ಈ ವರ್ಷ ಮುಂಗಾರಿನ ಕೊರತೆಯಿಂದ ಬರ ಪರಿಸ್ಥಿತಿ ಎದುರಿಸಿ ಸಂಕಷ್ಟದಲ್ಲಿರುವ ರೈತನಿಗೆ (farmers) ಸರ್ಕಾರದಿಂದ (government) ಮತ್ತೊಂದು ಶಾ’ಕ್ ಎದುರಾಗಿದೆ. ಕೊಳವೆ ಬಾವಿ ಹೊಂದಿರುವಂತಹ ಎಲ್ಲ ರೈತರು ಕೂಡ ಈ ಮಾಹಿತಿಯನ್ನು ಅಗತ್ಯವಾಗಿ ತಿಳಿದುಕೊಳ್ಳಲೇಬೇಕು ಯಾಕೆಂದರೆ ಈವರೆಗೂ ಸರ್ಕಾರದಿಂದ ಸಿಗುತ್ತಿದ್ದ ಉಚಿತ ಮೂಲಭೂತ ಸೌಕರ್ಯ ಒಂದು ಇನ್ನು ಮುಂದೆ ಸ್ಥಗಿತವಾಗಿ ರೈತರಿಗೆ ದುಬಾರಿಯಾಗಲಿದೆ.
ಕೃಷಿ ಪಂಪ್ಸೆಟ್ಗಳಿಗೆ ಟ್ರಾನ್ಸ್ಫಾರ್ಮರ್ ಸಮೇತ ಉಚಿತವಾಗಿ ಮೂಲಸೌಕರ್ಯ ಒದಗಿಸುವ ಯೋಜನೆಯನ್ನು ಕರ್ನಾಟಕ ರಾಜ್ಯ ಸರಕಾರ ಬಂದ್ ಮಾಡಿದೆ. ಇನ್ನು ಮುಂದೆ ಕೃಷಿ ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕದ ಖರ್ಚು ಹೆಚ್ಚಾಗಲಿದ್ದು ರೈತನ ಹೊರೆಯು ಹೆಚ್ಚಾಗಲಿದೆ.
ಇಲ್ಲಿಯವರೆಗೂ ಸರ್ಕಾರ ಅಕ್ರಮ ಸಕ್ರಮ ಮತ್ತು ಶೀಘ್ರ ವಿದ್ಯುತ್ ಯೋಜನೆಯಡಿ ರೈತರಿಂದ ಆರಂಭಿಕ ಭದ್ರತಾ ಠೇವಣಿ (MMD) ಹಾಗೂ ಮೂಲಸೌಕರ್ಯದ ಅಭಿವೃದ್ಧಿ ವೆಚ್ಚವಾಗಿ ಪ್ರತಿ ಕೊಳವೆ ಬಾವಿಗೆ ಶುಲ್ಕದ ರೂಪದಲ್ಲಿ 24,000 ರೂ. ಮಾತ್ರ ಕಟ್ಟಿಸಿಕೊಂಡು ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿತ್ತು.
ಸರ್ಕಾರದ ಈ ಸೌಲಭ್ಯದ ರೈತನ ಖರ್ಚು ತಗ್ಗುತಿತ್ತು, ಲಾಭದಾಯಕವಾಗಿತ್ತು. ಆದರೆ, ಕೃಷಿ ಪಂಪ್ಸೆಟ್ಗಳಿಗೆ ಉಚಿತವಾಗಿ ಟ್ರಾನ್ಸ್ಫಾರ್ಮರ್ ಸಮೇತ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಹೊಣೆಯಾಗಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿತ್ತು.
ಈಗಾಗಲೇ ಟ್ರಾನ್ಸ್ ಫಾರ್ಮರ್ಗಳ ಖರೀದಿ, ದುರಸ್ತಿ, ನಿರ್ವಹಣೆ ಮತ್ತು ಬದಲಾವಣೆಗೆ ಇಂಧನ ಇಲಾಖೆಯು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಇವುಗಳಿಗೆ ಕಡಿವಾಣ ಹಾಕಿ ಹೊರೆ ಕಡಿಮೆ ಮಾಡಲು ಸರ್ಕಾರ ಅಕ್ರಮ ಸಕ್ರಮ ಮತ್ತು ಶೀಘ್ರ ವಿದ್ಯುತ್ ಯೋಜನೆಯ ಸವಲತ್ತು ಸ್ಥಗಿತಗೊಳಿಸಿದೆ.
ಇಲ್ಲಿಯವರೆಗೂ ESCOM ನಿಯಮಾನುಸಾರ ಪರವಾನಗಿ ಪಡೆಯದೆಷಕೃಷಿ ಕೊಳವೆ ಬಾವಿಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿದ್ದರು ಸಕ್ರಮ ಮಾಡಿಕೊಳ್ಳಲು ಪಂಪ್ಸೆಟ್ಗಳ ಅಕ್ರಮ ಯೋಜನೆ(UNAP Scheme) ಮೂಲಕ ಅವಕಾಶ ನೀಡುತ್ತಿತ್ತು.
ಈ ಯೋಜನೆಯಡಿ ವಿದ್ಯುತ್ ಸರಬರಾಜು ಕಂಪನಿಗಳು ರೈತರಿಂದ ಕಡಿಮೆ ಶುಲ್ಕ ಮಾತ್ರ ಕಟ್ಟಿಸಿಕೊಂಡು ಗರಿಷ್ಠ 500 ಮೀಟರ್ ದೂರದವರೆಗೆ ಉಚಿತವಾಗಿ ವಿದ್ಯುತ್ ಮಾರ್ಗ, ಕಂಬ ಹಾಗೂ ಟ್ರಾನ್ಸ್ಫಾರ್ಮರ್ ಸವಲತ್ತು ಕಲ್ಪಿಸುತ್ತಿದ್ದವು. ವಿದ್ಯುತ್ ಮಾರ್ಗ, ಕಂಬ ಮತ್ತು ಟ್ರಾನ್ಸ್ಫಾರ್ಮರ್ನ ಖರ್ಚನ್ನು ಎಸ್ಕಾಂಗಳೇ ಭರಿಸುತ್ತಿದ್ದವು ಹಾಗಾಗಿ ರೈತನ ಖರ್ಚು ಕಡಿಮೆಯಾಗುತ್ತಿತ್ತು.
ಅದೇ ರೀತಿ ಶೀಘ್ರ ವಿದ್ಯುತ್ ಯೋಜನೆಯಲ್ಲಿ ಫಲಾನುಭವಿ ರೈತರು ಶುಲ್ಕ ಪಾವತಿ ಜತೆಗೆ ವಿದ್ಯುತ್ ಮಾರ್ಗ ಮತ್ತು ಕಂಬಗಳ ಖರ್ಚು ವೆಚ್ಚ ಭರಿಸುತ್ತಿದ್ದರು. ಈ ಯೋಜನೆ ಫಲಾನುಭವಿಗಳಿಗಗೂ ESCOMಗಳು ಉಚಿತವಾಗಿ ಟ್ರಾನ್ಸ್ಫಾರ್ಮರ್ ಕೊಡುತ್ತಿದ್ದವು. ಇದ್ದಕ್ಕಿದ್ದಂತೆ ಈ ಎರಡು ಯೋಜನೆಗಳನ್ನು ಸ್ಥಗಿತಗೊಳಿಸಿರುವುದು ರೈತರನ್ನು ಕಂಗಾಲಾಗಿಸಿದೆ.
ಸರ್ಕಾರದ ಈ ನಿರ್ಧಾರದಿಂದ ಇನ್ನು ಮುಂದೆ ಕಳೆದ ಸೆ.22ರ ನಂತರ ನೋಂದಣಿಯಾಗುವ ಕೃಷಿ ಕೊಳವೆ ಬಾವಿಗಳಿಗೆ ರೈತರು ಸ್ವಂತ ಖರ್ಚಿನಲ್ಲಿಯೇ ವಿದ್ಯುತ್ ಸಂಪರ್ಕ ಪಡೆಯಬೇಕು, ಈ ಕುರಿತ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ 24,000 ಕ್ಕೆ ಸಿಗುತ್ತಿದ್ದ ವಿದ್ಯುತ್ ಸಂಪರ್ಕಕ್ಕೆ 2 ಲಕ್ಷ ಖರ್ಚು ದಾಟುವ ಸಾಧ್ಯತೆ ಇದೆ. ಸಣ್ಣ ಹಾಗೂ ಅತಿ ಸಣ್ಣ ರೈತಾಪಿ ವರ್ಗಕ್ಕೆ ಈ ಏಕಾಏಕಿ ಆದೇಶವು ಆರ್ಥಿಕವಾಗಿ ದೊಡ್ಡ ಪೆಟ್ಟು ಕೊಟ್ಟಿದ್ದು ಪ್ರತಿಪಕ್ಷಗಳು ಇದನ್ನು ವಿರೋಧಿಸಿವೆ ಮತ್ತು ಈ ಘೋಷಣೆಯನ್ನು ರದ್ದುಪಡಿಸುವಂತೆ ಆಗ್ರಹಿಸಿವೆ.