ಡೆಲಿವರಿ ಆದ ನಂತರ ಜೋತು ಬಿದ್ದಿರುವ ಹೊಟ್ಟೆಯನ್ನು ಮೊದಲಿನ ಆಕರಕ್ಕೆ ತರುವ ವಿಧಾನ.

ಡೆಲಿವರಿ ಆದ ನಂತರ ಸಾಮಾನ್ಯವಾಗಿ ಎಲ್ಲರಿಗೂ ಸಹ ಹೊಟ್ಟೆಯ ಭಾಗ ಮುಂದಕ್ಕೆ ಬಂದು ಅದು ಜೋತು ಬಿದ್ದಂತಹ ಸ್ಥಿತಿಯಲ್ಲೇ ಇರುತ್ತದೆ ಇದಕ್ಕೆ ಕಾರಣ ನಮ್ಮ ಹೊಟ್ಟೆಯಲ್ಲಿ ಇದ್ದಂತಹ ಮಗು ಹೌದು ನಮ್ಮ ಹೊಟ್ಟೆಯಲ್ಲಿ ಮಗು ಇದ್ದಾಗ ನಮ್ಮ ಚರ್ಮ ಎಕ್ಸ್ಟೆಂಡ್ ಆಗುತ್ತದೆ. ನಂತರ ಮಗುವು ಆಚೆ ಬಂದಾಗ ನಮ್ಮ ಹೊಟ್ಟೆ ಮೊದಲಿನ ಆಕಾರಕ್ಕೆ ಬರುವುದಿಲ್ಲ ಬದಲಿಗೆ ಅದು ಜೋತು ಬಿದ್ದಂತೆ ಕಾಣುತ್ತದೆ. ಇದರಿಂದ ಸಾಕಷ್ಟು ಮಹಿಳೆಯರು ತಮ್ಮ ಇಷ್ಟದ ಬಟ್ಟೆಗಳನ್ನು ಸಹ ಧರಿಸಲು ಆಗುವುದಿಲ್ಲ ಅಷ್ಟೇ ಅಲ್ಲದೆ ಇನ್ನು ಅನೇಕ ರೀತಿಯಾದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಮಾಡುತ್ತಿದ್ದಂತಹ ಬಾಣಂತನಕ್ಕೂ ಈಗಿನ ಕಾಲದಲ್ಲಿ ಮಾಡುತ್ತಿರುವಂತಹ ಬಾಣಂತನಕ್ಕೂ ತುಂಬಾ ವ್ಯತ್ಯಾಸ ಇದೆ.

WhatsApp Group Join Now
Telegram Group Join Now

ಹಿಂದೆಲ್ಲಾ ಮನೆಯಲ್ಲೇ ಮಗು ಜನಿಸುತ್ತಾ ಇತ್ತು ತಾಯಂದಿರ ಹಾರೈಕೆ ತುಂಬಾ ಚೆನ್ನಾಗಿ ಮಾಡುತ್ತಿದ್ದರು ಅವರ ದೇಹಕ್ಕೆ ಶಕ್ತಿಯನ್ನು ತುಂಬಲು ನಾನಾ ರೀತಿ ಆದಂತಹ ಆಹಾರಗಳನ್ನು ಸಹ ಸೇವನೆ ಮಾಡಿ ಅವರಿಗೆ ಅವರ ದೇಹ ಸ್ಥಿತಿ ಮೊದಲಿನ ಹಾಗೆ ಬರಲು ಸಾಕಷ್ಟು ರೀತಿಯಾದಂತಹ ಕೆಲವೊಂದು ವಿಧಾನಗಳನ್ನು ಸಹ ಅನುಸರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸಹ ಆಸ್ಪತ್ರೆಯಲ್ಲಿ ಮಗು ಜನಿಸುವುದರಿಂದ ವೈದ್ಯರು ಎಲ್ಲ ರೀತಿಯಾದಂತಹ ಆಹಾರ ಸೇವನೆಯನ್ನು ಹೇಳುತ್ತಾರೆ ನಾವು ಇದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ ಕಾಲಕ್ಕೆ ತಕ್ಕಂತೆ ಈ ಒಂದು ವಿಧಾನಗಳು ಸಹ ಬದಲಾವಣೆಯನ್ನು ಹೊಂದಿಕೊಳ್ಳುತ್ತಿದೆ. ಆದರೆ ನಾವು ಡೆಲಿವರಿ ಆದ ನಂತರ ಕೆಲವೊಂದು ಹಿಂದಿನ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ನಮ್ಮ ಮನೆಗಳಲ್ಲಿ ಅಜ್ಜಿ ಇದ್ದರೆ ಅಂದರೆ ಹಿರಿಯರು ಇದ್ದರೆ ನಮಗೆ ಸೊಂಟದ ಸುತ್ತ ಇರುವಂತಹ ಬೊಜ್ಜನ್ನು ಹೇಗೆ ಕರಗಿಸಬೇಕು ಎನ್ನುವಂತಹ ವಿಧಾನವನ್ನು ಅವರು ತಿಳಿಸುತ್ತಾರೆ. ಹಿಂದಿನ ಕಾಲದಲ್ಲೆಲ್ಲಾ ಡೆಲಿವರಿ ಆದ ನಂತರ ಹೊಟ್ಟೆಯ ಕೆಳಗಡೆ ಬಟ್ಟೆಯನ್ನು ಕಟ್ಟುತ್ತಿದ್ದರು ಹೀಗೆ ಕಟ್ಟುವುದರಿಂದ ಅವರ ಹೊಟ್ಟೆಯು ಜೋತು ಬೀಳುವುದು ಅಥವಾ ಮುಂದೆ ಬರುವಂತಹ ಹೊಟ್ಟೆಯನ್ನು ಕಡಿಮೆ ಮಾಡುತ್ತಿತ್ತು ಇದೊಂದು ಬೆಸ್ಟ್ ವಿಧಾನ ಎಂದೇ ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಒಂದು ವಿಧಾನವನ್ನು ಅನುಸರಿಸಲು ಆಗುತ್ತಿಲ್ಲ ಏಕೆಂದರೆ ನಮಗೆ ಇದನ್ನು ಕಟ್ಟಿಕೊಳ್ಳಲು ಸಮಯದ ಅಭಾವ ಇರಬಹುದು ಅಥವಾ ಇದನ್ನು ಕಟ್ಟಿಕೊಳ್ಳಲು ಒಬ್ಬರ ಸಹಾಯ ಬೇಕಾಗುತ್ತದೆ ಆದ್ದರಿಂದ ಇದರ ಕಡೆ ಹೆಚ್ಚಿನ ಗಮನವನ್ನು ಹರಿಸುತ್ತಾ ಇಲ್ಲ.

ಇದನ್ನು ಬಿಟ್ಟರೆ ನಮಗೆ ಇನ್ನೂ ಸಾಕಷ್ಟು ವಿಧಾನಗಳು ಸಿಗುತ್ತವೆ ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕವಾಗಿ ನಾವು ಮುಂದೆವರೆದಿರುವುದರಿಂದ ಡೆಲಿವರಿ ಆದ ನಂತರ ನಮ್ಮ ಹೊಟ್ಟೆಯ ಕೆಳಗೆ ಇರುವಂತಹ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಅನೇಕ ರೀತಿಯಾದಂತಹ ಬೆಲ್ಟ್ ಗಳು ನಮಗೆ ಮಾರುಕಟ್ಟೆ ಯಲ್ಲಿ ಲಭ್ಯವಿದೆ ಅದರ ಬಗ್ಗೆ ನಾವು ನಮ್ಮ ವೈದ್ಯರಲ್ಲಿ ಸಲಹೆಯನ್ನು ಪಡೆದುಕೊಂಡು ನಂತರದಲ್ಲಿ ನಮ್ಮ ಹೊಟ್ಟೆಯನ್ನು ಕರಗಿಸಲು ಉತ್ತಮವಾದ ಒಂದು ಬೆಲ್ಟ್ ನನ್ನು ತೆಗೆದುಕೊಂಡು ಅದರಿಂದ ನೀವು ನಿಮ್ಮ ಜೋತು ಬಿದ್ದಿರುವ ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಇದರ ಜೊತೆಗೆ ನಾವು ಉತ್ತಮವಾದಂತಹ ಆಹಾರ ಸೇವನೆಯನ್ನು ಮಾಡಬೇಕು ಹಾಗೆಯೇ ಚೆನ್ನಾಗಿ ನೀರು ಕುಡಿಯುವಬೇಕು. ಈ ವಿಧಾನವನ್ನು ಅನುಸರಿಸಿದರೆ ನಿಮ್ಮ ಸೊಂಟದ ಬೊಜ್ಜು ಕಡಿಮೆಯಾಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now