿದ್ದ ಆಸ್ತಿ ಪತ್ರಗಳನ್ನು ಹಿಂತಿರುಗಿಸಬೇಕಿತ್ತು.
ಆದರೆ ಕೆಲವು ಹಣಕಾಸು ಸಂಸ್ಥೆಗಳು ಅವು ಕಳೆದು ಹೋಗಿರುವ ಅಥವಾ ಮತ್ತೊಂದು ದಿನ ಕೊಡುವ ನೆಪವನ್ನು ಹೇಳಿ ಆಸ್ತಿಪತ್ರಗಳನ್ನು ಕೊಡದೆ ಸತಾಯಿಸುತ್ತಿದ್ದವು. ಕೆಲವೊಮ್ಮೆ ಇದು ಅವ್ಯವಹಾರಕ್ಕೆ ಬಳಕೆ ಆಗುವ ಅನುಮಾನಗಳು ಕೂಡ ಗ್ರಾಹಕರಿಗಿತ್ತು, ಹೀಗಾಗಿ ಗ್ರಾಹಕರು RBI ಗೆ ಈ ಕುರಿತು ದೂರು ಸಲ್ಲಿಸಿದರು.
ಈಗ RBI ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ದೇಶದಲ್ಲಿರುವ ಎಲ್ಲಾ ಬ್ಯಾಂಕ್ ಗಳು, ಸಣ್ಣ ಪುಟ್ಟ ಹಣಕಾಸು ಸಂಸ್ಥೆಗಳು ಪ್ರಾಥಮಿಕ ಸಹಕಾರಿ ಸಂಸ್ಥೆಗಳು ರಾಜ್ಯ ಸಹಕಾರಿ ಬ್ಯಾಂಕ್ ಗಳು ಚಿಲ್ಲ ಕೇಂದ್ರ ಸಹಕಾರಿ ಬ್ಯಾಂಕ್ ಗಳು ಆಸ್ತಿ ಪುನರ್ನಿರ್ಮಾಣ ಸಂಸ್ಥೆಗಳಿಗೆ ಮತ್ತು NBFC ಗಳಿಗೆ ಅನ್ವಯವಾಗುವಂತಹ ನಿಯಮವನ್ನು ಜಾರಿಗೆ ತಂದಿದೆ.
ಡಿಸೆಂಬರ್ 1, 2023ರಿಂದಲೇ ಈ ಹೊಸ ನಿಯಮ ಈ ಮೇಲಿನ ಎಲ್ಲಾ ಹಣಕಾಸು ಸಂಸ್ಥೆಗಳಿಗೂ ಅನ್ವಯವಾಗಲಿದ್ದು ಇನ್ನು ಮುಂದೆ ಬ್ಯಾಂಕ್ ಗಳು ಗ್ರಾಹಕನಿಗೆ ಆತನ ಸಾಲ ತೀರಿದ ಮೇಲೆ ಆತನಿಂದ ಅಡಮಾನ ಇಟ್ಟುಕೊಂಡಿದ್ದ ಪತ್ರವನ್ನು 30 ದಿನಗಳ ಒಳಗೆ ನೀಡಬೇಕು. ಒಂದು ವೇಳೆ ಇದು ತಪ್ಪಿದಲ್ಲಿ ದಿನಕ್ಕೆ ಗರಿಷ್ಠ 5000 ವರೆಗೂ ಕೂಡ ದಂಡ ಬೀಳಲಿದೆ.
ಈ ಹಣವನ್ನು ನಿಯಮ ಪಾಲಿಸದ ಹಣಕಾಸು ಸಂಸ್ಥೆಗಳಿಂದ ಗ್ರಾಹಕನಿಗೆ RBI ಕೊಡಿಸಲಿದೆ. ಇನ್ನು ಮುಂದೆ ಈ ರೀತಿ ಸಮಸ್ಯೆ ಆದರೆ ಗ್ರಾಹಕರು RBI ಗಮನಕ್ಕೆ ತರಬಹುದು. ಈ ಮೂಲಕ ಇದುವರೆಗೂ ಇದ್ದ ಒಂದು ಸಮಸ್ಯೆಗೆ RBI ಪರಿಹಾರ ನೀಡಿದೆ.