ಗೃಹಲಕ್ಷ್ಮಿ ಹಣ ತಲುಪಿಸಲು ಅಂಚೆ ಇಲಾಖೆ ನೆರವು, ಗೃಹಲಕ್ಷ್ಮಿ ಹಣ ಬಾರದ ಮಹಿಳೆಯರಿಗೆ ಅಂಚೆ ಇಲಾಖೆ ಮೂಲಕ ಹಣ ತಲುಪಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!
ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಯಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ 1.11 ಕೋಟಿ ಮಹಿಳೆಯರ ಪೈಕಿ 93 ಲಕ್ಷ ಫಲಾನುವಿಗಳು ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣ ಪಡೆದಿದ್ದಾರೆ. ಅರ್ಜಿ ಸಲ್ಲಿಸಿದ್ದರು ಕೂಡ 9.44 ಲಕ್ಷ ಫಲಾನುಭವಿಗಳ ದಾಖಲೆಗಳಲ್ಲಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಅರ್ಹರಿದ್ದರು ಅವರು ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ (KWCWD) ಯೋಜನೆಯ ಮೊದಲನೇ ಕಂತಿನ ಹಣ ಬಿಡುಗಡೆಯಾಗಿ ಈ ಕುರಿತಾದ ಗೊಂದಲ ಸೃಷ್ಟಿಯಾದ ದಿನದಿಂದಲೂ ಕೂಡ ಇದಕ್ಕೆ ಸಾಕಷ್ಟು ಪರಿಹಾರವನ್ನು ಸೂಚಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಷ್ಟವಾಗಿ 7-8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ಸಮಸ್ಯೆ ಆಗಿರುವ ಕಾರಣದಿಂದ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ.
ಅವರ ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿರದೇ ಇರುವುದು, ಆಕ್ಟಿವ್ ಆಗಿರುವ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಟಿಂಗ್ ಮತ್ತು NPCI ಮ್ಯಾಪಿಂಗ್ ಆಗಿಲ್ಲದಿರುವುದು ಕೂಡ ಒಂದು ಸಮಸ್ಯೆ ಎಂದು ಹೇಳಿದ್ದಾರೆ. ಇದರೊಂದಿಗೆ ಇರುವ ಮತ್ತೊಂದು ಸಮಸ್ಯೆ ಏನೆಂದರೆ ಎಲ್ಲವೂ ಸರಿಯದ್ದು ಆ ಖಾತೆಗೆ ಹಣ ಹೋಗುತ್ತಿದ್ದರು ಅನೇಕ ಮಹಿಳೆಯರು ಆ ಖಾತೆಯ ದಾಖಲೆಗಳನ್ನು ಕಳೆದುಕೊಂಡು ಹಣ ಪಡೆಯಲಾಗದೆ ಸಮಸ್ಯೆಯಲ್ಲಿದ್ದಾರೆ.
ಮತ್ತು ಇದನ್ನು ಹೊರತು ಪಡಿಸಿ ಇ-ಕೆವೈಸಿ ಆಗದಿರುವ ಕಾರಣದಿಂದ ಅಥವಾ ದಾಖಲೆಗಳಲ್ಲಿ ಹೆಸರಿನ ವ್ಯತ್ಯಾಸವಾಗಿರುವ ಕಾರಣದಿಂದಾಗಿ ಕೂಡ ಅನೇಕ ಮಹಿಳೆಯರು ಗೃಹಲಕ್ಷ್ಮಿ ಹಣವನ್ನು ಪಡೆಯಲಾಗಿಲ್ಲ. ಇತ್ತೀಚೆಗೆ ನಡೆದ ಗೃಹಲಕ್ಷ್ಮಿ ಯೋಜನೆ ಪ್ರಗತಿ ಪರಿಶೀಲ ಸಭೆಯಲ್ಲೂ ಕೂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar ) ಅವರು ಇದಕ್ಕೆ ಪರಿಹಾರ ಸೂಚಿಸಿದ್ದಾರೆ.
ಮೊದಲಿಗೆ ಸಮಸ್ಯೆ ಇರುವ ಮಹಿಳೆಯರು ತಾಲೂಕು ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಹೋಗಿ CDPO ಅಧಿಕಾರಿಗಳ ಬಳಿ ತಮ್ಮ ಸಮಸ್ಯೆಗೆ ಪರಿಹಾರ ತಿಳಿದುಕೊಳ್ಳಬೇಕು ಎಂದು ಹೇಳಲಾಗಿತ್ತಾದರೂ ಈಗ ಅದನ್ನು ಬದಲಿಸಿ ಅಂಗನವಾಡಿ ಕಾರ್ಯಕರ್ತೆಯರೊಡನೆ ಇಲಾಖೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಸರ್ವೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎನ್ನುವ ಸೂಚನೆ ಕೊಟ್ಟಿದ್ದಾರೆ. ಇದರೊಂದಿಗೆ ಮತ್ತೊಂದು ಸುದ್ದಿ ಇದೆ.
ಖಾತೆ ಸಮಸ್ಯೆಯಿಂದ (Bank account problem) ಗೃಹಲಕ್ಷ್ಮಿ ಹಣವನ್ನು ಪಡೆಯಲಾಗದಿದ್ದವರಿಗೆ ಅಂಚೆ ಇಲಾಖೆಯಲ್ಲಿ (IPPB) ಖಾತೆಯನ್ನು ಮಾಡಿಕೊಡುವ ಮೂಲಕ ಸಮಸ್ಯೆ ಪರಿಹರಿಸಲು ಇಲಾಖೆ ನಿರ್ಧರಿಸಿದೆ. ಯಾಕೆಂದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆಯುವುದರಿಂದ ಆ ಮಹಿಳೆಯ ಯಾವುದೇ ಖಾತೆ ಇದ್ದರೂ ಮೊದಲಿಗೆ ಅಂಚೆ ಖಾತೆ ಪ್ರೈಮರಿ ಅಕೌಂಟ್ ಆಗುವುದರಿಂದ ಆ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಮತ್ತು ಈಗಿರುವ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ ಬ್ಯಾಂಕ್ಗಳಿಗೆ ಭೇಟಿ ಕೊಟ್ಟರೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಆದರೆ ಅಂಚೆ ಕಚೇರಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವುದರಿಂದ ತಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ಆನ್ಲೈನ್ ಮೂಲಕ ಈಗ ಅಂಚೆ ಕಚೇರಿ ಉಳಿತಾಯ ಖಾತೆಯಲ್ಲೂ ಕೂಡ ವ್ಯವಹಾರ ನಡೆಸಬಹುದು ಮತ್ತು SMS ಅಲರ್ಟ್ ಇನ್ನಿತರ ಅನುಕೂಲತೆಯನ್ನು ಪಡೆಯಬಹುದು.
ಖಾತೆ ತೆರೆಯುವುದು ಕೂಡ ಬಹಳ ಸುಲಭವಾಗಿರುವುದರಿಂದ ಅಂಚೆ ಇಲಾಖೆ ಸಹಯೋಗದಿಂದಾಗಿ ಗೃಹಲಕ್ಷ್ಮಿ ಯೋಜನೆಗೆ ಸಮಸ್ಯೆ ಪರಿಹಾರ ಹುಡುಕಲು ಇಲಾಖೆ ನಿರ್ಧರಿಸಿದೆ. ಈಗ ಮನೆ ಮನೆಗೆ ಅಂಚೆ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗಳು ತೆರಳಿ ಸರ್ವೆ ನಡೆಸಿ ಜಾಗೃತಿ ಮೂಡಿಸುತ್ತಿದ್ದಾರೆ. ಶೀಘ್ರವಾಗಿ ಎಲ್ಲಾ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.