ಕರ್ನಾಟಕ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ಮುಂತಾದ ಗ್ಯಾರಂಟಿ ಕಾರ್ಡ್ ಯೋಜನೆಗಳ ಸಿಹಿ ಸುದ್ದಿ ಮಾತ್ರವಲ್ಲದೇ ಮತ್ತೊಂದು ಬಂಪರ್ ಅವಕಾಶವನ್ನು ಕರ್ನಾಟಕ ರಾಜ್ಯ ಸರ್ಕಾರವು (Karnataka state government) ನೀಡುತ್ತಿದೆ. ಈಗ ಪುರುಷರಂತೆ ಮಹಿಳೆಯರು ಕೂಡ ಯಾವುದೇ ಕ್ಷೇತ್ರದಲ್ಲಿ ಕಡಿಮೆ ಇಲ್ಲದಂತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಆರ್ಥಿಕವಾಗಿ ಸದೃಢರಾಗಿ ಸ್ವಂತ ಸಾಮರ್ಥ್ಯದಿಂದ ಬದುಕಲು ಇಚ್ಛಿಸುತಿದ್ದಾರೆ. ಉದ್ಯೋಗ ಮಾಡುವುದು ಮಾತ್ರವಲ್ಲದೇ ಸ್ವಂತ ಉದ್ಯಮದಲ್ಲಿ ತೊಡಗಿಕೊಂಡು ಉದ್ಯೋಗ ಸೃಷ್ಟಿ ಮಾಡುವಷ್ಟು ಸದೃಢವಾಗಿದ್ದಾರೆ. ಈ ರೀತಿ ಸ್ವಂತ ದುಡಿಮೆಯಿಂದ ಬದುಕು ಕಟ್ಟಿಕೊಳ್ಳುವ ಮಹಿಳೆಯರಿಗೆ ಆರ್ಥಿಕ ನೆರವಿನ ಅವಶ್ಯಕತೆ ಇರುತ್ತದೆ.
ಈ ಸುದ್ದಿ ನೋಡಿ:- ಪದವೀಧರರಿಗೆ ಸಿಹಿ ಸುದ್ದಿ, ಯುವನಿಧಿ ಯೋಜನೆ ಜಾರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಸರ್ಕಾರ.!
ಇದನ್ನು ಮನಗಂಡ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಉದ್ಯೋಗಿನಿ (Udyogini Scheme) ಯೋಜನೆಯಡಿ ಸ್ವಂತ ಉದ್ಯೋಗ ಸ್ಥಾಪಿಸಲು ಕೆಲ ನಿಯಮ ಹಾಗೂ ಶರತ್ತುಗಳನ್ನು ವಿಧಿಸಿ ಅದರನ್ವಯ ಬಡ್ಡಿರಹಿತ ಸಾಲ ಸೌಲಭ್ಯ (loan facility) ಮತ್ತು ಸಬ್ಸಿಡಿ (Subsidy) ಕೂಡ ನೀಡುವ ನಿರ್ಧಾರಕ್ಕೆ ಬಂದಿದೆ.
ಈ ಸುದ್ದಿ ನೋಡಿ:- ಪದವೀಧರರಿಗೆ ಸಿಹಿ ಸುದ್ದಿ, ಯುವನಿಧಿ ಯೋಜನೆ ಜಾರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಸರ್ಕಾರ.!
ಈ ನೆರವನ್ನು ಪಡೆದು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬಹುದು. ಉದ್ಯೋಗಿನಿ ಯೋಜನೆಯಿಂದ ಸಿಗುವ ಸಾಲ ಸೌಲಭ್ಯ, ಸಬ್ಸಿಡಿ ಮೊತ್ತ, ಉದ್ಯೋಗಿನಿ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸಬೇಕಾದ ವಿಧಾನ, ಅರ್ಜಿ ಸಲ್ಲಿಸುವ ರೀತಿ, ನೀಡಬೇಕಾದ ದಾಖಲೆಗಳು ಇನ್ನು ಮುಂತಾದ ಉಪಯುಕ್ತ ಮಾಹಿತಿಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಉದ್ಯೋಗಿನಿ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರಿಗೆ ಇರುವ ಪ್ರಮುಖ ಕಂಡಿಷನ್ ಗಳು:-
● ಕರ್ನಾಟಕದ ಮಹಿಳೆಯರು ಮಾತ್ರ ಉದ್ಯೋಗಿನಿ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.
● ಮಹಿಳೆಯು ಪೂರಕ ದಾಖಲೆಗಳಾಗಿ ಸಲ್ಲಿಸಬೇಕಾದ ಎಲ್ಲ ದಾಖಲೆಗಳನ್ನು ಕೂಡ ಅರ್ಜಿ ಸಲ್ಲಿಸುವ ವೇಳೆ ಅರ್ಜಿ ಫಾರಂ ಜೊತೆಗೆ ಸಲ್ಲಿಸಬೇಕು.
● ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ, ಆಫ್ಲೈನ್ ನಲ್ಲಿಯೇ ಸೂಚಿಸಿರುವ ಕಛೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕು.
● 18 ವರ್ಷ ಮೇಲ್ಪಟ್ಟ 55 ವರ್ಷದ ಒಳಗಿನ ಮಹಿಳೆಯರು ಮಾತ್ರ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಉದ್ಯೋಗಿನಿ ಯೋಜನೆಯ ಪ್ರಯೋಜನಗಳು:-
● ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಗರಿಷ್ಠ 3 ಲಕ್ಷದವರೆಗೆ ಬಡ್ಡಿ ರಹಿತವಾಗಿ ಸಾಲ ಸೌಲಭ್ಯ ಸಿಗುತ್ತದೆ.
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಈ ಸಾಲದಲ್ಲಿ 50% ರಷ್ಟು ಅಂದರೆ 1.5 ಲಕ್ಷ ಸಬ್ಸಿಡಿ ನೀಡಲಾಗುತ್ತದೆ.
ಉಳಿದ ಮಹಿಳೆಯರಿಗೆ 30% ರಷ್ಟು ಅಂದರೆ 90 ಸಾವಿರ ರೂಪಾಯಿ ಸಬ್ಸಿಡಿ ಸೌಲಭ್ಯ ಸಿಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
● ಆಸಕ್ತ ಮಹಿಳೆಯರು ನಿಮ್ಮ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಗೆ ಹೋಗಿ ಹೆಚ್ಚಿನ ಮಾಹಿತಿ ಪಡೆಯಬಹುದು.
● ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲೂ ಕೂಡ ಅರ್ಜಿ ಸಲ್ಲಿಸಬಹುದು.
● ಅರ್ಜಿ ಫಾರಂ ಪಡೆದು ವಿವರಗಳನ್ನು ತುಂಬಿಸಿ ಪೂರಕ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಅರ್ಜಿ ಪರಿಶೀಲನೆ ಮತ್ತು ನಿಮ್ಮ ಸ್ವ ಉದ್ಯೋಗದ ಯೋಜನೆಯ ಕುರಿತು ಪರಿಶೀಲನೆ ನಡೆಸಿ ಅನುಮೋದಿಸುತ್ತಾರೆ.
● ಬಳಿಕ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಸಾಲದ ಮೊತ್ತ DBT ಮೂಲಕ ವರ್ಗಾವಣೆ ಆಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಮಹಿಳೆಯ ಆಧಾರ್ ಕಾರ್ಡ್
● BPL ರೇಷನ್ ಕಾರ್ಡ್
● ಆದಾಯ ಪ್ರಮಾಣ ಪತ್ರ
● ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮಹಿಳೆಯರಿಗೆ ಜಾತಿ ಪ್ರಮಾಣ ಪತ್ರ
● ಬ್ಯಾಂಕ್ ಪಾಸ್ ಬುಕ್ ವಿವರ
● ನಿಮ್ಮ ಸ್ವ ಉದ್ಯೋಗದ ಯೋಜನೆಯ ಕುರಿತು ವಿವರ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳು
● ಭಾವಚಿತ್ರ
● ಮೊಬೈಲ್ ಸಂಖ್ಯೆ.