ಕಾರ್ತಿಕ ಮಾಸ ಎನ್ನುವುದು ಬಹಳ ವಿಶೇಷವಾದ ಮಾಸ ಇದನ್ನು ಶಿವನ ಮಾಸ ಎಂದು ಕೂಡ ಕರೆಯುತ್ತಾರೆ ಹಾಗೂ ದಾಮೋದರ ಮಾಸ ಎನ್ನುತ್ತಾರೆ. ಈ ಕಾರ್ತಿಕ ಮಾಸದ ಒಂದು ತಿಂಗಳಲ್ಲಿ ದೇವತೆಗಳು ಭೂಮಿಗೆ ಬಹಳ ಹತ್ತಿರವಾಗಿರುತ್ತಾರೆ ಎಂದು ಸಹ ಹೇಳಲಾಗುವುದರಿಂದ ಈ ಸಮಯದಲ್ಲಿ ಭಕ್ತಾದಿಗಳು ಏನೇ ಕೇಳಿದರು ಅದು ಭಗವಂತನಿಗೆ ಬಹಳ ಬೇಗ ಮುಟ್ಟಿ ಕೃಪ ಕಟಾಕ್ಷವಾಗುತ್ತದೆ ಎನ್ನುವುದು ಹಿರಿಯರ ನಂಬಿಕೆ.
ಕಾರ್ತಿಕ ಮಾಸದ ಪ್ರತಿಯೊಂದು ದಿನವೂ ಕೂಡ ಮಹತ್ವವಾದ ದಿನ ಮನೆಮನಗಳನ್ನು ಬೆಳಗುವ ಈ ಕಾರ್ತಿಕ ಮಾಸದ ದೀಪಾವಳಿ ಆಚರಣೆಯು ಹಿಂದೂಗಳ ಪಾಲಿಗೆ ಬಹಳ ಶ್ರೇಷ್ಠವಾದದ್ದು. ದೀಪಾವಳಿ ಅಮಾವಾಸ್ಯೆ ದಿನದಿಂದಲೇ ಕಾರ್ತಿಕ ಮಾಸ ಆರಂಭವಾಗುತ್ತದೆ. ಈ ದಿನದಂದು ತಾಯಿ ಮಹಾಲಕ್ಷ್ಮಿ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥಿಸುತ್ತೇವೆ ನಂತರ ಬರುವ ಬಲಿಪಾಡ್ಯಮಿ ಬಗ್ಗೆಯೂ ಎಲ್ಲರಿಗೆ ಗೊತ್ತಿದೆ.
ವಾಮನ ಅವತಾರ ತಾಳಿ ಬಲಿ ಚಕ್ರವರ್ತಿಯನ್ನು ಭೂಮಿಯಿಂದ ಪಾತಾಳಕ್ಕೆ ಕಳುಹಿಸಿದ ಮಹಾವಿಷ್ಣು ಆತನ ಒಳ್ಳೆ ಕಾರ್ಯಗಳಿಗೆ ಮತ್ತು ಆತನ ತಾಯಿಯ ಮನವಿಗೆ ಒಪ್ಪಿ ಒಂದು ದಿನ ಭೂಮಿಗೆ ಬಂದು ತನ್ನ ಸಾಮ್ರಾಜ್ಯವನ್ನು ನೋಡಿಕೊಂಡು ಹೋಗುವ ಅವಕಾಶ ನೀಡುತ್ತಾರೆ ಹಾಗಾಗಿ ಅಂದು ಭೂಲೋಕ ಪೂರ್ತಿ ರಸ್ತೆ ರಸ್ತೆಗಳಲ್ಲೂ ದೀಪ ಹಚ್ಚಿ ಸ್ವಾಗತಿಸುವುದು ಪ್ರತೀತಿ.
ಈ ಮಾಸದ ಮಧ್ಯದಲ್ಲಿ ತುಳಸಿ ವಿವಾಹ ಕೂಡ ಬರುತ್ತದೆ ಅಂದು ತುಳಸಿ ಮಾತೆಯು ಮಹಾವಿಷ್ಣುವನ್ನು ವರಿಸಿದ ದಿನವಾಗಿ ಆಚರಣೆ ಮಾಡಲಾಗುತ್ತದೆ. ಇಂತಹ ವಿಶೇಷ ಮಾಸದಲ್ಲಿ ಒಂದು ಸರಳ ಆಚರಣೆ ಮಾಡುವುದರ ಮೂಲಕ ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು. ಅಂತಹ ಒಂದು ಉಪಾಯದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ.
ಸತತ ಪ್ರಯತ್ನಗಳಿಂದ ಮನುಷ್ಯ ಏನನ್ನು ಬೇಕಾದರೂ ಸಾಧಿಸಬಹುದು ಆದರೆ ಆ ಹಾದಿಯಲ್ಲಿ ಮನುಷ್ಯ ಆತ್ಮಶುದ್ಧಿಯಿಂದ ಸನ್ಮಾರ್ಗದಲ್ಲಿ ನಡೆದರೆ ಅದು ಇನ್ನು ಸನಿಹವಾಗುತ್ತದೆ ಮತ್ತು ಭಗವಂತನು ಮೆಚ್ಚುತ್ತಾನೆ. ಇಹದಲ್ಲಿ ಮಾತ್ರವಲ್ಲದೆ ಇಹದಲ್ಲಿ ಮಾತ್ರವಲ್ಲದೆ ಪರದಲ್ಲಿಯೂ ಕೂಡ ಆತನ ಕಾರ್ಯ ಸಲ್ಲುತ್ತದೆ.
ಇಂತಹ ಹಾದಿಯಲ್ಲಿ ಪ್ರಯತ್ನಗಳ ಜೊತೆಗೆ ಅದೃಷ್ಟ ಹಾಗೂ ಭಗವಂತನ ಆಶೀರ್ವಾದ ಇರಬೇಕು ಆಗ ಇನ್ನು ನಮ್ಮ ಕೆಲಸ ಸಲೀಸಾಗುತ್ತದೆ ಹಾಗಾಗಿ ಭಗವಂತನ ಅನುಗ್ರಹವನ್ನು ಪಡೆದುಕೊಳ್ಳುವಂತಹ ಯಾವುದೇ ಅಡ್ಡ ಪರಿಣಾಮವಿಲ್ಲದ ಮತ್ತು ಒಂದು ರೂಪಾಯಿ ಖರ್ಚು ಕೂಡ ಇಲ್ಲದೇ ಬರಿ ಭಕ್ತಿಯನ್ನೇ ಒಳಗೊಂಡ ಶುದ್ಧ ಮನಸ್ಸಿನ ಮಾಡುವ ಒಂದು ಸರಳ ಆಚರಣೆ ಬಗ್ಗೆ ಹೇಳುತ್ತಿದ್ದೇವೆ ಪ್ರತಿಯೊಬ್ಬರು ಸಾಧ್ಯವಾದರೆ ಪಾಲಿಸಿ.
ಈ ವರ್ಷ ನವೆಂಬರ್ 14 ರಿಂದ ಕಾರ್ತಿಕ ಮಾಸ ಆರಂಭವಾಗುತ್ತದೆ, ಡಿಸೆಂಬರ್ 12ರ ಜಟ್ಟಿ ಅಮಾವಾಸ್ಯೆವರೆಗೂ ಕೂಡ ಇದು ಇರುತ್ತದೆ. ಇಷ್ಟು ದಿನಗಳವರೆಗೆ ಪ್ರತಿದಿನವೂ ಬೆಳಗ್ಗೆ ಹಾಗೂ ಸಂಜೆ ಒಂದು ತಾಮ್ರದ ಚಂಬಿನಲ್ಲಿ ಶುದ್ಧ ನೀರನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ನೀವು ಪೂಜಿಸುವ ತುಳಸಿ ಗಿಡಕ್ಕೆ ಅರ್ಪಿಸಿ ಮತ್ತು ಆ ಸಮಯದಲ್ಲಿ ನಿಮ್ಮ ಯಾವ ಕೋರಿಕೆ ನೆರವೇರಬೇಕು ಎನ್ನುವುದನ್ನು ಭಕ್ತಿಯಿಂದ ಕೇಳಿಕೊಳ್ಳಿ.
ನಿಮಗಿರುವ ಯಾವುದೇ ಸಮಸ್ಯೆ ಪರಿಹರಿಸುವಂತೆ ಕೇಳಿಕೊಳ್ಳಬಹುದು ಅಥವಾ ನಿಮಗೆ ಯಾವುದಾದರೂ ಮುಂದೆ ಆಗಬಹುದಾದ ಕಾರ್ಯ ನಿರ್ವಿಘ್ನವಾಗಿ ಶೀಘ್ರದಲ್ಲಿ ನೆರವೇರುವಂತೆ ಕೇಳಿಕೊಳ್ಳಬಹುದು ಮತ್ತು ಈ ಮಾಸದಲ್ಲಿ ಬರುವ ಪ್ರತಿ ಶುಕ್ರವಾರದಂದು ಆ ನೀರಿಗೆ ಒಂದು ಚಮಚದಷ್ಟು ಹಸಿ ಹಾಲು ಹಾಗೂ ಒಂದು ಚಮಚದಷ್ಟು ಕಲ್ಲು ಸಕ್ಕರೆಯನ್ನು ಕೂಡ ಸೇರಿಸಿ ತುಳಸಿ ಗಿಡಕ್ಕೆ ಅರ್ಪಿಸಿ.
ಹೀಗೆ ಮಾಡಿ ನೋಡಿ ಚಮತ್ಕಾರದಂತೆ ನೀವಂದು ಕೊಂಡ ಕಾರ್ಯ ಜರುಗುತ್ತದೆ ನಂಬಿಕೆ ಇಟ್ಟು ಇದನ್ನು ಮಾಡಬೇಕು ಅಷ್ಟೇ ಎಲ್ಲರಿಗೂ ಉಪಯುಕ್ತವಾಗುವ ಮಾಹಿತಿ ಇದಾಗಿದ್ದು ತಪ್ಪದೆ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.